ಮತಾಂತರವನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಬೆಂಗಳೂರಿನಲ್ಲಿ ಇಂದು ನಡೆದ ಪ್ರತಿಭಟನೆಯಲ್ಲಿ ಅನೇಕ ಮಠಾದೀಶರು, ಸಾಹಿತಿಗಳು ಹಾಗೂ ಚಿಂತಕರು ಪಾಲ್ಗೊಂಡಿದ್ದರು. ಎಂ. ಜಿ. ರೋಡ್ ಬಳಿಯ ಗಾಂಧಿ ಪ್ರತಿಮೆಯ ಎದುರು, ಸಿಟಿಜನ್ಸ್ ಫಾರ್ ಹಾರ್ಮೊನಿ ಸಂಘಟನೆ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸಾಹಿತಿಗಳಾದ ಡಾ| ಚಿದಾನಂದ ಮೂರ್ತಿ, ದೊಡ್ಡರಂಗೇಗೌಡ, ಮಠಾಧೀಶರುಗಳಾದ ಆದಿಚುಂಚನಗಿರಿಯ ಶ್ರೀ ಶೇಖರ ಸ್ವಾಮೀಜಿ, ಶ್ರೀ  ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಮುಂತಾದವರು ಮಾತನಾಡಿ, ಮತಾಂತರದಿಂದಾಗಿ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆಯಾಗಿದೆ. ಅದನ್ನು ತಡೆಗಟ್ಟಲು ಸಾಧ್ಯವಾಗದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

 

Leave a Reply

Your email address will not be published.

This site uses Akismet to reduce spam. Learn how your comment data is processed.