-ಸಂಧ್ಯಾ ಜೈನ್

ಸ್ವಾಮಿ ಅಸೀಮಾನಂದ. ಗುಜರಾತಿನ ಡಾಂಗ್ ಜಿಲ್ಲೆಯಲ್ಲಿ ಕ್ರಿಶ್ಚಿಯನ್ನರ ಮತಾಂತರದ ಕುತಂತ್ರಕ್ಕೆ ಬಲಿಯಾಗಿದ್ದ ಲಕ್ಷಾಂತರ ವನವಾಸಿಗಳನ್ನು ಮರಳಿ ಮಾತೃಧರ್ಮಕ್ಕೆ ಕರೆತಂದ ಸಂತ ಇವರು. ’ಹಿಂದೂ ಭಯೋತ್ಪಾದನೆ’ಯೆಂದು ಇಂದು ಕರೆಯಲಾಗುತ್ತಿರುವ, ಮುಸ್ಲಿಮರನ್ನು ಗುರಿಯಾಗಿಸಿಕೊಂಡು ನಡೆದ ಕೆಲವು ಬಾಂಬ್ ಸ್ಫೋಟಗಳಿಗೆ ಮಾರ್ಗದರ್ಶನ ಮಾಡಿದವರು ಇವರೇ ಎಂದು ಇಂದು ಆರೋಪಿಸಲಾಗುತ್ತಿದೆ. ಅದೂ ಕೇವಲ ೪೦,೦೦೦ ರೂಪಾಯಿಯಷ್ಟು ಕಡಿಮೆ ಖರ್ಚಿನಲ್ಲಿ ಇಂತಹ ಕೃತ್ಯಗಳನ್ನು ನಡೆಸಲಾಗಿದೆ ಎನ್ನುವ ಮಾಹಿತಿಯನ್ನು ಮಾಧ್ಯಮಗಳಿಗೆ ದೊರಕುವಂತೆ ಮಾಡಲಾಗಿದೆ. ಇದು ಕೇವಲ ಕಟ್ಟು ಕತೆಯಲ್ಲದೇ ಇನ್ನೇನಲ್ಲ.

ಉದ್ದೇಶಪೂರ್ವಕವಾಗಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಸುದ್ದಿಗಳು ನಂಬಲು ಅರ್ಹವೆಂದು ಜನಸಾಮಾನ್ಯರಿಗೆ ಅನ್ನಿಸುವುದು ಬಿಡಿ, ಅನೇಕ ಸೆಕ್ಯುಲರ್ ಮಾಧ್ಯಮಗಳಿಗೇ ಅನಿಸುತ್ತಿಲ್ಲ. ಅದಕ್ಕೇ ರಿಡಿಫ್.ಕಾಮ್‌ನಂತಹ ವೆಬ್‌ಸೈಟ್‌ಗಳೂ ಕೂಡಾ ಸಮಝೋತಾ ಎಕ್ಸ್‌ಪ್ರೆಸ್ ರೈಲು ಸ್ಫೋಟದಲ್ಲಿ ಹಿಂದುಗಳ ಕೈವಾಡವಿರುವುದನ್ನು ಸ್ವಾಮಿ ಅಸೀಮಾನಂದರು ತಮ್ಮ ತಪ್ಪೊಪ್ಪಿಗೆಯಲ್ಲಿ ಹೇಳಿರುವುದರ ಆಧಾರದ ಮೇಲೆ ರಾಷ್ಟ್ರೀಯ ತನಿಖಾ ದಳ ತನಿಖೆ ಮಾಡುತ್ತಿದ್ದರೂ, ಭಯೋತ್ಪಾದಕ ಸಂಘಟನೆಯಾದ ಸಿಮಿ ಬಹಳ ಮೊದಲೇ ಇದರ ಜವಾಬ್ದಾರಿಯನ್ನು ಹೊತ್ತುಕೊಂಡಿತ್ತು ಎನ್ನುವ ಅಂಶವನ್ನು ಕಡೆಗಣಿಸುವಂತಿಲ್ಲ ಎಂದು ಹೇಳಿದೆ.

ಸಮಝೋತಾ ಎಕ್ಸ್‌ಪ್ರೆಸ್ ರೈಲು ಸ್ಫೋಟವನ್ನು ಕೆಲವು ಪಾಕಿಸ್ತಾನದ ಭಯೋತ್ಪಾದಕರ ಜತೆ ಸೇರಿ ತಾವೇ ನಡೆಸಿದ್ದಾಗಿ ಸಿಮಿಯ ಮುಖ್ಯಸ್ಥ ಸಫ್ದರ್ ನಾಗೋರಿ ೨೦೦೮ರ ಅಕ್ಟೋಬರ್‌ನಲ್ಲಿ ತನಿಖಾಧಿಕಾರಿಗಳ ಮುಂದೆ ಹೇಳಿದ್ದ.

ಇಷ್ಟೆಲ್ಲಾ ಇದ್ದರೂ, ಇದ್ದಕ್ಕಿಂದತೆಯೇ ಜನವರಿ ೨೦೧೧ರಲ್ಲಿ ದೆಹಲಿಯ ಮ್ಯಾಜಿಸ್ಟ್ರೇಟರ ಮುಂದೆ ಸ್ವಾಮಿ ಅಸೀಮಾನಂದರು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆಂಬ ಸುದ್ದಿ ಬಂತು. ೨೦೦೭ರ ಫೆಬ್ರವರಿ ೧೬ರಂದು ಸುನಿಲ್ ಜೋಶಿ ಮತ್ತು ಭರತ್ ರಾಟೇಶ್ವರ್ ಅವರನ್ನು ತಾನು ಭೇಟಿ ಮಾಡಿದಾಗ ಅವರು ನಿಮಗೊಂದು ಸಂತೋಷದ ಸುದ್ದಿಯಿದೆಯೆಂದು ಹೇಳಿದ್ದಾಗಿಯೂ, ಅದಾಗಿ ಕೆಲವೇ ದಿನಗಳಲ್ಲಿ ತಾನು ಸಮಝೋತಾ ಎಕ್ಸ್‌ಪ್ರೆಸ್ ರೈಲು ಸ್ಫೋಟದ ಸುದ್ದಿಯನ್ನು ಓದಿ ಜೋಶಿಯನ್ನು ಸಂಪರ್ಕಿಸಿ ಈ ಕೃತ್ಯವನ್ನು ಖಂಡಿಸಿದಾಗ, ತನ್ನ ಸಹವರ್ತಿಗಳೇ ಆ ಕೃತ್ಯವನ್ನು ನಡೆಸಿದ್ದಾಗಿ ಆತ ಹೇಳಿದರು ಎಂಬುದಾಗಿ ಅಸೀಮಾನಂದರು ತಮ್ಮ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎನ್ನುವುದು ಮಾಧ್ಯಮಗಳಲ್ಲಿ ವರದಿಯಾಗಿರುವ ಸುದ್ದಿ.

೬೮ ಜೀವಗಳನ್ನು ಬಲಿ ತೆಗೆದುಕೊಂಡ ಸಮಝೋತಾ ಎಕ್ಸ್‌ಪ್ರೆಸ್ ರೈಲು ಸ್ಫೋಟದ ಬಗ್ಗೆ ಸರಿಯಾದ ತನಿಖೆಯಾಗಬೇಕೆನ್ನುವುದರಲ್ಲಿ ಎರಡು ಮಾತೇ ಇಲ್ಲ. ಮೇಲೆ ಹೇಳಿದ ಅಸೀಮಾನಂದರ ತಪ್ಪೊಪ್ಪಿಗೆ ಹೇಳಿಕೆಯ ಬಗ್ಗೆ ಕೆಳಗಿನ ಅಂಶಗಳನ್ನು ಗಮನಿಸಬೇಕು.

ಈ ಹೇಳಿಕೆಯು ಯಾವುದೇ ಸ್ಫೋಟದಲ್ಲಿ ತಾನು ಭಾಗಿಯಾದ ಬಗ್ಗೆಯಾಗಲೀ, ಸ್ಫೋಟ ನಡೆಸಿದವರಿಗೆ ಮಾರ್ಗದರ್ಶನ ಮಾಡಿದ ಬಗ್ಗೆಯಾಗಲೀ ಅಸೀಮಾನಂದರು ನೀಡಿದ ಹೇಳಿಕೆಯಲ್ಲ.

ಸ್ಫೋಟದಲ್ಲಿ ದಿ| ಸುನಿಲ್ ಜೋಶಿ ಮತ್ತು ಭರತ್ ರಾಟೇಶ್ವರ್ ಅವರು ಭಾಗಿಯಾಗಿದ್ದರೆನ್ನಲು ಅಸೀಮಾನಂದರ ಹೇಳಿಕೆಯು ಸರಿಯಾದ ಸಾಕ್ಷ್ಯವಾಗಲಾರದು. ಏಕೆಂದರೆ, ’ಸಂತೋಷದ ಸುದ್ದಿ’ ಎಂದು ಅವರುಗಳು ಹೇಳಿದ್ದು ಸಮಝೋತಾ ಎಕ್ಸ್‌ಪ್ರೆಸ್ ರೈಲು ಸ್ಫೋಟದ ಕುರಿತಾಗಿಯೇ ಎಂದು ಹೇಳಲು ಸಾಧ್ಯವಿಲ್ಲ.

’ಸಂತೋಷದ ಸುದ್ದಿ’ ಎಂದು ಅವರುಗಳು ಹೇಳಿದ್ದು ಸಮಝೋತಾ ಎಕ್ಸ್‌ಪ್ರೆಸ್ ರೈಲು ಸ್ಫೋಟದ ಕುರಿತಾಗಿಯೇ ಎಂದು ಅಸೀಮಾನಂದರು ಯೋಚಿಸಲು ಕಾರಣಗಳೇನೂ ಇಲ್ಲ. ಅದು ಬೇರೆ ಸುದ್ದಿಯೂ ಆಗಿದ್ದಿರಬಹುದು.

ಅಸೀಮಾನಂದರು ಸುನಿಲ್ ಜೋಶಿಯವರ ಬಳಿ ಸ್ಫೋಟದ ಕೃತ್ಯವನ್ನು ಖಂಡಿಸಿದ್ದಾರೆಂದ ಮೇಲೆ ಅವರೇ ಆ ಕೃತ್ಯದಲ್ಲಿ ಭಗಿಯಾಗಿರಲು ಹೇಗೆ ಸಾಧ್ಯ?

ಸುನಿಲ್ ಜೋಶಿಯೇ ಈ ಕೃತ್ಯದ ರೂವಾರಿಯಾಗಿದ್ದಲ್ಲಿ, ಅಸೀಮಾನಂದರ ಬಳಿ ಅದರ ಬಗ್ಗೆ ತಪ್ಪೊಪ್ಪಿಕೊಳ್ಳುವ ಅಗತ್ಯವೇನಿತ್ತು?

ಸಮಝೋತಾ ಎಕ್ಸ್‌ಪ್ರೆಸ್ ರೈಲು ಸ್ಫೋಟದ ಬಗ್ಗೆ ಹಿಂದು ಮತ್ತು ಮುಸ್ಲಿಮ್ ಸಮುದಾಯದ ವ್ಯಕ್ತಿಗಳು, (ಸಿಮಿಯ ನಾಗೋರಿ ಮತ್ತು ಅಸೀಮಾನಂದ) ತಪ್ಪೊಪ್ಪಿಗೆ ನೀಡಿರುವುದರಿಂದ, ಸಹಜವಾಗಿಯೇ ಈ ಘಟನೆಯ ಬಗ್ಗೆ ತನಿಖೆ ಮಾಡುವುದು ಇನ್ನೂ ಸಂಕೀರ್ಣವಾಗುತ್ತದೆ. ಈ ಎರಡೂ ಪಕ್ಷಗಳ ಉದ್ದೇಶ ಸಂಪೂರ್ಣ ಭಿನ್ನ. ಭಾರತದ ಸಾಮಾಜಿಕ ಐಕ್ಯತೆಯನ್ನು ಮುರಿದು ಹಿಂದು ಮುಸ್ಲಿಮರ ನಡುವೆ ಭೇದವುಂಟುಮಾಡಿ ಕ್ರಮೇಣ ಭಾರತವನ್ನು ಇಸ್ಲಾಮೀಕರಣಗೊಳಿಸುವ ಉದ್ದೇಶ ಜಿಹಾದಿ ಭಯೋತ್ಪಾದಕರದ್ದಾದರೆ, ಜಿಹಾದಿಗಳನ್ನು ಬೆಂಬಲಿಸುವ ಮುಸ್ಲಿಮರಿಗೆ ಒಂದು ಪಾಠ ಕಲಿಸುವ ಉದ್ದೇಶ ತಥಾಕಥಿತ ಹಿಂದೂ ಗುಂಪುಗಳದ್ದಾಗಿರಬಹುದು. ಪರಿಸ್ಥಿತಿ ಹೀಗಿರುವಾಗ, ಕೇಂದ್ರ ಸರ್ಕಾರವು ಈ ಇಬ್ಬರಲ್ಲಿ ಯಾರನ್ನು ಶಿಕ್ಷಿಸಬೇಕೆಂದು ತನಗೆ ಅನಿಸುತ್ತದೆಯೋ ಅವರ ವಿರುದ್ಧವಾದ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಅವರಿಗೆ ಶಿಕ್ಷೆಯಾಗುವಂತೆ ಮಾಡುವ ಸಾಧ್ಯತೆಯೇ ಹೆಚ್ಚು. ಇಂತಹ ವಿಶಿಷ್ಟ ಪರಿಸ್ಥಿತಿಯನ್ನು ಅವಲೋಕಿಸಿಯೇ ಜನತಾ ಪಕ್ಷದ ಡಾ| ಸುಬ್ರಮಣಿಯನ್ ಸ್ವಾಮಿಯವರು, ಯಾವ ತಪ್ಪೊಪ್ಪಿಗೆಯನ್ನು ಕೇಂದ್ರ ಸರ್ಕಾರ ಒಪ್ಪಿಕೊಳ್ಳುತ್ತಿದೆ ಮತ್ತು ಯಾವುದನ್ನು ತಿರಸ್ಕರಿಸುತ್ತಿದೆ ಎಂದು ಶೀಘ್ರವಾಗಿ ಸ್ಪಷ್ಟಪಡಿಸಬೇಕೆಂದು ಪ್ರಧಾನಿಯವರನ್ನು ಒತ್ತಾಯಿಸಿದ್ದಾರೆ. ತಥಾ ಕಥಿತ ’ಹಿಂದು ಭಯೋತ್ಪಾದನೆ’ಯ ಬಗ್ಗೆ ಕೇಂದ್ರ ಸರ್ಕಾರವು ಒಂದು ಶ್ವೇತಪತ್ರವನ್ನು ಹೊರಡಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಅಲ್ಲದೇ, ಇದರ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡದೇ ಇದ್ದಲ್ಲಿ, ಪಾಕಿಸ್ತಾನ ನಡೆಸುತ್ತಿರುವ ಈ ಹಿಂದು ಭಯೋತ್ಪಾದನೆಯ ಅಪಪ್ರಚಾರಕ್ಕೆ ಅನುವು ಮಾಡಿಕೊಟ್ಟಹಾಗಾಗುತ್ತದೆ. ಸರ್ಕಾರ ಅದಕ್ಕೆ ಅವಕಾಶ ಕೊಡಬಾರದು ಎಂದು ಅವರು ಆಗ್ರಹಿಸಿದ್ದಾರೆ.

ಸಂಝೋತಾ ಎಕ್ಸ್‌ಪ್ರೆಸ್, ಮಾಲೆಗಾಂವ್ ಮತ್ತು ಹೈದರಾಬಾದ್ ಸ್ಫೋಟಗಳ ಷಡ್ಯಂತ್ರವನ್ನು ಅಸೀಮಾನಂದರೇ ರೂಪಿಸಿದ್ದಾರೆ ಎಂದು ಸಿ.ಬಿ.ಐ ಹೇಳುತ್ತಿರುವುದು ಅಂತರರಾಷ್ಟ್ರೀಯ ತನಿಖಾ ಸಂಸ್ಥೆಗಳ ತನಿಖಾ ವರದಿಗೆ ವಿರುದ್ಧವಾಗಿದೆ ಎನ್ನುವ ಅಂಶದ ಬಗ್ಗೆಯೂ ಡಾ| ಸ್ವಾಮಿಯವರು ಗಮನ ಸೆಳೆಯುತ್ತಾರೆ. ಲಷ್ಕರ್-ಇ-ತೋಯ್ಬಾದ ನಾಲ್ವರು ಭಯೋತ್ಪಾದಕರು ಸಂಝೋತಾ ಎಕ್ಸ್‌ಪ್ರೆಸ್ ಸ್ಫೋಟದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಕಾರಣಕ್ಕಾಗಿ ಅಮೇರಿಕಾದ ಖಜಾನೆ ಇಲಾಖೆ ಲಷ್ಕರ್-ಇ-ತೋಯ್ಬಾದ ವಿರುದ್ಧ ಆರ್ಥಿಕ ದಿಗ್ಬಂಧನ ವಿಧಿಸಿತ್ತು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ’೧೨೬೭ ಸಮಿತಿ’ಯು ಲಷ್ಕರ್-ಇ-ತೋಯ್ಬಾದ ಈ ಭಯೋತ್ಪಾದಕರು ಭಾರತದಲ್ಲಿನ ಭಯೋತ್ಪಾದಕ ಕೃತ್ಯಗಳಲ್ಲ್ಲಿ ಭಾಗಿಯಾಗಿದ್ದಷ್ಟೇ ಅಲ್ಲದೇ, ಅಲ್ ಖೈದಾದ ಭಯೋತ್ಪಾದಕ ಚಟುವಟಿಕೆಗಳಿಗೂ ಸಹಕಾರ ನೀಡಿದ್ದರು ಎಂದು ಆರೋಪಿಸಿದೆ. ೨೦೦೮ರ ಜೂನ್ ೨೮ರ ಪತ್ರಿಕಾಗೋಷ್ಠಿಯಲ್ಲಿ ೧೨೬೭ ಸಮಿತಿಯು ಈ ಭಯೋತ್ಪಾದಕರಿಗೆ ದಾವೂದ್ ಇಬ್ರಾಹಿಂನ ಆರ್ಥಿಕ ಸಹಕಾರವಿದೆ ಎಂದೂ ಕೂಡಾ ಹೇಳಿತ್ತು. ಈ ಬಗ್ಗೆ ಸಿ.ಬಿ.ಐ. ಒಂದು ಪ್ರಥಮ ತನಿಖಾ ವರದಿಯನ್ನು ದಾಖಲಿಸಿತ್ತು.

ಸಫ್ದರ್ ನಾಗೋರಿ ಮತ್ತು ಸಿಮಿಯ ಇತರ ಸದಸ್ಯರಾದ ಕಮ್ರುದ್ದೀನ್ ನಾಗೋರಿ ಮತ್ತು ಅಮಿಲ್ ಪರ್ವೇಜ್ ಅವರು ೨೦೦೬ರ ಜುಲೈ ೧೧ರಂದು ೨೦೦ ಜನರನ್ನು ಬಲಿ ತೆಗೆದುಕೊಂಡ ಮುಂಬೈ ರೈಲು ಸ್ಫೋಟ ಮತ್ತು ೨೦೦೭ರ ಜನವರಿಯಲ್ಲಿ ನಡೆದ ಸಂಝೋತಾ ಎಕ್ಸ್‌ಪ್ರೆಸ್ ಸ್ಫೋಟವನ್ನು ತಮ್ಮ ಸಂಘಟನೆಯವರು ಪಾಕಿಸ್ತಾನದ ಕೆಲವು ಭಯೋತ್ಪಾದಕರ ಜತೆ ಸೇರಿ ನಡೆಸಿದ್ದಾಗಿ ಏಪ್ರಿಲ್ ೨೦೦೮ರ ತಮ್ಮ ತಪ್ಪೊಪ್ಪಿಗೆಯಲ್ಲಿ ತಿಳಿಸಿದ್ದಾರೆ.

ಮಾರ್ಚ್ ೨೦೦೮ರಲ್ಲಿ ನಾಗೋರಿ ಗುಂಪಿನ ೧೩ ಭಯೋತ್ಪಾದಕರನ್ನು ಮಧ್ಯಪ್ರದೇಶದ ಇಂದೋರಿನ ಅಡಗುದಾಣದಲ್ಲಿ ಸೆರೆಹಿಡಿಯಲಾಗಿತ್ತು. ವರದಿಗಳ ಪ್ರಕಾರ ಸಿಮಿಯ ಉಜ್ಜಯಿನಿಯ ಸಮಾವೇಶಕ್ಕೆ ಬಂದಿದ್ದ ಎತೇಶಮ್ ಸಿದ್ಧಿಕಿ, ಅಬ್ದಸ್ ಸುಬಾನ್, ತಾಕೀರ್ (ಜೈಪುರ್, ಅಹ್ಮದಾಬಾದ್ ಮತ್ತು ದೆಹಲಿ ಸ್ಫೋಟಗಳ ರೂವಾರಿ) ಮತ್ತು ಶರೀಫ್ ಅವರು ಜುಲೈ ೧೧ರ ಮುಂಬೈ ಸ್ಫೋಟಕ್ಕೂ ಕೆಲವು ದಿನಗಳ ಮುಂಚೆ ಅಲ್ಲಿಂದ ಹೊರಟಿದ್ದರು ಎನ್ನುವ ವಿಷಯಯನ್ನು ನಾಗೋರಿ ತನಿಖಾಧಿಕಾರಿಗಳ ಮುಂದೆ ಹೇಳಿದ್ದನು. ಪಾಕಿಸ್ತಾನದಿಂದ ಕೆಲವು ಭಯೋತ್ಪಾದಕರು ಮುಂಬೈಗೆ ಬಂದಿದ್ದರಿಂದ ಅವರೊಡನೆ ಸೇರಿಕೊಳ್ಳಲು ಇವರು ಹೋಗಿದ್ದಿರಬಹುದೆಂದು ವರದಿಗಳು ಹೇಳುತ್ತವೆ.

ಮುಂಬೈ ರೈಲು ಸ್ಫೋಟದ ಹಿಂದೆ ಸಿಮಿಯ ಕೈವಾಡವಿದೆಯೆನ್ನುವ ನಂಬಿಕೆಯನ್ನು ಮುಂಬೈ ಪೋಲೀಸರೂ ಹೊಂದಿದ್ದರು. ಹೆಚ್ಚಿನ ಸಿಮಿ ಕಾರ್ಯಕರ್ತರು ದೇಶದ ಬೇರೆ ಬೇರೆ ಭಾಗಗಳಲ್ಲಿ ನಡೆದ ಬಾಂಬ್ ಸ್ಫೋಟಗಳಲ್ಲಿ ಭಾಗಿಯಾಗಿದ್ದ ವಿಷಯ ತನಿಖೆಯ ವೇಳೆ ಪೋಲೀಸರಿಗೆ ತಿಳಿಯಿತು. ಪುಣೆಯ ರಾಹಿಲ್ ಎನ್ನುವವನು ಮುಂಬೈ ರೈಲು ಸ್ಫೋಟದಲ್ಲಿ, ಹೈದರಾಬಾದ್ ಸ್ಫೋಟದಲ್ಲಿ ನಾಸಿರ್, ಸಂಝೋತಾ ಎಕ್ಸ್‌ಪ್ರೆಸ್ ಸ್ಫೋಟದಲ್ಲಿ ಕಮ್ರುದ್ದೀನ್ ಮತ್ತು ಮಾಲೆಗಾಂವ್ ಸ್ಫೋಟದಲ್ಲಿ ಕೆಲವು ಮುಸ್ಲಿಮರು ಭಾಗಿಯಾದ ಬಗ್ಗೆ ಅಬ್ದಸ್ ಸುಬಾನ್ ತನಗೆ ತಿಳಿಸಿದ್ದಾಗಿ ನಾಗೋರಿ ಪೋಲೀಸರಿಗೆ ತಿಳಿಸಿದ್ದನು. ಸಂಝೋತಾ ಎಕ್ಸ್‌ಪ್ರೆಸ್ ಸ್ಫೋಟಕ್ಕಾಗಿ ಪಾಕಿಸ್ತಾನದ ಭಯೋತ್ಪಾದಕರು ಇಂದೋರಿನ ಕಟಾರಿಯಾ ಮಾರ್ಕೆಟ್‌ನಲ್ಲಿ ಸೂಟ್‌ಕೇಸ್ ಕವರನ್ನು ಖರೀದಿಸಿದ್ದರು. ಅಬ್ದುಲ್ ರಜಾಕ್ ಅವರಿಗೆ ಸಹಾಯ ಮಾಡಿದ್ದ. ಅದಕ್ಕೆ ಪ್ರತಿಯಾಗಿ ಸಿಮಿಯ ಇಂದೋರ್ ಘಟಕದ ಮುಖ್ಯಸ್ಥನಾದ ಮಿಸ್ಬಾ-ಉಲ್-ಇಸ್ಲಾಮ್‌ನಿಂದ ಸಹಾಯವನ್ನೂ ಪಡೆದುಕೊಂಡಿದ್ದ ಎಂದು ಈತ ತನಿಖಾಧಿಕಾರಿಗಳಿಗೆ ತಿಳಿಸಿದ್ದ.

೨೦೦೮ರ ಜನವರಿಯಲ್ಲಿ ಸೆರೆಸಿಕ್ಕ ಪಾಕಿಸ್ತಾನದಲ್ಲಿ ತರಬೇತಿ ಪಡೆದ ನಾಸಿರ್ ನೀಡಿದ ಮಾಹಿತಿಯ ಮೇರೆಗೆ ಮಾರ್ಚ್‌ನಲ್ಲಿ ನಾಗೋರಿ ಗುಂಪಿನ ಉಳಿದೆಲ್ಲರ ಬಂಧನ ಸಾಧ್ಯವಾಗಿತ್ತು.

ಆದರೆ, ಈಗ ಇಷ್ಟು ಮುಂದುವರಿದ ತನಿಖೆಯನ್ನು ನಿಲ್ಲಿಸಿ ’ಹಿಂದು ಭಯೋತ್ಪಾದನೆ’ಯೆಂಬ ಗುಮ್ಮವನ್ನು ಹುಡುಕಹೊರಟಿದೆ ಸರ್ಕಾರ. ಸರ್ಕಾರ ಜಿಹಾದಿಗಳ ಬಗ್ಗೆ ಮೃದು ಧೋರಣೆ ಹೊಂದಿದೆ ಎಂಬ ಜನರ ಮನದಲ್ಲಿರುವ ಭಾವನೆಯನ್ನು ತೊಡೆದುಹಾಕಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದಲ್ಲಿ ಹಿಂದುಗಳು ಜಿಹಾದಿಗಳ ವಿರುದ್ಧ ತಾವೇ ಪ್ರತೀಕಾರ ಕ್ರಮ ಕೈಗೊಳ್ಳಬಹುದೆಂದು ರಕ್ಷಣಾ ತಜ್ಞ ಬಿ. ರಾಮನ್ ಅವರು ೨೦೦೬ರಲ್ಲೇ ಸರ್ಕಾರವನ್ನು ಎಚ್ಚರಿಸಿದ್ದರು. ತಥಾಕಥಿತ ಹಿಂದು ಭಯೋತ್ಪಾದನೆಯ ಬಗ್ಗೆ ಸರಿಯಾದ ತನಿಖೆಯನ್ನು ಸ್ವಾಗತಿಸುವ ಅವರು ತನಿಖೆಯ ವೇಳೆ ದೊರೆತ  ಆಯ್ದ ಮಾಹಿತಿ ಮಾತ್ರ ಮಾಧ್ಯಮಗಳಿಗೆ ಸೋರಿಕೆಯಾಗುತ್ತಿರುವುದರ ಹಿಂದೆ ಗುಪ್ತ ಕಾರ್ಯಸೂಚಿಯಿದೆಯೆನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಹಿಂದುಗಳು ಭಾಗಿಯಾಗಿರುವ ಸಾಧ್ಯತೆಯಿರುವ ಘಟನೆಗಳು ಕೇವಲ ನಾಲ್ಕು. ಆದರೆ, ಅವುಗಳ್ಯಾವುವೂ ೨೦೦೮ರ ಮುಂಬೈ ಸ್ಫೋಟದ ಅನಂತರ ನಡೆದವುಗಳಲ್ಲ.

ಕೆಲವರು ಹಿಂದೂಗಳು ಭಯೋತ್ಪಾದನೆಯಲ್ಲಿ ಭಾಗಿಯಾಗಿರಬಹುದಾದ ಘಟನೆಗಳಲು ಕೇವಲ ನಾಲ್ಕೇ ನಾಲ್ಕು;  ನಾಲ್ಕೂ ಘಟನೆಗಳೂ ಕೂಡ ೨೦೦೮ರ ಮುಂಬೈ ದಾಳಿಗೂ ಮುಂಚಿನವು ಎಂದು ರಾಮನ್  ಗುರುತಿಸಿದ್ದಾರೆ. ಅಸೀಮಾನಂದರ ತಪ್ಪೊಪ್ಪಿಗೆಯನ್ನು ಜಿಹಾದಿ ಭಯೋತ್ಪಾದನೆಯ ಗಂಭೀರತೆಯಿಂದ ದೇಶದ ಗಮನವನ್ನು ಬೇರೆಡೆಗೆ  ತಿರಿಗಿಸುವ ಕಾಂಗ್ರೆಸ್  ಮತ್ತು ಪತ್ರಕರ್ತರ ಪ್ರಯತ್ನಗಳಿಂದ ಹಿಂದೂ ಸಮುದಾಯದಲ್ಲಿ ಉಂಟಾಗುತ್ತಿರುವ ತೀವ್ರ ಕೋಪದ ಭಾವನೆಗಳ ಬಗ್ಗೆ ಅವರು ಎಚ್ಚರಿಸುತ್ತಾರೆ.

ಮುಂಬೈನ ಘಟನೆಗಳಲು   ಕೆಲವರು ಹಿಂದೂಗಳು ಭಯೋತ್ಪಾದನೆಯಲ್ಲಿ ಭಾಗಿಯಾಗಿರಬಹುದಾದ ಘಟನೆಗಳಲು ಕೇವಲ ನಾಲ್ಕೇ ನಾಲ್ಕು;  ನಾಲ್ಕೂ ಘಟನೆಗಳೂ ಕೂಡ ೨೦೦೮ರ ಮುಂಬೈ ದಾಳಿಗೂ ಮುಂಚಿನವು ಎಂದು ರಾಮನ್  ಗುರುತಿಸಿದ್ದಾರೆ. ಅಸೀಮಾನಂದರ ತಪ್ಪೊಪ್ಪಿಗೆಯನ್ನು ಜಿಹಾದಿ ಭಯೋತ್ಪಾದನೆಯ ಗಂಭೀರತೆಯಿಂದ ದೇಶದ ಗಮನವನ್ನು ಬೇರೆಡೆಗೆ  ತಿರಿಗಿಸುವ ಕಾಂಗ್ರೆಸ್  ಮತ್ತು ಪತ್ರಕರ್ತರ ಪ್ರಯತ್ನಗಳಿಂದ ಹಿಂದೂ ಸಮುದಾಯದಲ್ಲಿ ಉಂಟಾಗುತ್ತಿರುವ ತೀವ್ರ ಕೋಪದ ಭಾವನೆಗಳ ಬಗ್ಗೆ ಅವರು ಎಚ್ಚರಿಸುತ್ತಾರೆ.

ಭಯೋತ್ವಾದನಾ ನಿಗ್ರಹ ದಳ (ಎ.ಟಿ.ಎಸ್) ಮೂಲಕ  ಮಾಧ್ಯಮಗಳಿಗೆ ಸೋರುತ್ತಿರುವ ರೀತಿಗೆ ಅಸಮ್ಮತಿಯನ್ನು ವ್ಯಕ್ತಪಡಿಸುತ್ತಾ ರಾಮನ್ ಅವರು ಭಯೋತ್ಪಾದನೆಯ ಇತಿಹಾಸದಲ್ಲೇ ಆರೋಪಿಯು (ಸಾಧ್ವಿ ಪ್ರಜ್ಞಾ ಎಂದು ಓದಿಕೊಳ್ಳಿ) ತನ್ನದೇ ಮೋಟಾರು ಸೈಕಲನ್ನು ಬಾಂಬನ್ನು ಸಿಡಿಸಲು ಬಳಸಿ ತನ್ನ ವಿರುದ್ದವೇ ಸಾಕ್ಷಿಸೃಷ್ಠಿ ಮಾಡಿಕೊಳ್ಳುತ್ತಾನೆ(ಳೆ)ಯೇ ಎಂದು ಪ್ರಜ್ಞಾವಂತರು ಪ್ರಶ್ನಿಸಬೇಕು ಎಂದು ಅಭಿಪ್ರಾಯ ಪಡುತ್ತಾರೆ.

ಸೈನ್ಯಕ್ಕೆ ಸೇರಲು ಬಯಸುವವರಿಗೆ ಪ್ರಶಿಕ್ಷಣ ಕೊಡುವ ಒಂದು ಖಾಸಗೀ ಸೈನಿಕ ಶಾಲೆಯನ್ನು ಆರೋಪಿಗಳು ಕೆಲವರು ಅಲ್ಲಿ ಸಮಾಲೋಚನೆಗೆ ಸೇರಿದ್ದರೆಂಬ ಕಾರಣಕ್ಕಾಗಿ ದೂರಲಾಗಿದೆ. ಆ ಸಮಾಲೋಚನೆಯು ಭಯೋತ್ಪಾದನಾ ಕೃತ್ಯಗಳನ್ನು ಯೋಜಿಸಲಿಕ್ಕಾಗಿಯೋ ಅಥವಾ ಜಿಹಾದಿ ಭಯೋತ್ಪಾದನೆಯನ್ನು ತಡೆಯಲಿಕ್ಕಾಗಿಯೋ ಎಂಬ ವಿವರಗಳನ್ನು ನೀಡಲಾಗಿಲ್ಲ

ಪೆಬ್ರವರಿ ೨೦೦೭ ರಲ್ಲಿ ನಡೆದ ಸಮಜೋತಾ ಎಕ್ಸ್‌ಪ್ರೆಸ್ ಸ್ಪೋಟವನ್ನು ಹಿಂದೂಗಳು ಆರ್.ಡಿ.ಎಕ್ಸ್. ಉಪಯೋಗಿಸಿ ನಡೆಸಿದರೆಂದೂ, ಆ ಸ್ಪೋಟಕವನ್ನು ಲೆ.ಕ. ಶ್ರೀಕಾಂತ್ ಪುರೋಹಿತ್ ಒದಗಿಸಿದರೆಂದೂ ಹೇಳಲಾಗುತ್ತಿದೆ. ಆದರೆ, ಆ ಘಟನೆಯಲ್ಲಿ ಎರಡು ಸುಧಾರಿತ ಎಲೆಕ್ಟ್ರಾನಿಕ್ ಉಪಕರಣಗಳಿಂದ ಗಾಜಿನ ಬಾಟಲಿಯಲ್ಲಿ ತುಂಬಿದ ಸ್ಪೋಟಕಗಳನ್ನು ಉಡಾಯಿಸಲಾಗಿತ್ತು ಮತ್ತು ಇತರ ಮೂರು ಐ.ಇ.ಡಿಗಳು ವಿಫಲವಾಗಿದ್ದವು. ಆಂದರೆ, ಸ್ಪೋಟಗೊಂಡ ಸಮಯದಲ್ಲಿ ಆರ್.ಡಿ.ಎಕ್ಸ್ ನ ಉಪಯೋಗವಾಗಿರಲಿಲ್ಲ. ಇದನ್ನು ಅನೇಕ ಪಾಶ್ಚಿಮಾತ್ಯ ತಜ್ಞರೂ ಸಹ ಖಚಿತಪಡಿಸಿದ್ದಾರೆ. ಪುರೋಹಿತ್ ಸೈನ್ಯದ ವಶದಲ್ಲಿದ್ದ ಆರ್.ಡಿ.ಎಕ್ಸ್ ಅನ್ನು ಕದ್ದರೆಂಬ ಅರೋಪ ಇದೆ. ಆದರೆ ಸೈನ್ಯವು ತನ್ನಲ್ಲಿರುವ ಆರ್.ಡಿ.ಎಕ್ಸ್ ಕಳುವಾಗಿಲ್ಲ ಎಂದು ಹೇಳುತ್ತಿರುವುದರಿಂದ ತನಿಖಾ ಸಂಸ್ಥೆಗಳಿಂದ ಹೆಚ್ಚಿನ ವಿವರಣೆಯ ಅಗತ್ಯವಿದೆ.

ಹಿಂದೂ ಭಯೋತ್ಪಾದನೆಯ ಹಿಂದೆ ಬಿದ್ದಾಗಿನಿಂದಲೂ ಮುಂಬೈನ ಎ.ಟಿ.ಎಸ್. ತನ್ನ ಗೌರವವನ್ನು ಕಳೆದುಕೊಳ್ಳುತ್ತಿದೆ. ಜಿಹಾದಿ ಭಯೋತ್ಪಾದಕರನ್ನು ತಡೆಯುವುದರ ಬದಲು ಹಿಂದೂ ರಾಷ್ಟ್ರವಾದಿಗಳನ್ನು ಸಿಕ್ಕಿಸುವಲ್ಲಿ ತನ್ನ ಸಮಯವನ್ನು ವ್ಯರ್ಥಮಾಡಿತ್ತಿದೆ ಎಂಬ ಭಾವನೆ ಮನೆ ಮಾಡುತ್ತಿದೆ. ಹತರಾದ ಅದರ ಮುಖ್ಯಸ್ಥರು ಬಾತ್ಲಾ ಮತ್ತು ಅಜಮ್‌ಗರ್ ನ ಭಯೋತ್ಪಾದಕರನ್ನು ಬಹಿರಂಗವಾಗಿ ಬೆಂಬಲಿಸುವ ಕಾಂಗ್ರೆಸ್ ನೇತಾರ ದಿಗ್ವಿಜಯಸಿಂಗ್ ಅವರ ಸ್ನೇಹದ ವರದಿಗಳು ಎ.ಟಿ.ಎಸ್ ನ ಆತ್ಮವಿಶ್ವಾಸವನ್ನು ಹೆಚ್ಚಿಸಲಾರದು.

ಕೇಂದ್ರ ತನಿಖಾ ದಳ (ಸಿ.ಬಿ.ಐ) ವಾದರೋ, ಕಾಂಗ್ರೆಸ್ ತನಿಖಾ ದಳವೆಂದೇ ಲೇವಡಿಗೊಳಗಾಗಿದೆ. ಆದು ಸ್ಪೋಟದ ಎಲ್ಲಾ ಸುಳಿವುಗಳನ್ನು ತನಿಖೆಗೊಳಪಡಿಸಲೇ ಬೇಕು. ಆದರೆ ಅದು ದಶಕಗಳಿಂದ ಎಚ್ಚರಿಕೆಯಿಂದ ಗಳಿಸಿದ್ದ ಗೌರವ ವನ್ನು ಮಣ್ಣುಗೂಡಿಸುವ ಆತುರ ತೋರಬಾರದು.  ಸ್ವಾಮಿ ಅಸೀಮಾನಂದರು ಡಾಂಗ್ ನ ಆದಿವಾಸಿಗಳ ಉನ್ನತಿಗಾಗಿ ತಮ್ಮ ಜೀವನ ಮುಡಿಪಾಗಿಟ್ಟವರು.  ವಿದೇಶಿ ಹಣದ ಬೆಂಬಲವಿರುವ ಕ್ರೈಸ್ತ ಮಿಶನರಿಗಳ ಕೆಂಗಣ್ಣಿಗೆ ತುತ್ತಾಗಿರುವವರು. ಹತರಾದ ಕಂದಮಲ್‌ನ ಸ್ವಾಮಿ ಲಕ್ಷ್ಮಣಾನಂದರಂತೆಯೇ ಇಡೀ ಜಿಲ್ಲೆಯಲ್ಲಿ ಕಾನೂನು ಬಾಹಿರ ಮಂತಾತರವನ್ನು ವಿರೋಧಿಸುತ್ತಿರುವವರು. ಜಿಹಾದಿ ವಿರೋಧೀ ಪ್ರತಿಕ್ರಿಯೆಗೆ  – ಹಿಂದೂ ಭಯೋತ್ಪಾದನೆ ಅಥವಾ ಕೇಸರೀ ಭಯೋತ್ಪಾದನೆ ಎಂಬುದೇ ಇಲ್ಲ,  ಹಿಂದೂಸ್ತಾನದಲ್ಲಂತೂ ಅಲ್ಲ – ಅಸೀಮಾನಂದರ ಬೆಂಬಲ ವಿವರಿಸಲಾಗದು. ಈ ಆರೋಪ ಹಿಂದೂ ನಾಗರೀಕತೆಗೆ ಪಣತೊಟ್ಟು ನಿಂತಿರುವ ವ್ಯಕ್ತಿಗಳು ಮತ್ತು ಶಕ್ತಿಗಳನ್ನು ದುರ್ಬಲಗೊಳಿಸುವ ಒಂದು ದೊಡ್ಡ ಸಂಚಿನ ಭಾಗವಾಗಿರಲೇ ಬೇಕು.

ಇನ್ನೊಂದು ಕಡೆ, ಐಎಸ್‌ಐ, ಸಿಐಎ, ಎಮ್೧೬ ಇವರಿಂದ ನುರಿತ ಇಸ್ಲಾಮಿಕ್ ಭಯೋತ್ಪಾದಕರು,  ಅವರ ಸೇವಕರಂತೆ ವರ್ತಿಸುವ ಭಾರತದ ಪುಕ್ಕಲು ಸೆಕ್ಯುಲರ್ ಗಣ್ಯರು ದೇಶವನ್ನು ಶಾ ಮಹಮೂದ್ ರೇಜಾ ಪೆಹ್ಲಾವೀ ನೇತೃತ್ವದ ಇರಾನ್ ಅಥವಾ ಫೆರ್ಡಿನಾಂಡ್ ಮಾರ್ಕೋಸ್ ನೇತೃತ್ವದ ಫಿಲಿಫೀನ್ಸ್ ಮಾದರಿಯ ಹಿಂದೂಸ್ತಾನವನ್ನಾಗಿ ಮಾಡಲು ಮುಂದಾಗಿದ್ದಾರೆ. ಮನುವಿನ ಸಂತತಿಗೆ ಇದಕ್ಕಿಂತ ಅಂಧಕಾರದ ಸಮಯ ಬಂದಿರಲಿಲ್ಲ.

ಲೇಖಕರು ಸಂಪಾದಕರು,The writer is Editor, www.vijayvaani.com

Leave a Reply

Your email address will not be published.

This site uses Akismet to reduce spam. Learn how your comment data is processed.