ಭಾರತ–ಭಾರತಿ ಪುಸ್ತಕ ಸಂಪದ–೨ನೇ ಸರಣಿಯ ಐವತ್ತು ಪುಸ್ತಕಗಳ ಲೋಕಾರ್ಪಣೆ ಸಮಾರಂಭ
ಮಕ್ಕಳಸಾಹಿತ್ಯದಲ್ಲಿ ಮೈಲಿಗಲ್ಲನ್ನು ಸ್ಥಾಪಿಸಿ, ಇಂದಿಗೂ ಬಹುಜನಪ್ರಿಯವಾಗಿರುವ ಭಾರತ-ಭಾರತಿ ಪುಸ್ತಕ ಸಂಪದ ಮಾಲೆಗೆ ಇನ್ನಷ್ಟುಮಹಾಪುರುಷರ ಬದುಕನ್ನು ಕಟ್ಟಿಕೊಡುವ ಸಲುವಾಗಿ ಸಾಹಿತಿ ’ಚಿರಂಜೀವಿ’ ಅವರ ಸಂಪಾದಕತ್ವದಲ್ಲಿ ೨೦೧೨ ರಲ್ಲಿ ಭಾರತ-ಭಾರತಿ-2 ಕಾರ್ಯ ಪ್ರಾರಂಭಿಸಲಾಗಿದೆ. ಈಗಾಗಲೇ (ಜನವರಿ ೨೦೧೪) ಮೊದಲ ಕಂತಿನ 50 ಶೀರ್ಷಿಕೆಗಳ ಪುಸ್ತಕಗಳು ಪ್ರಕಟಣೆಗೊಂಡಿದ್ದು, ಮುಂದಿನ ೫೦ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
ದಿನಾಂಕ : 8-3-2015 ಭಾನುವಾರ ಬೆಳಗ್ಗೆ 10.30ಕ್ಕೆ
ಸ್ಥಳ : “ಕೇಶವಶಿಲ್ಪ”, ಕೆಂಪೇಗೌಡನಗರ, ಬೆಂಗಳೂರು -19
ಮಾಹಿತಿಗಾಗಿ : 080 -26612730
ಅನಾದಿಕಾಲದಿಂದ ಆಧುನಿಕ ಕಾಲದವರೆಗಿನ ಭಾರತಮಾತೆಯ ಪತ್ರರತ್ನರ ಬದುಕಿನ ಕ್ಷಣಗಳ ಮೇಲೆ ಬೆಳಕು ಚೆಲ್ಲಿ; ಯಾಕೆ ಬದುಕಬೇಕು-ಹೇಗೆ ಬದುಕಬೇಕು – ಎಂಬುದಕ್ಕೆ ಎಳೆಯರಿಗೆ ಮಾರ್ಗದರ್ಶಿಯಾಗಿ; ಆದರ್ಶದ ಕನಸುಕಟ್ಟಬಲ್ಲ ರಾಷ್ಟ್ರೋತ್ಥಾನ ಸಾಹಿತ್ಯದ ಹೆಮ್ಮೆಯ ಪುಸ್ತಕಮಾಲೆಯೇ ಭಾರತ-ಭಾರತಿ ಪುಸ್ತಕ ಸಂಪದ ಮಾಲೆ.
೭೦ರ ದಶಕದಲ್ಲಿ ಪ್ರೋ|| ಎಲ್.ಎಸ್. ಶೇಷಗಿರಿರಾವ್ ಅವರ ಪ್ರಧಾನ ಸಂಪಾದಕತ್ವದಲ್ಲಿ ’ಭಾರತ-ಭಾರತಿ’ ಪುಸ್ತಕ ಸಂಪದಮಾಲೆಪ್ರಾರಂಭವಾಯಿತು. ನಾಡು-ನುಡಿ-ಸಂಸ್ಕೃತಿಯ ಏಳ್ಗೆಗಾಗಿ ಬದುಕಿದ ಭಾರತೀಯ ಸಾಧನಾಶೀಲ ಹಿರಿಯರ ಜೀವನಚರಿತ್ರೆಗಳನ್ನುಪ್ರಕಟಿಸುವ ಈ ಯೋಜನೆಯಲ್ಲಿ 510 ಶೀರ್ಷಿಕೆಗಳು ಪ್ರಕಟವಾಗಿ ಲಕ್ಷಾಂತರ ಓದುಗರನ್ನು ತಲಪಿ ಇಂದಿಗೂ ರಾಜ್ಯಾದ್ಯಂತಮನೆಮಾತಾಗಿದೆ.