ಇಂದಿನ ದಿನಗಳಲ್ಲಿ ಒತ್ತಡದ ಜೀವನಶೈಲಿಯಿಂದ ಪ್ರತಿಯೊಬ್ಬರಿಗೂ ನಾನಾ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಅದರಲ್ಲೂ ಕಲುಶಿತ ವಾತಾವರಣದಿಂದ ಮಕ್ಕಳು, ವಯಸ್ಕರು ಹಾಗೂ ವಯಸ್ಸಾದವರಲ್ಲಿ ಅತಿ ಹೆಚ್ಚಾಗಿ ಅಸ್ತಮಾ ಎಂಬ ಕಾಯಿಲೆ ಉಲ್ಬಣಗೊಳ್ಳುತ್ತಿದೆ. ಇದೊಂದು ಅಪಾಯಕಾರಿ ಕಾಯಿಲೆಯೂ ಹೌದು. ಈ ಕಾರಣಕ್ಕಾಗಿ ಸಾರ್ವಜನಿಕರಿಗೆ ರೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಮೇ 7 ರಂದು ವಿಶ್ವ ಅಸ್ತಮಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಈ ದಿನವು ಜಗತ್ತಿನಾದ್ಯಂತ ರೋಗಿಗಳನ್ನು ಆರೈಕೆ ಮಾಡುವ ಮೂಲಕ ಆರೋಗ್ಯ ಸುಧಾರಿಸುವುದು ಇದರ ಮುಖ್ಯ ಗುರಿ ಹೊಂದಿದೆ. ಈ ವರ್ಷದ ವಿಶ್ವ ಅಸ್ತಮಾ ದಿನದ ಥೀಮ್‌ “Uncovering Asthma Misconceptions”.

ಇತಿಹಾಸ
ವಿಶ್ವ ಆರೋಗ್ಯ ಸಂಸ್ಥೆ (WHO), ನ್ಯಾಷನಲ್ ಹಾರ್ಟ್, ಲಂಗ್ ಮತ್ತು ಬ್ಲಡ್ ಇನ್‌ಸ್ಟಿಟ್ಯೂಟ್ ಮತ್ತು USA ಅಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಜೊತೆ ಕೈಜೋಡಿಸಿ 1993ರಲ್ಲಿ ಗ್ಲೋಬಲ್ ಇನಿಶಿಯೇಟಿವ್ ಫಾರ್ ಆಸ್ತಮಾ (GINA) ಅನ್ನು ರಚಿಸಿತು.
ಐದು ವರ್ಷಗಳ ನಂತರ ಮೊದಲ ವಿಶ್ವ ಆಸ್ತಮಾ ದಿನವನ್ನು 1998 ರಲ್ಲಿ ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷವೂ ವಿಶ್ವ ಆಸ್ತಮಾ ದಿನವನ್ನಾಗಿ ಆಚರಿಸಲಾಗುತ್ತದೆ.
2016ರಲ್ಲಿ ಆಸ್ತಮಾಕ್ಕೆ ಸಂಬಂಧಿಸಿದ ಸಂಖ್ಯೆಗಳು ಆಘಾತಕಾರಿ ಅಂಶಗಳು ಜಾಗತಿಕವಾಗಿ ಆಸ್ತಮಾ ಹೊಂದಿರುವ ಜನರ ಸಂಖ್ಯೆ 339 ಮಿಲಿಯನ್‌ಗಿಂತಲೂ ಹೆಚ್ಚಿದೆ. ಜಾಗತಿಕವಾಗಿ ಅನಾರೋಗ್ಯದಿಂದ ಸಾವನ್ನಪ್ಪಿದವರ ಸಂಖ್ಯೆ 4,17,918 ಕ್ಕೆ ದಾಖಲಾಗಿದೆ.


ಆಸ್ತಮಾ ವಿಧಗಳು: ವಯಸ್ಸು, ಆರೋಗ್ಯ ಸ್ಥಿತಿಗತಿ ಹಂತವನ್ನು ಪರಿಗಣಿಸಿ ಆಸ್ತಮಾವನ್ನು ವಿವಿಧ ವಿಧಗಳಿಂದ ಗುರುತಿಸಬಹುದು. ಅಲರ್ಜಿಕ್ ಆಸ್ತಮಾ, ಅಲರ್ಜಿಯಲ್ಲದ ಆಸ್ತಮಾ, ಔದ್ಯೋಗಿಕ ಆಸ್ತಮಾ, ಮಿಮಿಕ್ ಆಸ್ತಮಾ, ಮಗುವಿನ ಆಸ್ತಮಾ, ವಯಸ್ಕರ ಆಸ್ತಮಾ, ಒಣ ಕೆಮ್ಮು ಆಸ್ತಮಾ ಹಾಗೂ ಔಷಧ ಪ್ರತಿಕ್ರಿಯೆ ಆಸ್ತಮಾ ಸೇರಿದಂತೆ ಅನೇಕ ವಿಧಗಳಿವೆ.


ರೋಗದ ಲಕ್ಷಣಗಳು
ವಿಪರೀತ ಕೆಮ್ಮು ,ಉಸಿರಾಟದ ಸಮಸ್ಯೆ ಕಾಡುವುದು, ಉಬ್ಬಸ, ಎದೆ ಬಿಗಿತ, ಹೆಚ್ಚು ಆಯಾಸ ಆಗುವುದು, ವ್ಯಾಯಾಮ ಮಾಡುವಾಗ ಉಸಿರು ಕಟ್ಟುವಂತಾಗುವುದು, ಕಿರಿಕಿರಿ, ಮುಂಗೋಪ, ಶ್ವಾಸಕೋಶ ಸಮಸ್ಯೆ, ಅಲರ್ಜಿ, ಶೀತದ ಲಕ್ಷಣಗಳು, ಗಂಟಲು ಕಟ್ಟವುದು, ನಿದ್ರಿಸುವಾಗ ಗೊರಕೆ. ತಲೆ ನೋವು ಸೇರಿದಂತೆ ಅನೇಕ ಲಕ್ಷಣಗಳು ಕಂಡುಬರುತ್ತದೆ.


ತಡೆಗಟ್ಟುವುದು ಹೇಗೆ
ಹವಾ ನಿಯಂತ್ರಣ ಯಂತ್ರ, ಅಲರ್ಜಿಯಿಂದ ದೂರವಿರಿ ನಿಮ್ಮ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಬೇಕು, ಮನೆಯಲ್ಲಿ ಸ್ವಚ್ಛತೆ ಕಾಪಾಡಬೇಕು ವಾಯು ಮಾಲಿನ್ಯದಿಂದ ದೂರವಿರಬೇಕು,
ವ್ಯಾಯಮ, ಉತ್ತಮ ಆರೋಗ್ಯವಾಗಿರುವಂತಹ ಆಹಾರ ಸೇವನೆ ಮಾಡಬೇಕು. ಸಿಗರೇಟ್, ಮೇಣದಬತ್ತಿಗಳು, ಧೂಪದ್ರವ್ಯ ಮತ್ತು ಪಟಾಕಿಗಳಿಂದ ಹೊಗೆಯನ್ನು ತಪ್ಪಿಸಿ ಅನಾರೋಗ್ಯದ ಜನರಿಂದ ದೂರವಿರುವುದು

ಮಹತ್ವ
ಆಸ್ತಮಾ ಬಗ್ಗೆ ಹೆಚ್ಚಿನ ಜನರಿಗೆ ತಿಳಿಸಲು ಈ ದಿನ ಒಂದು ಅವಕಾಶವನ್ನು ಕಲ್ಪಿಸಲಾಗಿದೆ. ಇದರ ಬಗ್ಗೆ ತಿಳಿಯದೆ ಇರುವವರಿಗೆ ಶಿಕ್ಷಣ ನೀಡುವ ಮೂಲಕ ರೋಗಿಗಳನ್ನು ಹೇಗೆ ಬೆಂಬಲಿಸುವುದು ಮತ್ತು ಅರ್ಥಮಾಡಿಕೊಳ್ಳಬೇಕೆಂದು ಕಲಿಸಲು ಸಹಕಾರಿಯಾಗುತ್ತದೆ.
ಆಸ್ತಮಾ ಹೊಂದಿರುವ ಜನರಿಗೆ ಸಹಾಯ ಮಾಡಲು ಸಮುದಾಯಗಳು ಒಗ್ಗೂಡುವಂತೆ ಮಾಡಲು ಸಹಕಾರಿಯಾಗುತ್ತದೆ.
ವಿಶ್ವ ಆಸ್ತಮಾ ದಿನವು ಪ್ರಪಂಚದಾದ್ಯಂತದ ಜನರನ್ನು ಒಟ್ಟುಗೂಡಿಸಲು ಪ್ರೋತ್ಸಾಹಿಸುತ್ತದೆ. ಇದು ಜಾಗತಿಕವಾಗಿ ಸಹಾನುಭೂತಿ ಮತ್ತು ದಯೆಯನ್ನು ಈ ದಿನ ಎತ್ತಿ ತೋರಿಸಲಾಗುತ್ತದೆ.

Leave a Reply

Your email address will not be published.

This site uses Akismet to reduce spam. Learn how your comment data is processed.