ನೇರನೋಟ: by  Du Gu Lakshman, June-24-2013

ಇಡೀ ಜಗತ್ತೇ ಮಾನವೀಯತೆ, ಮಾನವೀಯ ಸಂಬಂಧಗಳ ಬಗ್ಗೆ ಅರಿಯಲು ಭಾರತದತ್ತ ನೋಡುತ್ತಿದ್ದ ಕಾಲವೊಂದಿತ್ತು. ಆದರೆ ಬದಲಾಗುತ್ತಿರುವ ಭಾರತದಲ್ಲಿ ಇದೀಗ ಮಾನವೀಯತೆ, ಮಾನವೀಯ ಸಂಬಂಧಗಳಿಗೆ ವಿಶೇಷ ಅರ್ಥವೇ ಉಳಿದಿಲ್ಲವೇನೋ ಎಂಬ ಸಂಶಯ ಪ್ರಜ್ಞಾವಂತರಿಗೆ ಕಾಡುತ್ತಿರುವುದು ನಿಜ.

ಇತ್ತೀಚೆಗೆ ಮದರಾಸ್ ಹೈಕೋರ್ಟ್ ನೀಡಿದ ತೀರ್ಪು ಇಂತಹ ಸಂಶಯಕ್ಕೊಂದು ದಿಕ್ಸೂಚಿ. ರಾಷ್ಟ್ರಾದ್ಯಂತ ಅನೇಕ ಬಗೆಯ ಚರ್ಚೆಗಳನ್ನೂ ಅದು ಹುಟ್ಟು ಹಾಕಿದೆ. ವಯಸ್ಸಿಗೆ ಬಂದ ಗಂಡು-ಹೆಣ್ಣಿನ ನಡುವಿನ ಸಮ್ಮತಿಯ ಲೈಂಗಿಕ ಸಂಬಂಧವನ್ನು ವಿವಾಹವೆಂದು ಪರಿಗಣಿಸಬೇಕು ಎಂಬುದು ಮದರಾಸ್ ಹೈಕೋರ್ಟ್ ನೀಡಿದ ತೀರ್ಪು. ಪ್ರಕರಣವೊಂದರಲ್ಲಿ ಜೀವನಾಂಶ ಇತ್ಯರ್ಥಪಡಿಸುವ ಸಂದರ್ಭದಲ್ಲಿ ಈ ತೀರ್ಪು ನೀಡಲಾಗಿದೆ. ತನ್ನ ೨ ಮಕ್ಕಳನ್ನು ಹೆತ್ತ ಮಹಿಳೆಯನ್ನು ತೊರೆದು ಹೋಗಿದ್ದ ವ್ಯಕ್ತಿ, ತನ್ನ ಮಕ್ಕಳಿಗೆ ಜೀವನಾಂಶ ನೀಡಬೇಕೆಂದು ಕೊಯಮತ್ತೂರಿನ ಕೋರ್ಟು ಹೇಳಿತ್ತು. ಆದರೆ ವಿವಾಹದ ಸೂಕ್ತ ದಾಖಲೆಗಳಿಲ್ಲವೆಂದು ಮಹಿಳೆಗೆ ಜೀವನಾಂಶ ನಿರಾಕರಿಸಲಾಗಿತ್ತು. ಇದರ ವಿರುದ್ಧದ ಮಹಿಳೆಯ ಮೇಲ್ಮನವಿಯನ್ನು ಪುರಸ್ಕರಿಸಿದ ಮದರಾಸ್ ಹೈಕೋರ್ಟ್, ಮಹಿಳೆಗೂ ಜೀವನಾಂಶ ನೀಡಬೇಕೆಂದು ತೀರ್ಪು ನೀಡಿದೆ.ಅದೇನೋ ಸರಿ ಹಾಗೂ ನ್ಯಾಯಯುತವಾದದ್ದು. ಮಹಿಳೆಯೊಂದಿಗೆ ಬದುಕಿ ಮಕ್ಕಳನ್ನೂ ಹೊಂದಿರುವ ಪುರುಷನಿಗೆ ಜವಾಬ್ದಾರಿ ಹೊರಿಸಬೇಕಾದುದು ಸರಿಯಾದz. ಆದರೆ ಇದೇ ತರ್ಕವನ್ನು ವಿಸ್ತರಿಸಿ, ಇಬ್ಬರು ವ್ಯಕ್ತಿಗಳ ಸಹಮತದ ಲೈಂಗಿಕ ಸಂಬಂಧವೂ ವಿವಾಹ ಎನಿಸಿಕೊಳ್ಳುತ್ತದೆ ಎಂದು ನ್ಯಾಯಾಧೀಶರು ಹೇಳಿರುವ ಮಾತು ಮಾತ್ರ ಭಾರೀ ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ  ಈ ತೀರ್ಪು ತೀವ್ರ ಟೀಕೆಗೂ ಗುರಿಯಾಗಿದೆ.

ಗಂಡು-ಹೆಣ್ಣಿನ ನಡುವಿನ ಸಂಬಂಧಗಳು, ಅವರ ವೈವಾಹಿಕ ಬದುಕು… ಇವೆಲ್ಲ ಕಾನೂನಿನ ಕಕ್ಷೆಗೆ ನಿಲುಕದ ಅತೀ ಸೂಕ್ಷ್ಮವಾದ ಸಂಗತಿಗಳು. ಈ ಬಗ್ಗೆ ನ್ಯಾಯಾಧೀಶರೊಬ್ಬರು ಕಾನೂನಿನ ದಪ್ಪ ದಪ್ಪ ಪುಸ್ತಕಗಳಿಂದ ಹೆಕ್ಕಿದ ಕಾಯ್ದೆಗಳ ನೆರವಿನ ಮೂಲಕ ಸೂಕ್ತ ತೀರ್ಪು ನೀಡಲು ಸಾಧ್ಯವಿಲ್ಲ. ಅದು ಸಾಧುವೂ ಅಲ್ಲ. ಹಾಗಿದ್ದರೂ ಅನೇಕ ಬಾರಿ ವ್ಯಕ್ತಿಗಳ ತೀರಾ ವೈಯಕ್ತಿಕ ಆಯ್ಕೆಗಳ ಕುರಿತಂತೆ ಕೋರ್ಟ್ ತೀರ್ಪುಗಳು ನೀತಿ ಬೋಧನೆಗೆ ಮುಂದಾಗುತ್ತಲೇ ಇವೆ. ಇಂತಹ ಸಂದರ್ಭಗಳಲ್ಲಿ ಈಗಾಗಲೇ ಇರುವ ಕಾನೂನಿನ ಅಂಶಗಳಿಗಿಂತ ಹೆಚ್ಚಾಗಿ ನ್ಯಾಯಾಧೀಶರಿಗೇ ವೈಯಕ್ತಿಕ ನೈತಿಕ ದೃಷ್ಟಿ ಅಥವಾ ಸಮಾಜದ ಸಾಂಪ್ರದಾಯಿಕ ದೃಷ್ಟಿಗಳನ್ನು ತೀರ್ಪುಗಳಲ್ಲಿ ಸೇರಿಸುವುದು ನಡೆದುಬಂದಿದೆ. ಲೈಂಗಿಕ ಸಂಬಂಧ ಹೊಂದಿದ ವ್ಯಕ್ತಿಗಳು ಪ್ರತ್ಯೇಕಗೊಳ್ಳಲು ಬಯಸಿದಲ್ಲಿ ‘ಪತ್ನಿ’ಯಿಂದ ವಿಚ್ಛೇದನಗೊಳ್ಳದೆ ‘ಪತಿ’ ಬೇರೊಂದು ವಿವಾಹ ಮಾಡಿಕೊಳ್ಳಲಾಗದೆಂದು ತೀರ್ಪಿನಲ್ಲಿ ಹೇಳಿರುವುದಂತೂ ಅಸಂಗತ.

ಈ ತೀರ್ಪಿಗೆ ತೀವ್ರ ಟೀಕೆಗಳು ವ್ಯಕ್ತವಾಗುತ್ತಿರುವಂತೆಯೇ ಮದರಾಸ್ ಹೈಕೋರ್ಟ್ ಮತ್ತೊಮ್ಮೆ ಈ ತೀರ್ಪನ್ನು ಸಮರ್ಥಿಸಿಕೊಂಡಿದೆ. ಈ ತೀರ್ಪು ಭಾರತೀಯ ಸಂಸ್ಕೃತಿಯನ್ನು ರಕ್ಷಿಸುವುದಲ್ಲದೆ ಮಹಿಳೆಯರ ಹಿತ ಕಾಯುತ್ತದೆ ಎಂದು ನ್ಯಾಯಮೂರ್ತಿ ಸಿ.ಎಸ್.ಕರ್ಣನ್ ಸಮರ್ಥಿಸಿಕೊಂಡಿದ್ದಾರೆ. ವಿವಾಹವಾಗುವ ಉzಶದಿಂದ ವಿವಾಹಪೂರ್ವ ಲೈಂಗಿಕತೆಯಲ್ಲಿ ತೊಡಗಿ ನಂತರ ಮಹಿಳೆಯನ್ನು ಪರಿತ್ಯಜಿಸಿದಲ್ಲಿ ಸಂತ್ರಸ್ತ ಮಹಿಳೆ ನ್ಯಾಯ ಕೇಳಬಹುದು ಎಂದು ಸ್ಪಷ್ಟೀಕರಿಸುವ ಆದೇಶವೊಂದನ್ನು ಮತ್ತೆ ಈಗ ನೀಡಿದ್ದಾರೆ. ಅವರ ಸ್ಪಷ್ಟೀಕರಣದ ಆದೇಶ ಏನೇ ಇರಲಿ, ಇಂತಹ ತೀರ್ಪಿನಿಂದ ಇಡೀ ಭಾರತೀಯ ಸಮಾಜ ಇದುವರೆಗೆ ನಂಬಿಕೊಂಡಿದ್ದ ಕೆಲವು ಮೌಲ್ಯಗಳಿಗೆ ಮಸಿ ಬಳಿದಂತಾಗಿರುವುದು ನಿಜ.

ಮದರಾಸ್ ಹೈಕೋರ್ಟ್ ಇಂತಹ ತೀರ್ಪು ನೀಡುವ ಮೊದಲು ಸುಪ್ರೀಂಕೋರ್ಟ್ ‘ಲಿವಿಂಗ್ ಟುಗೆದರ್’ ಎಂಬ ಪಾಶ್ಚಾತ್ಯ ವ್ಯವಸ್ಥೆಗೆ ಭಾರತದಲ್ಲೂ ಒಪ್ಪಿಗೆ ನೀಡಿತ್ತು. ಲಿವಿಂಗ್ ಟುಗೆದರ್ ಎಂಬ ಪರಿಕಲ್ಪನೆ ಕೂಡ ಪಾಶ್ಚಾತ್ಯ ಪ್ರಭಾವದ್ದು ಹಾಗೂ ಭಾರತೀಯ ಸಂಸ್ಕೃತಿಗೆ ಹೊರತಾದುದು. ಮದುವೆಗೆ ಮುನ್ನ ಪರಿಚಯವಾದ ಯುವಕ ಅಥವಾ ಯುವತಿಯೊಂದಿಗೆ ಒಟ್ಟಿಗೇ ವಾಸಿಸುವುದು ಭಾರತೀಯ ಸಂಸ್ಕೃತಿಗೆ ಹೊರತಾದುದು. ಭಾರತೀಯ ಸಂಸ್ಕೃತಿಯನ್ನೇ ಲೇವಡಿ ಮಾಡುವ ಸಂಗತಿಯದು. ಯುವಕ-ಯುವತಿ ಮದುವೆಗೆ ಮುನ್ನ ಒಟ್ಟಿಗೆ ಇದ್ದು , ಅನಂತರ ಇಷ್ಟಪಟ್ಟರೆ ಮಾತ್ರ ಮದುವೆ ಮಾಡಿಕೊಳ್ಳುವ ಅಥವಾ ಮಾಡಿಕೊಳ್ಳದಿರುವ ಸಂಗತಿಯೇ ಅತ್ಯಂತ ಅಸ್ವಾಭಾವಿಕ. ಇದೀಗ ಮದರಾಸ್ ಹೈಕೋರ್ಟ್ ನೀಡಿರುವ ತೀರ್ಪಂತೂ ಅತ್ಯಂತ ಅಸಂಬದ್ಧ. ವಯಸ್ಸಿಗೆ ಬಂದ ಗಂಡು-ಹೆಣ್ಣಿನ ನಡುವಿನ ಸಮ್ಮತಿಯ ಲೈಂಗಿಕ ಸಂಬಂಧವನ್ನು ವಿವಾಹವೆಂದು ಪರಿಗಣಿಸಬೇಕು ಎಂಬ ತೀರ್ಪನ್ನು ಕೊಂಚ ವಿಶ್ಲೇಷಣೆಗೊಳಪಡಿಸಿದರೆ ದೊರಕುವ ಕಹಿ ಸತ್ಯಗಳೇನು ಎಂಬುದು ಆ ತೀರ್ಪು ನೀಡಿರುವ ಕರ್ಣನ್ ಎಂಬ ನ್ಯಾಯಮೂರ್ತಿಯವರ ಅರಿವಿಗೆ ಬಂದಿಲ್ಲವೆ? ನ್ಯಾಯಾಲಯದ ಈ ತೀರ್ಪನ್ನು ನಾವೆಲ್ಲ ಒಪ್ಪಿಕೊಳ್ಳಬೇಕೆಂದಾದರೆ ಮದುವೆ ಎಂಬ ಶುಭ ಕಾರ್ಯ, ಮಂಗಳಸೂತ್ರ, ಸಪ್ತಪದಿ… ಮುಂತಾದ ಪವಿತ್ರ ಆಚರಣೆಗಳಿಗೆಲ್ಲ ಏನರ್ಥ? ಮದುವೆಯೆಂಬುದು ಕೆಲವರಿಗೆ ಒಂದು ಆಟವಾಗಿರಬಹುದು. ಇನ್ನು ಕೆಲವರಿಗೆ ಅದೊಂದು ಗೃಹಸ್ಥ ಜೀವನಕ್ಕೆ ರಹದಾರಿ ಮಾತ್ರ ಎಂದೂ ಅನ್ನಿಸಿರಬಹುದು. ಇನ್ನು ಕೆಲವರಿಗೆ ಅದೊಂದು ಮಾಮೂಲಿ ಸಂಗತಿಯಾಗಿಯೂ ಕಂಡಿರಬಹುದು. ಆದರೆ ಭಾರತೀಯ ಸಂಸ್ಕೃತಿಯಲ್ಲಿ ಮದುವೆಗೆ ಅತ್ಯಂತ ಮಹತ್ವದ ಅರ್ಥ ಕಲ್ಪಿಸಲಾಗಿದೆ. ಮದುವೆಯೆಂಬುದು ಕೇವಲ ಗಂಡು-ಹೆಣ್ಣಿನ ನಡುವಿನ ಬಂಧನವಲ್ಲ. ಅದೊಂದು ಪವಿತ್ರ ಸಂಬಂಧ, ಅದೊಂದು ಪವಿತ್ರ ಕರ್ತವ್ಯ. ಮದುವೆ ಸಂದರ್ಭದಲ್ಲಿ ಭಾರತೀಯರು ಪಠಿಸುವ ‘ಧರ್ಮೇ ಚ, ಅರ್ಥೇ ಚ, ಕಾಮೇ ಚ ನಾತಿ ಚರಾಮಿ ನಾತಿ ಚರಾಮಿ’ ಎಂಬ ಮಂತ್ರ ನೀಡುವ ಸಂದೇಶವಾದರೂ ಏನು? ಧರ್ಮಾರ್ಥ ಕಾಮಗಳಲ್ಲಿ ನಾನೆಂದೂ ಅತಿಕ್ರಮಿಸುವುದಿಲ್ಲ. ನನ್ನ ಪತಿ ಅಥವಾ ಪತ್ನಿಯನ್ನು ತೊರೆದು ನಾನೆಂದೂ ಬೇರೆ ಹೋಗುವುದಿಲ್ಲ. ಇದೊಂದು ಪವಿತ್ರ ಸಂಬಂಧ. ಜನ್ಮ ಜನ್ಮಾಂತರದ ಸಂಬಂಧ ಎಂಬ ಭಾವನೆಯನ್ನು ಸ್ಫುರಿಸುವ ಈ ಮಂತ್ರ ಕೇವಲ ಮದುವೆ ಸಂದರ್ಭದಲ್ಲಿ ಪಠಣೆಗೆ ಮಾತ್ರ, ಆಚರಣೆಗಲ್ಲ ಎಂದು ಯಾರೂ ಭಾವಿಸುವುದಿಲ್ಲ. ಪಾಶ್ಚಾತ್ಯರು ಭಾರತೀಯ ಕುಟುಂಬಗಳನ್ನು ಆದರ್ಶವಾಗಿ, ಮೇಲ್ಪಂಕ್ತಿಯಾಗಿ ಭಾವಿಸುವುದು – ಭಾರತೀಯ ಪತಿ-ಪತ್ನಿಯರು ಜೀವನಪೂರ್ತಿ ಹೊಂದಿಕೊಂಡು, ಸಮರಸರಾಗಿ, ಸುಖದುಃಖಗಳನ್ನು ಸಮನಾಗಿ ಅನುಭವಿಸುತ್ತಾ ನೆಮ್ಮದಿಯಿಂದ ಬದುಕನ್ನು ಸಾಗಿಸುವ ಅದ್ಭುತ ಪರಿಗಾಗಿ. ಪಾಶ್ಚಾತ್ಯರಲ್ಲಿ ಮದುವೆಯೆಂಬುದು ಕೇವಲ ಒಂದು ಒಪ್ಪಂದ ಮಾತ್ರ. ಆ ಒಪ್ಪಂದವನ್ನು ಯಾವಾಗ ಬೇಕಾದರೂ ಮುರಿಯಬಹುದು. ಬದುಕಿನಲ್ಲಿ ಎಷ್ಟು ಬೇಕಾದರೂ ಮದುವೆಗಳನ್ನು ಮಾಡಿಕೊಳ್ಳಬಹುದು. ಭಾರತೀಯರಲ್ಲಿ ಹಾಗಲ್ಲ. ಬದುಕಿನಲ್ಲಿ ಅವರಿಗೆ ಒಂದೇ ಬಾರಿ ಮದುವೆ. ಒಬ್ಬಳೇ ಪತ್ನಿ ಅಥವಾ ಒಬ್ಬನೇ ಪತಿ. ಯಾವುದೋ ರೋಗದಿಂದ ಅಥವಾ ಆಕಸ್ಮಿಕವಾಗಿ ಪತಿ ಅಥವಾ ಪತ್ನಿ ನಿಧನ ಹೊಂದಿದರೆ ಮಾತ್ರ ಇನ್ನೊಬ್ಬ ಪತಿ ಅಥವಾ ಪತ್ನಿಯನ್ನು ಸ್ವೀಕರಿಸುವುದಕ್ಕೆ ಸಮಾಜದ ಸಮ್ಮತಿ ಇದೆ. ಅದೂ ಕೂಡ ಸಂಸಾರ ಸಾಗಿಸುವುದಕ್ಕೆ ಅನಿವಾರ್ಯ ಎಂಬ ಪರಿಸ್ಥಿತಿ ಉದ್ಭವಿಸಿದಾಗ ಮಾತ್ರ. ಹಿಂದೂ ಧರ್ಮ ಹೊರತುಪಡಿಸಿ ಬೇರೆ ಧರ್ಮಗಳಲ್ಲಿ ವಿವಾಹಕ್ಕೆ ಸಂಬಂಧಿಸಿ ಇಂತಹ ಕಟ್ಟುಪಾಡುಗಳಿಲ್ಲ. ಮುಸ್ಲಿಂ ಧರ್ಮದಲ್ಲಿ ಎಷ್ಟು ಮದುವೆಗಳನ್ನು ಬೇಕಾದರೂ ಒಬ್ಬ ಪುರುಷ ಮಾಡಿಕೊಳ್ಳಬಹುದು. ಆದರೆ ಹೀಗೆ ಮರುಮದುವೆ ಮಾಡಿಕೊಳ್ಳುವ ಮೊದಲು ಆತ ಆಗ ತನ್ನೊಂದಿಗಿರುವ ಪತ್ನಿಗೆ ತಲಾಖ್ ನೀಡಿ, ಜೊತೆಗೆ ಜೀವನಾಂಶ ಕೊಡಬೇಕಷ್ಟೆ. ಕೆಲವೊಮ್ಮೆ ಜೀವನಾಂಶ ನೀಡದೆ, ಮೊಬೈಲ್ ಮೆಸೇಜ್ ಮೂಲಕವೇ ತಲಾಖ್ ನೀಡಿ ಬೇರೊಂದು ಮದುವೆಯಾಗುವ ವಿದ್ಯಮಾನಗಳಿಗೂ ಈಗ ಕೊರತೆಯಿಲ್ಲ.

ಮದರಾಸ್ ಹೈಕೋರ್ಟ್ ಗಂಡು-ಹೆಣ್ಣಿನ ನಡುವಿನ ಸಮ್ಮತಿಯ ಲೈಂಗಿಕ ಸಂಬಂಧವನ್ನು ವಿವಾಹ ಎಂದು ಪರಿಗಣಿಸಬೇಕೆಂದು ಹೇಳಿದೆ. ಅಂದರೆ ಗಂಡು-ಹೆಣ್ಣಿನ ನಡುವಣ ದೈಹಿಕ ಸಂಬಂಧವೇ ಮದುವೆಯ ಮಾನದಂಡವೆಂಬುದು ಈ ತೀರ್ಪಿನ ಇನ್ನೊಂದು ವಿಶ್ಲೇಷಣೆ. ದೈಹಿಕ ಸಂಬಂಧದ ಏಕೈಕ ಕಾರಣಕ್ಕಾಗಿ ಮದುವೆ ಮಾಡಿಕೊಳ್ಳುವುದು ಭಾರತೀಯ ಸಂಸ್ಕೃತಿ ಅಲ್ಲ. ದೈಹಿಕ ಸಂಬಂಧವೊಂದೇ ಮದುವೆಯ ಉzಶವೂ ಅಲ್ಲ. ಉತ್ತಮ ಸಂತಾನ ನಿರ್ಮಾಣದ ಜೊತೆಗೆ, ಆ ಸಂತಾನ ಸಮಾಜ ಹಿತಕ್ಕೆ ಪೂರಕವಾಗುವಂತೆ ನೋಡಿಕೊಳ್ಳುವುದು, ನೆಮ್ಮದಿಯ ಕುಟುಂಬ ಜೀವನದ ಮೂಲಕ ಇತರರಿಗೆ ಮೇಲ್ಪಂಕ್ತಿಯಾಗಿರುವುದು ಕೂಡ ಇತರ ಉzಶಗಳಾಗಿವೆ. ಮದರಾಸ್ ಹೈಕೋರ್ಟಿನ ತೀರ್ಪು ಕೇವಲ ಗಂಡು- ಹೆಣ್ಣಿನ ನಡುವಿನ ಸಮ್ಮತಿಯ ಲೈಂಗಿಕ ಸಂಬಂಧವಷ್ಟನ್ನೇ ವಿವಾಹವೆಂದು ಪರಿಗಣಿಸಿರುವುದು ಭಾರತೀಯ ಸಂಸ್ಕೃತಿ ಹಾಗೂ ಮೌಲ್ಯಗಳಿಗೆ ಬಗೆದ ಘೋರ ಅಪಚಾರ. ಇಂತಹ ತೀರ್ಪು ಹಲವು ಬಗೆಯ ಅನಾಹುತಗಳಿಗೆ ಕಾರಣವಾದರೆ ಆಶ್ಚರ್ಯವೇನಿಲ್ಲ. ಈಗಂತೂ ಎಲ್ಲೆಡೆ ‘ಲವ್ ಜಿಹಾದ್’ ಪಿಡುಗಿನ ಆರ್ಭಟ. ಹಿಂದೂ ಯುವತಿಯರನ್ನು ಮರುಳು ಮಾಡಿ, ಅನಂತರ ಅವರೊಡನೆ ದೈಹಿಕ ಸಂಬಂಧ ಬೆಳೆಸಿ, ಆಮೇಲೆ ಇಸ್ಲಾಂಗೆ ಅವರನ್ನು ಮತಾಂತರಿಸಿ, ಹೆಸರು ಬದಲಾಯಿಸಿ, ‘ಕೆಲಸ’ ಮುಗಿದ ಮೇಲೆ ಪೊನ್ನಾನಿಗೋ ಅಥವಾ ದೂರದ ಕೊಲ್ಲಿ ರಾಷ್ಟ್ರಗಳಿಗೋ ಆ ಮುಗ್ಧ , ಅಮಾಯಕ ಯುವತಿಯರನ್ನು ಸಾಗಿಸಿ ಅಕ್ಷರಶಃ ಅವರ ಬದುಕನ್ನು ನರಕಸದೃಶಗೊಳಿಸುವ ವಿದ್ಯಮಾನಗಳು ನಿರಂತರವಾಗಿ ನಡೆಯುತ್ತಲೇ ಇವೆ. ನ್ಯಾಯಾಲಯದೆದುರು ಈ ಬಗ್ಗೆ ಸಾಕಷ್ಟು ಮೊಕದ್ದಮೆಗಳೂ ಕೂಡ ವಿಚಾರಣೆಗೆ ಬಂದಿವೆ. ಹೀಗಿರುವಾಗ ಮದರಾಸ್ ಹೈಕೋರ್ಟ್ ತೀರ್ಪು ‘ಲವ್ ಜಿಹಾದ್’ ಗುರಾಣಿ ಹಿಡಿದ ಮುಸ್ಲಿಂ ಯುವಕರಿಗೆ ‘ರೋಗಿ ಬಯಸಿದ್ದೂ  ಹಾಲು, ವೈದ್ಯ ನೀಡಿದ್ದೂ ಹಾಲು’ ಎಂಬಂತಾಗುವುದಿಲ್ಲವೆ? ದೈಹಿಕ ಸಂಬಂಧ ನಡೆದ ಮೇಲೆ ಮದುವೆಯಾಗಲೇ ಬೇಕೆಂದಾದರೆ ಒಬ್ಬ ಮುಸ್ಲಿಂ ಬೇಕೆಂದೇ ಆ ಯುವತಿ ಇಂತಹ ಸಂಬಂಧಕ್ಕೆ ಸಮ್ಮತಿಸಿದ್ದಳು ಎಂದು ಆತ ಎಲ್ಲರ ಮುಂದೆ ಬಹಿರಂಗಪಡಿಸಿದಾಗ, ಎಲ್ಲರೂ ಅವರಿಬ್ಬರ ಮದುವೆಗೆ ಅನಿವಾರ್ಯವಾಗಿ ಒಪ್ಪಿಗೆ ನೀಡಬೇಕಾಗುತ್ತದೆ. ಆಗ ಮಾತ್ರ ಆ ಯುವಕ ಹಿಂದೂ ಯುವತಿ ತನ್ನನ್ನು ಮದುವೆಯಾಗಬೇಕಾದರೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗಲೇಬೇಕು ಎಂದು ಪಟ್ಟು ಹಿಡಿದರೆ ಅದನ್ನು ಕಾನೂನು ಪ್ರಕಾರ ಪ್ರತಿಭಟಿಸುವ ಅವಕಾಶವೇ ಇರುವುದಿಲ್ಲ. ನ್ಯಾಯಾಲಯಕ್ಕೆ ಇವೆಲ್ಲ ಏಕೆ ಅರ್ಥವಾಗುತ್ತಿಲ್ಲವೋ ಗೊತ್ತಿಲ್ಲ. ನ್ಯಾಯಾಧೀಶರಾದವರಿಗೆ ಆ ದೇಶದ ಸಾಂಸ್ಕೃತಿಕ ಮೌಲ್ಯಗಳು, ಪರಂಪರೆ, ಕುಟುಂಬ ವ್ಯವಸ್ಥೆ, ಮಾನವೀಯ ಸೂಕ್ಷ್ಮ ಸಂಬಂಧಗಳು, ಸಾಮಾಜಿಕ ಕಟ್ಟುಪಾಡುಗಳು ಮುಂತಾದ ವಿಷಯಗಳ ಬಗ್ಗೆ ಸೂಕ್ತ, ಸೂಕ್ಷ್ಮ ಪರಿಜ್ಞಾನವಿಲ್ಲದಿದ್ದರೆ ಆಗುವುದೇ ಹೀಗೆ!

***

ಪಾಶ್ಚಾತ್ಯರು ಭಾರತೀಯ ಮೌಲ್ಯಗಳನ್ನು ಶ್ರೇಷ್ಠವೆಂದು ಪರಿಗಣಿಸಿ ಅದನ್ನು ತಮ್ಮ ಬದುಕಿನಲ್ಲಿ ರೂಢಿಸಿಕೊಳ್ಳಲು ಮುಂದಾಗುತ್ತಿರುವಾಗ, ಭಾರತೀಯರು ಮಾತ್ರ ಪಾಶ್ಚಾತ್ಯ ದೇಶಗಳು ಅನುಸರಿಸುತ್ತಿರುವ ಅರೆಬೆಂದ, ಮಾನವ ವಿರೋಧಿ ಮೌಲ್ಯಗಳಿಗೆ ಜೋತು ಬೀಳುತ್ತಿರುವುದು ಎಂತಹ ವಿಪರ್ಯಾಸ! ‘ಬಾಡಿಗೆ ತಾಯ್ತನ’ ಎಂಬುದು ಪಾಶ್ಚಾತ್ಯ ದೇಶದ ಒಂದು ಪರಿಕಲ್ಪನೆ. ೯ ತಿಂಗಳು ಹೊತ್ತು, ಅನಂತರ ಹೆರುವ ಸಂಕಷ್ಟ ಬೇಡವಾದ ತಾಯಿ ಬಾಡಿಗೆ ತಾಯಿ ಮೂಲಕ ಮಗು ಪಡೆಯುವುದೇ ಬಾಡಿಗೆ ತಾಯ್ತನ (Suಡಿಡಿogಚಿಛಿಥಿ).

ಇದೀಗ ‘ಬಾಡಿಗೆ ತಾಯ್ತನ’ ಭಾರತವನ್ನು ದೊಡ್ಡ ಮಟ್ಟದಲ್ಲಿ ಪ್ರವೇಶಿಸಿದೆ. ಯಾರೋ ಸಾಮಾನ್ಯರು ಈ ಪಾಶ್ಚಾತ್ಯ ಪರಿಕಲ್ಪನೆಯನ್ನು ಅಪ್ಪಿಕೊಂಡಿದ್ದರೆ ಇಲ್ಲಿ ಚರ್ಚಿಸುವ ಅಗತ್ಯವಿರಲಿಲ್ಲ. ಆದರೆ ಸೆಲೆಬ್ರಿಟಿಗಳೆನಿಸಿಕೊಂಡಿರುವ ಅಮೀರ್ ಖಾನ್, ಶಾರುಖ್ ಖಾನ್, ಸೊಹೈಲ್ ಖಾನ್‌ರಂತಹ ಜನಪ್ರಿಯ ನಟರೇ ಬಾಡಿಗೆ ತಾಯಿಯ ಮೂಲಕ ಮಗು ಪಡೆಯಲು ಹೊರಟಿದ್ದಾರೆ. ಮಾಧ್ಯಮಗಳಲ್ಲಿ ಈ ಕುರಿತು ವರದಿಗಳೂ ಬಂದಿವೆ. ಶಾರುಖ್ ಖಾನ್ ಹಾಗೂ ಆತನ ಪತ್ನಿ ಗೌರಿಗೆ ೧೫ ವರ್ಷದ ಆರ್ಯನ್ ಎಂಬ ಪುತ್ರ ಹಾಗೂ ೧೩ ವರ್ಷದ ಸುಹಾನ ಎಂಬ ಪುತ್ರಿ ಈಗಾಗಲೇ ಇದ್ದಾರೆ. ಈಗ ಅವರಿಗೆ ಮೂರನೇ ಮಗು ಬೇಕಂತೆ. ಅದಕ್ಕೆ ಬಾಡಿಗೆ ತಾಯಿಯ ಮೂಲಕ ಮಗು ಪಡೆಯಲು ಇಚ್ಛಿಸಿದ್ದಾರೆ. ಇದೇ ಜುಲೈ ವೇಳೆಗೆ ಬಾಡಿಗೆ ತಾಯಿಯ ಮೂಲಕ ಲಭಿಸುವ ಆ ಮಗು ಅವರ ಮಡಿಲು ಸೇರಲಿದೆಯಂತೆ.

ಅದೇ ರೀತಿ ಸಲ್ಮಾನ್ ಖಾನನ ತಮ್ಮ ಸೊಹೈಲ್ ಖಾನ್ ಮತ್ತು ಆತನ ಪತ್ನಿ ಸೀಮಾ ಬಾಡಿಗೆ ತಾಯಿಯ ಮೂಲಕ ತಮ್ಮ ಎರಡನೇ ಮಗುವನ್ನು ಪಡೆಯಲಿದ್ದಾರೆ. ಇದಕ್ಕೂ ಮುನ್ನ ೨೦೧೧ರ ಡಿಸೆಂಬರ್ ತಿಂಗಳಲ್ಲಿ ಇನ್ನೊಬ್ಬ ಜನಪ್ರಿಯ ನಟ ಅಮೀರ್ ಖಾನ್ ಹಾಗೂ ಆತನ ಪತ್ನಿ ಕಿರಣ್ ಬಾಡಿಗೆ ತಾಯಿಯ ಮೂಲಕ ತಮ್ಮ ಮಗುವನ್ನು ಪಡೆದಿದ್ದು ದೊಡ್ಡ ಸುದ್ದಿಯಾಗಿತ್ತು. ಇಲ್ಲಿ ಗಂಡು ಹೆಣ್ಣಿನ ಸಂಪರ್ಕವಿಲ್ಲದ ಭ್ರೂಣವನ್ನು ಚುಚ್ಚು ಮದ್ದಿನ ಮೂಲಕ ಬಾಡಿಗೆ ತಾಯಿಗೆ ಕಸಿ ಮಾಡಲಾಗುತ್ತದೆ. ಇದಕ್ಕೆ ಕಾನೂನು ೨೦೦೨ರಲ್ಲಿ ಪರವಾನಗಿ ನೀಡಿದೆಯಂತೆ. ಮಕ್ಕಳಿಲ್ಲದವರು ಬಾಡಿಗೆ ತಾಯಿಯಿಂದ ಮಗುವನ್ನು ಪಡೆಯಬಹುದು. ಬಾಡಿಗೆ ತಾಯಿಯಾಗುವವಳು ವಿವಾಹಿತಳಾಗಿರಲೇಬೇಕೆಂದಿಲ್ಲ. ವಿವಾಹಪೂರ್ವದಲ್ಲೇ ಅವಳು ಮಗುವಿಗೆ ಜನ್ಮ ನೀಡಬಹುದು ಅಥವಾ ವಿವಾಹ ಆದ ಬಳಿಕವೂ ಬೇರೆಯವರಿಗಾಗಿ, ಬೇರೆಯವರ ಭ್ರೂಣವನ್ನು ತನ್ನ ಗರ್ಭದಲ್ಲಿಟ್ಟು ಬೆಳೆಸಿ ಮಗು ಪಡೆಯಬಹುದು. ಬಾಡಿಗೆ ತಾಯಿಯಿಂದ ಮಗುವನ್ನು ಪಡೆಯುವವಳಿಗೆ ಮಕ್ಕಳಿಲ್ಲವೆಂಬ ವ್ಯಸನ. ಬಾಡಿಗೆ ಮಗುವನ್ನು ಕ್ರಯಕ್ಕೆ ನೀಡುವವಳಿಗೆ ದುಡ್ಡಿನ ದರ್ದು. ಮುಂದೆ ಇದೊಂದು ವ್ಯವಸ್ಥಿತ ದಂಧೆಯಾಗಿ ಬೆಳೆಯುತ್ತಾ ಹೋಗಲಾರದು ಎಂದು ಹೇಳಲು ಹೇಗೆ ಸಾಧ್ಯ? ಇಂತಹ ಪ್ರಸಂಗದಿಂದಾಗಿ ವಿವಾಹಿತ ಮಹಿಳೆ ಗರ್ಭಧರಿಸಿ ಮಗುವನ್ನು ಪಡೆಯುವ ವಿಚಾರವನ್ನು ಬಿಟ್ಟು ಸುಲಭದಲ್ಲಿ ಲಭಿಸುವ ಬಾಡಿಗೆ ತಾಯಂದಿರ ಮೊರೆ ಹೋಗುವ ಸಾಧ್ಯತೆಗಳು ಅಧಿಕವಾಗಬಹುದು. ಬಾಡಿಗೆ ತಾಯಿಯ ಪರಿಕಲ್ಪನೆ ನೈತಿಕತೆಗೆ ನೀಡಿದ ದೊಡ್ಡ ಹೊಡೆತವೆಂದೇ ಹೇಳಬೇಕಾಗಿದೆ. ಒಂದು ಕಾಲದಲ್ಲಿ ಪರಪುರುಷನನ್ನು ಮುಟ್ಟುವುದಕ್ಕೂ ಹಿಂಜರಿಯುತ್ತಿದ್ದ ಮಹಿಳೆ ಇವತ್ತು ಪರಪುರುಷನ ವೀರ್ಯವನ್ನು ಚುಚ್ಚು ಮದ್ದಿನ ಮೂಲಕ ತನ್ನೊಳಗೆ ಧರಿಸಿ ತಾಯಿಯಾಗಲು ಮುಂದಾಗುತ್ತಿರುವುದು ಪ್ರಕೃತಿದತ್ತ ಕ್ರಿಯೆಗಳಿಗೆ ಮಾಡಿದ ಅಪಚಾರವಲ್ಲದೆ ಮತ್ತೇನು?

ಒಬ್ಬ ಸ್ತ್ರೀ ಬಾಡಿಗೆಗೋಸ್ಕರ ಯಾರೋ ಗಂಡಸಿನ ಮಗುವನ್ನು ೯ ತಿಂಗಳು ಹೊತ್ತು, ನರಕಯಾತನೆ ಅನುಭವಿಸಿ ಹೆರುತ್ತಾಳೆ. ಆದರೆ ಅದರ ಆಟ ಪಾಠಗಳನ್ನು ನೋಡಿ ನಲಿಯುತ್ತಾ, ಮಗುವಿಗೆ ಕೈಯ್ಯಾರೆ ಉಣಿಸುತ್ತಾ ಆರೈಕೆ ಮಾಡುವ ಭಾಗ್ಯ ಮಾತ್ರ ಆಕೆಗಿರುವುದಿಲ್ಲ. ಮಗುವನ್ನು ಹೆತ್ತ ಕೂಡಲೇ ಅದನ್ನು ಬೇರೊಬ್ಬಳಿಗೆ ಬಿಟ್ಟುಕೊಡುತ್ತಾಳೆ. ಮಗುವಿನ ಮುಖವನ್ನೂ ನೋಡದೆ ಇರಬಲ್ಲವಳಾಗುತ್ತಾಳೆ ಎಂದರೆ ಅವಳದು ಎಂತಹ ನಿಸ್ಸಹಾಯಕ ಸ್ಥಿತಿ ಆಗಿರಬಹುದು? ಟಿ.ವಿ.ಗಳಲ್ಲಿ ಮಾನವೀಯತೆ ಬಗ್ಗೆ ಗಂಟೆಗಟ್ಟಲೆ ಉಪದೇಶಿಸುವ ಅಮೀರ್‌ಖಾನ್, ಸಿನಿಮಾಗಳಲ್ಲಿ ಮನುಷ್ಯ ಸಂಬಂಧಗಳ ಬಗ್ಗೆ ಡೈಲಾಗ್ ಹೊಡೆಯುವ ಶಾರುಖ್ ಖಾನ್‌ಗಳು ಬಾಡಿಗೆ ತಾಯಂದಿರ ಮೂಲಕ ಮಗುವನ್ನು ಪಡೆಯುತ್ತಾರೆಂದರೆ, ಹೆಣ್ತನಕ್ಕೆ , ತಾಯ್ತನಕ್ಕೆ ಕಾಸಿನ ಬೆಲೆ ಕಟ್ಟುತ್ತಾರೆಂದರೆ ಅವರು ಯಾವ ಅತ್ಯಾಚಾರಿಗಳಿಗೆ ಕಡಿಮೆ? ನೀವೇ ಹೇಳಿ!

ಇಷ್ಟಕ್ಕೂ ಈ ಖಾನ್‌ಗಳಿಗೆ ಮಕ್ಕಳನ್ನು ಹೆತ್ತುಕೊಟ್ಟ ಆ ನಿರ್ಭಾಗ್ಯ ತಾಯಂದಿರು ಯಾರೆನ್ನುವುದು ಜಗತ್ತಿಗೆ ಗೊತ್ತಾಗುವುದಿಲ್ಲ. ಒಬ್ಬ ಹೆಣ್ಣು ತನ್ನ ಕಡು ದಾರಿದ್ರ್ಯ ನೀಗುವುದಕ್ಕಾಗಿ ಬಾಡಿಗೆ ತಾಯಿಯ ಪಾತ್ರ ವಹಿಸುತ್ತಾಳೆ ಎನ್ನುವುದು ಗುಟ್ಟಲ್ಲ. ಆದರೆ ಒಬ್ಬ ಹೆಣ್ಣಿನ ಕಡುಬಡತನ, ಒಂಟಿತನ, ನಿಸ್ಸಹಾಯಕತೆಗಳನ್ನು ದುರುಪಯೋಗಪಡಿಸಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ? ಅವಳಿಗೆ ಬದುಕು ಕಟ್ಟಿಕೊಳ್ಳಲು ನೆರವಾಗುವುದು ಬಿಟ್ಟು ಹೀಗೆ ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡಿರುವ ಈ ಖಾನ್‌ಗಳನ್ನು ಬಂಧಿಸಿ ಕಂಬಿ ಹಿಂದೆ ಕೊಳೆಯುವಂತೆ ಮಾಡಿದರೆ ಯಾರಿಗೂ ಪಾಪ ಬರಲಿಕ್ಕಿಲ್ಲ. ಅಮೀರ್, ಶಾರುಖ್, ಸೊಹೈಲ್‌ರಿಗೆ ಈಗಾಗಲೇ ಮಕ್ಕಳಿದ್ದಾರೆ. ಮಕ್ಕಳೇ ಇಲ್ಲ ಎಂಬ ಸ್ಥಿತಿಯಂತೂ ಇಲ್ಲ. ಇನ್ನಷ್ಟು ಮಕ್ಕಳು ಬೇಕೆಂದಾದರೆ ಭಾರತದಲ್ಲಿ , ಜಗತ್ತಿನಲ್ಲಿ ಸಾವಿರ ಸಾವಿರ ಅನಾಥ ಮಕ್ಕಳಿವೆ. ಅವುಗಳ ಪೈಕಿ ಕೆಲವನ್ನು ದತ್ತು ಪಡೆದು ಏಕೆ ಪುಣ್ಯ ಕಟ್ಟಿಕೊಳ್ಳಬಾರದು? ಅಂತಹ ಅನಾಥ ಮಕ್ಕಳಿಗೆ ಬದುಕು ಕರುಣಿಸಿದ ಹೃದಯವಂತಿಕೆಗೆ ಏಕೆ ಪಾತ್ರರಾಗಬಾರದು? ಟಿ.ವಿ. ವಾಹಿನಿಯಲ್ಲಿ ಗರ್ಭಿಣಿ, ಬಾಣಂತಿಯರ ಆರೈಕೆಗೆ ಪುಕ್ಕಟೆ ಸಲಹೆ ನೀಡುವ ಅಮೀರ್ ಖಾನ್‌ಗೆ ಇಂತಹ ‘ಹೃದಯವಂತಿಕೆ’ಯ ಕೆಲಸ ಖಂಡಿತ ಇಷ್ಟವಿಲ್ಲ. ತಮ್ಮ ವೀರ್ಯಾಣುಗಳಿಂದಲೇ ಹುಟ್ಟಿದ ಮಕ್ಕಳನ್ನು ಮಾತ್ರ ಸಾಕುವ ‘ದೊಡ್ಡ ಮನಸ್ಸು’ ಇವರದು!

ಹೆಣ್ತನಕ್ಕೆ, ತಾಯ್ತನಕ್ಕೇ ಅವಮಾನಿಸುವ ಇಂತಹ ಖಾನ್‌ಗಳಿಗೆ ಯಾವುದರಿಂದ ಹೊಡೆಯಬೇಕು? ನೀವೇ ತೀರ್ಮಾನಿಸಿ.

Leave a Reply

Your email address will not be published.

This site uses Akismet to reduce spam. Learn how your comment data is processed.