ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಕರ್ನಾಟಕ ಹಾಗೂ ಚಿತ್ರದುರ್ಗ-ದಾವಣಗೆರೆ ಜಿಲ್ಲೆ ಅಭಾವಿಪ ಹಿರಿಯ ಕಾರ್ಯಕರ್ತರ ಬಳಗದ ಸಹಯೋಗದಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ವಿಭಾಗದ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ 2026ನೇ ಸಾಲಿನ ರಾಜ್ಯ ಮಟ್ಟದ ಕನ್ನಡ ಸಣ್ಣ ಕಥೆ ಮತ್ತು ಕವನಗಳ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಕಥೆ-ಕವನ ಎರಡೂ ವಿಭಾಗಗಳಲ್ಲಿ ಪ್ರತ್ಯೇಕ ಬಹುಮಾನಗಳಿದ್ದು ಪ್ರಥಮ ಬಹುಮಾನ ರೂ. 10,000, ದ್ವಿತೀಯ ಬಹುಮಾನ ರೂ. 7,000, ತೃತೀಯ ಬಹುಮಾನ ರೂ. 3000 ನಗದು ಬಹುಮಾನವಿರಲಿದೆ.
ಕಥೆ, ಕವನಗಳನ್ನು ಕಳಿಸುವುದು ಹೇಗೆ?
ಬರಹಗಳನ್ನು ಭಾರತೀಯ ಅಂಚೆ ಸ್ಪೀಡ್ ಪೋಸ್ಟ್ ಮೂಲಕ ಈ ವಿಳಾಸಕ್ಕೆ ಕಳುಹಿಸಬೇಕು: ಟಿ.ಆರ್. ಉದಯರವಿ, “ಗುರು ಕೃಪ”, ಶೃಂಗೇರಿ ಮಠದ ರಸ್ತೆ, ಚಿತ್ರದುರ್ಗ – 577501. ಮೊಬೈಲ್ ಸಂಖ್ಯೆ: 96064 92583. ಬರಹಗಳು ಅಗಸ್ಟ್ 31, 2026ರ ಒಳಗೆ ತಲುಪಬೇಕು.
ಮೊದಲು ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಆನ್ ಲೈನ್ ನೋಂದಣಿಗಾಗಿ ಈ ಕೆಳಗಿನ ಲಿಂಕ್ ಬಳಸಿ: https://docs.google.com/forms/d/e/1FAIpQLSfHA-t9oXGmhHmQspaQZVsE0gU-RymBcmTC7eC7grKgb1iv9g/viewform
ಅಥವಾ ಕೆಳಗೆ ನೀಡಿರುವ ದೂರವಾಣಿ ಸಂಖ್ಯೆ ಮತ್ತು ಇ-ಮೇಲ್ ಬಳಸಿಕೊಂಡು ನೋಂದಣಿ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಸಂಖ್ಯೆಗೆ ಸಂಪರ್ಕಿಸಿ:
6360533093, 8660032374
73376 69656, 96064 92583