ಪಾಣಿಪತ್ : ಹರಿಯಾಣದ ಪಾಣಿಪತ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭಾ 2023ರಲ್ಲಿ ಅಗಲಿದ ಗಣ್ಯರಿಗೆ, ಸಮಾಜ ಸೇವಕರಿಗೆ, ಹಿರಿಯ ಸ್ವಯಂಸೇವಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕರ್ನಾಟಕದಿಂದ ಹಿರಿಯ ಕಲಾವಿದರಾದ ಶಿವಮೊಗ್ಗ ಸುಬ್ಬಣ್ಣ, ಬಿ.ಕೆ.ಎಸ್.ವರ್ಮಾ, ಹೆಚ್.ಆರ್.ಕೇಶವಮೂರ್ತಿ, ಕುಂಬಳೆ ಸುಂದರರಾವ್, ಹಿರಿಯ ಸ್ವಯಂಸೇವಕರು ಹಾಗೂ ಕರ್ನಾಟಕ ಪ್ರಾಂತ ಸಹ ಬೌದ್ಧಿಕ್ ಪ್ರಮುಖರಾಗಿದ್ದ ದಿನೇಶ್ ಪೈ, ಅಲೆಮಾರಿ ಜನಾಂಗದ ಒಳಿತಿಗಾಗಿ ದುಡಿದ ಭಾಸ್ಕರ್ ದಾಸ್ ಎಕ್ಕಾರು, ಭಾರತೀಯ ಮಜ್ದೂರ್ ಸಂಘದ ಸೂರ್ಯನಾರಾಯಣ,ಪೂರ್ವ ಸೈನಿಕ ಸೇವಾ ಪರಿಷತ್‌ನ ಲೆಫ್ಟಿನೆಂಟ್ ಜನರಲ್ ವಿ.ಎಂ.ಪಾಟೀಲ್ ಇವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.




ಅಲ್ಲದೆ ರಾಷ್ಟ್ರದಾದ್ಯಂತ ಅನೇಕ ಕ್ಷೇತ್ರದಲ್ಲಿ ತಮ್ಮ ಕೊಡುಗೆ ನೀಡಿದ್ದ ಮುಲಾಯಂ ಸಿಂಗ್ ಯಾದವ್, ಓಂಪ್ರಕಾಶ್ ಕೋಹ್ಲಿ, ಶರದ್ ಯಾದವ್, ಬಾಲಕೃಷ್ಣ ದೋಷಿ, ವಾಣಿ ಜಯರಾಮ್ ಮುಂತಾದ ಅಗಲಿದ ಗಣ್ಯರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಕೋರಲಾಗಿದೆ.