ಬೆಂಗಳೂರು/ಮಂಡ್ಯ: ಬೆಂಗಳೂರಿನಿಂದ ಮಂಗಳೂರು ಮತ್ತು ಕೇರಳಕ್ಕೆ ಕಾಲ್ಕೀಳಲು ಯತ್ನಿಸಿದ 100ಕ್ಕೂ ಹೆಚ್ಚು ಬಾಂಗ್ಲಾದೇಶಿಯರನ್ನು ಬಜರಂಗದಳ-ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ(ಎಬಿವಿಪಿ) ಕಾರ್ಯಕರ್ತರು ಪತ್ತೆ ಹಚ್ಚಿ ಮಂಡ್ಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಬುಧವಾರ ರಾತ್ರಿ ಯಶವಂತಪುರ ರೈಲು ನಿಲ್ದಾಣದಿಂದ ಕೇರಳದ ಕಣ್ಣೂರಿಗೆ ಹೊರಟಿದ್ದ ರೈಲಿನಲ್ಲಿ ಈ ಬಾಂಗ್ಲಾ ನುಸುಳುಕೋರರು ಹತ್ತಿದ್ದಾರೆ. ಸಮಾವೇಶಕ್ಕೆಂದು ಆಗಮಿಸಿದ್ದ ಎಬಿವಿಪಿಯ ಹತ್ತಾರು ಕಾರ್ಯಕರ್ತರು ಇದೇ ರೈಲಿನಲ್ಲಿ ತಮ್ಮ ಊರುಗಳಿಗೆ ತೆರಳಿದ್ದಾರೆ.

ಆದರೆ, ದಾರಿ ಮಧ್ಯದಲ್ಲಿ ಬಾಂಗ್ಲಾ ನುಸುಳುಕೋರರು ಸಹಪ್ರಯಾಣಿಕರಿಗೆ ಕೀಟಲೆ ಮಾಡಲು ಆರಂಭಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ಸಹಪ್ರಯಾಣಿಕರ ಮೇಲೆಯೇ ಹರಿಹಾಯ್ದರಲ್ಲದೇ ಹಲ್ಲೆಗೂ ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಎಬಿವಿಪಿ ಕಾರ್ಯಕರ್ತರು ಸಹಪ್ರಯಾಣಿಕರ ರಕ್ಷಣೆಗೆ ಧಾವಿಸಿದರಲ್ಲದೇ ಬಾಂಗ್ಲಾದೇಶಿಯರ ಪೂರ್ವಾಪರ ವಿಚಾರಿಸಿದ್ದಾರೆ.

ಎಲ್ಲರೂ ಉರ್ದುವಿನಲ್ಲಿ ಮಾತನಾಡುತ್ತಿದ್ದ ಬಾಂಗ್ಲಾದೇಶಿಯರು ಎಬಿವಿಪಿ ಕಾರ್ಯಕರ್ತರಿಗೆ ಧಮಕಿ ಹಾಕಲು ಪ್ರಯತ್ನಿಸಿದ್ದಾರೆ. ಅಲ್ಲದೇ, ಅವರವರಲ್ಲಿಯೇ ತಮ್ಮ ಮೂಲ ಸ್ಥಾನ ಬಾಂಗ್ಲಾದೇಶ ಎಂದು ಹೇಳಿಕೊಳ್ಳುತ್ತಿದ್ದುದನ್ನು ಗಮನಿಸಿದ ಎಬಿವಿಪಿ ಕಾರ್ಯಕರ್ತರು ಅವರ ಬಳಿ ಇದ್ದ ಬ್ಯಾಗುಗಳನ್ನು ಪರಿಶೀಲಿಸಿದ್ದಾರೆ.

ಬ್ಯಾಗ್‌ಗಳಲ್ಲಿ ಬಹುತೇಕ ಮಂದಿ ನಕಲಿ ಗುರುತಿನ ಚೀಟಿ ಇಟ್ಟುಕೊಂಡಿದ್ದರಲ್ಲದೇ, ಹತ್ತಾರು ಮಂದಿಯ ಚೀಲದಲ್ಲಿ ಗಾಂಜಾ, ಅ?ಮು ಸೇರಿದಂತೆ ಮಾದಕ ಪದಾರ್ಥಗಳನ್ನು ಪತ್ತೆ ಹಚ್ಚಿದ್ದಾರೆ. ಮಂಡ್ಯ ನಿಲ್ದಾಣದವರೆಗೆ ಈ ಪತ್ತೆ ಕಾರ್ಯಾಚರಣೆ ನಡೆಯಿತಲ್ಲದೇ, ಅಲ್ಲಿಗೆ ಆಗಮಿಸಿದ ಮತ್ತಷ್ಟು ಎಬಿವಿಪಿ ಕಾರ್ಯಕರ್ತರು ಪೊಲೀಸರ ನೆರವಿನಿಂದ ೧೦೦ ಕ್ಕೂ ಹೆಚ್ಚು ಬಾಂಗ್ಲಾದೇಶಿಯರನ್ನು ಬಂಧಿಸಿದ್ದಾರೆ. ರೈಲ್ವೇ ಪೊಲೀಸರು ಮತ್ತು ಮಂಡ್ಯ ಪೊಲೀಸರು ಬಂಧಿಸಿರುವ ಬಾಂಗ್ಲಾದೇಶಿಯರನ್ನು ರಾತ್ರಿಯಿಡೀ ವಿಚಾರಣೆ ನಡೆಸಿದ್ದಾರೆ.

ಪೊಲೀಸರು ತಮ್ಮನ್ನು ಬಂಧಿಸುತ್ತಾರೆ ಎಂಬ ಸುಳಿವರಿತ ೫೦ ಕ್ಕೂ ಹೆಚ್ಚು ಬಾಂಗ್ಲಾದೇಶಿಯರು  ಮಂಡ್ಯ ನಿಲ್ದಾಣದಲ್ಲಿ ರೈಲು ನಿಲ್ಲುತ್ತಿದ್ದಂತೆಯೇ ಎದ್ದೆವೋ, ಬಿದ್ದೆವೋ ಎಂಬಂತೆ ರೈಲಿನಿಂದ ಧುಮುಕಿ ಪೇರಿ  ಕಿತ್ತರು. ಪೊಲೀಸರು ಇಡೀ ರೈಲಿನಎಲ್ಲಾ ಬೋಗಿಗಳನ್ನು ತಪಾಸಣೆ ನಡೆಸಿದ್ದಾರೆ. ಸುಮಾರು ೧ ಗಂಟೆ ಕಾಲ  ತಪಾಸಣೆ ನಡೆಸಿ ನುಸುಳುಕೋರರನ್ನು ಬಂಧಿಸಿದ್ದಾರೆ. ರೈಲು ಮಂಡ್ಯ ತಲುಪುವ ಮುನ್ನವೇ ಡಿವೈಎಸ್ಪಿ  ಚನ್ನಬಸಪ್ಪ ನೇತೃತ್ವದ ನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಗೆ ಅಣಿಯಾಗಿದ್ದರು. ರೈಲು  ಬರುತ್ತಿದ್ದಂತೆ ದಾಳಿ ನಡೆಸಿ ನುಸುಳುಕೋರರ ಹೆಡೆಮುರಿ ಕಟ್ಟಿದ್ದಾರೆ.

 

Leave a Reply

Your email address will not be published.

This site uses Akismet to reduce spam. Learn how your comment data is processed.