Shiva Subramanya, Group Editor of Hosadigantha

Bangalore February 1:  Well known journalist Shiva Subramanya to take charge as Group Editor of Hosadigantha, the Kannada Daily. Having decades of experrience in Kannada Journalism, Shiva Subramanya will take his new responsibility on February 6, Monday.

Hosadigantha, a noted daily of Karnataka is being published from Jnana Bharati Prakashan. Started in the year 1979 from Mangalore, now has Mangalore,Bangalore , Shimoga and Hubli Editions. With its tag line as Rashtra Jagrutiya Dainika (ರಾಷ್ಚ್ರ ಜಾಗೃತಿಯ ದೈನಿಕ) means Daily for National awareness, Hosa Digantha is a news paper with nationalist ideology.

visit http://hosadigantha.in for its web edition.

Shiva Subramanya, Group Editor of Hosadigantha
Relaunching Ceremony of Hosadigantha, RSS leaders Mai Cha Jayadev, Kajampady Subramanya Bhat, The then CM BSY

ಹೊಸದಿಗಂತ ನಡೆದು ಬಂದ ಹಾದಿ

ಅದು 29.03.1979. ಚಾಂದ್ರಮಾನ ಯುಗಾದಿಯ ಶುಭದಿನ. ಅವಿಭಜಿತ ದ. ಕ. ಜಿಲ್ಲೆಯ ಮಂಗಳೂರಿನಲ್ಲಿ ಆಗ ಇದ್ದ ಎರಡು ದೊಡ್ಡ ಪತ್ರಿಕೆಗಳು ಹಾಗೂ ಮೂರು ಚಿಕ್ಕ ಪತ್ರಿಕೆಗಳ ಜತೆ ಇನ್ನೊಂದು ಪುಟ್ಟ ಪತ್ರಿಕೆ ಕಣ್ತೆರೆಯಿತು. ಟ್ಯಾಬ್ಲಾಯ್ಡ್ ಗಾತ್ರದ 2 ಪುಟಗಳ ಕಪ್ಪು-ಬಿಳುಪಿನ ಆ ಪತ್ರಿಕೆಯೇ ಹೊಸದಿಗಂತ. ಆಗ ಅದಕ್ಕಿದ್ದ ಮುಖ ಬೆಲೆ 10 ಪೈಸೆ.

ಜಿಲ್ಲೆಯಲ್ಲಿ ಎರಡು ದೊಡ್ಡ ಪತ್ರಿಕೆಗಳಿವೆ. ಜೊತೆಗೆ ಮೂರು ಚಿಕ್ಕಪತ್ರಿಕೆಗಳೂ ಇವೆ. ಹೀಗಿರುವಾಗ ಇನ್ನೊಂದು ಪತ್ರಿಕೆ ಏಕೆ? ಈ ಪ್ರಶ್ನೆ ಆಗ ಕೇಳಿಬಂದಿದ್ದು ಸ್ವಾಭಾವಿಕ. ಆದರೆ ‘ಹೊಸದಿಗಂತ’ ಮೂರರ ಜತೆ ಮತ್ತೊಂದು ಪತ್ರಿಕೆಯಾಗಿ, ಗುಂಪಿನಲ್ಲಿ ಗೋವಿಂದವಾಗಲು ಜನ್ಮ ತಳೆದಿರಲಿಲ್ಲ. ಎಷ್ಟೇ ಪತ್ರಿಕೆಗಳಿದ್ದರೂ ಉಳಿದೆಲ್ಲ ಪತ್ರಿಕೆಗಳಿಗಿಂತ ಭಿನ್ನವಾಗಿರಬೇಕೆಂಬುದೇ ಹೊಸದಿಗಂತದ ಉದ್ದೇಶವಾಗಿತ್ತು. ನಿರ್ಭೀತ, ನಿಷ್ಪಕ್ಷಪಾತ, ವಸ್ತುನಿಷ್ಠ ವರದಿ ನೀಡುವ, ಜತೆಗೆ ಸತ್ಯಸಂಗತಿಯನ್ನು ನಿಷ್ಠುರವಾಗಿ ಅರುಹುವ, ರಾಷ್ಟ್ರೀಯತೆ, ದೇಶದ ಹಿತಾಸಕ್ತಿಗಳನ್ನು ಎತ್ತಿಹಿಡಿಯುವ ದಿನಪತ್ರಿಕೆಯೊಂದು ಬೇಕೆಂಬುದು ಸಮಾನಮನಸ್ಕ ವಿಚಾರಧಾರೆಯ ಬಹುಜನರ ಅಪೇಕ್ಷೆಯಾಗಿತ್ತು. ಆ ಅಪೇಕ್ಷೆಯ ಸಾಕಾರರೂಪವೇ ಹೊಸದಿಗಂತ.

ಹೊಸದಿಗಂತ ಆರಂಭಕ್ಕೂ ಮುನ್ನ ೧೯೭೫ರ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಪತ್ರಿಕಾ ನಿರ್ಬಂಧವಿದ್ದಾಗ ಜನತೆಗೆ ಸತ್ಯಸಂಗತಿ ತಿಳಿಸಲು ಸಂಘಪರಿವಾರ ‘ಕಹಳೆ’ ಎಂಬ ಭೂಗತ ಪತ್ರಿಕೆಯನ್ನು ನಿಯಮಿತವಾಗಿ ಹೊರತರುತ್ತಿತ್ತು. ಆದರೆ ಅದರ ಮುದ್ರಣ, ವಿತರಣೆ ಎಲ್ಲವೂ ಸರ್ಕಾರದ ಕಣ್ತಪ್ಪಿಸಿ ನಡೆಸಬೇಕಾಗಿತ್ತು. ಜನರು ಮಾತ್ರ ಆ ಪತ್ರಿಕೆಗಾಗಿ ಕುತೂಹಲದಿಂದ ಕಾಯುತ್ತಿದ್ದುದುಂಟು. ತುರ್ತುಪರಿಸ್ಥಿತಿ ತೊಲಗಿದಾಗ ಭೂಗತ ಪತ್ರಿಕೆಯನ್ನು ಮುಂದುವರೆಸುವ ಅಗತ್ಯ ಕಂಡುಬರಲಿಲ್ಲ. ಆದರೆ ರಾಷ್ಟ್ರೀಯತೆ, ಸಮಾಜಮುಖಿ ಧನಾತ್ಮಕ ವಿಚಾರಗಳು, ಹಿಂದುತ್ವ ಮೊದಲಾದ ವಿಚಾರಗಳಿಗೆ ಆಗ ಪತ್ರಿಕೆಗಳಲ್ಲಿ ಪ್ರಾಮುಖ್ಯತೆ ಸಿಗುತ್ತಿದ್ದುದು ತೀರಾ ಕಡಿಮೆ. ಹೊಸ ದಿಗಂತ ಪ್ರಾರಂಭವಾಗುವುದಕ್ಕೆ ಈ ಅಂಶ ಕೂಡ ಕಾರಣವಾಯಿತು.

ಹೊಸದಿಗಂತ ಆರಂಭಗೊಂಡಾಗ ಅದಕ್ಕೊಂದು ತನ್ನದೇ ಆದ ಕಚೇರಿ ಕೂಡ ಇರಲಿಲ್ಲ. ಬಂಡವಾಳವಂತೂ ಮೊದಲೇ ಇರಲಿಲ್ಲ. ಹೊಸ ದಿಗಂತ ಪತ್ರಿಕೆಯ ಕನಸು ಕಂಡವರ ಬಳಿಯೂ ಬಂಡವಾಳದ ವಿಶಾಲ ಹರವು ಇರಲಿಲ್ಲ. ಆಗ ಇದ್ದದ್ದು ನಮ್ಮ ಪತ್ರಿಕೆಯೊಂದನ್ನು ಹೊರತರಬೇಕೆಂಬ ಪ್ರಬಲ ಇಚ್ಛಾಶಕ್ತಿ ಮತ್ತು ಛಲ ಮಾತ್ರ. ಈ ಪ್ರಬಲ ಇಚ್ಚಾಶಕ್ತಿ ಹಾಗೂ ಛಲಗಳೇ ಕ್ರಮೇಣ ಹೊಸ ದಿಗಂತದ ಬೆಳವಣಿಗೆಗೆ ಆಧಾರಸ್ತಂಭಗಳಾದವು ಎನ್ನುವುದು ಈಗ ಇತಿಹಾಸ. ಮಂಗಳೂರಿನ ಕುದ್ರೋಳಿ ಅಳಿಕೆ ರಸ್ತೆಯಲ್ಲಿರುವ ಪುಟ್ಟದೊಂದು, ಮೂರೂವರೆ ಜನರು ಕುಳಿತುಕೊಳ್ಳಬಹುದಾದ ಕೋಣೆಯೊಂದರಲ್ಲಿ ಹೊಸದಿಗಂತದ ಕಾರ್ಯ ಆರಂಭ. ಮೊಳೆ ಜೋಡಿಸಿ ಕಂಪೋಸ್ ಮಾಡಿ, ಮೈಕೈ ಮಸಿ ಮಾಡಿಕೊಂಡು ಕಷ್ಟಪಟ್ಟು ಕಪ್ಪು-ಬಿಳುಪಿನ ಪತ್ರಿಕೆ ಹೊರತರಬೇಕಾದ ಪರಿಸ್ಥಿತಿ. ಆಗ ಮಂಗಳೂರಿನಲ್ಲಿ ನಡೆಯುತ್ತಿದ್ದ ಪತ್ರಿಕಾ ಗೋಷ್ಠಿಗಳಿಗೆ ಹೊಸದಿಗಂತಕ್ಕೆ ಆಹ್ವಾನವೇ ಇರಲಿಲ್ಲ. ಏಕೆಂದರೆ ಹೊಸ ದಿಗಂತವನ್ನು ಒಂದು ಪತ್ರಿಕೆ ಎಂದು ಪತ್ರಿಕಾಗೋಷ್ಠಿ ಕರೆಯುವವರು ಭಾವಿಸಿರಲಿಲ್ಲ. ಆದರೆ ಕೆಲವು ಹಿರಿಯ ಪತ್ರಕರ್ತರು ಹೊಸದಿಗಂತದ ಪರವಾಗಿ ವಾದಿಸಿ, ಹೊಸದಿಗಂತ ಪತ್ರಿಕೆಯ ಪ್ರತಿನಿಗೂ ಪತ್ರಿಕಾಗೋಷ್ಠಿಗೆ ಕರೆಯಬೇಕು ಎಂದು ಆಗ್ರಹಿಸಿದ ಬಳಿಕ, ಪತ್ರಿಕೆಗೆ ಆಮಂತ್ರಣ ಬರತೊಡಗಿದವು. ಆದರೂ ದೊಡ್ಡ ಪತ್ರಿಕೆಗಳಿಗೆ ಎಲ್ಲಿಲ್ಲದ ಗೌರವ, ಆದರ ನೀಡಿ, ಹೊಸದಿಗಂತವನ್ನು ಕೀಳಾಗಿ, ವ್ಯಂಗ್ಯದಿಂದ, ತಾತ್ಸಾರವಾಗಿ ನೋಡುವ ಪರಿಪಾಠ ಇದ್ದೇ ಇತ್ತು. ಹೊಸದಿಗಂತ ಅದಕ್ಕೆಲ್ಲ ತಲೆಕೆಡಿಸಿಕೊಳ್ಳದೆ ತನ್ನ ಕಾಯಕವನ್ನು ನಿಷ್ಠೆಯಿಂದ ಮುಂದುವರಿಸಿತು. ಕ್ರಮೇಣ ಎಲ್ಲರ ವಿಶ್ವಾಸ ಗಳಿಸಿತು.

ಟ್ಯಾಬ್ಲಾಯ್ಡ್ ಗಾತ್ರದಲ್ಲಿದ್ದ ಪತ್ರಿಕೆಯನ್ನು ನಾಲ್ಕು ದೊಡ್ಡ ಪುಟಗಳಲ್ಲಿ ಹೊರತರಲಾಯಿತು. ಆದರೆ ಬೇರೆ ಪತ್ರಿಕೆಗಳಲ್ಲಿ ಆಗ ೮ ದೊಡ್ಡ ಪುಟಗಳಿರುತ್ತಿತ್ತು. ವಿಷಯ ವೈವಿಧ್ಯಗಳಿರುತ್ತಿದ್ದವು. ಹೊಸದಿಗಂತದಲ್ಲೂ ಅವೆಲ್ಲ ಇರಬೇಕೆಂಬುದು ಓದುಗರ ಅಪೇಕ್ಷೆಯಾಗಿತ್ತು. ಮುದ್ರಣ ಜಗತ್ತಿನಲ್ಲೂ ತಂತ್ರಜ್ಞಾನ ಬದಲಾಗಿತ್ತು. ಮುದ್ರಣಕ್ಕೆ ಆಫ್‌ಸೆಟ್ ಮೆಷೀನ್, ಅಕ್ಷರಜೋಡಣೆಗೆ ಕಂಪ್ಯೂಟರ್ ಕಾಲಿಟ್ಟಿದ್ದವು. ಹೊಸದಿಗಂತಕ್ಕೂ ಅವನ್ನೆಲ್ಲ ಬಳಸುವುದು ಅನಿವಾರ‍್ಯವಾಯಿತು. ಯೆಯ್ಯಾಡಿ ಕೈಗಾರಿಕಾ ಪ್ರದೇಶದಲ್ಲಿ ದಿಗಂತ ಮುದ್ರಣ ಎಂಬ ಸ್ವಂತ ಮುದ್ರಣಾಲಯ ಕಂಪ್ಯೂಟರ್, ವೆಬ್, ಆಫ್‌ಸೆಟ್ ಮುದ್ರಣಯಂತ್ರ ಗಳನ್ನು ಒಳಗೊಂಡು ತಲೆಯೆತ್ತಿತು. ಹೊಸದಿಗಂತ ಕಚೇರಿ ಕೂಡ ಯೆಯ್ಯಾಡಿಗೆ ಸ್ಥಳಾಂತರಗೊಂಡಿತು . ಆಗತಾನೆ ಪತ್ರಿಕೋದ್ಯಮ ಪದವಿ ಪಡೆದ ಹಲವು ಯುವಕರು ಹೊಸದಿಗಂತಕ್ಕೆ ಸೇರ್ಪಡೆಗೊಂಡರು. ನಾಲ್ಕು ಪುಟವಿದ್ದ ಪತ್ರಿಕೆ ಆರು ಪುಟಗಳಾಗಿ ಕ್ರಮೇಣ ೮ ಪುಟಗಳಿಗೇರಿ ಜನಮನ ಸೆಳೆಯಿತು. ಪ್ರತಿ ಶುಕ್ರವಾರ ಸಿನಿಮಾ ದಿಗಂತ (೪ ಪುಟ) ಪ್ರತಿ ಭಾನುವಾರ ಸಾಹಿತ್ಯ ಸಾಪ್ತಾಹಿಕ (೪ ಪುಟ) ಜೊತೆಗೆ ಕೃಷಿ, ಆಟ ಅವಲೋಕನ, ಆರೋಗ್ಯ, ಶ್ರೀ-ಸ್ತ್ರೀ ಮೊದಲಾದ ಅಂಕಣಗಳೂ ಪ್ರಕಟವಾಗತೊಡಗಿದವು.

ಮುದ್ರಣಕ್ಷೇತ್ರದಲ್ಲಿ ತಂತ್ರಜ್ಞಾನ ಶರವೇಗದಲ್ಲಿ ಬದಲಾಗುತ್ತಲೇ ಇತ್ತು. ಅದಕ್ಕೆ ತಕ್ಕಂತೆ ಹೊಸ ದಿಗಂತವೂ ಬದಲಾಗಲೇ ಬೇಕಾಗಿತ್ತು. ಪತ್ರಿಕೆಗಳು ಬಣ್ಣದಲ್ಲಿ ಮುದ್ರಣಗೊಳ್ಳತೊಡಗಿದಾಗ ಹೊಸದಿಗಂತವೂ ಬಣ್ಣದಲ್ಲಿ ಮುದ್ರಣಗೊಂಡು ಓದುಗರಿಗೆ ಮುದನೀಡಿತು.

ಮಂಗಳೂರಿನಲ್ಲಿ ಮುದ್ರಣಗೊಂಡ ಪತ್ರಿಕೆ ದ.ಕ. ಜಿಲ್ಲೆ, ಕೊಡಗು, ಉತ್ತರಕನ್ನಡ, ಕಾಸರಗೋಡು ಮೊದಲಾದ ಭಾಗಗಳಿಗೆ ಮಾತ್ರ ತಲುಪುತ್ತಿತ್ತು. ರಾಜಧಾನಿ ಬೆಂಗಳೂರಿಗೆ ಹೊಸದಿಗಂತ ತಲುಪುತ್ತಿರಲಿಲ್ಲ. ಬೆಂಗಳೂರಿನಲ್ಲಿ ಪತ್ರಿಕೆಯ ಆವೃತ್ತಿ ತೆರೆಯುವುದೊಂದೇ ಇದಕ್ಕೆ ಪರಿಹಾರವೆಂದು ಆಡಳಿತ ವರ್ಗಕ್ಕೆ ಅರಿವಾಯಿತು. ಆಗ ಶುರುವಾದದ್ದು ಬೆಂಗಳೂರು ಆವೃತ್ತಿ (೧೯೯೫). ಶಿವಮೊಗ್ಗದಲ್ಲಿ ಮುದ್ರಣ ಯಂತ್ರ ಸ್ಥಾಪಿಸಿ ಪತ್ರಿಕೆಯ ಆವೃತ್ತಿ ಆರಂಭಗೊಂಡಿತಾದರೂ ಆರ್ಥಿಕ ಹಿನ್ನಡೆ ಕಾರಣಗಳಿಂದಾಗಿ ಆವೃತ್ತಿಯನ್ನು ಸ್ಥಗಿತಗೊಳಿಸಬೇಕಾಗಿ ಬಂದಿತು.

ರಾಷ್ಟ್ರೀಯ ಮಹತ್ವದ ವಿದ್ಯಮಾನಗಳು ನಡೆದ ಸಂದರ್ಭದಲ್ಲಿ ಹೊಸದಿಗಂತ ನಿರ್ವಹಿಸಿದ ಪಾತ್ರ ಇಂದಿಗೂ ಸ್ಮರಣೀಯ. ಅಯೋಧ್ಯೆ ವಿವಾದ, ದತ್ತಪೀಠ, ಹುಬ್ಬಳ್ಳಿ ಕಿತ್ತೂರು ಚೆನ್ನಮ್ಮ ಮೈದಾನದಲ್ಲಿ ಧ್ವಜಾರೋಹಣ, ರಥಯಾತ್ರೆ ಇತ್ಯಾದಿ ಸಂದರ್ಭಗಳಲ್ಲಿ ಹೊಸದಿಗಂತ ನಿರ್ಭೀತಿಯಿಂದ ಕಾರ್ಯನಿರ್ವಹಿಸಿ, ಓದುಗರಿಗೆ ಸತ್ಯಸಂಗತಿಗಳನ್ನು ಅರುಹುವಲ್ಲಿ ಉಳಿದ ಪತ್ರಿಕೆಗಳಿಗಿಂತ ವಿಭಿನ್ನ ಪಾತ್ರ ನಿರ್ವಹಿಸಿತು. ೧೯೯೨ರ ಡಿಸೆಂಬರ್ ೪ ರಂದು ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸಗೊಂಡ ದಿನ ಹೊಸದಿಗಂತ ತನ್ನ ಪ್ರತಿನಿಯನ್ನು ಅಯೋಧ್ಯೆಗೆ ಕಳುಹಿಸಿತ್ತು. ಅಷ್ಟೇ ಅಲ್ಲ , ಆ ಒಂದೇ ದಿನ ಘಟನೆಗೆ ಸಂಬಂಸಿ ತಾಜಾ ವಿವರಗಳನ್ನುಳ್ಳ ನಾಲ್ಕು ಆವೃತ್ತಿಗಳನ್ನು ಹೊರತಂದಿತ್ತು. ಅದು ಹೊಸದಿಗಂತದ್ದೇ ವಿಶೇಷತೆ.ಬೇರೆ ಯಾವ ಪತ್ರಿಕೆಯೂ ಅಂತಹ ಸಾಹಸ ಮಾಡಿರಲಿಲ್ಲ. ಆ ದಿನದ ಹೊಸದಿಗಂತ ಪತ್ರಿಕೆಗಾಗಿ ಜನರು ಯೆಯ್ಯಾಡಿ ಕಚೇರಿಗೇ ಲಗ್ಗೆಯಿಟ್ಟಿದ್ದರು. ಇಡೀ ಸಂಪಾದಕೀಯ ಹಾಗೂ ಉಳಿದ ಸಿಬ್ಬಂದಿವರ್ಗ ಆ ದಿನ ಬೆಳಿಗ್ಗೆ ೧೦ರಿಂದ ರಾತ್ರಿ ೨ ರವರೆಗೆ ದಣಿವಿಲ್ಲದೇ ಎಡೆಬಿಡದೆ ಕಾರ್ಯನಿರ್ವಹಿಸಿದ್ದರು. ದತ್ತಪೀಠ ವಿವಾದ ಮತ್ತಿತರ ಸಂದರ್ಭಗಳಲ್ಲಿ ಓದುಗರಿಗೆ ಉಳಿದ ಪತ್ರಿಕೆಗಳು ಕೊಡದ ತಾಜಾ ಸುದ್ದಿ ಹಾಗೂ ಮಾಹಿತಿಗಳನ್ನು ಹೊಸದಿಗಂತ ಒದಗಿಸಿತ್ತು ಎಂಬುದು ಪತ್ರಿಕೆಯ ಪಾಲಿಗೆ ಹೆಮ್ಮೆಯ ಸಂಗತಿ.

ಬೇರೆ ಪತ್ರಿಕೆಗಳಿಗಿರುವಂತೆ ಹೊಸದಿಗಂತಕ್ಕೆ ಬೆನ್ನೆಲುಬಾಗಿ ಉದ್ಯಮಿಗಳಿಲ್ಲ. ದೊಡ್ಡ ಉದ್ಯಮ ಸಂಸ್ಥೆಗಳೂ ಇಲ್ಲ. ಓದುಗರು, ಜಾಹೀರಾತುದಾರರು ಹಾಗೂ ಅಭಿಮಾನಿಗಳೇ ಹೊಸದಿಗಂತಕ್ಕೆ ಬಂಡವಾಳ ಹೂಡಿಕೆದಾರರು! ಅವರೇ ಹೊಸದಿಗಂತಕ್ಕೆ ಶ್ರೀರಕ್ಷೆ. ಈ ಮಾತು ಆಗಲೂ ಈಗಲೂ ಅನ್ವಯ. ಇಂತಹ ‘ಅಮೂಲ್ಯ ಬಂಡವಾಳ ಹೂಡಿಕೆದಾರ’ ರನ್ನೇ ನಂಬಿಕೊಂಡು ಹೊಸದಿಗಂತ ಈಗ ಇನ್ನೊಂದು ಮುನ್ನೆಗೆತಕ್ಕೆ ಸಜ್ಜಾಗಿದೆ. ರಾಜ್ಯ ಮಟ್ಟದ ಪತ್ರಿಕೆಗಳ ರೀತಿಯಲ್ಲೇ ಹೊಸದಿಗಂತ ಕೂಡ ೧೨ ಪುಟಗಳು, ಆಕರ್ಷಕ ವಿನ್ಯಾಸ ಹಾಗೂ ಹೊಸ ರೂಪದೊಂದಿಗೆ ಒಂದು ಸಮಗ್ರ ಸುದ್ದಿಪತ್ರಿಕೆಯಾಗಿ ಜನರ ಕೈಗೆ ತಲುಪಲು ಸಿದ್ಧತೆ ನಡೆಸಿದೆ. ಇದೇ ಜುಲೈ ೩೧ ರಂದು ಹೊಸದಿಗಂತ ಹೊಸ ರೂಪದಲ್ಲಿ ಹೊರಬರಲಿದೆ. ಕಾಲಕಾಲಕ್ಕೆ ತಕ್ಕಂತೆ ಬದಲಾವಣೆಗೆ ತೆರೆದುಕೊಳ್ಳುವುದೇ ಹೊಸದಿಗಂತದ ಆಶಯ.

ಹೊಸದಿಗಂತದ ನಡಿಗೆ ನಿಧಾನ, ಆದರೆ ಅದು ಸ್ಥಿರ ಹಾಗೂ ಸುಭದ್ರ. Slow and steady wins the race ಎಂಬ ಮಾತಿನಲ್ಲಿ ಪತ್ರಿಕೆಗೆ ಅಚಲ ವಿಶ್ವಾಸ. ಸ್ಪರ್ಧೆಯಲ್ಲಿ ಗೆದ್ದೇ ತೀರುವ ಹಂಬಲ ಪತ್ರಿಕೆಯದು.

ಹೊಸದಿಗಂತದ ೩೦ ವರ್ಷಗಳ ಈ ಸುದೀರ್ಘ ಪ್ರಯಾಣದಲ್ಲಿ ಅದನ್ನು ಸಾಕಿ ಸಲಹಿ, ನೀರೆರೆದು ಪೋಷಿಸಿ ಬೆಳೆಸಿದವರು, ಅದರ ಉಜ್ವಲ ಭವಿಷ್ಯಕ್ಕಾಗಿ ಎಲೆಮರೆಯ ಕಾಯಾಗಿ ದುಡಿದವರು ಅಗಣಿತ ಮಂದಿ. ಪ್ರಸಿದ್ಧಿ ಪ್ರಚಾರ ಬಯಸದೆ, ಪತ್ರಿಕೆಯನ್ನು ಸ್ವಂತ ಲಾಭಕ್ಕಾಗಿ ಬಳಸಿಕೊಳ್ಳದೆ, ನಿರಂತರವಾಗಿ ಶ್ರಮ ವಹಿಸಿದ ಸಿಬ್ಬಂದಿ ವರ್ಗದ ಸಂಖ್ಯೆಯೂ ಕಡಿಮೆಯದಲ್ಲ.

Leave a Reply

Your email address will not be published.

This site uses Akismet to reduce spam. Learn how your comment data is processed.