ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಏಳು ದಶಕಗಳ ಪಯಣವನ್ನು ಬಿಂಬಿಸುವ ‘ಧೇಯ ಯಾತ್ರೆ’ ಪುಸ್ತಕವನ್ನು ಶುಕ್ರವಾರ ದೆಹಲಿಯ ಅಂಬೇಡ್ಕರ್ ಅಂತರಾಷ್ಟ್ರೀಯ ಭವನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ ಅವರು ಬಿಡುಗಡೆ ಮಾಡಿದರು. ಮಾಜಿ ಚುನಾವಣಾ ಆಯುಕ್ತ ಸುನಿಲ್ ಅರೋರಾ, ಸಂಘದ ಪ್ರಚಾರ ಪ್ರಮುಖರಾದ ಸುನಿಲ್ ಅಂಬೇಕರ್, ಎಬಿವಿಪಿ ರಾಷ್ಟ್ರೀಯ ಅಧ್ಯಕ್ಷ ಛಗನ್ ಭಾಯಿ ಪಟೇಲ್ ಮತ್ತು ಎಬಿವಿಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸು.ಶ್ರೀ ನಿಧಿ ತ್ರಿಪಾಠಿ ಅವರು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದತ್ತಾತ್ರೇಯ ಹೊಸಬಾಳೆ ಮಾತನಾಡುತ್ತಾ, ‘ಧ್ಯೇಯ ಯಾತ್ರೆ’ ಪುಸ್ತಕವನ್ನು ಯಾವುದೇ ಆತ್ಮಸ್ತುತಿಗಾಗಿ ಪ್ರಕಟಿಸಿಲ್ಲ, ಆದರೆ ಮುಂಬರುವ ಕಾರ್ಯಕರ್ತರಿಗೆ ಸ್ಫೂರ್ತಿ ನೀಡುತ್ತಾ ಮತ್ತು ಆಧಾರವನ್ನು ಗಟ್ಟಿಯಾಗಿಸುವ ಸಲುವಾಗಿ ಮತ್ತು ವಿದ್ಯಾರ್ಥಿ ಸಂಘಟನೆಯಾಗಿ ದೊರಕಿರುವ ವಿಶಿಷ್ಟವಾದ ದರ್ಶನವನ್ನು ಎಬಿವಿಪಿ ಹೇಗೆ ವಿಕಸಿತಗೊಳಿಸಿದೆ, ಅದರ ಹಿಂದಿನ ಜನರ ಪರಿಚಯವಾಗಲಿ,ಅವರನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನಾವಾಗಲಿ ಎಂಬುದು ಇದರ ಉದ್ದೇಶ. ನಾವು ಇತಿಹಾಸವನ್ನು ಬರೆಯುವವರಲ್ಲ, ಬದಲಾಗಿ ನಿರ್ಮಾಣ ಮಾಡುವವರು. ಅಧಿಕಾರದಲ್ಲಿದ್ದವರ ಅನ್ಯಾಯದ ವಿರುದ್ಧ ವಿದ್ಯಾರ್ಥಿ ಸಮುದಾಯ ತನ್ನ ದನಿಯೆತ್ತಿದೆ. ಇತಿಹಾಸ ಬರೆದವರು ಜಗತ್ತಿನ ಅತಿ ದೊಡ್ಡ ವಿದ್ಯಾರ್ಥಿ ಸಂಘಟನೆ ಎಬಿವಿಪಿಗೆ ನ್ಯಾಯ ಕೊಡಿಸಿಲ್ಲ. ನಾವು ಇತಿಹಾಸ ತಯಾರಕರಲ್ಲ, ಆದರೆ ಇತಿಹಾಸ ತಯಾರಕರು. ಯುವಕರು ಸ್ಥಾಪಿತ ಶಕ್ತಿಯ ವಿರುದ್ಧ ಧ್ವನಿ ಎತ್ತುತ್ತಾರೆ, ಆದರೆ ಆ ದನಿ ಯಾವತ್ತಿಗೂ ದೇಶವನ್ನು ತುಂಡು ಮಾಡಲು ಹೊರಬರುವುದಿಲ್ಲ. ಸಮಾಜದೆಡೆಗೆ ವಿದ್ಯಾರ್ಥಿಯ ಕರ್ತವ್ಯಗಳೇನು,ಎಂಬುದನ್ನು ಅರಿತುಕೊಂಡು ಅಂತಹ ಆಂದೋಲನವನ್ನು ರೂಪಿಸುವ ಕೆಲಸವನ್ನು ವಿದ್ಯಾರ್ಥಿ ಪರಿಷತ್ತು ಮಾಡಿದೆ.”ಎಂದರು.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದ ಸುನೀಲ್ ಅಂಬೇಕರ್ ಮಾತನಾಡುತ್ತಾ,” ವಿದ್ಯಾರ್ಥಿ ಪರಿಷತ್ತಿನದ್ದು ನಿಂತ ನೀರಿನ ಇತಿಹಾಸವಲ್ಲ, ಪರಿಷತ್ತಿನ ಆಯಾಮಗಳು ನಿರಂತರವಾಗಿ ಹೆಚ್ಚುತ್ತಲೇ ಇವೆ. ಹೊಸ ಸಮಾಜದ ಜೀವನದ ವಿಷಯಗಳ ಮೇಲೆ ಚಳುವಳಿ ಮುಂದುವರಿಯುತ್ತದೆ. ವಿದ್ಯಾರ್ಥಿ ಪರಿಷತ್ತಿನ ಪಯಣಕ್ಕೆ ಒಂದು ‘ಧ್ಯೇಯ’ವಿದೆ, ನಾವೆಲ್ಲರೂ ಅದರ ಪ್ರಯಾಣಿಕರಾಗಿದ್ದೇವೆ. ಈ ನಿರಂತರ ಹರಿವನ್ನು ಪುಸ್ತಕವಾಗಿ ಪರಿವರ್ತಿಸುವ ಪ್ರಯತ್ನವನ್ನು ಮಾಡಲಾಗಿದೆ.”ಎಂದರು.
ಉಪಸ್ಥಿತರಿದ್ದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಮಾತನಾಡಿ, ವಿದ್ಯಾರ್ಥಿ ಪರಿಷತ್ತು ಕೇವಲ ಮಾತನಾಡುವ ವೇದಿಕೆಯಲ್ಲ, ಕಲಿಕೆಗೆ ವೇದಿಕೆಯಾಗಿದೆ. ನಾವು ಭಾರತೀಯ ವಿದ್ಯಾರ್ಥಿಗಳು ಇಂದು ವಿಶ್ವದ ಶ್ರೇಷ್ಠ ಸ್ಥಾನಗಳಲ್ಲಿ ತಲುಪಿದ್ದೆವೆ. ಆದರೆ ನಮ್ಮ ದೌರ್ಬಲ್ಯವೆಂದರೆ ನಾವು ಅತ್ಯಂತ ಭಾವನಾಜೀವಿಗಳು. ಸ್ವಾವಲಂಬನೆಯ, ಆತ್ಮ ನಿರ್ಭರತೆಯ ಮನೋಭಾವವು ಎಲ್ಲೆಡೆ ಪಸರಿಸಿದಾಗ, ಈ ಎಲ್ಲಾ ಸಮಸ್ಯೆಗಳು ಕೊನೆಗೊಳ್ಳುತ್ತವೆ.” ಎಂದರು.
ಎಬಿವಿಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಿಧಿ ತ್ರಿಪಾಠಿ ಮಾತನಾಡಿ, “ಧ್ಯೇಯ-ಯಾತ್ರೆಯು 75 ವರ್ಷಗಳ ಇತಿಹಾಸವನ್ನು ಸಂಗ್ರಹಿಸುವ ಪುಸ್ತಕವಾಗಿದ್ದು ಸೆಪ್ಟೆಂಬರ್ 11 ರ ಕಾಶ್ಮೀರ ರ್ಯಾಲಿ, 1980 ರಲ್ಲಿ ಶಿಕ್ಷಣದ ಭಾರತೀಕರಣದ ಚಳುವಳಿಯ ಪರಿಣಾಮ, ಇಂದು 370 ನಂತಹ ಸಮಸ್ಯೆಗಳು ಕೊನೆಗೊಂಡಿವೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನವು ಪ್ರಾರಂಭವಾಗಿದೆ. ಗುಜರಾತ್ ಪ್ರವಾಹ, ಒಡಿಶಾ ಮತ್ತು ಮಹಾರಾಷ್ಟ್ರದ ಬರಗಾಲದ ಸಂದರ್ಭದಲ್ಲಿ ಮಾಡಿದ ಸೇವಾ ಕಾರ್ಯಗಳನ್ನು ಪ್ರೇರಣೆಯನ್ನು ನೀಡುವುದಲ್ಲದೆ, ಕಾರ್ಯಕರ್ತರ ಅಪ್ರತಿಮ ಸೇವಾ ಮನೋಭಾವವನ್ನು ನೆನೆಯಲಾಗಿದೆ. ವಿವಿಧ ಆಯಾಮಗಳ ಬೆಳವಣಿಗೆ ಮತ್ತು 1 ಕೋಟಿ ಸದಸ್ಯತ್ವದ ಗುರಿಯೊಂದಿಗೆ, ಈ ಪ್ರಯಾಣವು ಮುಂದುವರಿಯುತ್ತದೆ.”ಎಂದರು.