ಗಾಂಧಿವಾದಿ ಶ್ರೀ ಧರಂಪಾಲ್ ಅವರ ಜನ್ಮಶತಾಬ್ದಿ ಅಂಗವಾಗಿ ರಾಷ್ಟ್ರೋತ್ಥಾನ ಸಾಹಿತ್ಯ ಹಾಗೂ ಸೆಂಟರ್ ಫಾರ್ ಪಾಲಿಸಿ ಸ್ಟಡೀಸ್ ಪ್ರಕಟಿಸಿರುವ, ‘ಧರಂಪಾಲ್ ಕ್ಲಾಸಿಕ್ ಸಿರೀಸ್’ ನ 5 ಪುಸ್ತಕಗಳು ಇಂದು ಆರೆಸ್ಸೆಸ್ ನ ಸಹ ಸರಕಾರ್ಯವಾಹರಾದ ಶ್ರೀ ಸುರೇಶ ಸೋನಿ ಲೋಕಾರ್ಪಣೆಗೊಳಿಸಿದರು. ಸರಣಿ ಸಂಪಾದಕರಾದ ಡಾ.ಜೆ.ಕೆ.ಬಜಾಜ್, ಡಾ. ಎಂ.ಡಿ.ಶ್ರೀನಿವಾಸ್ ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಧಾನ ಸಂಪಾದಕರಾದ ನಾಡೋಜ ಎಸ್ ಆರ್ ರಾಮಸ್ವಾಮಿ, ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಂ ಪಿ ಕುಮಾರ್ ಉಪಸ್ಥಿತರಿದ್ದರು.

ಶ್ರೀ ಎಂ ಪಿ ಕುಮಾರ್, ಡಾ.ಜೆ.ಕೆ.ಬಜಾಜ್, ಶ್ರೀ ಸುರೇಶ ಸೋನಿ, ನಾಡೋಜ ಎಸ್ ಆರ್ ರಾಮಸ್ವಾಮಿ, ಡಾ. ಎಂ.ಡಿ.ಶ್ರೀನಿವಾಸ್

2021-22 ಪ್ರಖ್ಯಾತ ಚಿಂತಕ, ಗಾಂಧಿವಾದಿ ಶ್ರೀ ಧರಂಪಾಲ್ ಅವರ ಜನ್ಮಶತಾಬ್ದಿ ವರ್ಷವಾಗಿದ್ದು, ಈ ಸಂದರ್ಭದಲ್ಲಿ ಅವರ ಸಾಹಿತ್ಯವನ್ನು ಜನರಿಗೆ ತಲುಪಿಸಿ, ತನ್ಮೂಲಕ ಗಾಂಧೀ ವಿಚಾರವನ್ನು ಹಾಗೂ ಭಾರತದ ನೈಜ ಇತಿಹಾಸವನ್ನು ತಿಳಿಸುವ ವಿನೂತನ ಯೋಜನೆಗೆ ರಾಷ್ಟ್ರೋತ್ಥಾನ ಸಾಹಿತ್ಯ ಕೈ ಹಾಕಿದೆ. ಬ್ರಿಟಿಷ್ ಪೂರ್ವ ಭಾರತದಲ್ಲಿನ ಉನ್ನತ ಗುಣಮಟ್ಟದ ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ ಮತ್ತು ಆಡಳಿತ ವ್ಯವಸ್ಥೆಗಳ ಬಗ್ಗೆ ದಾಖಲೆ ಸಹಿತವಾಗಿ ವಿವರಿಸುವ ಈ ಗ್ರಂಥಗಳು ಪ್ರಾಚೀನ ಭಾರತದ ಬಗ್ಗೆ ಹೆಮ್ಮೆ ಮೂಡಿಸುತ್ತವೆ. ಧರಂಪಾಲ್ ಅವರ ಚಿಂತನೆಗಳು ಆಧುನಿಕ ಭಾರತದ ನಿರ್ಮಾಣಕ್ಕೆ ಬೇಕಾದ ಅತ್ಯಂತ ಮಹತ್ತ್ವದ ಅಂಶಗಳನ್ನು ಒದಗಿಸುತ್ತವೆ ಎಂದು ಎಲ್ಲ ವಿದ್ವಾಂಸರು ಒಪ್ಪುತ್ತಾರೆ. ‘ಧರಂಪಾಲ್ ಕ್ಲಾಸಿಕ್ ಸಿರೀಸ್’ ಮೂಲಕ ಅವರ ಸಾಹಿತ್ಯವನ್ನು ಭಾರತೀಯರಿಗೆ ನೀಡುವ ದೃಷ್ಟಿಯಿಂದ, ಇಂದು ಕ್ಲಾಸಿಕ್ ಸಿರೀಸ್ ನ ಒಟ್ಟು ಹತ್ತು ಪುಸ್ತಕಗಳ ಸರಣಿಯಲ್ಲಿ ಐದು ಪುಸ್ತಕಗಳು ಲೋಕಾರ್ಪಣೆಗೊಂಡವು. ಇಂದು ಬಿಡುಗಡೆಗೊಂಡ ಐದು ಪುಸ್ತಕಗಳು:

Panchayat Raj as the basis of Indian Polity
• Indian Science and Technology in the Eighteenth century
• Civil Disobedience and Indian Tradition
• The Beautiful Tree
• Bharatiya Chitta Manas and Kala

ಪುಸ್ತಕಗಳು https://www.sahityabooks.com/ ನಲ್ಲಿ ಲಭ್ಯವಿವೆ

ಈ ಸಂದರ್ಭದಲ್ಲಿ ಪುಸ್ತಕಗಳ ಸಂಪಾದಕರಾದ ಡಾ.ಜೆ.ಕೆ. ಬಜಾಜ್ ಮತ್ತು ಡಾ.ಎಂ.ಡಿ.ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು.

ಆರೆಸ್ಸೆಸ್ ಸಹ ಸರಕಾರ್ಯವಾಹರಾದ ಸುರೇಶ್ ಸೋನಿ ಮಾತನಾಡಿ ಧರ್ಮಪಾಲ್ ಅವರು ಅಧ್ಯಯನ ನಡೆಸಿದ ಮತ್ತು ಅನುಭವಕ್ಕೆ ತಂದುಕೊಂಡದ್ದನ್ನು ಅನುಷ್ಠಾನಗೊಳಿಸುವುದು ಬಹಳ ಕಠಿಣ. ಏನನ್ನು ಕಲಿಸಲಾಗುತ್ತಿದೆಯೋ ಅದಕ್ಕೂ ಹಿಂದೆ ಇದ್ದದ್ದಕ್ಕೂ ಬಹಳ‌ ವ್ಯತ್ಯಾಸವಿರುವುದನ್ನು ಧರ್ಮಪಾಲ್ ಗ್ರಹಿಸಿದರು. ಬ್ರಿಟಿಷ್ ಭಾರತಕ್ಕೆ ಬಂದಾಗ ಭಾರತ ಹೇಗಿತ್ತು ಎಂಬುದನ್ನು ಬ್ರಿಟಿಷರೇ ತಮ್ಮ ದಾಖಲೆಗಳಲ್ಲಿ ಬರೆದಿಟ್ಟಿದ್ದಾರೆ. ಅದನ್ನು ಧರ್ಮಪಾಲ್ ಅಧ್ಯಯನ ಕೃತಿಗಳನ್ನು ರಚಿಸಿದರು. ಅದನ್ನು ಓದುವಾಗ ಹೆಮ್ಮೆ ಮತ್ತು ದುಃಖ ಎರಡೂ ಏಕಕಾಲಕ್ಕಾಗುತ್ತದೆ‌. ಹಾಗಾಗಿಯೇ ಭಾರತವನ್ನು ಪುನರ್ ನಿರ್ಮಿಸುತ್ತೇವೆ ಎನ್ನುವವರು ಭಾರತ ಹೇಗಿತ್ತು ಎಂದು ತಿಳಿಯಬೇಕು ಎಂದು ಧರ್ಮಪಾಲ್ ಹೇಳುತ್ತಿದ್ದರು ಎಂದು ಸುರೇಶ ಸೋನಿ ನೆನಪಿಸಿಕೊಂಡರು.

ಆರೆಸ್ಸೆಸ್ ಸಹ ಸರಕಾರ್ಯವಾಹ ಸುರೇಶ್ ಸೋನಿ

ಪ್ರಾಚೀನ ಭಾರತದಲ್ಲಿ ಗ್ರಾಮಗಳು ಸ್ವಾವಲಂಬಿಗಳಾಗಿದ್ದವು. ಎಲ್ಲ ಸಮಸ್ಯೆಗಳನ್ನೂ ಗ್ರಾಮಸ್ಥರೇ ಬಗೆಹರಿಸಿಕೊಳ್ಳುತ್ತಿದ್ದರು. ಆದರೆ ಬ್ರಿಟಿಷರು ಬಂದ ನಂತರ ಪೊಲೀಸ್, ನ್ಯಾಯಾಲಯಗಳನ್ನು ಸ್ಥಾಪಿಸಿದರು. ಇಂದು ಮನುಷ್ಯನ ಜೀವನ‌ ಬ್ರಿಟಿಷರ ವ್ಯವಸ್ಥೆಯ ಸುತ್ತವೇ ಸುತ್ತುತ್ತಿದೆ. ಭಾರತೀಯ ಸಮಾಜ ಕ್ರಾಂತಿಯ ಬದಲಿಗೆ ವಿಕಾಸವನ್ನು ತನ್ನದಾಗಿಸಿಕೊಂಡಿದೆ‌. ಏಕೆಂದರೆ ಕ್ರಾಂತಿಯಿಂದ ಹಿಂದಿನದ್ದು ನಾಶವಾಗುತ್ತದೆ. ಪ್ರಾಚೀನ ಭಾರತದಲ್ಲಿ ಜಾತಿ‌ ಆಧಾರಿತ ಬೇಧಭಾವ ಇತ್ತು, ಮಹಿಳೆಯರಿಗೆ ಸ್ವಾತಂತ್ರ ಇರಲಿಲ್ಲ ಎಂಬ ಆರೋಪವಿದೆ. ಆದರೆ ದಾಖಲೆಗಳು ಬೇರೆಯದನ್ನೇ ಹೇಳುತ್ತದೆ ಎಂಬುದನ್ನು ಧರ್ಮಪಾಲ್ ಸಾಬೀತುಪಡಿಸಿದ್ದಾರೆ ಎಂದು ಸುರೇಶ ಸೋನಿ ಅಭಿಪ್ರಾಯಪಟ್ಟರು.

ಗೀತಾ ಧರ್ಮಪಾಲ್ ವಿಡಿಯೋ ಸಂದೇಶದ ಮೂಲಕ ಮಾತನಾಡಿ, ಧರ್ಮಪಾಲ್ ಅವರ ಕೃತಿಗಳು ಭಾರತವನ್ನು ಮರುಹುಡುಕುವಲ್ಲಿ ಮಹತ್ವದ್ದಾಗಿದೆ. ಪ್ರತಿಯೊಂದು ಜನಾಂಗಕ್ಕೆ ಅದರದ್ದೇ ಆದ ಉದ್ದೇಶವಿರುತ್ತದೆ ಎಂಬುದು ಧರ್ಮಪಾಲ್ ಅವರ ಬಲವಾದ ನಂಬಿಕೆಯಾಗಿತ್ತು. ಭಾರತೀಯ ಜನಾಂಗದ ಉದ್ದೇಶವೇನು ಎಂಬುದನ್ನು ನಾವು ಕಂಡುಕೊಳ್ಳಬೇಕಿದೆ.

ಧರ್ಮಪಾಲ್ ಅವರು ತಮ್ಮ 7ನೇ ವಯಸ್ಸಿನಲ್ಲೇ ಮಹಾತ್ಮ ಗಾಂಧಿಯವರಿಂದ ಪ್ರಭಾವಿತರಾಗಿದ್ದರು. ಮನೆಯವರ ತೀವ್ರ ವಿರೋಧದ ನಡುವೆ ತಮ್ಮ ಬಿಎಸ್‌ಸಿ ಪದವಿಯನ್ನು ಮೊಟಕುಕೊಳಿಸಿ ಕ್ವಿಟ್ ಇಂಡಿಯಾ ಚಳುವಳಿಗೆ ಧುಮುಕಿದರು. ಆ ವೇಳೆ ಸೆರೆಮನೆವಾಸವಾಯಿತು. ಸೆರೆಯಿಂದ ಹೊರಬಂದ ನಂತರ ಚುಳುಚಳಿಯಲ್ಲಿ ಸಕ್ರಿಯವಾಗದೆ ಉತ್ತರಾಖಂಡದ ಹಳ್ಳಿಯೊಂದರ ಉತ್ಥಾನಕ್ಕೆ ಕೆಲಸ ಮಾಡಿದರು. ಏಕೆಂದರೆ ಉತ್ತಮ ಭಾರತದ ನಿರ್ಮಾಣಕ್ಕೆ ಗ್ರಾಮೀಣ ಸಮುದಾಯ ಸಶಕ್ತವಾಗಬೇಕೆಂದು ಅರಿತಿದ್ದರು.
ಭಾರತದ ವಿಭಜನೆ ವೇಳೆ ಪಾಕಿಸ್ಥಾನದಿಂದ ಬಂದಿದ್ದ ನಿರಾಶ್ರಿತರಿಗಾಗಿ ದುಡಿದರು.
ಚೀನಾ ಜೊತೆಗಿನ ಸಂಬಂಧವನ್ನು ನಿಭಾಯಿಸುವಲ್ಲಿ ಅಂದಿನ ಪ್ರಧಾನಮಂತ್ರಿ ನೆಹರು ಅವರು ವಿಫಲರಾಗಿದ್ದಾರೆ, ಹಾಗಾಗಿ ಅವರು ರಾಜೀನಾಮೆ ನೀಡಬೇಕು ಎಂದು 1962ರಲ್ಲಿ ಧರ್ಮಪಾಲ್ ಸಂಸತ್ತಿಗೆ ಓಪನ್ ಲೆಟರ್ ಬರೆದಿದ್ದರು. ಪತ್ರ ಬರೆದ ಕಾರಣಕ್ಕಾಗಿ ಧರ್ಮಪಾಲ್ ಅವರನ್ನು ತಿಹಾರ್ ಜೈಲಿಗೆ ಕಳುಹಿಸಿದರು. ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾದ ಅವಮಾನವದು ಎಂದು ಗೀತಾ ಧರ್ಮಪಾಲ್ ನೆನಪಿಸಿಕೊಂಡರು.

ಸರಣಿಯ ಸಂಪಾದಕರಾದ ಡಾ.ಜೆ.ಕೆ.ಬಜಾಜ್, ಭಾರತೀಯ ರಾಜಕಾರಣದ ಮೂಲ ಪಂಚಾಯ್ತಿಗಳು. ಭಾರತೀಯ ಸಂವಿಧಾನದಲ್ಲಿ ಗ್ರಾಮ ಹಾಗೂ ವ್ಯಕ್ತಿಯನ್ನು ಮುಖ್ಯವಾಗಿ ಪರಿಗಣಿಸಿಲ್ಲ. ಗಾಂಧಿ ಚಿಂತನೆಗೆ ಇದು ವಿರುದ್ಧವಾದದ್ದು ಎಂಬ ಅಭಿಪ್ರಾಯ ಕಾನ್‌ಸ್ಟಿಟ್ಯೂಟ್ ಅಸೆಂ ಚರ್ಚೆಗಳಲ್ಲಿ ವ್ಯಕ್ತವಾಗಿತ್ತು. ಪ್ರಾಚೀನ ಭಾರತದಲ್ಲಿ ಪಂಚಾಯತ್ ವ್ಯವಸ್ಥೆ ಹೇಗಿತ್ತು ಎಂಬುದು ಧರ್ಮಪಾಲ್ ಅವರ Panchayat Raj as the basis of Indian Polity ಪುಸ್ತಕದಲ್ಲಿ ಕಾಣಬರುತ್ತದೆ.

ಅದೇ ರೀತಿ ಅಸಹಕಾರ ಚಳುವಳಿಯ ಪ್ರಾರಂಭ ಗಾಂಧಿಗಿಂತ ಮುಂಚೆಯೇ ಆಗಿತ್ತು. 18ನೇ ಶತಮಾನದಲ್ಲೇ ಅದರ ಉದಾಹರಣೆಗಳು ಕಾಣಸಿಗುತ್ತವೆ. ಯಾವುದೇ ಜಿಲ್ಲೆಯ ಇತಿಹಾಸವನ್ನು ಅಧ್ಯಯನ ಮಾಡಿದರೂ ಬ್ರಿಟಿಷ್ ಮತ್ತು ಬ್ರಿಟಿಷ್ ಪೂರ್ವದಲ್ಲಿ ಸಹಕಾರ ಚಳುವಳಿ ಇದ್ದ ಬಗ್ಗೆ ದಾಖಲೆಗಳಿವೆ. ಈ ಎಲ್ಲ ಮಾಹಿತಿಗಳು civil disobedience and Indian traditionನಲ್ಲಿ ಸಿಗುತ್ತದೆ. Indian science and technology in the eighteenth century ಪುಸ್ತಕವು ಬ್ರಿಟಿಷರು ಭಾರತಕ್ಕೆ ಬರುವ ಮುನ್ನವೇ ಇಲ್ಲಿನ ವಿಜ್ಞಾನ ಎಷ್ಟು ಮುಂದುವರೆದಿತ್ತು ಎಂಬುದನ್ನು ತಿಳಿಸುತ್ತದೆ.

ಭಾರತವು ಒಂದು ಸುಂದರ ವೃಕ್ಷವಾಗಿತ್ತು. ಅದನ್ನು ಮರುಅನ್ವೇಷಿಸಬೇಕೆಂಬುದು ಗಾಂಧಿ ಬಯಕೆಯಾಗಿತ್ತು. ಪ್ರಚೀನ ಭಾರತದ ಶಿಕ್ಷಣ ವ್ಯವಸ್ಥೆ, ಉದ್ಯೋಗ ಹಾಗೂ ಇತರ ಮೂಲಭೂತ ಅಂಶಗಳ ಬಗ್ಗೆ ಹಲವು ದಶಕಗಳ ಬಗ್ಗೆ ಅಧ್ಯಯನ ನಡೆಸಿ The Beautiful Tree ಎಂಬ ಪುಸ್ತಕ ಬರೆದರು. ಭಾರತದಲ್ಲಿದ್ದ ಉತ್ತಮ ವ್ಯವಸ್ಥೆಯನ್ನು ಬ್ರಿಟಿಷರು ಹೇಗೆ ನಾಶಪಡಿಸಿದರು ಎಂಬುದು ಇದರಲ್ಲಿ ತಿಳಿಯುತ್ತದೆ.

ಈ ಕಾರ್ಯಕ್ರಮದಲ್ಲಿ ಹಿರಿಯ ಸಂಶೋಧಕರು, ಶಿಕ್ಷಣ ಕ್ಷೇತ್ರದ ದಿಗ್ಗಜರು, ಸರ್ಕಾರದ ಉನ್ನತ ಅಧಿಕಾರಿಗಳು, ನೀತಿ ನಿರೂಪಕರು ಭಾಗವಹಿಸಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.