ಸಿಐಎಸ್ಎಫ್ (Central Industrial Security Force) ಸಂಸ್ಥಾಪನಾ ದಿನವನ್ನು ಪ್ರತಿವರ್ಷ ಮಾರ್ಚ್ 10 ರಂದು ಆಚರಿಸಲಾಗುತ್ತದೆ. 1969 ರ ಈ ದಿನದಂದು ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಅಸ್ತಿತ್ವಕ್ಕೆ ಬಂತು. ಸಿಐಎಸ್ಎಫ್ ಭಾರತದ ಪ್ರಮುಖ ಸಶಸ್ತ್ರ ಪೊಲೀಸ್ ಪಡೆಯಾಗಿದ್ದು, ಇದು ದೇಶಾದ್ಯಂತ ಅನೇಕ ಪ್ರಮುಖ ಸ್ಥಳಗಳು ಮತ್ತು ಯೋಜನೆಗಳಿಗೆ ಭದ್ರತೆಯನ್ನು ಒದಗಿಸುತ್ತದೆ.ಸಾರ್ವಜನಿಕ ವಲಯದ ಸಂಸ್ಥೆಗಳ ನೌಕರರಿಗೆ ರಕ್ಷಣೆ ಮತ್ತು ಸುರಕ್ಷತೆ ನೀಡುವುದು ಮತ್ತು ಆಸ್ತಿಯನ್ನು ಸಂರಕ್ಷಿಸುವ ಸಲುವಾಗಿ ಈ ಪಡೆಯನ್ನು ಸ್ಥಾಪಿಸಲಾಗಿದೆ.


ಸಿಐಎಸ್ಎಫ್ ಎಂದರೇನು?
ಸಿಐಎಸ್ಎಫ್ ಗೃಹ ಸಚಿವಾಲಯದ ನೇತೃತ್ವದಲ್ಲಿ ಬರುತ್ತದೆ. ಇದು ವಿಮಾನ ನಿಲ್ದಾಣಗಳು, ಬಂದರುಗಳು, ವಿದ್ಯುತ್ ಸ್ಥಾವರಗಳು ಮತ್ತು ಇತರ ಮೂಲಸೌಕರ್ಯ ಯೋಜನೆಗಳಂತಹ ಸ್ಥಳಗಳನ್ನು ರಕ್ಷಿಸುತ್ತದೆ. ಭಯೋತ್ಪಾದಕ ದಾಳಿಗಳು, ಅಪಹರಣಗಳು, ಬಾಂಬ್ ಬೆದರಿಕೆಗಳು ಹೀಗೆ ಕಷ್ಟ ಪರಿಸ್ಥಿತಿಗಳನ್ನು ನಿಭಾಯಿಸಲು ಸಿಐಎಸ್ಎಫ್ ವಿಶೇಷ ಕೌಶಲ್ಯ ಮತ್ತು ತರಬೇತಿಯನ್ನು ಹೊಂದಿದೆ.


ಇತಿಹಾಸ
ಮಾರ್ಚ್ 10, 1969 ರಂದು ಸುಮಾರು 3,129 ಸಿಬ್ಬಂದಿಯೊಂದಿಗೆ ಸಂಸತ್ತಿನ ಕಾಯ್ದೆಯಡಿಯಲ್ಲಿ ಸಿಐಎಸ್‌ಎಫ್‌ ಅನ್ನು ಸ್ಥಾಪಿಸಲಾಯಿತು. ಈ ಹೆಸರು ಸೂಚಿಸುವಂತೆ ಇದು ದೇಶದ ಕೈಗಾರಿಕಾ ಸಂಸ್ಥೆಗಳ ರಕ್ಷಣೆ ಮತ್ತು ಸುರಕ್ಷತೆಗಾಗಿ ಇದನ್ನು ರಚಿಸಲಾಗಿದೆ. ಸಿಐಎಸ್ಎಫ್ 12 ಮೀಸಲು ಬೆಟಾಲಿಯನ್ಗಳು, 8 ತರಬೇತಿ ಸಂಸ್ಥೆಗಳು ಮತ್ತು 63 ಇತರ ಅಂಗಗಳನ್ನು ಹೊಂದಿದೆ. ನಿಯಮದ ಪ್ರಕಾರ, ಸಿಐಎಸ್ಎಫ್ ಸಂಸ್ಥೆಗಳ ಸಿಬ್ಬಂದಿ, ಆಸ್ತಿ ಮತ್ತು ಸಂಸ್ಥೆಗಳ ಸುರಕ್ಷತೆಗೆ ಭದ್ರತೆ ಒದಗಿಸುತ್ತದೆ.


ಸಿಐಎಸ್ಎಫ್ ಸವಾಲಿನ ಸಂದರ್ಭಗಳನ್ನು ನಿಭಾಯಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಇದು ಆಧುನಿಕ ಶಸ್ತ್ರಾಸ್ತ್ರಗಳು, ವಾಹನಗಳು ಮತ್ತು ಭದ್ರತಾ ಉಪಕರಣಗಳನ್ನು ಹೊಂದಿದೆ. ಸ್ಫೋಟಕಗಳು ಮತ್ತು ಅಕ್ರಮ ವಸ್ತುಗಳನ್ನು ಪತ್ತೆಹಚ್ಚಲು ತರಬೇತಿ ಪಡೆದ ವಿಶೇಷ ಶ್ವಾನ ಘಟಕವನ್ನು ಸಿಐಎಸ್ಎಫ್ ಹೊಂದಿದೆ.
ಸಿಐಎಸ್ಎಫ್ ಬಾಹ್ಯಾಕಾಶ ಇಲಾಖೆ, ಪರಮಾಣು ಇಂಧನ ಇಲಾಖೆ, ವಿಮಾನ ನಿಲ್ದಾಣಗಳು, ಐತಿಹಾಸಿಕ ಸ್ಮಾರಕಗಳು ಮತ್ತು ಭಾರತೀಯ ಆರ್ಥಿಕತೆಯ ಮೂಲ ಕ್ಷೇತ್ರಗಳಾದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ವಿದ್ಯುತ್, ಕಲ್ಲಿದ್ದಲು, ಉಕ್ಕು ಮತ್ತು ಗಣಿಗಾರಿಕೆ ಸೇರಿದಂತೆ ವಿವಿಧ ಪ್ರಮುಖ ಸಂಸ್ಥೆಗಳಿಗೆ ಭದ್ರತೆಯನ್ನು ಒದಗಿಸುತ್ತದೆ.


ಮಹತ್ವ
ಸಿಐಎಸ್ಎಫ್ ದೇಶದ ಕೆಲವು ಪ್ರಮುಖ ಮತ್ತು ಸೂಕ್ಷ್ಮ ಸ್ಥಳಗಳನ್ನು ರಕ್ಷಿಸುತ್ತದೆ. ದೇಶದ ಮೂಲಸೌಕರ್ಯ ಮತ್ತು ಸ್ವತ್ತುಗಳನ್ನು ರಕ್ಷಿಸುವಲ್ಲಿ ಅದರ ಪಾತ್ರವು ರಾಷ್ಟ್ರೀಯ ಭದ್ರತೆಗೆ ನಿರ್ಣಾಯಕವಾಗಿದೆ. ಸಿಐಎಸ್ಎಫ್ ಸಂಸ್ಥಾಪನಾ ದಿನವು ಕಠಿಣ ಸಂದರ್ಭಗಳಲ್ಲಿ ತನ್ನ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಪಡೆಗಳ ಧೈರ್ಯ ಮತ್ತು ಸಮರ್ಪಣೆಯನ್ನು ಗೌರವಿಸುವ ಮೂಲಕ ಈ ದಿನದ ಆಚರಣೆ ಆಗುತ್ತದೆ.

ಸಿಐಎಸ್ಎಫ್ ರೈಸಿಂಗ್ ಡೇ ಸ್ಮರಣಾರ್ಥ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ. ಪಡೆಗಳ ಸಿಬ್ಬಂದಿ ಮೆರವಣಿಗೆಗಳು, ಕ್ರೀಡಾಕೂಟಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಇತರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಈ ದಿನವು ಸಾರ್ವಜನಿಕರಿಗೆ ಸಿಐಎಸ್ಎಫ್ ಪಡೆಗಳನ್ನು ಭೇಟಿಯಾಗಲು ಮತ್ತು ದೇಶಕ್ಕೆ ಅವರು ನೀಡಿದ ಕೊಡುಗೆಗಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಲು ಅನುವು ಮಾಡಿಕೊಡಲಾಗುತ್ತದೆ. ಸಿಐಎಸ್ಎಫ್ ಸಂಸ್ಥೆಗೆ ಅಸಾಧಾರಣ ಕೊಡುಗೆಗಳನ್ನು ನೀಡಿದ ಅತ್ಯುತ್ತಮ ಸಿಬ್ಬಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾತ್ತದೆ. ಭದ್ರತೆಯನ್ನು ಒದಗಿಸುವ ಮತ್ತು ರಾಷ್ಟ್ರದ ನಿರ್ಣಾಯಕ ಸ್ವತ್ತುಗಳನ್ನು ರಕ್ಷಿಸುವ ಸಿಐಎಸ್ಎಫ್‌ನ ಬದ್ಧತೆಯನ್ನು ನೆನಪಿಸುತ್ತದೆ.

Leave a Reply

Your email address will not be published.

This site uses Akismet to reduce spam. Learn how your comment data is processed.