ವಿಶ್ವದ ಅತಿದೊಡ್ಡ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ೫೬ನೇ ರಾಷ್ಟ್ರೀಯ ಅಧಿವೇಶನದಲ್ಲಿ ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಸರ್ಕಾರದ ಭ್ರಷ್ಠಾಚಾರದ ವಿರುದ್ಧ ದೇಶವ್ಯಾಪಿ ಆಂದೋಲನ ನಡೆಸಲು ನಿರ್ಧರಿಸಲಾಯಿತು. ಸ್ವಾತಂತ್ರ್ಯ ಪೂರ್ವದಲ್ಲಿ ವಿದೇಶಿಯರು ಸಾವಿರಾರು ಕೋಟಿಗಳಲ್ಲಿ ನಮ್ಮ ದೇಶದ ಹಣವನ್ನು ಲೂಟಿಮಾಡಿದ್ದರೆ ಇಂದು ನಮ್ಮ ರಾಜಕಾರಣಿಗಳು ಮತ್ತು ಅಧಿಕಾರಿಗಳು ತಾವಿರುವ ಅತ್ಯುಚ್ಛ ಸ್ಥಾನಗಳಿಂದ ಸಾವಿರಾರು ಕೋಟಿಗಳಿಂದ ಹಿಡಿದು ಲಕ್ಷಾಂತರ ಕೋಟಿಗಳವರೆಗೆ ಹಗಲು ದರೋಡೆ ಮಾಡುತ್ತಿದ್ದಾರೆ. ವಿದೇಶಿಯರಿಗೂ ಹಾಗೂ ನಮ್ಮ ದೇಶದವರಿಗೂ ಇರುವ ವ್ಯತ್ಯಾಸವೇನು? ಎಂಬುದನ್ನು ಭಾರತೀಯರೆಲ್ಲರು ಇಂದು ಯೋಚಿಸಲೇಬೇಕಾದ ವಿಚಾರವಾಗಿದೆ. ಇಂದು ದೇಶದಾದ್ಯಂತ ಭ್ರಷ್ಠಾಚಾರವೆನ್ನುವುದು ಮನೆ ಮಾತಾಗಿ ಹೋಗಿದೆ.


ನಗರಸಭೆಯಿಂದ ಪಾರ್ಲಿಮೆಂಟ್‌ವರೆಗೂ ಭ್ರಷ್ಠಾಚಾರ ತಾಂಡವವಾಡುತ್ತಿದೆ. ದೇಶವನ್ನು ಭ್ರಷ್ಠಾಚಾರದಿಂದ ಬಚಾವು ಮಾಡಲು  ಜೊತೆಗೆ ಕೈ ಜೋಡಿಸಲು ಎ.ಬಿ.ವಿ.ಪಿ ಕರೆ ನೀಡಿದೆ. ಸಂಬಂಧಿತ ಕರಪತ್ರ ಇಲ್ಲಿದೆ:

ABVP_Handbill_5-2-11(pdf, 1.04MB)

Leave a Reply

Your email address will not be published.

This site uses Akismet to reduce spam. Learn how your comment data is processed.