ಬೆಂಗಳೂರಿನ ವಾಸವಿ ಕನ್ವೆನ್ಷನ್ ಹಾಲ್ ನಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಆಯೋಜಿಸಿದ್ದ ‘ಅವಿತಿಟ್ಟ ಅಂಬೇಡ್ಕರ್’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಚಿಂತಕ, ನಿರ್ದೇಶಕ ಶ್ರೀ ಪ್ರಕಾಶ್ ಬೆಳವಾಡಿ, ಅ. ಭಾ. ಸಾಹಿತ್ಯ ಪರಿಷತ್ತಿನ ಶ್ರೀ ರಘುನಂದನ್ ಭಟ್, ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಬಾಬು ಹಾಗೂ ಲೇಖಕರಾದ ಡಾ. ಸುಧಾಕರ್ ಹೊಸಳ್ಳಿ , ಪ್ರವೀಣ್ ಕುಮಾರ್ ಮಾವಿನಕಾಡು ಉಪಸ್ಥಿತರಿದ್ದರು.

ಪುಸ್ತಕದ ಲೋಕಾರ್ಪಣೆ ಮಾಡಿದ ಚಿಂತಕ, ಸಿನಿಮಾ ನಿರ್ದೇಶಕರಾದ ಪ್ರಕಾಶ್ ಬೆಳವಾಡಿ ಮಾತನಾಡುತ್ತಾ,
ಸಂವಿಧಾನ ರಚನಾ ಸಂಸದೀಯ ಸಭೆಯಲ್ಲಿ ಆಘಾತಕಾರಿ ವಿಚಾರಗಳಿವೆ. ಬೀಫ್ ತಿನ್ನುವುದರ ಬಗ್ಗೆ, ದೇಶ ವಿಭಜನೆ ಬಗ್ಗೆ ಅದರಲ್ಲಿ ಚರ್ಚೆಯಾಗಿದೆ. Article ೪೪ (UCC), ೪೮ ಇಂದಿಗೂ ಚರ್ಚೆ ಆಗಿಲ್ಲ, ಮುಂದೆ ಈ ಸಂವಿಧಾನದ ಮೂಲ ಉದ್ದೇಶಗಳನ್ನು ತುರ್ತು ಪರಿಸ್ಥಿತಿ ಹೇರುವ ಮುನ್ನ ತಿದ್ದಿ ಬದಲಾವಣೆ ಮಾಡಲಾಯಿತು (Article ೪೩, ೪೨). ಬಲವಂತವಾಗಿ Social, Secular ಎಂಬ ಶಬ್ದಗಳನ್ನು ಸಂವಿಧಾನದಲ್ಲಿ ತುರುಕಲಾಯಿತು ಎಂದರು.

ಹುಟ್ಟಿದ ಜಾತಿಯಿಂದ ಹಕ್ಕು ಬರುವುದಿಲ್ಲ, ಸಂವಿಧಾನ ನಮಗೆ ಪ್ರಶ್ನಿಸುವ ಹಕ್ಕು ಒದಗಿಸಿದೆ. ಅಮೆರಿಕದ ಧ್ವಜ ಸುಟ್ಟಾಗ, ಲಾರ್ಡ್ ಡೆಮಿಂಗ್ ಹೇಳುತ್ತಾರೆ, “The flag belongs to the citizen, not the Government.” ಇದರ ಅರ್ಥ, ಸಂವಿಧಾನ ನಾಗರಿಕನಿಗೆ ಸೇರಿದ್ದು, ಅದರಲ್ಲಿ ಸಂವಿಧಾನವನ್ನೂ ಪ್ರಶ್ನಿಸುವ ಹಕ್ಕು ನಮಗೆ ಕೊಡಲಾಗಿದೆ ಎಂದು. ಎಲ್ಲರಿಗೂ ಸಂವಿಧಾನದ ಬಗ್ಗೆ ಬರೆಯುವ ಹಕ್ಕು ಇದೆ, ಈ ಪುಸ್ತಕವೂ ಅದೇ ಕೆಲಸ ಮಾಡಿದೆ ಎಂದು ಪ್ರಕಾಶ್ ಬೆಳವಾಡಿ ನುಡಿದರು.

ಅಂಬೇಡ್ಕರ್ ಒಮ್ಮೆ ಚಹಾ ಸಪ್ಪೆ ಇದೆ ಸಕರೆ ಹಾಕು ಎಂದಾಗ, ಅವರ ಹೆಂಡತಿ ಸಕ್ಕರೆ ನಿಮಗೆ ಅಸ್ಪೃಶ್ಯ ಎಂದರು. ಆಗ ಅಂಬೇಡ್ಕರ್ ಆ ಪದವನ್ನು ಕೇಳುವುದೇ ನನಗೆ ಕಷ್ಟ ಎಂದರು. ಇವತ್ತು, ಅಂಬೇಡ್ಕರ್ ವಿಷಯವೇ ಅಸ್ಪೃಶ್ಯ ಆಗಿ ಬಿಟ್ಟಿದೆ. ಕಾಂಗ್ರೆಸ್ ನವರು ಇವತ್ತಿಗೂ ಅಂಬೇಡ್ಕರ್ ಅವರನ್ನು ಹತ್ತಿರ ಇಟ್ಟುಕೊಂಡಿಲ್ಲ. ಅಂಬೇಡ್ಕರ್ ಅವರು ಯಾಕೆ ಅವಿರೋಧವಾಗಿ ಆಯ್ಕೆ ಆಗಲಿಲ್ಲ? ಮುಂಬೈನಲ್ಲಿ ಅವರನ್ನು ಕಾಂಗ್ರೆಸ್ ಯಾಕೆ ಸೋಲಿಸಿತು? ಯಾಕೆ ಅಂಬೇಡ್ಕರ್ ಅವರು ಕಾಂಗ್ರೆಸ್ ಪಕ್ಷದ ಒಳಗಿರಲಿಲ್ಲ? ಕಾಂಗ್ರೆಸ್ ಅಂಬೇಡ್ಕರ ಅವರಿಗೆ ವ್ಯವಸ್ಥಿತವಾಗಿ ಮೋಸ ಮಾಡಿದ ಉಲ್ಲೇಖಗಳು ಸುಮಾರು ಇವೆ. ಸಂವಿಧಾನ ರಚನೆ ಸಂಸದೀಯ ಸಭೆಯಲ್ಲಿ ಅಶ್ರಫ್ ಮೋಯಿನಿ ಅವರು ಅಂಬೇಡ್ಕರ್ ಕೈ ಇಟ್ಟ ಕಡೆಯಲ್ಲ ಸಿಕ್ಕ ಕೆಡುಕನ್ನು ತಂದು ಸಂವಿಧಾನದಲ್ಲಿ ಹಾಕಿದ್ದಾರೆ ಎಂದು ಹೇಳಿದ್ದರು. ಇನ್ನು ಕೆಲವರು ಗಾಂಧೀಜಿ ಅವರ ಸಿದ್ಧಾಂತ ಅದರಲ್ಲಿ ಇಲ್ಲ, ಬ್ರಿಟಿಷರು ಅಂಬೇಡ್ಕರ್ ಅವರನ್ನು ಜೈಲಿಗೆ ಹಾಕಲಿಲ್ಲ, ಆದರೆ ಈ ಸಂವಿಧಾನದಿಂದ ಹೋಗಬಹುದು ಎಂದಿದ್ದರು. ಕಾಂಗ್ರೆಸ್ ಮೌನವಾಗಿದ್ದು ಇದಕ್ಕೆ ಸಮರ್ಥನೆ ನೀಡಿತ್ತು. ಈ ಸಂವಿಧಾನದಿಂದ ದಲಿತರು ಮುಂದೆ ಬರುತ್ತಾರೆಂಬ ಭಯ ಕಾಂಗ್ರೆಸ್ ಗೆ ಇದ್ದುದರಿಂದ, ಎರಡು ಬಾರಿ ಅಂಬೇಡ್ಕರ್ ಅವರನ್ನು ಸೋಲಿಸಿತು. ಸಂವಿಧಾನ ರಚನೆ ಸಮಯದಲ್ಲಿ ಅಂಬೇಡ್ಕರ್ ಕಂಡ ಅಸ್ಪೃಶ್ಯತೆ, ಅವರು ಬಾಲ್ಯದಲ್ಲಿ ಕಂಡಿದ್ದಕ್ಕಿಂತ ಹೆಚ್ಚಾಗಿತ್ತು. ಅವರೆದುರು ಅವರ ಆಪ್ತ ಸಹಾಯಕನನ್ನು ನಿಲ್ಲಿಸಿ ಚುನಾವಣೆಯಲ್ಲಿ ಸೋಲಿಸಿ, ಅಂಬೇಡ್ಕರ್ ಅವರ ಸಮುದಾಯಕ್ಕೆ ಕಾಂಗ್ರೆಸ್ ಏನು ಸಂದೇಶ ಕೊಟ್ಟಿತ್ತು? ಅಂಬೇಡ್ಕರ್ ಕೀಳೆಂದೊ ಅಥವಾ ಅವರು ಬರೆದ ಸಂವಿಧಾನ ಕೀಳೆಂದೊ ಎಂದು ಪ್ರಕಾಶ್ ಬೆಳವಾಡಿ ಪ್ರಶ್ನಿಸಿದರು.

ಅಂಬೇಡ್ಕರ್ ಅವರ ಆಶಯ ಏನಾಗಿತ್ತೆಂದರೆ, ಸ್ವತಂತ್ರ ಭಾರತದಲ್ಲಿ ನನ್ನವರ ಯಾತನೆ ಮರುಕಳಿಸಬಾರದು, ಅದಕ್ಕೆ ಅವರು ಅಧಿಕಾರಕ್ಕೆ ಬರಬೇಕು, ಸಂವಿಧಾನದಲ್ಲಿ ಅದಕ್ಕೆ ಅವಕಾಶವಿದೆ. ಆದರೆ, ತುಂಬಾ ವರುಷ ಅವರೇ ಗೆದ್ದು, ಅಧಿಕಾರಕ್ಕೆ ಗುಲಾಮರಾದರೆ ಅದು ಮತ್ತಷ್ಟು ನೋವಿನ ವಿಚಾರ.

ಅಂಬೇಡ್ಕರ್ ಬರೆದ ಭಾರತ ವಿಭಜನೆ ಕುರಿತ ಕೃತಿ Thoughts on Pakistan ಎಲ್ಲೂ ಸಿಗಿತ್ತಿಲ್ಲ. ಅವರ ಹೇಳಿಕೆ ಪ್ರಕಾರ “The problem in India is whaterver you do, fundamental Islam cannot be reconciled by democracy”.

ಅಂಬೇಡ್ಕರ್ ಅವರನ್ನು ವಿಶ್ವ ನಾಯಕನಾಗಿ ಪ್ರತಿಬಿಂಬಿಸುವ ಅವಕಾಶ ನಮಗಿತ್ತು. Nelson Mandela, Martin Luther King ಇವರ ಪಂಕ್ತಿಯಲ್ಲಿ ಅಂಬೇಡ್ಕರ್ ಇರಬೇಕಿತ್ತು ಎಂದರು.

ಪುಸ್ತಕದ ಲೇಖಕರಲ್ಲಿ ಒಬ್ಬರಾದ ಪ್ರವೀಣ್ ಕುಮಾರ್ ಮಾವಿನಕಾಡು ಮಾತನಾಡುತ್ತ,
ಸೂಕ್ಷ್ಮ ಪ್ರದೇಶಗಳು ಎಂದರೆ ಕಾನೂನನ್ನು, ಸಂವಿಧಾನವನ್ನು ಮೀರಿ ವರ್ತಿಸುವ ಜನರಿರುವ ಸ್ಥಳ. ಅದೇ ರೀತಿ, ಸೂಕ್ಷ್ಮ ವಿಷಯಗಳು ಎಂದರೆ, ಅವನ್ನು ಹೇಳಿದಾಗ, ಬರೆದಾಗ, ಪ್ರಕಟಗೊಳಿಸಿದಾಗ ಕಾನೂನನ್ನು ಮೀರುವ ವರ್ತನೆ ಜನ ತೋರಿಸುತ್ತಾರೆ. ದೌರ್ಭಾಗ್ಯ ಎಂದರೆ ಇಂದು “ಅಂಬೇಡ್ಕರ್” ಕೂಡ ಒಂದು ಸೂಕ್ಷ್ಮ ವಿಷಯ ಆಗಿದೆ. ಸಂವಿಧಾನ ಶಿಲ್ಪಿಯ ವಿಷಯ ಸಂವಿಧಾನವನ್ನು ಮೀರುವ ಪರಿಸ್ಥಿತಿಗೆ ನಮ್ಮ ಜನರನ್ನು ತರುತ್ತಿದೆ. ನಮ್ಮ ಆಶಯ ಏನೆಂದರೆ, ಅಂಬೇಡ್ಕರ್ ಎಲ್ಲರಿಗೂ ಸೂಕ್ತವಾದ ವಿಷಯವಾಗಬೇಕು ಎಂದರು.

ಪುಸ್ತಕದ ಮತ್ತೊಬ್ಬ ಲೇಖಕರಾದ ಡಾ. ಸುಧಾಕರ್ ಹೊಸಳ್ಳಿ ಮಾತನಾಡಿ, ಸಂವಿಧಾನದ ವಿಷಯದಲ್ಲಿ ಆಸಕ್ತಿ ಇರಬೇಕು. ಅಧಿಕೃತ ದಾಖಲೆಗಳನ್ನು ಹುಡುಕಿದಾಗ, ಸಂವಿಧಾನ ಕುರಿತು ಶ್ರೇಷ್ಠ ಕಾರ್ಯ ಮಾಡಿದವರು ಟಿ ಟಿ ಕೃಷ್ಣನ್ ಎಂದು ಉಲ್ಲೇಖ ಮಾಡಲಾಗುತ್ತದೆ. ಅವರದೇ ಹೇಳಿಕೆ ಪ್ರಕಾರ, ಏಳು ಸದಸ್ಯರ ಕರಡು ರಚನಾ ಸಮಿತಿಯಲ್ಲಿ, ಇಡೀ ಜವಾಬ್ದಾರಿ ಅಂಬೇಡ್ಕರ್ ಅವರ ಮೇಲಿತ್ತು ಎಂದು ಎಲ್ಲಾ ಕಡೆ ಪ್ರಚಾರವಾಗಿದೆ. ಅದರ ಮುಂದುವರೆದ ಹೇಳಿಕೆಯಲ್ಲಿ ಅವರೇ ಹೇಳಿದಂತೆ, ಹಲವಾರು ವಿಷಯ ತಜ್ಞರು ಸಭೆಗೆ ಗೈರು ಹಾಜರಾಗಿದ್ದ ಕಾರಣ, ಅಂಬೇಡ್ಕರ್ ಅವರ ಕಾರ್ಯ ಅಪೂರ್ಣವಾಗಿ ಉಳಿದಿದೆ, ಎಂಬ ಉಲ್ಲೇಖವಿದೆ. ಟಿ ಟಿ ಕೃಷ್ಣನ್ ಹೇಳಿಕೆಯನ್ನು ಅರ್ಧಕ್ಕೆ ತುಂಡರಿಸಿ, ಹೊಗಳಿಕೆಯನ್ನು ಅಪಮಾನವಾಗಿ ಸಮಾಜಕ್ಕೆ ತೋರಿಸಲಾಗುತ್ತಿದೆ. ಮೀಸಲಾತಿ ಎಂದಾಕ್ಷಣವೇ ಕಾಂಗ್ರೆಸ್ ಅದನ್ನು ಬೆಂಬಲಿಸುತ್ತದೆ, ಬಿಜೆಪಿ ಆರೆಸ್ಸೆಸ್ ಬೆಂಬಲಿಸುವುದಿಲ್ಲ ಎಂದು ಎಲ್ಲರ ಭಾವನೆ. ಮೀಸಲಾತಿ ಎಂಬ ವಿಚಾರಕ್ಕೆ ಶಕ್ತಿ ತುಂಬಿದ್ದು ಅಂಬೇಡ್ಕರ್, ಸಂವಿಧಾನ ರಚನೆ ಸಮಯದಲ್ಲಿ ಅದನ್ನು ವಿರೋಧಿಸಿದ್ದು ಕಾಂಗ್ರೆಸ್. ಸಂವಿಧಾನ ರಚನಾ ಸಂಸದೀಯ ಸಭೆಯಲ್ಲಿ ಕಾಂಗ್ರೆಸ್ ನವರಿಗೆ ಆಗ ಬಹುಮತವಿತ್ತು. ಅಂತಹ ಕಾಂಗ್ರೆಸ್ ಅಂಬೇಡ್ಕರ್ ಅವರು ಮಂಡಿಸಿದ ಸಂವಿಧಾನವನ್ನು ದಾಸ್ಯದ ಸಂವಿಧಾನ ಎಂದು ಟೀಕೆ ಮಾಡಿದ್ದರು. ವಾಸ್ತವವೆಂದರೆ, ಹಿರಿಯ ತಜ್ಞರ ಸಲಹೆ ಸಿಗದ ಅಂಬೇಡ್ಕರ್ ಸಂವಿಧಾನವನ್ನು ಹಾಗೆಯೇ ಮಂಡಿಸಿದ್ದರು. ಈ ಎಲ್ಲಾ ನೈಜ ಘಟನೆಗಳನ್ನು ಎರಡುವರೆ ವರುಷದ ಕಾಲ ಅಧ್ಯಯನ ಮಾಡಿ, ಬೆದರಿಕೆಗಳನ್ನು ಸಹಿಸಿಕೊಂಡು, ಅಂಬೇಡ್ಕರ್ ಅವರನ್ನು ಮರು ವ್ಯಾಖ್ಯಾನ ಮಾಡುವ ಪ್ರಯತ್ನ ಈ ಪುಸ್ತಕ ಎಂದು ಸಭೆ ತಿಳಿಸಿಕೊಟ್ಟರು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರಘುನಂದನ್ ಭಟ್ ನರೂರು ಮಾತನಾಡುತ್ತ,
ಈ ನೆಲಕ್ಕೇನೊಂದು ಶಕ್ತಿ ಇದೆ. ಸತ್ಯದ ಮಾರ್ಗದಲ್ಲಿ ಬದುಕಬೇಕು ಎಂಬುವುದಕ್ಕೆ ನಮಗೆ ರಾಮ, ಸತ್ಯ ಹರಿಶ್ಚಂದ್ರ ಇವರ ಪ್ರೇರಣೆ ಇದೆ. ಆದರೆ ಸ್ವಾತಂತ್ರದ ನಂತರ ಸತ್ಯ ಹೇಳುವರನ್ನು ಅನುಮಾನದ ದೃಷ್ಟಿಯಿಂದ ನೋಡಲಾಗುತ್ತಿತ್ತು. ಮತ್ತೆ ನಮಗೆ ಸತ್ಯದ ಮಾರ್ಗದಲ್ಲಿ ನಿರ್ಭಯವಾಗಿ ನಡೆಯುವುದಕ್ಕೆ ನಮಗೆ ಅನೇಕ ಸಾಧಕರ ಪ್ರೇರಣೆ ಹಾಗೂ ಮಾರ್ಗದರ್ಶನ ಇದೆ. ಈ ಪುಸ್ತಕ ಕೂಡ ಅದೇ ಹಾದಿಯಲ್ಲಿದೆ ಎಂದರು.

ಚಿಂತಕರು, ಲೇಖಕರಾದ ಡಾ. ಸಂತೋಷ್ ಹಾನಗಲ್ ಮಾತನಾಡುತ್ತ
೬ ಲಕ್ಷ ಪುಸ್ತಕ ಅಂಬೇಡ್ಕರ್ ಅವರ ಬಗ್ಗೆ ಪ್ರಕಟವಾಗಿವೆ. ಆದರೂ ಇಂದು ನಮ್ಮ ಯುವಕರಿಗೆ ಅಂಬೇಡ್ಕರ್ ಬಗ್ಗೆ ಹೆಚ್ಚು ತಿಳಿದಿಲ್ಲ. ಅಂಬೇಡ್ಕರ್ ಅವರಿಗೆ ನಾವು ಯಾವ ನ್ಯಾಯ ಕೊಡಿಸಲು ಆಗಿಲ್ಲ. ಪ್ರತಿ ಮನೆಯಲ್ಲೂ ಅಂಬೇಡ್ಕರ್ ಅವರ ಒಂದು ಪುಸ್ತಕ ಇರಬೇಕು. UN ಅವರ ಹುಟ್ಟು ಹಬ್ಬವನ್ನು Knowledge day ಎಂದು ಪ್ರಕಟಿಸಿದೆ. ಅವರು ನಮ್ಮ ದೇಶದ ಮೊದಲನೇ ಕಾನೂನು ಮಂತ್ರಿ. ಅವರಿಂದ ಸಂವಿಧಾನ ಬರೆಸಿಕೊಂಡು, ಅವರನ್ನು ಸೋಲಿಸಿ ನಾವು ಏನು ಸಂದೇಶ ಕೊಟ್ಟಿದ್ದೇವೆ?
ಭಾರತದ ಹಿಂದೂ ಬಿಲ್ ಕೋಡ್ ರಚಿಸಿದ ಅವರು ೧೯೪೯ ರಲ್ಲಿ ಸಂಸ್ಕೃತ ಆಯೋಗದ ಪ್ರಸ್ತಾಪ ಮಾಡಿ, ಸಂಸ್ಕೃತವನ್ನು ಆಡಳಿತ ಭಾಷೆ ಮಾಡಿದರೆ ನಮ್ಮ ಸಂಸ್ಕೃತಿ ಮತ್ತು ಸನಾತನ ಧರ್ಮ ನಮ್ಮ ಜನತೆಗೆ ಹೆಚ್ಚು ಪರಿಚಯವಾಗುತ್ತದೆ ಎಂದು ಹೇಳಿದ್ದರು ಎಂದು ನುಡಿದರು.

ರಾಜ್ಯ ವಕೀಲ ಪರಿಷತ್ತಿನ ಅಧ್ಯಕ್ಷರಾದ ಶ್ರೀನಿವಾಸ ಬಾಬು
ನಾವು ಸಾಧನೆ ಮಾಡ ಬೇಕಾದರೆ, ಇತಿಹಾಸವನ್ನು ತಿಳಿಯಲೇ ಬೇಕು. ಸಂವಿಧಾನ ರಚನೆ ಸಂಸದೀಯ ಸಭೆ ಒಂದು ಸಮುದ್ರ ಮಂಥನದಂತೆ, ೨ ವರುಷ ೧೧ ತಿಂಗಳು ೧೮ ದಿನ ನಡೆಯಿತು. ದೀಪದ ಕೆಳಗೆ ಕತ್ತಲು ಎನ್ನುವ ಹಾಗೆ, ಅಂಬೇಡ್ಕರ್ ಅವರಿಗೆ ಸಂವಿಧಾನದಲ್ಲಿ ಅವರು ಕಲ್ಪಿಸಿದ ಸವಲತ್ತುಗಳ ಅನುಭವ ಸಿಗಲಿಲ್ಲ. ಮೀಸಲಾತಿಯ ವಿಚಾರದಲ್ಲಿ, ನಾವು ಸದಾ ಕೇಳೋದು ಬಿಟ್ಟು, ಕೊಡುವರಂತವರಾಗಬೇಕು. ಅಂಬೇಡ್ಕರ್ ಯಾವತ್ತೂ ಕೇಳಲಿಲ್ಲ, ನಾವು ಅವರ ಹೆಸರು ಹೇಳಿಕೊಂಡು ಕೇಳುತ್ತಿದ್ದೇವೆ. ಅವರು ಅವತ್ತು ರಚಿಸಿದ ಸಂವಿಧಾನ, ಇವತ್ತೂ ಬದಲಾಗಿಲ್ಲ. ಅಂದು ಅಂಬೇಡ್ಕರ್ ಅಪಮಾನವನ್ನು ಸಹಿಸಿಕೊಳ್ಳದೆ, ಪ್ರತಿರೋಧ ವ್ಯಕ್ತ ಪಡಿಸಿದ್ದರೆ, ನಮಗೆ ಸಂವಿಧಾನ ಸಿಕ್ಕುತ್ತಿರಲಿಲ್ಲ. ಪ್ರತಿ ಮನೆಯಲ್ಲೂ, ಸಂವಿಧಾನದ ಪುಸ್ತಕ ಇರಬೇಕು. There is no excuse for ignorance of law. ಎಂದು ನುಡಿದರು.

ವರದಿ: ವರುಣ್ ಸತ್ಯನಾರಾಯಣ

Leave a Reply

Your email address will not be published.

This site uses Akismet to reduce spam. Learn how your comment data is processed.