An article by Du Gu Lakshman, published in Hosadigantha Daily dated August 05 – 2013

ಪವಿತ್ರ ರಂಜಾನ್ ಇನ್ನೇನು ಒಂದೆರಡು ದಿನಗಳಲ್ಲಿ ಮುಗಿಯಲಿದೆ. ಆದರೆ ರಂಜಾನ್ ಮಾಸದ ಆ ಕಹಿ ನೆನಪುಗಳನ್ನು ಹೇಗೆ ಮರೆಯಲಿ?

ರಂಜಾನ್ ಹಬ್ಬದ ಬಗ್ಗೆ ಅದನ್ನು ಆಚರಿಸುವ ಮುಸ್ಲಿಂ ಸಮುದಾಯದ ಪ್ರಮುಖರೇ ಹೇಳುವ ಮಾತುಗಳನ್ನು ಒಮ್ಮೆ ಸ್ಮರಿಸಿಕೊಳ್ಳೋಣ. ‘ರಂಜಾನ್ ತಿಂಗಳು ಡಿವೈನ್ ರೆಫ್ರೆಶಿಂಗ್ ಕೋರ್ಸ್ ಆಗಿದೆ. ಪ್ರತಿವರ್ಷ ಮನುಷ್ಯನ ಪ್ರಯತ್ನಗಳಿಗೆ ಸರಿಯಾದ ದಿಕ್ಕು ತೋರಿಸಲು ಮತ್ತು ಅವನಿಗೆ ಹೊಸ ಜೀವನ ಹಾಗೂ ತಾಜಾತನವನ್ನು ನೀಡಲು ಅದು ಬರುತ್ತದೆ. ರಂಜಾನ್ ತಿಂಗಳ ಉಪವಾಸ ವ್ರತ, ಕಿಯಾಮುಲ್ಲೈಲ್, ನಮಾರh, ದಾನಧರ್ಮ, ಕರುಣೆ, ಕುರ್‌ಆನ್ ಪಾರಾಯಣ ಇತ್ಯಾದಿಗಳಿಂದ ಮೇಲೆ ತಿಳಿಸಲಾದ ಮೂಲಭೂತ ಬೇಡಿಕೆಗಳು ಪೂರ್ಣಗೊಳ್ಳುತ್ತವೆ. ಮನುಷ್ಯನಲ್ಲಿ ತಕ್ವಾ (ದೇವಭಯ) ಉಂಟಾಗಲೆಂದು ರಂಜಾನ್ ತಿಂಗಳಲ್ಲಿ ಉಪವಾಸವನ್ನು ಕಡ್ಡಾಯಗೊಳಿಸಲಾಗಿದೆ…’ – ಹೀಗೆಂದು ವ್ಯಾಖ್ಯಾನಿಸಿರುವವರು ಜಮಾತ್-ಇ-ಹಿಂದ್ ರಾಜ್ಯಾಧ್ಯಕ್ಷರಾದ ಮುಹಮ್ಮದ್ ಅಬ್ದುಲ್ಲಾ ಜಾವೇದ್. ರಂಜಾನ್ ಕುರಿತು ಮಂಗಳೂರಿನ ‘ಸನ್ಮಾರ್ಗ’ ವಾರಪತ್ರಿಕೆ ಒಂದು ಸುಂದರವಾದ ವಿಶೇಷಾಂಕವನ್ನು ಹೊರತಂದಿದೆ. ‘ರಂಜಾನ್ – ಬದುಕಿಗೊಂದು ನಿಯಂತ್ರಣ’ ಎಂಬುದು ಆ ವಿಶೇಷಾಂಕದ ಮುಖಪುಟದ ಶೀರ್ಷಿಕೆ. ಸಂಪಾದಕೀಯ ಪುಟದಲ್ಲಿ ‘ನಿಯಂತ್ರಣರಹಿತ ಜಗತ್ತು ಮತ್ತು ರಂಜಾನ್’ ಎಂಬ ಶಿರೋನಾಮೆ ಹೊತ್ತ ಸಂಪಾದಕೀಯದಲ್ಲಿರುವ ಕೆಲವು ವಾಕ್ಯಗಳು: ‘…ಜಾಗತಿಕವಾಗಿ, ಬಹಾಯಿ ಕ್ಯಾಲೆಂಡರ್, ಹಿಂದೂ, ಪರ್ಶಿಯನ್, ಜೂಲಿಯನ್, ಚೈನೀಸ್, ಥೈಸೋಲಾರ್ ಸಹಿತ ಹತ್ತಾರು ನಮೂನೆಯ ಕ್ಯಾಲೆಂಡರ್‌ಗಳಿವೆ. ಆದರೆ ಯಾವ ಕ್ಯಾಲೆಂಡರ್‌ನಲ್ಲೂ ಮನುಷ್ಯರ ಸಂಸ್ಕರಣೆಗಾಗಿ ಒಂದು ತಿಂಗಳನ್ನು ಪೂರ್ತಿಯಾಗಿ ಮೀಸಲಿಟ್ಟಿದ್ದಿಲ್ಲ. ಆದರೆ ಇಸ್ಲಾಮೀ ಕ್ಯಾಲೆಂಡರ್ ಕೇವಲ ಸಂಸ್ಕರಣೆಗೆಂದೇ ರಂಝಾನ್ ಎಂಬ ಒಂದು ತಿಂಗಳನ್ನು ಇಡಿಯಾಗಿ ತೆಗೆದಿರಿಸಿದೆ. ಬದುಕಿಗೊಂದು ನಿಯಂತ್ರಣ ಕಲ್ಪಿಸುವುದು, ಕಾಡಿನಿಂದಲೋ ನಾಡಿನಿಂದಲೋ ದರೋಡೆ ಮಾಡುವವರನ್ನು ಸಂಸ್ಕರಿಸಿ ದೇವದಾಸರನ್ನಾಗಿಸುವುದು ಈ ತಿಂಗಳ ಉzಶ… ಇವತ್ತಿನ ನಿಯಂತ್ರಣರಹಿತ ಜಗತ್ತಿನ ಪಾಲಿಗೆ ರಂಝಾನ್ ಇಷ್ಟವಾಗಬೇಕಾದದ್ದು ಅದರ ಈ ಎಲ್ಲಾ ಮೌಲ್ಯಯುತ ಕಾರಣಗಳಿಗಾಗಿಯೇ…’

ಪ್ರಜಾವಾಣಿಯ ಜು.೧೯ರ ಸಂಚಿಕೆಯಲ್ಲಿ ರಂಝಾನ್ ಕುರಿತ ಲೇಖನದಲ್ಲಿ ದೂರದರ್ಶನದ ನಿವೃತ್ತ ನಿರ್ದೇಶಕ ಜಿ.ಎಂ.ಶಿರಹಟ್ಟಿ ವ್ಯಕ್ತಪಡಿಸಿರುವ ಅಭಿಪ್ರಾಯ ಹೀಗಿದೆ: ‘ನಮ್ಮ ಧರ್ಮದಲ್ಲಿ ಹೇಳಿರುವ ನಿಯಮಗಳನ್ನು ಸರಿಯಾಗಿ ಅರ್ಥೈಸಿಕೊಳ್ಳುವ ಅವಶ್ಯಕತೆಯಿದೆ. ೩೦ ದಿನ ಉಪವಾಸ ಎಂದರೆ ಅದು ಹೊಟ್ಟೆಯ ಉಪವಾಸವಲ್ಲ. ನಾನು ಅಂದುಕೊಂಡಂತೆ ನಮ್ಮೆಲ್ಲ ಇಂದ್ರಿಯಗಳಿಗೂ ಈ ಉಪವಾಸ ಆಗಬೇಕು. ಆದರೆ ಹೆಚ್ಚಿನವರು ಉಪವಾಸ ಎಂದುಕೊಂಡು ಕೆಟ್ಟ ಕೆಲಸಗಳನ್ನು ಮಾಡುತ್ತಾ, ಬೇರೆಯವರನ್ನು ಅವಾಚ್ಯ ಶಬ್ದಗಳಿಂದ ಬೈಯುತ್ತಾ, ಇನ್ನೊಬ್ಬರೊಂದಿಗೆ ಜಗಳವಾಡುತ್ತಾ ಕಾಲ ಕಳೆಯುತ್ತಾರೆ… ನನ್ನ ನಂಬಿಕೆಯ ಪ್ರಕಾರ, ಈ ಸಂದರ್ಭದಲ್ಲಿ ನಮ್ಮಲ್ಲಿರುವ ಮೃಗೀಯ ಗುಣಗಳನ್ನು ಸಾಯಿಸಬೇಕೇ ಹೊರತು ಪ್ರಾಣಿಗಳನ್ನು ಸಾಯಿಸಿ ತಿಂದುಣ್ಣುವುದಲ್ಲ. ಸಂಸ್ಕೃತಿ ಎಂದರೆ ನಿಗ್ರಹಿಸಿಕೊಳ್ಳುವುದು. ಉಪವಾಸ ಪಾಲನೆ ಮಾಡಿದರೆ ಆರೋಗ್ಯ ಕೂಡ ಸುಧಾರಿಸುತ್ತದೆ ಎಂಬುದು ನನ್ನ ಸ್ವಂತ ಅನುಭವ…’

ರಂಝಾನ್ ಕುರಿತ ಇಂತಹ ಅಭಿಪ್ರಾಯಗಳು ಕೇಳಲು ಅದೆಷ್ಟು ಹಿತಕರ! ಆದರೆ ವಾಸ್ತವ ಏನು? ಸಕಲ ಇಂದ್ರಿಯಗಳನ್ನು ನಿಗ್ರಹಿಸಿ ದೇವನ ಕೃಪೆಗೆ ಪಾತ್ರರಾಗಬೇಕಾದ, ದೇವರಲ್ಲಿ ನಂಬಿಕೆ, ಪ್ರಾರ್ಥನೆ, ಉಪವಾಸ ಹಾಗೂ ಜಕಾತ್ ಎಂಬ ಮುಸ್ಲಿಂ ಧರ್ಮದ ನಾಲ್ಕು ಆಧಾರಸ್ತಂಭಗಳನ್ನು ಪೋಷಿಸಬೇಕಾದ ಮುಸ್ಲಿಮರು ಮಾಡುತ್ತಿರುವುದೇನು? ರಂಝಾನ್ ಸಂದರ್ಭದಲ್ಲೇ ಮುಸ್ಲಿಮ್ ಬಾಹುಳ್ಯದ ಪ್ರದೇಶಗಳಲ್ಲಿ ಕಳ್ಳತನ, ದರೋಡೆ, ಕೊಲೆಕೃತ್ಯ ನಡೆದರೆ ಅದಕ್ಕೇನರ್ಥ? ಅದು ಪವಿತ್ರ ರಂಝಾನ್‌ಗೆ ಬಗೆಯುವ ಅಪಚಾರವಲ್ಲವೆ? ನಮ್ಮ ಪಕ್ಕದ ಮನೆಯ ಕಾಂಪೌಂಡ್‌ನಲ್ಲೊಂದು ಸೀಬೆ ಗಿಡವಿತ್ತು. ಅದರ ತುಂಬ ಕಾಯಿ, ಹಣ್ಣುಗಳು ಬಿಟ್ಟಿದ್ದವು. ಒಂದು ದಿನ ರಂಝಾನ್ ಸಂದರ್ಭದಲ್ಲಿ ಕೆಲವು ತುಂಟ ಹುಡುಗರು ಆ ಮನೆಯ ಕಾಂಪೌಂಡ್ ಏರಿ ಗಿಡದ ಕೊಂಬೆಯನ್ನು ಬಗ್ಗಿಸಿ ಸೀಬೆ ಕಾಯಿಗಳನ್ನು ತರಿದು ಹಾಕಿದರು. ಒಂದೆರಡು ಕೊಂಬೆಯನ್ನೂ ಮುರಿದರು. ಈ ವಿಷಯ ಆ ಮನೆಯವರಿಗೆ ಗೊತ್ತಾದದ್ದು ಅವರ ಪಕ್ಕದ ಮನೆಯ ಮಹಿಳೆಯಿಂದ. ಇನ್ನೊಂದು ಮನೆಗೆ ಆಗ ತಾನೆ ಹೊಸದಾಗಿ ಸುಣ್ಣ ಬಣ್ಣ ಮಾಡಿಸಿದ್ದರು. ಮನೆ ಲಕಲಕ ಹೊಳೆಯುತ್ತಿತ್ತು. ಒಂದು ಮಧ್ಯಾಹ್ನ ಟರ್ಕಿ ಟೋಪಿ ಧರಿಸಿದ ಕೆಲವು ಪಡ್ಡೆ ಹುಡುಗರು ಆ ಮನೆಯ ಬಳಿ ಬಂದು ಲಕಲಕನೆ ಹೊಳೆಯುತ್ತಿದ್ದ ಹೊಸದಾಗಿ ಬಣ್ಣ ಬಳಿದಿದ್ದ ಮನೆಯ ಗೋಡೆಗೆ ಕೆಸರು ಗಲೀಜುಗಳನ್ನು ಬಳಿದರು. ಗೋಡೆಯನ್ನೆಲ್ಲ ಗಲೀಜು ಮಾಡಿದರು. ಅದೇ ಏರಿಯಾದಲ್ಲಿ ಹಸು ಸಾಕಿ ಹಾಲು ಮಾರಾಟ ಮಾಡುತ್ತಿದ್ದ ಒಬ್ಬರಿಗೆ ಒಂದು ಬೆಳಿಗ್ಗೆ ಆಘಾತವೊಂದು ಕಾದಿತ್ತು. ರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸು ಬೆಳಿಗ್ಗೆ ಹಾಲು ಕರೆಯಲು ಬಂದಾಗ ನಾಪತ್ತೆಯಾಗಿತ್ತು. ಹಾಲು ಕೊಡುತ್ತಿದ್ದ ಆ ಹಸುವನ್ನು ಯಾರು ಎಲ್ಲಿಗೆ ಕೊಂಡೊಯ್ದರೋ ಆ ಅಲ್ಲಾನಿಗೂ ಗೊತ್ತಿರಲಿಕ್ಕಿಲ್ಲ. ಬಹುಶಃ ಯಾರದೋ ಹೊಟ್ಟೆಗೆ ಆ ಹಸುವಿನ ಮಾಂಸ ಆಹಾರವಾಗಿದ್ದರೆ ಅದೇನೂ ಆಶ್ಚರ್ಯದ ಸಂಗತಿಯಲ್ಲ. ಇಂತಹ ಉದಾಹರಣೆಗಳು ಒಂದೇ ಎರಡೇ…

ರಂಝಾನ್ ಸಂದರ್ಭದಲ್ಲೇ ಬೆಂಗಳೂರಿನ ಹೆಚ್‌ಎಎಲ್ ಸಮೀಪ ಕೆಲವು ಹಸುಗಳನ್ನು ಅಕ್ರಮವಾಗಿ ಇಸ್ಲಾಂಪುರದ ಕಸಾಯಿಖಾನೆಗೆ ಸಾಗಿಸುವ ಹುನ್ನಾರ ನಡೆಯಿತು. ಅದನ್ನು ವಿರೋಧಿಸಿದ ಪ್ರಾಣಿ ದಯಾ ಸಂಘದ ಸದಸ್ಯರ ಮೇಲೆ ಮಾರಣಾಂತಿಕ ಹಲ್ಲೆಯೂ ನಡೆಯಿತು. ಹಲ್ಲೆ ನಡೆಸಿದವರು ಮುಸ್ಲಿಂ ಹೆಂಗಸರು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಈ ಹಲ್ಲೆಯ ವಿರುದ್ಧ ಪೊಲೀಸರಿಗೆ ದೂರು ನೀಡಲು ಹೋದರೆ ಅವರು ಅದನ್ನು ಸ್ವೀಕರಿಸಲು ಹಿಂಜರಿದಿದ್ದು ನಾವು ಎಂತಹ ಜಾತ್ಯತೀತ ರಾಷ್ಟ್ರದಲ್ಲಿ ಇzವೆ ಎಂಬುದಕ್ಕೆ ವ್ಯಂಗ್ಯೋಕ್ತಿಯಂತಿತ್ತು. ಈ ಹಲ್ಲೆಯ ವಿರುದ್ಧ ಹಿಂದೂ ಸಂಘಟನೆಗಳು ಪ್ರತಿಭಟಿಸಿದರೂ ಹಲ್ಲೆ ಎಸಗಿದವರ ಮೇಲೆ ಸರ್ಕಾರ ಕೈಗೊಳ್ಳಲಿಲ್ಲ.

ಇದಕ್ಕೂ ಆಘಾತಕಾರಿಯಾದ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿರುವುದು ನಮಗೆಲ್ಲ ತಿಳಿದೇ ಇದೆ. ಸೇಲಂನ ಜನಪ್ರಿಯ ಆಡಿಟರ್ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ರಮೇಶ್ ಅವರನ್ನು ಹರಿತವಾದ ಆಯುಧಗಳಿಂದ ಜಿಹಾದಿ ಶಕ್ತಿಗಳು ಕೊಂದು ಹಾಕಿದ್ದವು. ಈ ಕೊಲೆ ನಡೆದಿದ್ದು ಕೂಡ ಪವಿತ್ರ ರಂಝಾನ್ ಹಬ್ಬದ ಸಂದರ್ಭದಲ್ಲೇ. ಇಂತಹದೊಂದು ಬರ್ಬರ ಕೊಲೆ ಯಾಕೆ ನಡೆಯಿತೆಂಬುದು ಈಗ ಗುಟ್ಟಾಗಿಲ್ಲ. ೨೦೦೮ರ ಬೆಂಗಳೂರು ಸ್ಫೋಟದ ಆರೋಪಿಯಾಗಿದ್ದ ಮದನಿಯನ್ನು ಕರ್ನಾಟಕ ಬಿಜೆಪಿ ಸರ್ಕಾರ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೂಡಿ ಹಾಕಿz ಇದಕ್ಕೆ ಕಾರಣ ಎಂಬುದು ಈಗ ಕೇಳಿಬರುತ್ತಿರುವ ಸಂಗತಿ. ರಮೇಶ್ ಕಗ್ಗೊಲೆಯ ಬಿಸಿ ಇನ್ನೂ ಆರಿಲ್ಲ. ಬಂಧಿತನಾಗಿರುವ ಮದನಿಯನ್ನು ತಕ್ಷಣವೇ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಕೊಯಮತ್ತೂರಿನ ಬಿಜೆಪಿ ಕಚೇರಿಗೆ ಬೆದರಿಕೆ ಪತ್ರವೊಂದು ಬಂದಿದೆ. ಮದನಿಯನ್ನು ತಕ್ಷಣ ಬಿಡುಗಡೆಗೊಳಿಸದಿದ್ದರೆ ಹಿಂದೂಪರ ಸಂಘಟನೆಯ ೧೨ಕ್ಕೂ ಹೆಚ್ಚು ಪ್ರಮುಖ ನಾಯಕರನ್ನು ಹತ್ಯೆ ಮಾಡುವುದಾಗಿ ಆ ಪತ್ರದಲ್ಲಿ ಎಚ್ಚರಿಸಲಾಗಿದೆ. ಇಂತಹ ಬೆದರಿಕೆ ಪತ್ರವನ್ನು ಜಿಹಾದಿಗಳು ಬರೆದಿದ್ದೂ ಕೂಡ ಅದೇ ಪವಿತ್ರ ರಂಝಾನ್ ಮಾಸದಲ್ಲಿ!

ಹಾಗಿದ್ದರೆ ರಂಝಾನ್ ಸಾರುವ ಪವಿತ್ರ ಸಂದೇಶಗಳಿಗೆ ಏನಾದರೂ ಅರ್ಥವಿದೆಯೆ? ಕಾಡಿನಿಂದಲೋ ನಾಡಿನಿಂದಲೋ ದರೋಡೆ ಮಾಡುವವರನ್ನು ಸಂಸ್ಕರಿಸಿ ದೇವದಾಸರನ್ನಾಗಿಸುವುದು ರಂಝಾನ್ ಉzಶವೆಂದು ಸಾರುವವರು ಈ ವಿದ್ಯಮಾನಕ್ಕೆ ಯಾವ ರೀತಿ ವ್ಯಾಖ್ಯಾನಿಸುತ್ತಾರೆ? ಬದುಕಿಗೊಂದು ನಿಯಂತ್ರಣ ಹೇರುವ ರಂಝಾನ್ ಕೊಲೆಕೃತ್ಯ, ಕಳವು, ದರೋಡೆ, ಗೋವಧೆ ಮೊದಲಾದ ಹೀನಕೃತ್ಯಗಳನ್ನು ಹೇಗೆ ಸಮರ್ಥಿಸಿಕೊಳ್ಳುತ್ತದೆ?

‘ಸನ್ಮಾರ್ಗ’ ಪ್ರಕಟಿಸಿದ ರಂಝಾನ್ ವಿಶೇಷಾಂಕದಲ್ಲಿ ಮುಹಮ್ಮದ್ ರಝಾ ಮಾನ್ವಿ ಎಂಬ ಲೇಖಕರು ಬರೆದ ‘ಮುಸ್ಲಿಂ ಸಮುದಾಯ: ರಂಝಾನಿನಲ್ಲಿ ಮತ್ತು ನಂತರ’ ಎಂಬ ಲೇಖನವನ್ನು ಓದುತ್ತಿದ್ದೆ. ಅದರಲ್ಲಿ ಉಲ್ಲೇಖವಾಗಿದ್ದ ಈ ಪ್ಯಾರಾ ನನ್ನ ಗಮನ ಸೆಳೆಯಿತು. “ಬಹುತೇಕ ಮುಸ್ಲಿಂ ಸಮುದಾಯ ರಂಝಾನ್ ತಿಂಗಳಲ್ಲಿ ತನ್ನೆಲ್ಲ ಜೀವನವನ್ನು ಅಲ್ಲಾಹನ ಆದೇಶದಂತೆ ಬದುಕುತ್ತಾ ರಂಝಾನ್ ಕಳೆದ ಕ್ಷಣಾರ್ಧದಲ್ಲೇ ಮತ್ತೆ ತಮ್ಮ ಹಳೆಯ ಜೀವನಶೈಲಿಯ ಕಡೆ ಮುಖ ಮಾಡುವ ಹಿಂದಿರುವ ತರ್ಕವಾದರೂ ಏನು? ನಮ್ಮ ಜೀವನದಲ್ಲಿ ಏಕೀ ವೈರುಧ್ಯ? ಒಂದು ತಿಂಗಳು ಸುಳ್ಳು , ಮೋಸ, ವಂಚನೆಗಳಿಂದ ದೂರವುಳಿದ ವ್ಯಕ್ತಿಯೊಬ್ಬನಿಗೆ ಮುಂದಿನ ೧೧ ತಿಂಗಳ ಕಾಲ ಹಾಗೆಯೇ ಉಳಿಸಿಕೊಂಡು ಹೋಗಲು ಸಾಧ್ಯವಾಗುತ್ತಿಲ್ಲವೇಕೆ ಎನ್ನುವ ದೊಡ್ಡ ಸವಾಲೊಂದು ಮುಸ್ಲಿಂ ಸಮುದಾಯವನ್ನು ಕಾಡುತ್ತಿದೆ. ನಾವು ಪಡೆದ ಒಂದು ತಿಂಗಳ ಕಾಲದ ತರಬೇತಿ ಯಾಕೆ ವ್ಯರ್ಥವಾಗುತ್ತಿದೆ? ನಮಗೆ ಸರಿಯಾದ ತರಬೇತಿ ಆಗುತ್ತಿಲ್ಲವೆ? ಅಥವಾ ಆ ತರಬೇತಿಯ ಸಂಪೂರ್ಣ ಲಾಭ ನಾವು ಪಡೆಯುತ್ತಿಲ್ಲವೆ ಎನ್ನುವ ಪ್ರಶ್ನೆಗಳು ನಮ್ಮಲ್ಲಿ ಸದಾ ಹುಟ್ಟಿಕೊಳ್ಳುತ್ತವೆ. ನಾವು ಕೇವಲ ಒಂದು ತಿಂಗಳು ಮಾತ್ರ ನಮ್ಮ ವ್ಯವಹಾರದಲ್ಲಿ ಸ್ವಚ್ಛ ಕೈವುಳ್ಳವರಾಗಿ ಮುಂದಿನ ದಿನಗಳಲ್ಲಿ ಮತ್ತದೇ ಸುಳ್ಳು , ಮೋಸ, ವಂಚನೆಗಳನ್ನು ಮಾಡುತ್ತಾ ಬದುಕುವವರಾಗಬೇಕೆ?…” ರಂಝಾನ್ ಸಂದರ್ಭದಲ್ಲಿ ನನ್ನ ಗಮನಕ್ಕೆ ಬಂದ ಮೇಲಿನ ಕಹಿ ವಿದ್ಯಮಾನಗಳನ್ನು ನೆನಪಿಸಿಕೊಂಡಾಗ ಈ ಲೇಖಕರ ಮಾತುಗಳು ಅದೆಷ್ಟು ಅರ್ಥಪೂರ್ಣ ಎಂದೆನಿಸಿತು.

ಯಾಕೆ ಹೀಗೆ? ರಂಝಾನ್ ಸಾರುವ ಸಂದೇಶಗಳನ್ನು ಇಡೀ ವರ್ಷ ಹಾಗಿರಲಿ, ರಂಝಾನ್ ಸಂದರ್ಭದಲ್ಲಾದರೂ ಪಾಲಿಸಬೇಕೆಂಬ ಕನಿಷ್ಠ ಸೌಜನ್ಯ ಮುಸ್ಲಿಂ ಸಮುದಾಯಕ್ಕೆ ಯಾಕಿಲ್ಲ? ಮುಸ್ಲಿಮರೆಲ್ಲರೂ ಹೀಗೆ ಇರುವವರೆಂಬುದು ನನ್ನ ಈ ಮಾತಿನ ಅರ್ಥವಲ್ಲ. ಆದರೆ ಸಂದೇಶಗಳನ್ನು ಚಾಚೂ ತಪ್ಪದೆ ಪಾಲಿಸುವವರು, ಪಾಲಿಸದೆ ಇರುವವರಿಗೆ ಯಾಕೆ ಕಿವಿಹಿಂಡಿ ಹೇಳುತ್ತಿಲ್ಲ? ರಂಝಾನ್ ಸಂದರ್ಭದಲ್ಲಿ ಗೋವುಗಳನ್ನು ಕಡಿಯುವುದು, ಗೋವಿನ ಮಾಂಸವನ್ನು ತಿನ್ನುವುದು, ಇನ್ನೊಬ್ಬರ ಮನೆ ಕಳ್ಳತನ ಮಾಡುವುದು, ಇನ್ಯಾರಿಗೋ ತೊಂದರೆ ಕೊಡುವುದು… ಇದನ್ನೆಲ್ಲ ಮಾಡಕೂಡದು ಎಂದು ಪ್ರಜ್ಞಾವಂತ ಮುಸ್ಲಿಮರು ತಮ್ಮ ಸಮುದಾಯದವರಿಗೆ ಏಕೆ ಆಗ್ರಹಪೂರ್ವಕ ತಿಳಿಸುತ್ತಿಲ್ಲ? ಕುರ್-ಆನ್‌ನಲ್ಲಿ ಗೋವನ್ನು ಕೊಲ್ಲಬೇಕೆಂದು ಎಲ್ಲೂ ಹೇಳಿಲ್ಲ. ಅದು ಅವರ ಮತದ ಆದೇಶವೂ ಅಲ್ಲ. ಹಿಂದಿನ ಕಾಲದಲ್ಲಿ ಹಿಂದೂಗಳ ತೇಜೋವಧೆ ಮಾಡಲೆಂದು ಕೈಗೊಂಡ ತಂತ್ರ ಅದು, ಅಷ್ಟೆ. ಈಗಲೂ ಅದನ್ನೇ ಏಕೆ ಪಟ್ಟುಹಿಡಿಯಬೇಕು?

ರಂಝಾನ್‌ನ ಸಂದರ್ಭದಲ್ಲಿ ಇನ್ನೊಂದು ‘ಹಿಂಸೆ’ಯನ್ನು ಬಹುಶಃ ಎಲ್ಲರೂ ಅನುಭವಿಸಿರುತ್ತಾರೆ. ಅದೆಂದರೆ ಮುಂಜಾನೆ ೪ ಗಂಟೆಗೇ ಮಸೀದಿಗಳ ಮೈಕ್‌ಗಳು ಗರ್ಜಿಸತೊಡಗುತ್ತವೆ. ಸವಿನಿದ್ದೆಯಲ್ಲಿದ್ದವರಿಗೆ ಆ ಕರ್ಕಶತೆ ಗಾಬರಿ ಹುಟ್ಟಿಸುತ್ತದೆ. ಮಸೀದಿಯಲ್ಲಿ ಅಲ್ಲಾನ ಸ್ಮರಣೆ ಮಾಡಲು ಯಾರದೇ ಅಭ್ಯಂತರವಿಲ್ಲ. ಆದರೆ ಅಂತಹ ಸ್ಮರಣೆಯಿಂದ ಬೇರೆಯವರಿಗೆ ಏಕೆ ತೊಂದರೆಯಾಗಬೇಕು? ಇಡೀ ಊರಿಗೆ ಕೇಳುವಂತೆ ಫುಲ್ ವಾಲ್ಯೂಮ್ ಇರುವ ಮೈಕ್ ಮೂಲಕ ಏಕೆ ಕುರ್-ಆನ್ ಪಠಿಸಬೇಕು? ಹಾಗೆಯೇ ಪಠಿಸಬೇಕೆಂದು ಕುರ್-ಆನ್‌ನಲ್ಲಿ ಎಲ್ಲಾದರೂ ಆದೇಶವಿದೆಯೆ? ಮೈಕ್ ಮೂಲಕ ಕೇಳಿ ಬರುವ ಈ ಕಿವಿಗಡಚಿಕ್ಕುವ ಧ್ವನಿಯಿಂದ ಆಸ್ಪತ್ರೆಯ ಐಸಿಯುನಲ್ಲಿರುವ ರೋಗಿಗಳು, ಬಾಣಂತಿಯರು, ತೀವ್ರ ಖಾಯಿಲೆಯಿಂದ ಬಳಲುತ್ತಿರುವವರು, ಮನೆಗಳಲ್ಲಿರುವ ವೃದ್ಧರು, ಮಕ್ಕಳು… ಮುಂತಾದವರ ಸ್ಥಿತಿ ಏನಾಗಬಹುದು? ಅಷ್ಟಕ್ಕೂ ಇಡೀ ಊರಿಗೆ ಕೇಳುವಂತೆ ಸ್ಮರಣೆ ಮಾಡಿದರೆ ಮಾತ್ರ ಅಲ್ಲಾಹು ಮೆಚ್ಚಿಕೊಳ್ಳುತ್ತಾನೆಂಬ ಭ್ರಮೆಯೇಕೆ? ನಾವು ಮಾಡುವ ಪ್ರಾರ್ಥನೆ ನಮಗೆ ಮಾತ್ರ ಕೇಳುವಂತಿದ್ದರೆ ಸಾಕಲ್ಲವೆ? ನಮ್ಮ ನೈಜ ಪ್ರಾರ್ಥನೆ ಕಡಿಮೆ ಸ್ವರದಲ್ಲಿದ್ದರೆ ಅದನ್ನು ಕೇಳಿಸಿಕೊಳ್ಳಲಾಗದಷ್ಟು ದೇವರು ಕಿವುಡನಾಗಿರುತ್ತಾನೆಯೆ? ಬಾಹ್ಯದ ಭಕ್ತಿಗಿಂತ ಅಂತರಂಗದ ಭಕ್ತಿ, ಶ್ರದ್ಧೆ ಮುಖ್ಯವೆಂಬುದನ್ನು ಈ ಮಂದಿ ಏಕೆ ಅರ್ಥ ಮಾಡಿಕೊಳ್ಳುತ್ತಿಲ್ಲ?

ಇನ್ನು ಯಾವುದೇ ರಾಜ್ಯಕ್ಕೆ ಸೇರಿದ ಮುಸ್ಲಿಮರಿರಲಿ, ಅವರೆಲ್ಲ ಉರ್ದುವಿನಲ್ಲೇ ಮಾತನಾಡಬೇಕೆಂಬ ಆಗ್ರಹ ಎಂತಹ ವಿಪರ್ಯಾಸ! ೬೦-೭೦ ವರ್ಷಗಳ ಹಿಂದೆ ವಿವಿಧ ರಾಜ್ಯಗಳಲ್ಲಿನ ಮುಸ್ಲಿಮರು ಸ್ಥಳೀಯ ಭಾಷೆಗಳಲ್ಲೇ ಮಾತನಾಡುತ್ತಿದ್ದರು, ಓದುತ್ತಿದ್ದರು. ತಮ್ಮದೇ ಪ್ರತ್ಯೇಕ ‘ಮತೀಯ ಭಾಷೆ’ಯೊಂದಿದೆ ಎಂದು ಅವರು ಯೋಚಿಸುತ್ತಲೇ ಇರಲಿಲ್ಲ. ಅಷ್ಟಕ್ಕೂ ಉರ್ದು ಮುಸ್ಲಿಮರ ಮತೀಯ ಭಾಷೆ ಖಂಡಿತ ಅಲ್ಲ. ಮೊಘಲರ ಆಡಳಿತ ಕಾಲದಲ್ಲಿ ಬೆಳೆದು ಬಂದ ಮಿಶ್ರ ಸೃಷ್ಟಿ ಅದು. ಅದಕ್ಕೂ ಇಸ್ಲಾಮಿಗೂ ಯಾವ ಸಂಬಂಧವೂ ಇಲ್ಲ. ಇಸ್ಲಾಂ ಹುಟ್ಟಿದ್ದು ಅರೇಬಿಯಾದಲ್ಲಿ. ಪವಿತ್ರ ಕುರ್-ಆನ್ ಇರುವುದು ಅರಬ್ಬಿ ಭಾಷೆಯಲ್ಲಿ. ಮುಸ್ಲಿಮರಿಗೆ ಒಂದು ‘ಮತೀಯ ಭಾಷೆ’ ಇರುವುದೇ ಆದರೆ ಅದು ಅರಬ್ಬಿ ಭಾಷೆ. ಹೀಗಿರುವಾಗ ಉರ್ದುವಿಗಾಗಿ ಏಕೆ ಈ ಒತ್ತಾಯ? ಒಂದು ಸಮಾನ ಭಾಷೆಯ ಬಲದಿಂದ ಮುಸ್ಲಿಮರನ್ನು ಒಗ್ಗೂಡಿಸಿ ಅವರನ್ನೊಂದು ರಾಜಕೀಯ ಶಕ್ತಿಯಾಗಿ ಎತ್ತಿ ನಿಲ್ಲಿಸಬೇಕೆಂಬ ರಾಜಕೀಯ ಷಡ್ಯಂತ್ರವಲ್ಲದೆ ಇದು ಇನ್ನೇನು?

ಕೆಲವು ಮುಸ್ಲಿಮರು ತಮ್ಮ ರಾಷ್ಟ್ರವೀರ ರುಸ್ತುಂ ಎನ್ನುವುದುಂಟು. ಆದರೆ ರುಸ್ತುಂ ಪರ್ಶಿಯಾದ ವೀರ. ಅವನಿಗೂ ಇವರಿಗೂ ಸಂಬಂಧವೇ ಇಲ್ಲ. ಅವನು ಹುಟ್ಟಿದ್ದು ಇಸ್ಲಾಂಗಿಂತ ಎಷ್ಟೋ ಮೊದಲು. ಮುಸ್ಲಿಮರು ಅವನನ್ನು ವೀರನೆಂದು ಪರಿಗಣಿಸುವುದಾದರೆ ಶ್ರೀರಾಮನೂ ಇವರಿಗೆ ಓರ್ವ ರಾಷ್ಟ್ರವೀರ ಯಾಕಾಗಬಾರದು? ಇಲ್ಲಿನ ಇತಿಹಾಸವನ್ನು ಅವರೇಕೆ ಸ್ವೀಕರಿಸಬಾರದು? ಮುಸ್ಲಿಂ ರಾಷ್ಟ್ರವಾಗಿರುವ ಇಂಡೋನೇಶ್ಯಾದಲ್ಲಿ ಪ್ರತಿವರ್ಷ ರಾಮಾಯಣ ಉತ್ಸವ ಜರಗುತ್ತದೆ. ಅಲ್ಲಿನ ಮುಸ್ಲಿಮರು ಶ್ರೀರಾಮನನ್ನು ಆದರ್ಶ ಪುರುಷನೆಂದು ಭಾವಿಸಿರುವಾಗ ಭಾರತದ ಮುಸ್ಲಿಮರಿಗೆ ಇದು ಏಕೆ ಸಾಧ್ಯವಿಲ್ಲ?

ರಂಝಾನ್ ಸಂದರ್ಭದಲ್ಲಿ ಮಸೀದಿಯ ಮೈಕ್‌ಗಳಿಂದ ತೂರಿ ಬರುವ ಕಿವಿಗಡಚಿಕ್ಕುವ ಪ್ರಾರ್ಥನೆಯನ್ನು ಹಿಂದುಗಳು ಹೇಗೋ ಸಹಿಸಿಕೊಂಡು ಕಾಲ ಹಾಕುತ್ತಾರೆ. ಕೆಲವರು ಈ ಬಗ್ಗೆ ಗೊಣಗಬಹುದು. ಆದರೆ ಅದೇ ಮುಸ್ಲಿಮರು ತಮ್ಮ ಮಸೀದಿ ಎದುರು ಗಣೇಶೋತ್ಸವದ ಮೆರವಣಿಗೆಯೊಂದು ಬ್ಯಾಂಡ್ ವಾದ್ಯಗಳೊಂದಿಗೆ ಸಾಗಿಬಂದರೆ ಏಕೆ ಅಸ್ವಸ್ಥರಾಗುತ್ತಾರೆ? ಕಲ್ಲೆಸೆದು ಏಕೆ ಗಲಾಟೆ ಮಾಡುತ್ತಾರೆ? ಮತೀಯ ಸಹಿಷ್ಣುತೆ ಅವರಿಗೇಕಿಲ್ಲ? ಮಸೀದಿ ಎದುರು ಗಣೇಶೋತ್ಸವದ ಮೆರವಣಿಗೆ ಬಂದರೆ ಅದು ಇಸ್ಲಾಂಗೆ ವಿರೋಧವೆಂದು ಏಕನಿಸುತ್ತದೆ? ರಂಝಾನ್ ಸಂದರ್ಭದಲ್ಲಿ ಹಿಂದೂ ಮುಖಂಡರು ಇಫ್ತಾರ್ ಔತಣ ಕೂಟದಲ್ಲಿ ಪಾಲ್ಗೊಂಡಂತೆ, ಮುಸ್ಲಿಮರು ಹಿಂದುಗಳ ಸತ್ಯನಾರಾಯಣ ಪೂಜೆ, ಗಣೇಶೋತ್ಸವದಲ್ಲಿ ಏಕೆ ಪಾಲ್ಗೊಳ್ಳಬಾರದು? ಪರಮತ ಸಹನೆ ಹಾಗೂ ಪರಮತ ಗೌರವ ಇರಬೇಕಾದುದು ಕೇವಲ ಹಿಂದುಗಳಲ್ಲಿ ಮಾತ್ರವಲ್ಲ, ಮುಸಲ್ಮಾನರಲ್ಲೂ ಇರಬೇಕು ಎಂಬುದನ್ನು ಅವರೇಕೆ ಅರ್ಥಮಾಡಿಕೊಳ್ಳುತ್ತಿಲ್ಲ?

ಇಸ್ಲಾಂ ಹರಡಿರುವ ಬೇರಾವ ದೇಶದಲ್ಲೇ ಆಗಲಿ ಅವರ ಹಿಂದಿನ ವೇಷ, ಭಾಷೆ, ಜೀವನರೀತಿ ಯಾವುದೂ ಮಾರ್ಪಾಡಾಗಿಲ್ಲ. ಇರಾನ್, ತುರ್ಕಿ, ಇಂಡೋನೇಶ್ಯಾ ಮತ್ತಿತರ ದೇಶಗಳಲ್ಲಿ ಅವರದೇ ಉಡುಪು, ಜೀವನಶೈಲಿ ಎಲ್ಲವೂ ಹಾಗೆಯೇ ಉಳಿದಿದೆ. ನಮ್ಮ ದೇಶದಲ್ಲಿ ಮಾತ್ರ ಯಾಕೆ ಈ ಬದಲಾವಣೆ? ಈ ದೇಶದ ಸಂಸ್ಕೃತಿ, ಇಲ್ಲಿನ ಭಾಷೆಗಳು ಉಡುಪು-ತೊಡುಪು, ರೀತಿ-ರಿವಾಜು  ಏಕೆ ಅವರಿಗೆ ಇಷ್ಟವಾಗುವುದಿಲ್ಲ?

ರಂಝಾನ್ ಹಬ್ಬ ಮುಕ್ತಾಯಗೊಳ್ಳುತ್ತಿರುವ ಸಂದರ್ಭದಲ್ಲಿ ಈ ಎಲ್ಲ ಪ್ರಶ್ನೆಗಳೂ ನನ್ನನ್ನು ಕಾಡಿದಂತೆ ಇನ್ನೂ ಹಲವರನ್ನು ಕಾಡುತ್ತಿರಬಹುದು. ಈ ಪ್ರಶ್ನೆಗಳಿಗೆ ಪ್ರಾಮಾಣಿಕ ಉತ್ತರ ಕಂಡುಕೊಳ್ಳುವುದರಲ್ಲೆ ಮುಸ್ಲಿಂ ಸಮುದಾಯದ ಹಿತ ಅಡಗಿದೆ.

ರಂಝಾನ್ ಸಂದರ್ಭದಲ್ಲಿ ಮಸೀದಿಯ ಮೈಕ್‌ಗಳಿಂದ ತೂರಿ ಬರುವ ಕಿವಿಗಡಚಿಕ್ಕುವ ಪ್ರಾರ್ಥನೆಯನ್ನು ಹಿಂದುಗಳು ಹೇಗೋ ಸಹಿಸಿಕೊಂಡು ಕಾಲ ಹಾಕುತ್ತಾರೆ. ಕೆಲವರು ಈ ಬಗ್ಗೆ ಗೊಣಗಬಹುದು. ಆದರೆ ಅದೇ ಮುಸ್ಲಿಮರು ತಮ್ಮ ಮಸೀದಿ ಎದುರು ಗಣೇಶೋತ್ಸವದ ಮೆರವಣಿಗೆಯೊಂದು ಬ್ಯಾಂಡ್ ವಾದ್ಯಗಳೊಂದಿಗೆ ಸಾಗಿಬಂದರೆ ಏಕೆ ಅಸ್ವಸ್ಥರಾಗುತ್ತಾರೆ? ಕಲ್ಲೆಸೆದು ಏಕೆ ಗಲಾಟೆ ಮಾ ಕೂಟದಲ್ಲಿ ಪಾಲ್ಗೊಂಡಂತೆ, ಮುಸ್ಲಿಮರು ಹಿಂದುಗಳ ಸತ್ಯನಾರಾಯಣ ಪೂಜೆ, ಗಣೇಶೋತ್ಸವದಲ್ಲಿ ಏಕೆ ಪಾಲ್ಗೊಳ್ಳಬಾರದು?

(Please Note: Opinions expressed are Writer’s personal views. Author can be reached at dugulakshman@yahoo.com . )

Leave a Reply

Your email address will not be published.

This site uses Akismet to reduce spam. Learn how your comment data is processed.