ರಾಷ್ಟ್ರೀಯ ಸ್ವಯಂಸೇವಕ ಸಂಘ, ಕರ್ನಾಟಕ

ಭಾವಪೂರ್ಣ ಶ್ರದ್ಧಾಂಜಲಿ

ಕರ್ನಾಟಕದ ಜೈನ ಸಮುದಾಯದ ಹಿರಿಯ ಗುರುಗಳಾಗಿದ್ದ ಶ್ರವಣಬೆಳಗೊಳದ ಮಠದ ಧರ್ಮಾಚಾರ್ಯರಾದ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಯವರ ಅಗಲಿಕೆ ಅತ್ಯಂತ ದುಃಖಕರ.

ಹಲವಾರು ಮಹಾಮಸ್ತಕಾಭಿಷೇಕಗಳನ್ನು ನೆರವೇರಿಸಿದ್ದ ಅವರು ಐದು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿಕೊಂಡಿದ್ದರು. ಅಷ್ಟೇ ಅಲ್ಲದೆ ಜೈನ ಮತದ ನವೋನ್ನತಿಗಾಗಿ, ಭಗವಾನ್ ಮಹಾವೀರರ ವಿಚಾರಗಳ ಅನುಷ್ಠಾನಕ್ಕಾಗಿ ಅಹರ್ನಿಶಿ ದುಡಿದವರು.

ಶ್ರವಣಬೆಳಗೊಳವನ್ನು ಜೈನ ತತ್ತ್ವಶಾಸ್ತ್ರದ ಪ್ರಮುಖ ಕೇಂದ್ರವಾಗಿಸುವಲ್ಲಿ ಅವರ ಪಾತ್ರ ಹಿರಿದು. ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದ ಅವರು ಅಲ್ಲಿಗೇ ನಿಲ್ಲದೆ ಅದರ ಕಲಿಕೆಗೆ, ಅಭ್ಯುದಯಕ್ಕೆ ವ್ಯವಸ್ಥೆ ಮಾಡಿದರು, ಆ ಮೂಲಕ ಪ್ರಾಕೃತ ಭಾಷೆಯ ಪುನರುತ್ಥಾನಕ್ಕೆ ಶ್ರಮಿಸಿದರು. ಅತ್ಯಂತ ಸಮಾಜಮುಖಿಯಾಗಿದ್ದ ಅವರು ಶಿಕ್ಷಣ, ಆರೋಗ್ಯ ಮೂಲಭೂತ ಸೌಕರ್ಯಗಳನ್ನು ಗ್ರಾಮೀಣ ಜನರಿಗೆ ತಲುಪಿಸಲು ಶ್ರಮ ವಹಿಸಿದ್ದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ನಿರಂತರ ಸಂಪರ್ಕ ಮತ್ತು ಒಡನಾಟ ಹೊಂದಿದ್ದ ಅವರು ವಿಶ್ವ ಹಿಂದೂ ಪರಿಷತ್ತಿನ ಅನೇಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ರಾಮಮಂದಿರ ಹೋರಾಟದ ಸಂದರ್ಭದಲ್ಲಿ ಅವರು ನೀಡಿದ ಬೆಂಬಲ ಸ್ಮರಣೀಯವಾದುದು. ರಾಷ್ಟ್ರದ, ಧರ್ಮದ ಪರವಾದ ಅವರ ಅಚಲವಾದ ನಿಲುವು, ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸಿದ ಅವರ ದಾರಿ ಎಂದಿಗೂ ಪ್ರೇರಣೀಯ.

ಅವರ ಜಿನೈಕ್ಯರಾದ ದುಃಖವನ್ನು ಭರಿಸುವ ಶಕ್ತಿಯನ್ನು ಸಮಸ್ತ ಹಿಂದೂ ಸಮಾಜಕ್ಕೆ ಹಾಗೂ ಅವರ ಅಪಾರ ಅನುಯಾಯಿಗಳಿಗೆ ಆ ಭಗವಂತನು ನೀಡಲಿ ಮತ್ತು ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

ವಿ. ನಾಗರಾಜ್
ಕ್ಷೇತ್ರೀಯ ಸಂಘಚಾಲಕರು
ರಾಷ್ಟ್ರೀಯ ಸ್ವಯಂಸೇವಕ ಸಂಘ

ಬೆಂಗಳೂರು
23.03.2023

Leave a Reply

Your email address will not be published.

This site uses Akismet to reduce spam. Learn how your comment data is processed.