The maarch demading anti-conversion law in Karnataka

Bangalore: Citizens for Harmony, a forum to create awareness among all walks of social life demanded to bring an anti-conversion law in Karnataka. In a jaatha(Maarch), lead by noted littérateurs Dr Doddarange Gouda, Dr Chidananda Murthy, Dr Sumatindra Nadig and several religious leaders, thinkers and hundreds of supporters went on for a Maarch from Mahatma Gangdhy statue at MG Road to Rajbhavan.

The maarch demading anti-conversion law in Karnataka

Sri Soumyanathanada Swamiji of Adichunchanagiri Matt, Sri Shadakshara Muni Swamiji of Adijambava Matt, Hiriyur, Sri Shankarappa Chief of Madiga Dandora Karnataka, Sri Husenappa Gangavathi, General Secretary of Madiga Dandora Karnataka, Sri Bharati Reddy, Sri Satoishchandra, Sri Prasanna Deshpande, advocates of Highcourt and several other leaders of different sectors were participated in this March. A memorandum was submitted to the Governor of Karnataka. Nearly 300 thinkers, intellectuals, social activists participated in this Maarch organised by Citizens for Harmony.

Kannada text of memorandum submitted to the Governor is given below.

ಇವರಿಗೆ:

ಸನ್ಮಾನ್ಯ ಶ್ರೀ ಹಂಸರಾಜ ಭಾರಧ್ವಾಜ್

ಮಾನ್ಯ ರಾಜ್ಯಪಾಲರು

ಕರ್ನಾಟಕ

ಕರ್ನಾಟಕ ಜನತೆಯ ಪರವಾಗಿ ಒಕ್ಕೊರಲ ಮನವಿ.

ಕರ್ನಾಟಕದಲ್ಲಿ ಮತಾಂತರದ ಬಹುರೂಪದ ಸಮಸ್ಯೆಗಳ ವ್ಯಾಪಕ ಚರ್ಚೆ ನಡೆದಿದೆ. ವಿದೇಶಗಳಿಂದ ಹರಿದು ಬರುವ ಹೇರಳ ಹಣ ಸಂಪನ್ಮೂಲವನ್ನು ಬಳಸಿ ಮುಗ್ಧ, ಅಮಾಯಕರನ್ನು ಆಸೆ, ಆಮಿಷಗಳ ಒತ್ತಡದಿಂದ ಮತಾಂತರ ಮಾಡುವ ಕ್ರಿಯೆ ವ್ಯಾಪಕವಾಗಿ ನಡೆಯುತ್ತಿದೆ.

ಹೇಗಾದರೂ ಸಂಖ್ಯಾಬಲ ಹೆಚ್ಚಿಸಿಕೊಳ್ಳಬೇಕೆಂಬ ಉದ್ದೇಶದಿಂದ ಮತಾಂತರಕ್ಕೆ ತೀವ್ರಗತಿ ತರಲು ಹಿಂದೂ ದೇವ-ದೇವತೆಗಳನ್ನು ಅವಹೇಳನ ಮಾಡುವುದು ಹೆಚ್ಚಾಗುತ್ತಿದೆ. ಹೀಗಾಗಿ ಮತಾಂತರ ಇಂದು ಸಾಮಾಜಿಕ ವೈಷಮ್ಯವಾಗಿ ಕಾಡಲಾರಂಭಿಸಿದೆ.

ಈ ಹಿನ್ನೆಲೆಯಲ್ಲಿ ಕನ್ನಡ ನಾಡಿನ ೨೦೦ ಕ್ಕೂ ಹೆಚ್ಚು ಮಠಾಧೀಶರು, ಧಾರ್ಮಿಕ ನೇತಾರರು, ಸಾಮಾಜಿಕ ನೇತಾರರು, ಸಾಹಿತಿಗಳು, ಚಿಂತಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಬಲವಂತದ ಮತಾಂತರವನ್ನು ನಿಷೇಧಿಸುವ ಕಾಯ್ದೆಯನ್ನು ತುರ್ತಾಗಿ ಜಾರಿಗೆ ತರುವಂತೆ ಒತ್ತಾಯಿಸಿ ಪ್ರತ್ಯೇಕ ಪತ್ರಗಳನ್ನು ಬರೆದಿದ್ದಾರೆ. ಆ ಎಲ್ಲ ಪತ್ರಗಳನ್ನು ಸಂಕಲಿತ ರೂಪದಲ್ಲಿ ತಮ್ಮ ಅವಗಾಹನೆಗಾಗಿ ಸಲ್ಲಿಸಲಾಗುತ್ತಿದೆ.

ನಾಡಿನ ಸಾಮಾಜಿಕ ಕಳಕಳಿಯ ಧ್ವನಿಯನ್ನು ತಾವು ಸ್ವಾಗತಿಸಿ ತಮ್ಮ ಬೆಂಬಲದ ಸ್ವರವನ್ನು ಜೊತೆಗೂಡಿಸುತ್ತೀರೆಂಬುದು ನಮ್ಮೆಲ್ಲರ ಅಭಿಲಾಷೆ.

ಇತ್ತೀಚೆಗೆ ಕರ್ನಾಟಕ ಸರಕಾರ ನೇಮಿಸಿದ್ದ ನ್ಯಾ|| ಸೋಮಶೇಖರ ಆಯೋಗ ಕೂಡ ಒತ್ತಾಯದ ಮತಾಂತರವನ್ನೂ ನಿಷೇಧಿಸಬೇಕೆಂದು ಶಿಫಾರಸ್ಸು ಮಾಡಿದೆ. ಈಗಾಗಲೇ ಮಧ್ಯಪ್ರದೇಶ, ಒರಿಸ್ಸಾಗಳಲ್ಲಿ ಈ ತರಹ ಕಾಯಿದೆ ಹಲವಾರು ದಶಕಗಳಿಂದ ಜಾರಿಯಲ್ಲಿದೆ. ೧೯೭೭ ರಲ್ಲಿಯೇ ಸರ್ವೋಚ್ಛ ನ್ಯಾಯಾಲಯದ ಸಂವಿಧಾನ ಪೀಠ ಅಕ್ರಮ, ಆಸೆ, ಆಮಿಷ, ಭಯ, ಪ್ರಲೋಭನೆಗಳಿಂದ ನಡೆಸುವ ಮತಾಂತರ ಸಂವಿಧಾನ ಬಾಹಿರ ಎಂದು ಹೇಳಿದೆ.

ಅತ್ಯಂತ ಅನುಭವಿಗಳಾಗಿರುವ ತಾವು ಈ ಎಲ್ಲ ಸಂಗತಿಗಳನ್ನು ಪರಿಶೀಲಿಸಿ ಒತ್ತಾಯದ ಮತಾಂತರವನ್ನು ನಿಷೇಧಿಸುವ ಆ ಮೂಲಕ ಸಾಮಾಜಿಕ ವೈಷಮ್ಯದ ವಾತಾವರಣವನ್ನು ತಿಳಿಗೊಳಿಸುವ ಕಾಯಕಕ್ಕೆ ಚಾಲನೆ ಕೊಡಬೇಕೆಂದು ನಮ್ಮೆಲ್ಲರ ಸವಿನಯದ ಪ್ರಾರ್ಥನೆಯಾಗಿದೆ.

ದಯವಿಟ್ಟು ಈ ಬಗ್ಗೆ ಶೀಘ್ರ ಕ್ರಮಕೈಗೊಳ್ಳಿ.

ವಂದನೆಗಳೊಂದಿಗೆ,

ಡಾ|| ಎಂ.ಚಿದಾನಂದ ಮೂರ್ತಿ         ಡಾ|| ದೊಡ್ಡರಂಗೇಗೌಡ         ಡಾ|| ಸುಮತೀಂದ್ರ ನಾಡಿಗ್

Leave a Reply

Your email address will not be published.

This site uses Akismet to reduce spam. Learn how your comment data is processed.