ಬೆಂಗಳೂರು: ರಾಜ್ಯದ ಸುದ್ದಿ ಸಂವಹನ ಸಂಸ್ಥೆ ವಿಶ್ವ ಸಂವಾದ ಕೇಂದ್ರ ಕರ್ನಾಟಕ, ಇದರ ವತಿಯಿಂದ ನೀಡಲಾಗುವ ವಾರ್ಷಿಕ ವಿಎಸ್ಕೆ ಮಾಧ್ಯಮ ಪ್ರಶಸ್ತಿಯ 2026ನೇ ಸಾಲಿನ ಪುರಸ್ಕೃತರ ಹೆಸರುಗಳು ಈ ಕೆಳಗಿನಂತಿವೆ.
ಪ್ರಶಸ್ತಿ ಪುರಸ್ಕೃತರು
ತಿ.ತಾ. ಶರ್ಮ ಪತ್ರಿಕೋದ್ಯಮ ಪ್ರಶಸ್ತಿ : ಶ್ರೀ ಕೆ.ಎನ್. ಚನ್ನೇಗೌಡ, ಸಂಪಾದಕರು, ವಿಜಯವಾಣಿ
ಬೆ.ಸು.ನಾ. ಮಲ್ಯ ಪತ್ರಿಕೋದ್ಯಮ ಪ್ರಶಸ್ತಿ : ಶ್ರೀ ನಾ. ಕಾರಂತ ಪೆರಾಜೆ, ಸಹಾಯಕ ಸಂಪಾದಕರು, ಅಡಿಕೆ ಪತ್ರಿಕೆ
ಎಂ.ವಿ.ಕಾಮತ್ ಪತ್ರಿಕೋದ್ಯಮ ಪ್ರಶಸ್ತಿ : ಶ್ರೀ ನಾಗಾರ್ಜುನ್ ದ್ವಾರಕನಾಥ್, ದಕ್ಷಿಣ ಭಾರತ ಆವೃತ್ತಿ ಸಂಪಾದಕರು, ಇಂಡಿಯಾ ಟುಡೇ
ಚಂದ್ರಶೇಖರ ಭಂಡಾರಿ ಪತ್ರಿಕೋದ್ಯಮ ಪ್ರಶಸ್ತಿ : ಶ್ರೀ ರಂಗನಾಥ್ ಭಾರದ್ವಾಜ್, ಮುಖ್ಯ ನಿರ್ಮಾಪಕರು, ಟಿವಿ-9 ಕನ್ನಡ
ಹೊ.ವೆ. ಶೇಷಾದ್ರಿ ಅಂಕಣಕಾರ ಪ್ರಶಸ್ತಿ : ಡಾ|| ಅರಕಲಗೂಡು ಸೂರ್ಯಪ್ರಕಾಶ್, ವಿವಿಧ ಪತ್ರಿಕೆಗಳ ಅಂಕಣಕಾರರು
ವಿ.ಎಸ್.ಕೆ. ಡಿಜಿಟಲ್ ಮೀಡಿಯಾ ಪ್ರಶಸ್ತಿ : ಶ್ರೀಮತಿ ರಶ್ಮೀ ಆರ್ ರಾವ್ (ರ್ಯಾಪಿಡ್ ರಶ್ಮೀ) ಆರ್ಜೆ, ಯೂಟ್ಯೂಬರ್






ವಿಎಸ್ಕೆ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭವು ಜುಲೈ 12, 2026, ಭಾನುವಾರ ಬೆಳಗ್ಗೆ 10:30ಕ್ಕೆ ಬೆಂಗಳೂರಿನ ಬಸವನಗುಡಿಯ ಬಿ.ಎಂ.ಎಸ್. ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. ಬಹುಶ್ರುತ ವಿದ್ವಾಂಸರಾದ ಪದ್ಮಭೂಷಣ ಶತಾವಧಾನಿ ಡಾ||ಆರ್ ಗಣೇಶ್ ಹಾಗೂ ವಿಶ್ವ ಸಂವಾದ ಕೇಂದ್ರ ಕರ್ನಾಟಕ ಇದರ ನಿರ್ವಾಹಕ ವಿಶ್ವಸ್ಥರಾದ ಡಾ. ಎಂ.ಕೆ. ಶ್ರೀಧರನ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ: 8722552497