Bhoomi Poojan for Hindu Shakti Sangam

The Bhoomo Poojan Ceremoy for Hindu Shakti Sangam 2012 at Hubli was done by Poojya Shree Niranjan Gurusiddha Rajayogeendra Swamiji, Senior Sangh Pracharak Sri K Suryanarayana Rao.

Bhoomi Poojan for Hindu Shakti Sangam

“ಹಿಂದು ಶಕ್ತಿ ಸಂಗಮ”ದ ಶಿಬಿರಸ್ಥಾನದ ಭೂಮಿಪೂಜನ ಕಾರ್ಯಕ್ರಮವು ದಿನಾಂಕ 22 ನವೆಂಬರ್ 2011 ಮಂಗಳವಾರ ಬೆಳಿಗ್ಗೆ 10 ಗಂಟೆಗೆ ನಡೆಯಿತು. ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಪೂಜ್ಯ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯರಾದ ಮಾನನೀಯ ಶ್ರೀ ಕೃ. ಸೂರ್ಯನಾರಾಯಣರಾವ್, ಕರ್ನಾಟಕ ಉತ್ತರಪ್ರಾಂತ ಸಂಘಚಾಲಕರಾದ ಮಾನನೀಯ ಶ್ರೀ ಖಗೇಶನ್ ಪಟ್ಟಣ ಶೆಟ್ಟಿ, ಕ್ಷೇತ್ರೀಯ ಪ್ರಚಾರಕರಾದ ಶ್ರೀ ಮಂಗೇಶ ಭೆಂಡೆ, ಹಿರಿಯ ಪ್ರಚಾರಕರಾದ ಶ್ರೀ ಸು. ರಾಮಣ್ಣ, ಉತ್ತರಪ್ರಾಂತ ಕಾರ್ಯವಾಹ ಶ್ರೀ ಅರವಿಂದ ದೇಶಪಾಂಡೆ, ಪ್ರಾಂತ ಪ್ರಚಾರಕ ಶ್ರೀ ಗೋಪಾಲಜಿ, ಸಹಕಾರ್ಯವಾಹ ಶ್ರೀಧರ ನಾಡಗೀರ, ಸಹಪ್ರಾಂತ ಪ್ರಚಾರಕ ಶ್ರೀ ಶಂಕರಾನಂದರು, ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾದ ಬಿ.ಎಲ್.ಡಿ. ವಿಶ್ವವಿದ್ಯಾಲಯ ವಿಜಾಪುರದ ವಿಶ್ರಾಂತ ಕುಲಪತಿಗಳಾದ ಡಾ|| ಸತೀಶ ಜಿಗಜಿನ್ನಿಯವರು, ಕಾರ್ಯದರ್ಶಿಯವರಾದ ಶ್ರೀ ಗೋವರ್ಧನರಾವ್ ಹಾಗೂ ಗಣ್ಯ ವ್ಯಕ್ತಿಗಳಾದ ಶ್ರೀ ಬಸವರಾಜ್ ಸೇಡಂ, ಜಿಲ್ಲ ಉಸ್ತುವಾರಿ ಸಚಿವ ಶ್ರೀ ಜಗದೀಶ ಶೆಟ್ಟರ್, ಸಂಸದ ಶ್ರೀ ಪ್ರಹ್ಲಾದ ಜೋಶಿ, ಮೇಯರ್ ಪೂರ್ಣಾ ಪಾಟೀಲ್, ಮಾಧ್ಯಮ ವರದಿಗಾರರು ಹಾಗೂ ಸಂಘದ ನೂರಾರು ಸ್ವಯಂಸೇವಕರು ಭಾಗವಹಿಸಿದ್ದರು.

ಮಾನನೀಯ ಶ್ರೀ ಸೂರ್ಯನಾರಾಯಣರಾವ್ ರವರು ತಮ್ಮ ಉದ್ಬೋಧನೆಯಲ್ಲಿ “ನಾವು ಹಿಂದು ಎಂದು ಹೇಳಿಕೊಳ್ಳಲು ಹೆಮ್ಮೆ ಪಡಬೇಕು ಎಂದು ವಿವೇಕಾನಂದರು ಹೇಳಿದ್ದರು. ಅದರಂತೆ ಇಂದಿನ ದಿನ ಎಲ್ಲರಲ್ಲೂ ಆ ಭಾವನೆ ನೆಲೆಯೂರಬೇಕಿದೆ. ಹಿಂದುತ್ವ ಎಂಬುದು ವಿಶಾಲ ದೃಷ್ಟಿಕೋನ ಹಾಗೂ ಜೀವನಪದ್ಧತಿ. ಆದರೆ ಕಮ್ಯುನಿಸ್ಟರು ರಾಜಕೀಯ ಕಾರಣಕ್ಕಾಗಿ ಹಿಂದುತ್ವ ಹಾಗೂ ಸಂಘದ ಧ್ಯೇಯಗಳನ್ನು ವಿರೋಧಿಸುತ್ತ ಬಂದಿದ್ದಾರೆ. ನಮ್ಮಲ್ಲಿ ಋಷಿಮುನಿಗಳ ರಕ್ತ ಹರಿಯುತ್ತಿದೆ. ಅದನ್ನು ನೆನಪಿಸಿಕೊಂಡು ದೇಶ, ಧರ್ಮ ರಕ್ಷಣೆ, ಜಾಗೃತಿ, ಸಂಘಟನೆಗಾಗಿ ಸಿಂಹಗರ್ಜನೆ ಮಾಡಬೇಕು.

ನಮ್ಮಲ್ಲಿ ನಮ್ಮ ದೇಶ, ಧರ್ಮ ಎಂಬ ಭಾವನೆ ಮರೆತು ಹೋಗಿದ್ದರಿಂದಲೇ ನಮ್ಮನ್ನು ಸಾವಿರಾರು ವರ್ಷ ಮುಸ್ಲಿಮರು, ಆಂಗ್ಲರು ಆಳಿದರು. ಅವರು ನಮ್ಮಲ್ಲಿ ಒಡಕು ಮೂಡಿಸಲಿಲ್ಲ. ನಮ್ಮಲ್ಲಿರುವ ಒಡಕನ್ನು ಬಳಸಿಕೊಂಡು ಅವರು ನಮ್ಮನ್ನೇ ಗುಲಾಮರನ್ನಾಗಿ ಮಾಡಿಕೊಂಡು ದೇಶವಾಳಿದರು.

ಸಹೃದಯ ಹಿಂದು
ಬೈಬಲ್ ಒಪ್ಪಿಕೊಳ್ಳದಿದ್ದವರು ನರಕಕ್ಕೆ ಹೋಗುತ್ತಾರೆಂದು ಕ್ರಿಶ್ಚಿಯನ್ ರು ಹೇಳುತ್ತಾರೆ. ಕುರಾನ್ ಒಪ್ಪದವರು ಬದುಕಲು ಅರ್ಹರಲ್ಲ ಎಂದು ಮುಸ್ಲಿಮರು ಹೇಳುತ್ತಾರೆ. ಆದರೆ ಪ್ರತೀ ಪ್ರಾಣಿಗೂ ಕೂಡ ಭೂಮಿ ಮೇಲೆ ಸ್ವತಂತ್ರವಾಗಿ ಬದುಕುವ ಹಕ್ಕು ಇದೆ ಎಂದು ಹಿಂದುಗಳು ಹೇಳುತ್ತಾರೆ. ಅಂತಹ ವಿಶಾಲ, ಸಹೃದಯ ಹಿಂದು ಧರ್ಮದ ಬಗ್ಗೆ ಮಾತನಾಡುವುದೇ ಅಪರಾಧ ಎಂಬಂಥ ವಾತಾವರಣ ಕಮ್ಯುನಿಸ್ಟರಿಂದ ಸೃಷ್ಟಿಯಾಗಿದೆ. ಆದರೆ ಹಿಂದುತ್ವದ ಆಧಾರದಿಂದ ಜನರೆಲ್ಲ ಒಗ್ಗಟ್ಟಾದರೆ ರಾಷ್ಟ್ರ ಹಾಗೂ ಧರ್ಮದ ಹಿತಾಸಕ್ತಿ ಕಾಯುವ ಸರಕಾರ ಸಿಗುತ್ತದೆ” ಎಂದು ಹೇಳಿದರು.

ಭಾವೈಕ್ಯತೆಯಿಂದ ನಡೆಯಬೇಕು

ಮೂರುಸಾವಿರ ಮಠದ ಜಗದ್ಗುರುಗಳು ಆಶೀರ್ವಚನ ನೀಡುತ್ತ “ನಮ್ಮ ಭಾರತ ದೇಶ ವಿಶಿಷ್ಟವಾದ ಸಂಸ್ಕೃತಿ, ಪರಂಪರೆ, ಸೌಜನ್ಯ, ತ್ಯಾಗ ಭಾವನೆಯುಳ್ಳ ದೇಶ. ಇದನ್ನು ಗಮನದಲ್ಲಿಟ್ಟುಕೊಂಡು ಹಾಗೂ ಅದನ್ನು ಕಾಪಾಡಿಕೊಂಡು ನಡೆಯಬೇಕು. ವ್ಯಕ್ತಿನಿಷ್ಠೆಗಿಂತ ಸಮಷ್ಟಿನಿಷ್ಠೆ ಶ್ರೇಷ್ಠವಾದದ್ದು. ಆಸೆ, ಆಮಿಷಗಳಿಗೆ ಕಡಿವಾಣ ಹಾಕಿ ಭಾವೈಕ್ಯತೆಯಿಂದ ನಡೆಯಬೇಕು. ನಾವು ಭಾರತೀಯರು, ಹಿಂದುಗಳು ಎಂಬ ಸ್ವಾಭಿಮಾನ ಎಲ್ಲರಲ್ಲೂ ಮನೆ ಮಾಡಬೇಕು” ಎಂದರು.

ಇದೇ ಸಂದರ್ಭದಲ್ಲಿ ಶಿಬಿರಕ್ಕಾಗಿ ತಮ್ಮ ಹೊಲಗಳನ್ನು ಬಿಟ್ಟುಕೊಟ್ಟು ತಮ್ಮದೇ ಆದ ರೀತಿಯಲ್ಲಿ ಶಿಬಿರಕ್ಕೆ ಕೊಡುಗೆಯನ್ನು ನೀಡಿದ ಉಣಕಲ್ ಹಾಗೂ ಗಾಮನಗಟ್ಟಿಯ ರೈತರಿಗೆ ಶ್ರೀಗಳು ಫಲಪ್ರಸಾದವನ್ನು ನೀಡಿ ಆಶೀರ್ವದಿಸಿದರು.

ಪ್ರಾಂತ ಕಾರ್ಯವಾಹ ಶ್ರೀ ಅರವಿಂದ ದೇಶಪಾಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ಕಾರ್ಯಧ್ಯಕ್ಷ ಡಾ|| ಸತೀಶ ಜಿಗಜಿನ್ನಿಯವರು ಸಮಾರಂಭಕ್ಕೆ ಆಗಮಿಸಿದ್ದ ಮಹನೀಯರನ್ನು ಮತ್ತು ಗಣ್ಯರನ್ನು ಸ್ವಾಗತಿಸಿದರು. ಕಾರ್ಯದರ್ಶಿ ಗೋವರ್ಧನರಾವ್ ವಂದಿಸಿದರು. ಈ ಸಮಾರಂಭಕ್ಕೆ ೫೦೦ ಕ್ಕೂ ಹೆಚ್ಚು ಜನ ಭಾಗವಹಿಸಿದ್ದು ವಿಶೇಷವಾಗಿತ್ತು.

Leave a Reply

Your email address will not be published.

This site uses Akismet to reduce spam. Learn how your comment data is processed.