ದಿ.29/3/2022ರ ಮಂಗಳವಾರ ಸಂಜೆ 6-30ರಿಂದ
ಶಿವಮೊಗ್ಗದ ಕರ್ನಾಟಕ ಸಂಘ ಭವನದಲ್ಲಿ ಕಳಸದ
ಬಾಲಕೃಷ್ಣ ಕಾಮತ್‌ರವರು ರಚಿಸಿದ ದೇಶಭಕ್ತಿ ಗೀತೆಗಳ ಸಂಕಲನ ‘ಧ್ಯೇಯ ಕಾರಂಜಿ’ ಪುಸ್ತಕ ಲೋಕಾರ್ಪಣೆಗೊಂಡಿತು‌.


ಆಶಯ ಗಾಯನವನ್ನು ಶ್ರೀಮತಿ ನಂದಿನಿ ಬಸವರಾಜ್ ಅವರು ಹಾಡಿದರು.ಶಿವಮೊಗ್ಗದ ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷರಾದ ಡಾ. ಸುಧೀಂದ್ರ ಅವರು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಮಧ್ಯೆ ಮಧ್ಯೆ ಶ್ರೀಯುತ  ಬಾಲಕೃಷ್ಣ ಕಾಮತ್ ರವರು ರಚಿಸಿದ ಗೀತೆಗಳ ಗಾಯನವನ್ನು ಪೃಥ್ವಿ ಗೌಡ, ವಿನಯ್, ಕಾರ್ತಿಕ್, ರೇವತಿ ರಾಜಕುಮಾರ್, ರವಿ ಚಕ್ರವರ್ತಿ, ಸುಬ್ರಾಯ ಹೊಸಹಳ್ಳಿ, ಡಾ. ಸುಧೀಂದ್ರ ಇವರು ನಡೆಸಿಕೊಟ್ಟರು. ಅಲ್ಲದೆ ಸ್ವತಃ ಕವಿ ಬಾಲಕೃಷ್ಣ ಕಾಮತ್ ದಂಪತಿಗಳ ಪತಿ ಪತ್ನಿ ಒಟ್ಟಿಗೆ ಗಾಯನವೂ ಇತ್ತು.

ಹಿರಿಯ ಪ್ರಚಾರಕರಾದ ಶ್ರೀ ಸು. ರಾಮಣ್ಣನವರು ಮಾತನಾಡುತ್ತಾ  ಕೆಲವರು ಸಂಘಟಕರಾಗುತ್ತಾರೆ, ಕೆಲವರು ಹೋರಾಟಗಾರರಾಗುತ್ತಾರೆ,ಕೆಲವರು ಮಾತುಗಾರರಾಗುತ್ತಾರೆ.ಇವೆಲ್ಲ ಗುಣಗಳು ವ್ಯಕ್ತಿಗಳಲ್ಲಿ ಮೊದಲಿನಿಂದಲೂ ಸುಪ್ತವಾಗಿ ಇತ್ತು, ಆದರೆ ಸಂಘದ ಸಂಸ್ಕಾರ ಸಿಕ್ಕಾಗ ಅರಳುತ್ತಾ ಹೋಯಿತು‌.ಹಾಗೆಯೇ ಇಲ್ಲಿಯೂಬಾಲಕೃಷ್ಣ ಕಾಮತ್ ಅವರೊಳಗೂ ಇದು ಬೀಜರೂಪದಲ್ಲಿತ್ತು, ಸಂಘದ ಸಂಸ್ಕಾರ ಸಿಕ್ಕಿ ನೂರಾರು ಹಾಡುಗಳು ಹುಟ್ಟಿದವು.ಸಂಘದ ಮುಖಾಂತರ ದೇಶಕ್ಕೆ ಈ ಹಾಡುಗಳು ಸಮರ್ಪಿತವಾದವು,ಅದು ಹೇಗೆ ಗೊತ್ತಾಯಿತು ಎಂದರೆ, ಜನ ಅದನ್ನು ಸ್ವೀಕಾರ ಮಾಡಿದ ರೀತಿಯಿಂದ ಅದು ನಿರೂಪಿತವಾಯಿತು.ಇಡಿಯ ಕರ್ನಾಟಕದ ಜನ ಅದನ್ನು ಸ್ವೀಕಾರ ಮಾಡಿದರು‌ಆಗ ಸಂಸ್ಕೃತ ಭಾರತಿಯವರಿಗೆ ಅನ್ನಿಸಿತು,ಇಷ್ಟು ಒಳ್ಳೆಯ ಹಾಡು ಸಂಸ್ಕೃತದಲ್ಲಿಯೂ ಇರಬೇಕು ಎಂದು ಅನುವಾದ ಮಾಡಿಸಿದರು.ಕನ್ನಡದ ಈ ಹಾಡುಗಳನ್ನು ಹಿಂದಿಗು ಅನುವಾದ ಮಾಡಿಸಲಾಯಿತು.ಕನ್ನಡದ ಈ ಹಾಡುಗಳನ್ನು ದೇಶದ ಜನ ಸ್ವೀಕಾರ ಮಾಡಿದರು ಎಂದು ಮಾತನಾಡಿದರು.

ಹಿರಿಯ ಪತ್ರಕರ್ತ ಶ್ರೀ ದು.ಗು.ಲಕ್ಷ್ಮಣ, ರಾಜೇಂದ್ರ ಭಟ್ ಶಿರಸಿ ಮುಂತಾದ ಹಲ ಹಿರಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.