ಶ್ರೀ ಜಯಕೃಷ್ಣ ಪ್ರತಿನಿಧಿ ಸಭಾ ಪಂಜಾಬ್ ಮತ್ತು ಫ್ರಂಟಿಯರ್ ಸ್ಥಾಪನೆಯಾಗಿ 100 ವರ್ಷಗಳು ಪೂರೈಸಿದ ಸಂದರ್ಭದಲ್ಲಿ ಶತಮಾನೋತ್ಸವವನ್ನು ಆಚರಿಸಲಾಗುತ್ತಿದ್ದು ಈ ಸಂದರ್ಭದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್  ಮತ್ತು ಜೈ ಕೃಷ್ಣ ಪಂಥದ ಪೂಜ್ಯ ಮಹಂತರು ಮತ್ತು ಸಂತರ ಗೌರವಾನ್ವಿತ ಉಪಸ್ಥಿತಿಯಲ್ಲಿ ಹೊಸದಿಲ್ಲಿಯ ಕರೋಲ್‌ಬಾಗ್‌ನಲ್ಲಿರುವ ಶ್ರೀ ಸವಾಲಿ ಮೂರ್ತಿ ಮಂದಿರದ ಶಿಲಾನ್ಯಾಸವನ್ನು ನೆರವೇರಿಸಲಾಯಿತು.

ಸಮಾರಂಭದಲ್ಲಿ ಸರಸಂಘಚಾಲಕರಾದ ಡಾ.ಮೋಹನ್ ಭಾಗವತ್ ಅವರು ಮಾತನಾಡಿ, “ಹಿಂದೂ ಸಮಾಜ ಸಂಘಟಿತವಾಗಬೇಕಾದರೆ ಸಮತೆ ಅನಿವಾರ್ಯವಾಗಿದೆ. ಸಾಮಾಜಿಕ ಸಮಾನತೆ ಮತ್ತು ಹಿಂದೂ ಸಂಘಟನೆ ಎರಡು ಸಮಾನಾರ್ಥಕ ಪದಗಳು.ಇದನ್ನೇ ನಮ್ಮ ಪೂಜ್ಯ ತೃತೀಯ ಸರಸಂಘಚಾಲಕರಾದ ಬಾಳಾಸಾಹೇಬ್ ದೇವರಸ್ ಅವರು ಹೇಳುತ್ತಿದ್ದರು.” ಎಂದರು.

“ಶಾಂತಿಯಿಂದ ಮಾತ್ರವೇ ಉನ್ನತಿಯಾಗುತ್ತದೆ” ಎಂದು ಹೇಳಿದರು.  “ನಾವು ನೀತಿಯೊಂದಿಗೆ ಉನ್ನತಿಯನ್ನು ಪಡೆಯಬೇಕು, ಬದುಕಬೇಕು ಮತ್ತು ಇತರರನ್ನು ಸಹ ಬದುಕಲು ಬಿಡಬೇಕು.  ಇದನ್ನಧ ಅಹಿಂಸೆ ಎನ್ನುತ್ತಾರೆ.  ಭಾರತವು ಧರ್ಮ ಪರಾಯಣ ದೇಶವಾಗಿದೆ ಮತ್ತು ಧರ್ಮವು ನಾಲ್ಕು ಕಾಲುಗಳನ್ನು ಹೊಂದಿದೆ – ಸತ್ಯ, ಕರುಣೆ, ಪವಿತ್ರತೆ ಮತ್ತು ತಪಶ್ಚರ್ಯೆ.  ಸತ್ಯ, ಅಹಿಂಸೆ, ಶಾಂತಿ, ಸಮತೆ ಇಂದು ಅವುಗಳ ಆಚರಣೆಯಾಗಬೇಕು.  ಇಂದು ಏಪ್ರಿಲ್ 14 ಸಮಾನತೆಗೆ ಸಂಬಂಧಿಸಿದಂತೆ, ಸಮತೆ ಸಂಬಂಧಿಸಿದ ಅಂಬೇಡ್ಕರ್ ಅವದ ಜನ್ಮ ದಿನಾಚರಣೆಯನ್ನು ದೇಶದೆಲ್ಲೆಡೆ ಆಚರಿಸಲಾಗುತ್ತಿದೆಯೋ, ಅವರ ಬದುಕೇ ಸಾಮಾಜಿಕ ಅಸಮಾನತೆ ಹೋಗಲಾಡಿಸುವ ಕೆಲಸವಾಗಿತ್ತು.”

“ದೇವಾಲಯಗಳಿಗೆ ಮಹತ್ವವಿದೆ.  ಮಂದಿರಗಳು ನಮಗೆ ಶಾಂತಿಯನ್ನು ನೀಡುತ್ತವೆ, ದೇವಾಲಯದ ಕೇಂದ್ರವು ವಿಗ್ರಹವಾಗಿದೆ.ಮೂರ್ತಿಯಲ್ಲಿ ನಾವು ನಮ್ಮ ಆರಾಧ್ಯ ಜೀವನದ ಎಲ್ಲಾ ತತ್ತ್ವಗಳನ್ನು ನಮ್ಮ ಚಟುವಟಿಕೆಗಳಲ್ಲಿ ತೆಗೆದುಕೊಳ್ಳಲು ಪ್ರಾರಂಭಿಸಿದರೆ, ನಮ್ಮ ಆ ಅಭ್ಯಾಸದಲ್ಲಿ ಜೀವನದ ಅಂಶವನ್ನು ಅನ್ವಯಿಸುವ ಶಕ್ತಿಯನ್ನು ನಾವು ಅದರಿಂದ ಪಡೆಯುತ್ತೇವೆ.  ಮಾನವ ಸ್ವಭಾವವು ಒಳ್ಳೆಯತನದ ಕಡೆಗೆ ಒಲವು ತೋರುತ್ತದೆ. ವಿಷಮತೆಯ ವಿಷ ನಮ್ಮಲ್ಲಿ ಏರಿದ್ದರೆ ಅದನ್ನು ಹೊರತೆಗೆಯಬೇಕಿದೆ.  ಚಕ್ರಧರ ಸ್ವಾಮಿಗಳು ಗೀತೆಯ ಸಾರದ ಜ್ಞಾನವನ್ನೇ ಹೇಳಿದ್ದಾರೆ. ಅದೇ ತತ್ತ್ವ ಜ್ಞಾನವನ್ನು ಹೇಳಿದ್ದರೂ,ಕೇವಲ ಬಾಯಮಾತಿನಲ್ಲಿ ಅಲ್ಲ ಬದಲಾಗಿ ನಡವಳಿಕೆಯ ಮೂಲಕ ಹೇಳಿದರು.  ಯಾರನ್ನು ಸಮಾಜದಲ್ಲಿ ಜ್ಞಾನವನ್ನು ಪಡೆಯಲು ಅರ್ಹರಲ್ಲದವರೆಂದು ಪರಿಗಣಿಸಲಾಗಿತ್ತೋ,ಅವರನ್ನೂ ಸಹ ತಮ್ಮ ಜೊತೆಗೆ ಜೋಡಿಸಿಕೊಂಡರು.  ಸಂತರಿಗೆ ದೊರೆತಿರುವ ಸಮದೃಷ್ಟಿಯನ್ನು ಅವರು ಆ ಸಮಯದಲ್ಲಿಯೇ ಎಲ್ಲರಿಗೂ ಹಂಚುವ ಮಹತ್ವದ ಹೆಜ್ಜೆಯನ್ನು ಇಟ್ಟರು.

ಅವರು ಮಾತನಾಡುತ್ತಾ “ದೇಶದಲ್ಲಿ ಧರ್ಮವನ್ನು ಎತ್ತಿ ಹಿಡಿಯುವ ಕಾಲ ಬಂದಿದೆ. ಇದು ವಾಸುದೇವ ಶ್ರೀ ಕೃಷ್ಣನ ಆಶಯವಾಗಿದೆ ಎಂದು ಯೋಗಿ ಅರಬಿಂದೋ ಅವರು ಹೇಳಿದ್ದಾರೆ.  ಆದ್ದರಿಂದ, ಧರ್ಮದ ಉತ್ಥಾನದೊಂದಿಗೆ, ಭಾರತದ ಉನ್ನತಿಯ ಪ್ರಕ್ರಿಯೆಯು ಪ್ರಾರಂಭವಾಗಿದೆ. ಮತ್ತು ಅದು ಪರಿಪೂರ್ಣತೆಯತ್ತ ಸಾಗುತ್ತದೆ.  ಇದು ನಿಶ್ಚಿತವಾದದ್ದು ಮತ್ತು ಆದ್ದರಿಂದ ನೀವು ಧರ್ಮ ಕಾರ್ಯದ ಪ್ರಗತಿಗಾಗಿ ಯಾವ ಮಾರ್ಗದಲ್ಲಿ ನಡೆಯಲು ಪ್ರಯತ್ನಿಸುತ್ತೀರೋ ಅದರಲ್ಲಿ ನೀವು ಯಶಸ್ವಿಯಾಗುತ್ತೀರಿ.  ನಾವು ಹಾಗೆ ಜೋಡಿಸಿಕೊಳ್ಳುವುದೇ ನಮ್ಮ ಭಾಗ್ಯ, ಏಕೆಂದರೆ ನಾವು ಧರ್ಮಕಾರ್ಯದ ಸಾಧನಗಳಾಗುತ್ತಿರುವುದು ನಿಮಿತ್ತ ಮಾತ್ರ.ಆಚರಣೆಯಿಂದ ಧರ್ಮ ಹೆಚ್ಚಾಗುತ್ತದೆ, ಆ ಆಚರಣೆಯನ್ನು ನಾವು ನೆರವೇರಿಸಬಹುದು.” ಎಂದರು.

Leave a Reply

Your email address will not be published.

This site uses Akismet to reduce spam. Learn how your comment data is processed.