ವಿಕ್ರಮ ವಾರಪತ್ರಿಕೆಯು ಪ್ರಖರ ರಾಷ್ಟ್ರೀಯ ವಿಚಾರಗಳನ್ನು ನಿರಂತರವಾಗಿ ಪ್ರತಿಪಾದಿಸುತ್ತಾ ಬಂದಿದ್ದು 1948ರ ಗುರುಪೂರ್ಣಿಮಾ ದಿನದಂದು ಪ್ರಾರಂಭಗೊಂಡಿತ್ತು. ಈ ವರ್ಷ 75 ವಸಂತಗಳನ್ನು ಪೂರೈಸಿರುವ ಸಂದರ್ಭದಲ್ಲಿ ಅನೇಕ ವಿಶೇಷ ಕಾರ್ಯಕ್ರಮಗಳನ್ನು ವಿಕ್ರಮ ವಾರಪತ್ರಿಕೆಯು ಹಮ್ಮಿಕೊಂಡಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರು ವಿಕ್ರಮ-75 ವಿಶೇಷ ಲಾಂಛನವನ್ನು (Logo) ಕಳೆದ ವಾರ ದಿನಾಂಕ 11.07.2022 ರಂದು ಬೆಂಗಳೂರಿನ ಕೇಶವಕೃಪಾದಲ್ಲಿ ಬಿಡುಗಡೆ ಮಾಡಿದ್ದರು.
1948ರ ಜುಲೈ 22ರ ಗುರುಪೂರ್ಣಿಮೆಯ ದಿನದಂದು ಆರಂಭವಾಗಿ ಇದೀಗ 75ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ವಿಕ್ರಮ ವಾರಪತ್ರಿಕೆಗೆ ಟ್ವೀಟ್ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶುಭಕೋರಿದ್ದಾರೆ.
“ದೇಶಭಕ್ತಿ, ಸಂಸ್ಕೃತಿ, ಇತಿಹಾಸ ಹಾಗೂ ರಾಷ್ಟ್ರೀಯ ವಿಚಾರಧಾರೆಗಳನ್ನು ಸ್ವಾತಂತ್ರ್ಯದ ನಂತರ ಸತತವಾಗಿ ಓದುಗರಿಗೆ ಉಣಬಡಿಸುತ್ತಿರುವ “ವಿಕ್ರಮ” ಕನ್ನಡ ವಾರ ಪತ್ರಿಕೆಗೆ ಈಗ ಬರೋಬ್ಬರಿ 75 ವರ್ಷ ತುಂಬಿದೆ. ಈ ಸಂದರ್ಭದಲ್ಲಿ ಪತ್ರಿಕೆಗೆ ಶುಭ ಕೋರಿ, ಶತಮಾನೋತ್ಸವವನ್ನು ಯಶಸ್ವಿಯಾಗಿ ಪೂರೈಸಲಿ ಎಂದು ಶುಭ ಹಾರೈಸುತ್ತೇನೆ.” ಎಂದಿದ್ದಾರೆ.