Jallianwalabagh representation, source: internet

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭೆಯ ಕಡೆಯ ದಿನದಂದು ಆರೆಸ್ಸೆಸ್ ನ ಸರಕಾರ್ಯವಾಹರಾದ ಸುರೇಶ್ (ಭಯ್ಯಾಜಿ) ಜೋಶಿಯವರು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆ.

Jallianwalabagh representation, source: internet

ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ ಹಾಗೂ ಪ್ರೇರಣಾದಾಯಿ ಬಲಿದಾನದ ಶತಾಬ್ಧಿ ವರ್ಷ.

೧೩ ಏಪ್ರಿಲ್ ೧೯೧೯ರ ಪವಿತ್ರ ಬೈಸಾಖಿಯ ದಿನದಂದು ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ ನಡೆದದ್ದು. ಈ ಕ್ರೂರ, ಭಯಂಕರವಾದ ಮತ್ತು ಪ್ರಚೋದನಾಕಾರಿ ಘಟನೆಯಿಂದಾಗಿ ಭಾರತೀಯ ಮನಸ್ಸುಗಳು ಕೃದ್ಧಗೊಂಡು, ಆಕ್ರೋಶಕ್ಕೆ ತುತ್ತಾಗಿದ್ದಷ್ಟೇ ಅಲ್ಲದೇ ಬ್ರಿಟಿಷ್ ಸರ್ಕಾರದ ಅಡಿಪಾಯವನ್ನೇ ಬೆಚ್ಚಿಬೀಳಿಸಿತ್ತು. ಭಾರತೀಯರ ತೀವ್ರ ವಿರೋಧದ ಹೊರತಾಗಿಯೂ ಅಮಾನವೀಯ ರೋಲೆಟ್ ಕಾಯಿದೆಯನ್ನು ಜಾರಿಗೊಳಿಸಲಾಗಿತ್ತು. ಈ ಕಾಯಿದೆಗೆ ಎಲ್ಲ ಕಡೆಗಳಿಂದಲೂ ವಿರೋಧ ವ್ಯಕ್ತವಾಯಿತು. ಅಮೃತಸರದ ಖ್ಯಾತನಾಮರಾದ ಡಾ. ಸೈಫ಼ುದ್ದಿನ್ ಖಿಚ್ಲು ಹಾಗೂ ಡಾ. ಸತ್ಪಾಲ್ ರನ್ನು ಬಂಧಿಸಿದ ಸುದ್ದಿ ಎಲ್ಲೆಡೆ ಹರಡತೊಡಗಿತು. ಅದೇ ಸಮಯದಲ್ಲಿ ಜನರಲ್ ಡಾಯರ್ ಎಲ್ಲಾ ತರಹದ ಸಾರ್ವಜನಿಕ ಸಭೆ, ಮೆರವಣಿಗೆಗಳನ್ನು ನಿಷೇಧಿಸಿದ. ಈ ಕುರಿತಾಗಿ ಚರ್ಚಿಸಲೆಂದೇ ೧೩ ಏಪ್ರಿಲ್ ರಂದು ಜಲಿಯನ್‍ವಾಲಾ ಬಾಗ್ ನಲ್ಲಿ ಒಂದು ಸಭೆ ಸೇರಲಾಯ್ತು.

ಸಭೆಗೆ ನಿಷೇಧಾಜ್ಞೆ ಇದ್ದಾಗಿಯೂ ೨೦,೦೦೦ಕ್ಕೂ ಹೆಚ್ಚು ಜನರು ಜಲ್ಲಿಯನ್‌ವಾಲಾ ಬಾಗ್ ನಲ್ಲಿ ಸೇರಿದ್ದರು. ಜನರಲ್ ಡಾಯರ್ ಆವರಣಕ್ಕಿದ್ದ ಒಂದೇ ಹೆಬ್ಬಾಗಿಲನ್ನು ಮುಚ್ಚಿಸಿ, ಯಾವುದೇ ಮುನ್ನೆಚ್ಚರಿಕೆ ನೀಡದೆ ಬಂದೂಕಿನಿಂದ ಜನರನ್ನು ಕೊಲ್ಲಲು ತನ್ನ ಸೈನಕ್ಕೆ ಆಜ್ಞೆ ಹೊರಡಿಸಿದ. ಗದ್ದಲ ಭುಗಿಲೆದ್ದಿತು ಹಾಗೂ ನೂರಾರು ಜನರು ಸಾವನ್ನಪ್ಪಿದರು. ಸಾವಿರಾರು ಜನರು ಗಾಯಗೊಂಡರು.
ಈ ಹತ್ಯಾಕಾಂಡದಿಂದ ಭಾರತದೆಲ್ಲೆಡೆ ಬ್ರಿಟಿಷರ ವಿರುದ್ಧದ ದನಿ ಏರುತ್ತಾ ಹೋಯಿತು, ಜನರಲ್ಲಿ ಕೋಪ ಹೆಚ್ಚಾಗತೊಡಗಿತು. ಇದಾದ ಕೆಲವೇ ದಿನಗಳಲ್ಲಿ ಕವಿಗಳಾದ ರವೀಂದ್ರನಾಥ ಠಾಕೂರ್ ತಮಗೆ ಲಭಿಸಿದ್ದ ನೈಟ್‍ಹುಡ್ ಗೌರವವನ್ನು ಹಿಂದುರಿಗಿಸಿದರು. ಸರ್ದಾರ್ ಭಗತ್ ಸಿಂಗ್ ಜಲಿಯನ್‌ವಾಲಾ ಬಾಗ್ ನ ರಕ್ತಸಿಕ್ತ ಮಣ್ಣನ್ನು ಮನೆಗೆ ತಂದು ಭಾರತದ ಸ್ವಾತಂತ್ರ್ಯದ ಶಪಥವನ್ನು ಮಾಡಿದರು. ಈ ಹತ್ಯಾಕಾಂಡವನ್ನು ಕಣ್ಣಾರೆ ಕಂಡ ಉಧಮ್ ಸಿಂಗ್ ೨೧ ವರ್ಷಗಳ ಬಳಿಕ, ೧೯೪೦ರಲ್ಲಿ ಇಂಗ್ಲೆಂಡ್ ನಲ್ಲಿ ಲೆಫ್ಟಿನೆಂಟ್ ಗವರ್ನರ್ ಒದ್ವಾಯಿಯರ್ ನನ್ನು ಗುಂಡಿಟ್ಟು ಕೊಂದು ಬಿಟ್ಟ.
ಜಲಿಯನ್‍ವಾಲಾ ಬಾಗ್ ರಾಷ್ಟ್ರಭಕ್ತರಿಗೆ ಪ್ರೇರಣಾದಾಯಿ ತೀರ್ಥಕ್ಷೇತ್ರವಾಗಿ ಪರಿಣಮಿಸಿತು. ಸಾವಿರಾರು ಜನರು ಸ್ವಾತಂತ್ರ್ಯ ಸಂಗ್ರಾಮದಲ್ಲಿ, ಭಾಗವಹಿಸಲು, ದೇಶಕ್ಕಾಗಿ ಹುತಾತ್ಮರಾಗಲು ನಿರ್ಧರಿಸಿದವರು ಜಲಿಯನ್‌ವಾಲಾ ಬಾಗ್‍ಗೆ ಭೇಟಿ ನೀಡಲು ಬರತೊಡಗಿದರು.

ಈ ವರ್ಷ ಸ್ವಾತಂತ್ರ್ಯ ಸಂಗ್ರಾಮದ ಇಂಥಹ ಮಹತ್ತರ ಘಟನಾವಳಿ ನಡೆದು ೧೦೦ ವರ್ಷ ಸಲ್ಲುತ್ತದೆ. ಈ ಅಮರತ್ವದ, ತ್ಯಾಗದ ಕಥೆ ದೇಶದ ಮೂಲೆ ಮೂಲೆಗೆ ತಲುಪಿಸುವ ಕೆಲಸ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಸಮಾಜದ ಎಲ್ಲಾರಿಗೂ ಈ ಐತಿಹಾಸಿಕ ಘಟಣೆಯನ್ನು ನೆನೆದು, ತತ್ಸಂಬಂಧ ಹಲಾರು ಜಾಗೃತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಈ ಮೂಲಕ ಆಗ್ರಹಿಸುತ್ತದೆ.

– ಸುರೇಶ್ (ಭಯ್ಯಾಜಿ) ಜೋಶಿ
ಸರಕಾರ್ಯವಾಹ, ಆರೆಸ್ಸೆಸ್

Suresh (Bhayyaji) Joshi, Sarkaryavah, RSS

Leave a Reply

Your email address will not be published.

This site uses Akismet to reduce spam. Learn how your comment data is processed.