ಕೆಲ ದಿನಗಳ ಹಿಂದೆ ಪುಲ್ವಾಮಾದಲ್ಲಿ ಜೈಶ್ ಏ ಮೊಹಮ್ಮದ್ ಸಂಘಟನೆಯಿಂದ ನಡೆಸಲಾಗಿದ್ದ ಭಯೋತ್ಪಾನ ಕೃತ್ಯದಿಂದಾಗಿ ಇಡಿಯ ದೇಶದಲ್ಲಿ ಕೋಪ ಹಾಗೂ ಅಸಮಾಧಾನ ಮನೆಮಾಡಿತ್ತು. ಇಂದು ಪಾಕಿಸ್ತಾನದಲ್ಲಿ ನೆಲೆಸಿದ್ದ ಜೈಶ್ ಎ ಮೊಹಮ್ಮದ್ ಶಿಬಿರಗಳ ಮೇಲೆ ಭಾರತೀಯ ವಾಯುಪಡೆಯು ನಡೆಸಿರುವ ವೈಮಾನಿಕ ದಾಳಿಯಲ್ಲಿ ಆತಂಕವಾದಿಗಳ ಶಿಬಿರಗಳು ನುಚ್ಚುನೂರಾಗಿವೆ.

ಕೋಟಿ ಕೋಟಿ ಭಾರತೀಯರ ಭಾವನೆಗಳನ್ನು ಕಾರ್ಯಗತಿಗೆ ತರುವ ಕೆಲಸ ಇದಾಗಿದೆ. ಈ ಸಂದರ್ಭದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘವು ಭಾರತೀಯ ವಾಯುಪಡೆ ಹಾಗೂ ಕೇಂದ್ರ ಸರ್ಕಾರವನ್ನು ಅಭಿನಂದಿಸುತ್ತದೆ.

ಪಾಕಿಸ್ತಾನದ ಸೇನೆಗಾಗಲಿ, ಅಲ್ಲಿಯ ನಾಗರಿಕರಿಗಾಗಲಿ ಹಾನಿಯಾಗದಂತೆ ಎಚ್ಚರವಹಿಸಿ ನಡೆಸಿದ ಈ ದಾಳಿ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತದೆ.

ಸುರೇಶ ಭಯ್ಯಾಜಿ ಜೋಶಿ,
ಸರಕಾರ್ಯವಾಹ,
ರಾಷ್ಟ್ರ‍ೀಯ ಸ್ವಯಂಸೇವಕ ಸಂಘ

 

Leave a Reply

Your email address will not be published.

This site uses Akismet to reduce spam. Learn how your comment data is processed.