ಬೆಂಗಳೂರು: ಕರ್ನಾಟಕ ದಕ್ಷಿಣ ಪ್ರಾಂತ ಸಕ್ಷಮ ಬೆಂಗಳೂರು ಜಿಲ್ಲಾ ಘಟಕ ವತಿಯಿಂದ ‘ದಿವ್ಯಾಂಗ ಸೇವಾ ಕೇಂದ್ರ’ ಉದ್ಘಾಟನೆ ಹಾಗೂ ಸಕ್ಷಮ ಸ್ಥಾಪನ ದಿವಸ ಕಾರ್ಯಕ್ರಮ ಹೆಚ್ ಆರ್ ಬಿ ಲೇಔಟ್ ನ ಆರ್ ಆರ್ ಜಿ ಗ್ರೂಪ್ ಸಭಾಂಗಣದಲ್ಲಿ ಸಂಪನ್ನಗೊಂಡಿತು.


ಬೆಳಿಗ್ಗೆ ಹೋಮ ಮತ್ತು ಪೂಜೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ದಿವ್ಯಾಂಗ ಕೇಂದ್ರ ಮತ್ತು ಕೌಶಲ್ಯಾಭಿವೃದ್ಧಿ ಕೇಂದ್ರಗಳ ಉದ್ಘಾಟನೆಯ ನಂತರ ಸಂಪನ್ನಗೊಂಡಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹ ವ್ಯವಸ್ಥಾ ಪ್ರಮುಖ್ ಕಾ. ಶಂ. ಶ್ರೀಧರ್ ಮತ್ತು ಸಕ್ಷಮದ ಪಾಲಕ,NMIT ಕಾಲೇಜಿನ ಪ್ರಾಧ್ಯಾಪಕ, VTU ಕಾರ್ಯಕಾರಿ ಮಂಡಳಿಯ ಸದಸ್ಯ ಕರುಣಾಕರ ರೈ, ಸಕ್ಷಮ ಪ್ರಾಂತ ಪೂರ್ವ ಕಾರ್ಯದರ್ಶಿ ಹರಿಕೃಷ್ಣ ರೈ , ರಾಷ್ಟ್ರೀಯ ದೃಷ್ಟಿ ಪ್ರಕೋಷ್ಠ ಪ್ರಮುಖ್ ವಿನೋದ್ ಪ್ರಕಾಶ್ , ಸಕ್ಷಮ ದಕ್ಷಿಣ ಪ್ರಾಂತ ಅಧ್ಯಕ್ಷ ಕೇಶವ ಕುಮಾರ,  ಬೆಂಗಳೂರು ಜಿಲ್ಲಾ ಘಟಕ ಅಧ್ಯಕ್ಷ ವೆಂಕಟ ಕೃಷ್ಣರವರು ಮತ್ತು ಉಪಾಧ್ಯಕ್ಷ ಲಕ್ಷ್ಮೀಪತಯ್ಯ ಪಾಲ್ಗೊಂಡು ಶುಭ ಹಾರೈಸಿದರು.

ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ  ಕೃಷ್ಣ ಮೂರ್ತಿ ಮತ್ತು VTU ಕಾರ್ಯಕಾರಿ ಮಂಡಳಿಯ ಸದಸ್ಯ ಕರುಣಾಕರ ರೈ ಅವರು ಮುಖ್ಯ ಅಥಿತಿಗಳಾಗಿ ದಿವ್ಯಾಂಗರ ಸಬಲೀಕರಣಕ್ಕಾಗಿ ಮಾಡಬೇಕಾದ ಕಾರ್ಯಗಳ ಬಗ್ಗೆ ತಿಳಿಸಿದರು.  ರಾಷ್ಟ್ರೀಯ ದೃಷ್ಟಿ ಪ್ರಕೋಷ್ಠ ಪ್ರಮುಖ್ ವಿನೋದ ಪ್ರಕಾಶ ಅವರು ಸಕ್ಷಮ ಸ್ಥಾಪನ ದಿವಸ ಬಗ್ಗೆ ತಿಳಿಸಿದರು. ಸೇವಾ ಇನ್ ಆಕ್ಷನ್ ಸಂಸ್ಥೆಯ ವರದ ಹೆಗಡೆ ಅವರು ಸಕ್ಷಮ ಕೌಶಲ್ಯ ಕೇಂದ್ರ ಬಗ್ಗೆ ಸಂದೇಶ ನೀಡಿದರು . ಬೆಂಗಳೂರು ಜಿಲ್ಲಾ ಅಧ್ಯಕ್ಷ ವೆಂಕಟ ಕೃಷ್ಣ ಅವರು ಸಹ ದಿವ್ಯಾಂಗ ಸೇವಾ ಕೇಂದ್ರದ ಸ್ಥಳೀಯ ವ್ಯವಸ್ಥಾಪನ ಸಮಿತಿಯ ಘೋಷಣೆ ಮಾಡಿದರು. ಕೇಶವ ಕುಮಾರ ಅವರು ದಿವ್ಯಾಂಗ ಕೇಂದ್ರದ ಬಗ್ಗೆ ಮಾತನಾಡಿ ಶುಭ ಹಾರೈಸಿದರು.

ನಂತರ ಸ್ವಸ್ತಿ ಫೌಂಡೇಷನ್ ನ ದಿವ್ಯಾಂಗ ಮಕ್ಕಳ ನೃತ್ಯ ಪ್ರದರ್ಶನ ನಡೆಯಿತು. 50ಕ್ಕೂ ಹೆಚ್ಚು ವಿಶೇಷ ವಿಕಲ ಚೇತನರು ಭಾಗವಹಿಸಿದರು. ಬಂದಂತ ಎಲ್ಲ ವಿಶೇಷ ಚೇತನರಿಗೆ ಪ್ರಾಂತ ಸಹ ಉಪಾಧ್ಯಕ್ಷ ಡಾ. ಕಿರಣ್ ಮೂರ್ತಿಯವರ ಸಹಾಯದಿಂದ ಉಡುಗೊರೆ ನೀಡಲಾಯಿತು. ವಿಶೇಷವಾಗಿ ಮೂರು ಜನ ದಿವ್ಯಾಂಗರಿಗೆ ವೀಲ್ ಚೇರ್ ವಿತರಿಸಲಾಯಿತು ಮತ್ತು ಮೂರು ಊರುಗೋಲನ್ನ / ಬ್ಲೈಂಡ್ ಸ್ಟಿಕ್ಕನ್ನು ಸಹ ವಿತರಿಸಲಾಯಿತು.

ಟ್ರಾನ್ಸ್ ಸಂಸ್ಥೆಯ ಸಂಯೋಜನೆಯಲ್ಲಿ ಉಚಿತ ಕಣ್ಣು ಪರೀಕ್ಷೆ ಮತ್ತು ಸಕ್ಷಮ ನೇತ್ರದಾನ ಪ್ರತಿಜ್ಞೆ ಹಾಗೂ ರಾಷ್ಟ್ರೋತ್ಥಾನ ದ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿತ್ತು. ಸಾರ್ವಜನಿಕರು ನೇತ್ರದಾನ ಪ್ರತಿಜ್ಞೆ ಮತ್ತು ರಕ್ತದಾನದಲ್ಲಿ ಪಾಲ್ಗೊಂಡರು.

Leave a Reply

Your email address will not be published.

This site uses Akismet to reduce spam. Learn how your comment data is processed.