ಫೇಸ್ಬುಕ್ ಪ್ರಿಯಕರನಿಗಾಗಿ ಗಂಡ-ಮಗು ಬಿಟ್ಟು ಇಸ್ಲಾಂಗೆ ಮತಾಂತರಗೊಂಡ ಕಾಂಗ್ರೆಸ್ ಶಾಸಕಿ!
ಅಸ್ಸಾಂನ ಗೌಹಾತಿಯ ಬಳಿಯ ಬೋರ್ಕೋಲಾ ಪ್ರದೇಶದ ಕಾಂಗ್ರೆಸ್ ಶಾಸಕಿ ಡಾ|| ರುಮಿ ನಾಥ್ ತನ್ನ ಗಂಡ ಹಾಗೂ ಎರಡು ವರ್ಷದ ಮಗಳನ್ನು ತ್ಯಜಿಸಿ ಫೇಸ್ಬುಕ್ ಅಂತರ್ಜಾಲ ತಾಣದಲ್ಲಿ ಪರಿಚಿತನಾದ ಮುಸ್ಲಿಂ ಯುವಕ ಜಾಕೆ ಝಕೀರ್ಗಾಗಿ ಹಿಂದೂ ಧರ್ಮವನ್ನು ತೊರೆದು ಇಸ್ಲಾಂಗೆ ಮತಾಂತರಗೊಂಡಿದ್ದಾರೆ. 32ರ ಹರೆಯದ ರುಮಿ ನಾಥ್ ಫೇಸ್ಬುಕ್ ಮೂಲಕ ಪರಿಚಿತನಾದ ಜಾಕಿ ಝಕೀರ್ಗೆ ಮನಸೋತದ್ದೇ ತಡ, ತಾನೋರ್ವ ಜನಪ್ರತಿನಿಧಿ, ವಿವಾಹಿತ ಮಹಿಳೆ ಎನ್ನುವುದನ್ನೂ ಮರೆತು ಪ್ರೇಮಲೋಕದಲ್ಲೇ ತೇಲಾಡತೊಡಗಿದಳು.
ಸಮಾಜ ಕಲ್ಯಾಣ ಇಲಾಖೆಯ ಸಾಧಾರಣ ಗುಮಾಸ್ತನಾಗಿರುವ ಝಾಕಿರ್ ನೋಡಲು ಸುಂದರನಾಗಿದ್ದ ಎಂಬುದಷ್ಟೇ ಆಕೆಯನ್ನು ಆಕರ್ಷಿಸಲು ಕಾರಣವಾದ ಸಂಗತಿ. ಪತಿ ರಾಕೇಶ್ ಕುಮಾರ್ ಸಿಂಗ್, ಎರಡು ವರ್ಷದ ಮಗಳು ಋತಂಬರಾ ಸೇರಿದಂತೆ ತನ್ನ ಕುಟುಂಬ ಸದಸ್ಯರನ್ನೆಲ್ಲಾ ತೊರೆದು, ಪಕ್ಷದ ಮುಖಂಡರ ಸಲಹೆಯನ್ನು ತಗೊಳ್ಳದೇ ಇಸ್ಲಾಂಗೆ ಮತಾಂತರಗೊಂಡಿರುವ ಡಾ|| ರುಮಿ ನಾಥ್ ತನ್ನ ಹೆಸರನ್ನು ರಬಿಯಾ ಸುಲ್ತಾನ್ ಎಂದು ಬದಲಾಯಿಸಿಕೊಂಡಿದ್ದಾಳೆ. ಈ ಮತಾಂತರಕ್ಕೆ ಅಸ್ಸಾಂನ ಕಾಂಗ್ರೆಸ್ ಸಚಿವ ಸಿದ್ಧಿಕ್ ಅಹಮ್ಮದ್ ನೇತೃತ್ವ ವಹಿಸಿದ್ದರು. ಇದೇ ವೇಳೆ ತನ್ನ ಪತ್ನಿಯನ್ನು ಬಲವಂತವಾಗಿ ಅಪಹರಿಸಲಾಗಿದೆ ಎಂದು ಪೋಲೀಸ್ ಠಾಣೆಯಲ್ಲಿ ರಾಕೇಶ್ ಸಿಂಗ್ ನೀಡಿದ್ದರೂ, ‘ತಾನು ಸ್ವ-ಇಚ್ಛೆಯಿಂದ ಝಾಕಿರ್ ಜತೆ ಇದ್ದೇನೆ’ ಎಂದು ಲಿಖಿತವಾಗಿ ಹೇಳಿದ್ದಾಳೆ ಈ ಕಾಂಗ್ರೆಸ್ ಶಾಸಕಿ!