ಪಾಕಿಸ್ತಾನದ ಮೂಲಭೂತವಾದಿಗಳು ಸಿಂಧ್ ಪ್ರಾಂತದ ಥಾರ್‌ಪಾರ್ಕರ್ ಜಿಲ್ಲೆಯ ತೇಹ್ ಮಿತಿಯ ಖತ್ರಿ ಮೊಹಲ್ಲಾದ  ಹಿಂಗಲಾಜ ಮಾತಾ ಮಂದಿರವನ್ನು ಧ್ವಂಸಗೊಳಿಸಿದ್ದಾರೆ.ಕಳೆದ 22 ತಿಂಗಳುಗಳಿಂದ ಇದು ಹನ್ನೊಂದನೆಯ ದೇವಸ್ಥಾನದ ಮೇಲೆ ದಾಳಿಯಾಗಿದೆ.

ಪಾಕಿಸ್ಥಾನದ ಹಿಂದೂ ಮಂದಿರ ಆಡಳಿತ ಸಮಿತಿಯ ಅಧ್ಯಕ್ಷರಾದ ಶರ್ಮರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಅದೇ ಸಂದರ್ಭದಲ್ಲಿ ಮಾಧ್ಯಮಗಳೊಂದೊಗೆ ಮಾತನಾಡಿದ ಅವರು ಮುಸ್ಲಿಂ ಮೂಲಭೂತವಾದಿಗಳು ಪಾಕಿಸ್ತಾನದ ಸುಪ್ರೀಂ ಕೋರ್ಟ್‌ಗೂ ಹೆದರುವುದಿಲ್ಲ, ಪಾಕಿಸ್ತಾನದ ಸರಕಾರಕ್ಕೂ ಹೆದರುವುದಿಲ್ಲ.

ಈ ಸಂದರ್ಭದಲ್ಲಿ ಹಿಂದೂ ನಾಯಕರು ಅಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.ಪಾಕಿಸ್ತಾನವು ಅಂತಾರಾಷ್ಟ್ರೀಯ ಸಮುದಾಯದಿಂದ ಈ ವಿಚಾರದಲ್ಲಿ ಚಾಟಿ ಏಟು ತಿಂದಿದ್ದಿದ್ದು ಅವಮಾನವಾದ ನಂತರವೂ  ಅಲ್ಪ ಸಂಖ್ಯಾತ ಸಮುದಾಯವನ್ನು ರಕ್ಷಿಸಲು ಯಾವುದೇ ಕ್ರಮ ಕೈಗೊಂಡಿಲ್ಲ .

ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಬೇರೆ ಬೇರೆ ಸಂದರ್ಭದಲ್ಲಿ ಅಲ್ಪಸಂಖ್ಯಾತರ ರಕ್ಷಣೆಗೆ ಭರವಸೆ ನೀಡಿದ್ದರೂ ಯಾವುದೇ ಉಪಯೋಗವಿಲ್ಲ. ಡಿಸೆಂಬರ್ 2020ರಲ್ಲಿ ಖೈಬರ್ ಪ್ರಾಂತದ ಪಕ್ತುನ್ಕ್ವಾದ ಕರಕ್ ಜಿಲ್ಲೆಯ ದೇವಸ್ಥಾನವೊಂದನ್ನು ಲೋಕಲ್  ಮುಸ್ಲಿಂ ಕಾರಕೂನರ ನೇತೃತ್ವದಲ್ಲಿ ದೊಡ್ಡ ಗುಂಪು ದಾಳಿಮಾಡಿ, ಬೆಂಕಿ ಹಚ್ಚಿಬಿಟ್ಟಿತು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡೀಯೋ ಒಂದರಲ್ಲಿ ದೇವಸ್ಥಾನದ ಗೋಡೆ ಮತ್ತು ಛಾವಣಿಗಳನ್ನು ನಾಶ ಮಾಡುತ್ತಿರುವ ದೊಡ್ಡ ಗುಂಪನ್ನು ಕಾಣಬಹುದು.

ಪಾಕಿಸ್ತಾನವು ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಅಲ್ಪಸಂಖ್ಯಾತ ಅಸುರಕ್ಷತೆಗೆ ಕುಪ್ರಸಿದ್ಧ.ಅನೇಕ ಸಂದರ್ಭಗಳಲ್ಲಿ ಅಲ್ಪಸಂಖ್ಯಾತರ ಹಕ್ಕುಗಳು ಹಾಗು ಮಾನವ ಹಕ್ಕುಗಳ ರಕ್ಷಣೆಯ ಕುರಿತಾಗಿ ಮಾತನಾಡಿದ್ದರೂ ಬರಿ ಹೇಳಿಕೆಗಳಿಗಷ್ಟೆ ಸೀಮಿತವಾಗಿದೆ.

ಅಲ್ಪಸಂಖ್ಯಾತರ ಮೇಲೆ, ಅವರ ಪೂಜಾ ಸ್ಥಳಗಳ ಮೇಲೆ ದಾಳಿಗಳು ನಿರಂತರವಾಗಿ ನಡೆಯುತ್ತಲೇ ಇದೆ. ಧಾರ್ಮಿಕ ಅಲ್ಪಸಂಖ್ಯಾತರ ಜತೆಗೆ ಸತತವಾಗಿ ಅನ್ಯಾಯ ಮಾಡುತ್ತಿರುವುದು ಇಸ್ಲಾಮಾಬಾದ್‌ನ ಸಹಜಸ್ವಭಾವವೇ ಆಗಿಹೋಗಿದೆ.

ಬೇರೆ ಬೇರೆ ತರದ ಟಾರ್ಗೆಟ್ ಮಾಡಿದ ಹಿಂಸಾಚಾರಗಳು,ಸಾಮೂಹಿಕ ಕೊಲೆಗಳು,ಕಿಡ್ನಾಪ್,ರೇಪ್‌ಗಳು, ಒತ್ತಾಯಪೂರ್ವಕವಾಗಿ ಇಸ್ಲಾಮಿಗೆ ಮತಾಂತರ ಇಂತವುಗಳಿಂದ ಪಾಕಿಸ್ತಾನದ ಹಿಂದೂ ,ಕ್ರಿಶ್ಚಿಯನ್, ಸಿಖ್‌,ಮತ್ತು ಶಿಯಾಗಳ ಜೀವನ ದುಸ್ತರವಾಗಿದೆ.

ಪಾಕಿಸ್ತಾನದ ಒಟ್ಟು 365ದೇವಸ್ಥಾನಗಳಲ್ಲಿ 300 ದೇವಸ್ಥಾನದ ಆಡಳಿತ ಸರಕಾರದ ಹತ್ತಿರವಿದ್ದು,ಉಳಿದ ದೇವಸ್ಥಾನಗಳು ಹಿಂದೂ ಸಮುದಾಯಗಳ ಬಳಿಯಿವೆ.

Leave a Reply

Your email address will not be published.

This site uses Akismet to reduce spam. Learn how your comment data is processed.