ಬೆಂಗಳೂರು, 24 ಜನವರಿ 2024: ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಷನ್ ವತಿಯಿಂದ ರಾಷ್ಟ್ರೀಯ ಶಿಕ್ಷಣ ನೀತಿ (NEP)-2020 ನ್ನು ಕರ್ನಾಟಕದಲ್ಲಿ ಮುಂದುವರೆಸುವಂತೆ ಜನಾಭಿಪ್ರಾಯದ ವರದಿಯೊಂದಿಗೆ ರಾಜ್ಯಪಾಲರನ್ನು ರಾಜಭವನದಲ್ಲಿ ಭೇಟಿ ಮಾಡಲಾಯಿತು.
ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಷನ್ ರಾಷ್ಟ್ರೀಯ ಶಿಕ್ಷಣ ನೀತಿ (NEP)-2020 ನ್ನು ಕರ್ನಾಟಕದಲ್ಲಿ ಮುಂದುವರೆಸುವಂತೆ ರಾಜ್ಯಾದ್ಯಂತ ಸಹಿ ಸಂಗ್ರಹ ಅಭಿಯಾನ ನಡೆಸಿತ್ತು. ಎನ್ ಇ ಪಿ ಮುಂದುವರಿಸುವ ಕುರಿತು ರಾಜ್ಯವ್ಯಾಪಿ ಸಂಗ್ರಹವಾದ ಜನಾಭಿಪ್ರಾಯದ ವರದಿಯೊಂದಿಗೆ ಬೆಂಗಳೂರಿನಲ್ಲಿ ಗೌರವಾನ್ವಿತ ರಾಜ್ಯಪಾಲರನ್ನು ಭೇಟಿಯಾಗಿ ಚರ್ಚಿಸಲಾಯಿತು.
ಕರ್ನಾಟಕದ 34 ಶೈಕ್ಷಣಿಕ ಜಿಲ್ಲೆಗಳ,168 ತಾಲ್ಲೂಕು, 2630 ಶಾಲೆ ಮತ್ತು ಕಾಲೇಜುಗಳಿಂದ 83,600 ಶಿಕ್ಷಕರು ಮತ್ತು ಆಡಳಿತ ಮಂಡಳಿಯ ಸದಸ್ಯರು 26980 ಪೋಷಕರು ಸಹಿ ಸಂಗ್ರಹವಾಗಿದೆ.19327 ಸಹಿಗಳನ್ನು ಆನ್ಲೈನ್ ಕ್ಯಾಂಪೇನ್ ಮೂಲಕ ಸಂಗ್ರಹಿಸಲಾಗಿದೆ. 8,88,173 ವಿದ್ಯಾರ್ಥಿಗಳು ಈ ಅಭಿಯಾನಕ್ಕೆ ಸಹಿ ಮಾಡಿದ್ದಾರೆ. ಒಟ್ಟು 10,18, 080 ಸಹಿಗಳನ್ನು ಸಂಗ್ರಹಿಸಲಾಗಿದೆ.
ಎನ್ ಇ ಪಿ ಬೆಂಬಲಿಸಿ ನಡೆಸಲಾದ ಸಹಿ ಸಂಗ್ರಹ ಅಭಿಯಾನದ ಕುರಿತು ವಿಸ್ತೃತ ವರದಿಯನ್ನು ಘನವೆತ್ತ ರಾಜ್ಯಪಾಲರಿಗೆ ಸಲ್ಲಿಸಲಾಯಿತು. ಶಿಕ್ಷಣ ತಜ್ಞರಾದ ಪ್ರೊ. ಮಲ್ಲೇಪುರಂ ಜಿ ವೆಂಕಟೇಶ, ಪ್ರೊ. ರವೀಂದ್ರ ರೇಶ್ಮಿ, ಮಾಜಿ ಶಿಕ್ಷಣ ಸಚಿವ ಬಿ ಸಿ ನಾಗೇಶ, ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಶಿಕ್ಷಣತಜ್ಞರಾದ ಪ್ರೊ. ನಂದಿನಿ ಲಕ್ಷ್ಮೀಕಾಂತ, ಪ್ರೊ. ವೀರೇಶ ಬಾಳಿಕಾಯಿ, ಪ್ರೊ. ಸಂದೀಪ ಬೂದಿಹಾಳ, ಡಾ. ಗಿರೀಶ ತೆಗ್ಗಿನಮಠ ಉಪಸ್ಥಿತರಿದ್ದರು.