ಮಂಗಳೂರು : ಮಂಗಳೂರು ಲಿಟ್ ಫೆಸ್ಟ್‌ನಲ್ಲಿ ಭಾರತದ ಕುರಿತು ಬದಲಾಗುತ್ತಿರುವ ಜಾಗತಿಕ ಆಖ್ಯಾನದ ಅಗತ್ಯತೆಯ ಕುರಿತು ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಶ್ರೀ ರಾಮ್‌ಮಾಧವ್ ಹಾಗು ಅಂತಾರಾಷ್ಟ್ರೀಯ ಸಂಬಂಧಗಳ ತಜ್ಞರಾದ ಎಂ.ಡಿ.ನಲಪತ್ ಅವರು ಭಾಗವಹಿಸಿದ್ದು ಸಂವಾದ ವರ್ಲ್ಡ್‌‌ನ ಸಂಪಾದಕರಾದ ಶ್ರೀ ಪ್ರಶಾಂತ್ ವೈದ್ಯರಾಜ್ ಅವರು ಸಂವಾದವನ್ನು ನಡೆಸಿಕೊಟ್ಟರು.

“ಗ್ಲೋಬಲ್ ನರೇಟಿವ್ ಅಂದರೇನು ಎನ್ನುವುದು ಮುಖ್ಯ, ಯಾರೋ ಎಲ್ಲೋ ಕೂತು ಭಾರತದ ಕುರಿತು ನರೇಟಿವ್  ಸೆಟ್ ಮಾಡಲು ಸಾಧ್ಯವಾಗುತ್ತದೆಯೆ? ಹಾಗೆ ಮಾಡುವುದನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿದೆಯೇ? ಗ್ಲೋಬಲ್ ನರೇಟಿವ್ ಎನ್ನುವಂಥದ್ದೇನೂ ಇಲ್ಲ, ನಾವು ಜಾರ್ಜ್ ಸಾರೋಸ್ ಏನು ಹೇಳ್ದ? ಭಾರತದ ಬಗ್ಗೆ ನ್ಯೂಯಾರ್ಕ್ ಟೈಮ್ಸ್ ಏನ್ ಹೇಳ್ತಿದೆ? ಎನ್ನುವುದರ ಕುರಿತು ನಾವು ಸ್ವಲ್ಪ ಹೆಚ್ಚಾಗಿಯೇ ತಲೆ ಕೆಡಿಸಿಕೊಂಡಿದ್ದೇವೆ. ಅಲ್ಲಿ ಪಶ್ಚಿಮದ ಜಗತ್ತಿಗೆ ಭಾರತದ ಮೇಲೆ ಒಂದು ಭರವಸೆ ಇದೆ, ಜೊತೆ ಜೊತೆಗೇ ಭಾರತದ ಕುರಿತು ಆಕ್ರಮಿಕ ಪ್ರವೃತ್ತಿಯೂ ಇದೆ. ಅದೂ ಸಹ ಒಂದು ನರೇಟಿವ್ ಅಲ್ಲವೆ? ಇದಕ್ಕೆ ಎರಡು ರೀತಿ ಇದಕ್ಕೆ ಸ್ಪಂದಿಸಲು ಸಾಧ್ಯವಿದೆ. ಒಂದು ನಾವು ವಿಕ್ಟಿಮ್ ಹುಡ್ ಕ್ಲೇಮ್ ಮಾಡುವುದು.ಎರಡನೆಯದು ಫ್ಯಾಕ್ಟ್‌ಗಳ ಮೂಲಕ ಪಶ್ಚಿಮಕ್ಕೆ ತಕ್ಕ ಉತ್ತರ ಕೊಡುವುದು. ಯಾವುದು ನಮ್ಮ ಆಯ್ಕೆಯಾಗಬೇಕು ಎಂದು ನಾವೇ ಯೋಚಿಸಬೇಕಿದೆ. ನಾವು ನಮ್ಮ ನರೇಟಿವ್‌ಅನ್ನು ಜಗತ್ತಿನ ಎದುರು ಇಡಬೇಕಿದೆ. ಈಗ ಭಾರತ ನರೇಟಿವ್ ಸೆಟ್ ಮಾಡುತ್ತಿದೆ. ಭಾರತದ ಅಭಿವೃದ್ಧಿಯ ಬಗ್ಗೆ ಒಂದು ಭರವಸೆ ಜಾಗತಿಕ ಇದ್ದೇಇದೆ. ನಾವು ವಿಕ್ಟಿಮ್ ಹುಡ್ ಗೆ ಒಳಗಾಗುವುದರ ಅಗತ್ಯವಿಲ್ಲ.” ಎಂದರು.

ಮುಂದೆ ಮಾತನಾಡಿದ ನಲಪತ್ ಅವರು, “ಚೀನಾಕ್ಕೆ ಜಾಗತಿಕವಾಗಿ ಈ ಹಿಂದೆ ಸಿಗುತಿದ್ದೆ ಆತ್ಮೀಯ ಸ್ವಾಗತ ದೊರೆಯುತ್ತಿಲ್ಲ, ಆದರೆ ನಮಗೆ ಭಾರತೀಯರಿಗೆ ಹೊಸ ಶಕ್ತಿ ಬಂದಿದೆ. ಈ ಹಿಂದೆ ಇದ್ದ ಭಾರತಕ್ಕೂ ಈಗಿನ ಭಾರತಕ್ಕೂ ಬಹಳ ಬದಲಾವಣೆ ಇದೆ. ಅದರಲ್ಲೂ ಈಗ ಹೊಸ ಟ್ರೆಂಡ್ ಸೆಟ್ ಆಗಿದೆ, ಮತ್ತು ಹೊಸ ಟಾರ್ಗೆಟ್ ಸೆಟ್ ಆಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯಬರು ಬಂದ ಮೇಲೆ ಭಾರತವನ್ನು ನೋಡುತ್ತಿರುವ ರೀತಿ ಬದಲಾಗಿರುವುದು ಬರಿ ಕಣ್ಣಿಗೆ ಕಾಣುತ್ತಿದೆ.

ಆದರೆ ಬ್ರಿಟಿಷ್ ರಾಯಲ್ ಫ್ಯಾಮಿಲಿಯಲ್ಲಿ ಮಕ್ಕಳಿಗೆ ಏನು ಮಾಡಬೇಕು ಎಂದು ಹೇಳುವ ಹಾಗೆ ಬಿಬಿಸಿ ಸದ್ಯಕ್ಕೆ ನ್ಯಾನಿ ಆಫ್ ಇಂಡಿಯಾ ರೀತಿ ಆಡುತ್ತಿದೆ.ಆದರೆ ಆ ರೀತಿ ನ್ಯಾನಿಗೆ ಮಕ್ಕಳು ದೊಡ್ಡವರಾಗಿ ಬೆಳೆದು ನಿಂತಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ಭಾರತದಲ್ಲಿ ಬಿಬಿಸಿ ಹೇಳಿದ್ದೆಲ್ಲವನ್ನೂ ಒಪ್ಪಿಕೊಳ್ಳುವ ಪರಿಸ್ಥಿತಿ ಇಲ್ಲ.ಭಾರತದಲ್ಲಿ ಆಡಳಿತದ ಪರಿಸ್ಥಿತಿ ಬದಲಾಗುತ್ತಿದೆ. ವಸಾಹತುಶಾಹಿ ವ್ಯವಸ್ಥೆಯ ಕರಿನೆರಳಿನಿಂದ ಭಾರತ ಹೊರಬರುತ್ತಿದೆ” ಎಂದರು.

ಮುಂದೆ ಚರ್ಚೆ ಮುಂದುವರೆಸಿ  ಮಾತನಾಡಿದ ರಾಮ್ ಮಾಧವ್ ಅವರು,  “ನಮ್ಮನ್ನು ಯಾರೂ ಟೀಕಿಸಬಾರದು ಎನ್ನುವ ‘ವಿಕ್ಟಿಮ್ಹುಡ್’ ಎನ್ನುವ ರೀತಿಯಿಂದ ಭಾರತ ಹೊರಬರಬೇಕಿದೆ. ಒಗ್ಗಟ್ಟಾದ ಭಾರತವನ್ನು ಕಟ್ಟಿದಾಗ ಮಾತ್ರ ಜಾಗತಿಕ ಮಟ್ಟದಲ್ಲಿ ಭಾರತವನ್ನು ಅದೇ ರೀತಿ ತೋರಿಸಲು, ನಮ್ಮ ನರೇಟಿವ್ ನಿರ್ಮಾಣ ಮಾಡಲು ಸಾಧ್ಯವಾಗಲಿದೆ. ಮುಂದಿನ ಆರು ವರ್ಷಗಳಲ್ಲಿ ಬಲಶಾಲಿ ಎಕಾನಮಿಯನ್ನು ನಿರ್ಮಿಸಿದರೆ ಮಾತ್ರ ಜಗತ್ತು ನಮ್ಮ ಮಾತು ಕೇಳಲು ಸಾಧ್ಯ. ಜಗತ್ತಿನಲ್ಲಿ ನಾವು ನಮ್ಮ ಸ್ಥಾನ ಗಳಿಸಲು ನಾವು ‘ಸಿವಿಲೈಸೇಶನಲ್ ನೇಷನ್ಹುಡ್’ ಅನ್ನು ತರಲು ನರೇಂದ್ರ ಮೋದಿಯವರ ಸರಕಾರ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಸಿವಿಲೈಸೇಶನಲ್ ನ್ಯಾಷನಲಿಸಂ ಎನ್ನುವುದರ ಕುರಿತಾಗಿ ಜಗತ್ತು ತನ್ನ ಗಮನ ಹರಿಸುತ್ತಿದೆ. ರಾಷ್ಟ್ರೀಯ ಪ್ರಜ್ಞೆ ಎನ್ನುವುದು ಜಾಗೃತವಾಗುತ್ತಿರುವ ಈ ಸಂದರ್ಭದಲ್ಲಿ ಯುರೋಪಿನ ಅನೇಕ ದೇಶಗಳಲ್ಲಿ ಇಮ್ಮಿಗ್ರೇಶನ್ ಮತ್ತು ಮುಸ್ಲಿಂ ಸಮುದಾಯದ ಕುರಿತು ಅನೇಕ ಸಮಸ್ಯೆಗಳು ಎದುರಾಗುತ್ತಿದೆ. ಜಾಗತಿಕ ಚಿಂತನೆ ಬದಲಾಗುತ್ತಿದೆ. ನಾವಿಂದು ಬಹಳ ಮುಖ್ಯವಾದ ಭೂಮಿಕೆಯನ್ನು ನಿಭಾಯಿಸುತ್ತಿದ್ದೇವೆ.”

ಭಾರತವನ್ನು ನೋಡುತ್ತಿರುವ ಅನೇಕ ಜನರಿಗೆ ಬಾಲಿವುಡ್ ಮತ್ತು ಇತರ ವಸಾಹತುಶಾಹಿ ಸಂಕೇತಗಳೇ ಕಾಣುತ್ತಿದೆ. ಇದನ್ನು ಬದಲಿಸುವ ಕುರಿತು ಪ್ರಶ್ನೆ ಬಂದಾಗ “ಆಸಿಯನ್ ಯೂತ್ ಸಮ್ಮಿಟ್‌ನಲ್ಲಿ – ಬಾಲಿವುಡ್ ಇನ್ಫ್ಲುಯೆನ್ಸ್‌ಗಿಂತಲೂ ಹೆಚ್ಚಾಗಿ ಆರ್ ಆರ್ ಆರ್, ಬಾಹುಬಲಿ ಮುಂತಾದ ಸಿನೇಮಾಗಳ ಬಗೆಗೆ ಮಾತನಾಡಿದರು. ಆ ಸಿನೇಮಾಗಳನ್ನು ಆಂಟಿ ಯುರೋಪಿಯನ್ ನರೇಟಿವ್ ಎಂದೇ ಬಿಂಬಿಸಲಾಗುತ್ತಿದೆ. ಬಾಲಿವುಡ್‌ನ ಪ್ರಭಾವ ಹೆಚ್ಚಿದೆ ಆದರೆ ಅದನ್ನು ನಾವು ಓವರ್ ಎಸ್ಟಿಮೇಟ್‌ ಮಾಡುತ್ತಿದ್ದೇವೆ” ಎಂದರು

ಮುಂದುವರೆದು ಮಾತನಾಡಿದ ಅವರು , “ಭಾರತ ಮುಂದಿನ ವರ್ಷಗಳಲ್ಲಿ ಎಕಾನಮಿ, ಟೆಕ್ನಾಲಜಿ ಮತ್ತು Indo pacific ಕಡೆಗೆ ಗಮನ ನೀಡಬೇಕಾಗಿದೆ. ಯುರೋಪಿನ ಕಡೆಗೆ ಕೊಟ್ಟ ಗಮನ ನಾವು ಇಲ್ಲಿ ನಮ್ಮ ನೆರೆಹೊರೆಗೆ ನೀಡುತ್ತಿಲ್ಲ. ASEAN ರಾಷ್ಟ್ರಗಳು 8-9ನೆಯ ದೊಡ್ಡ economyಯಾಗಿದ್ದು ಅದು ಅದು 5-6th ದೊಡ್ಡ economy ಆಗಲಿದೆ‌. ಅವರೊಂದಿಗೆ ನಮ್ಮ ವಹಿವಾಟು ಹೆಚ್ಚಾಗಲಿದೆ. ಈ ನಿಟ್ಟಿನಲ್ಲಿ ಭಾರತ ಜಗತ್ತಿನ ಗಮನವನ್ನು ‘ಇಂಡಿಯಾ ಸೆಂಟರ್ಡ್ ಇಂಡೋ ಪೆಸಿಫಿಕ್ ರೀಜನ್’ಗೆ ಬದಲಿಸುತ್ತಿದೆ”ಎಂದರು.

ಭಾರತ ಜಗತ್ತಿಗೆ ಏನು ನೀಡಲು ಸಾಧ್ಯ ಎಂಬ ಕುರಿತೂ ಮಾತನಾಡಿದ ಅವರು “ಭಾರತದ ಎಕಾನಮಿ ಬಲಗೊಳ್ಳಬೇಕಿದೆ, ಡೆಮಾಕ್ರಸಿ ಇಡಿಯ ಜಗತ್ತಿಗೆ ಮಾದರಿಯಾಗಿದೆ, ಅಷ್ಟಲ್ಲದೆ ಸಂಸ್ಕೃತಿ ಮತ್ತು ಮೌಲ್ಯ ವ್ಯವಸ್ಥೆಯಲ್ಲಿ ಭಾರತ ಜಗತ್ತಿಗೆ ದಾರಿ ತೋರಿಸಲಿದೆ” ಎಂದರು.

ಹಿರಿಯ ಸ್ವಯಂಸೇವಕರಾದ ಕಲ್ಲಡ್ಕ ಪ್ರಭಾಕರ ಭಟ್, ಪತ್ರಕರ್ತರಾದ ಶ್ರೀ ಶಿವ್ ಅರೂರ್, ಸ್ಮಿತಾ ಪ್ರಕಾಶ್, ಅಜಿತ್ ಹನುಮಕ್ಕನವರ, ಸಾಹಿತಿಗಳಾದ ಗಜಾನನ ಶರ್ಮ, ಕೆ.ಎನ್.ಗಣೇಶಯ್ಯ ಮುಮತಾದ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.