ಲೇಖಕರು, ಪಂಡಿತರು, ಅಂಕಣಕಾರರಾದ, ಖ್ಯಾತ ವಿದ್ವಾಂಸರೂ ಆದ ಡಾ. ಕೆ. ಎಸ್. ನಾರಾಯಣಾಚಾರ್ಯ ಇನ್ನಿಲ್ಲ. ಇಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬೆಂಗಳೂರಿನ ತಮ್ಮ ಮನೆಯಲ್ಲಿ ನಿಧನರಾದರು. ಡಾ. ಕೆ ಎಸ್ ನಾರಾಯಣಾಚಾರ್ಯಯ ನಿಧನಕ್ಕೆ ಆರೆಸ್ಸೆಸ್ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆಯವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಸುಪ್ರಸಿದ್ಧ ಲೇಖಕರೂ ಮೇರು ವಿದ್ವಾಂಸರೂ ಹಿಂದುತ್ವ-ರಾಷ್ಟ್ರೀಯತೆಯ ಪ್ರಖರ ಪ್ರತಿಪಾದಕರೂ ಆಗಿದ್ದ ಪ್ರೊ। ಕೆ.ಎಸ್. ನಾರಾಯಣಾಚಾರ್ಯರ ನಿಧನ ನಾಡಿಗೆ ಅತೀವ ದುಃಖ ತಂದಿದೆ. ಅವರ ಮರಣದಿಂದಾಗಿ ವಿದ್ವತ್ ಲೋಕಕ್ಕಷ್ಟೇ ಅಲ್ಲ, ಸಾಮಾನ್ಯ ಜನತೆಗೂ ಅಪಾರ ನೋವು ಹಾಗೂ ನಷ್ಟ ಉಂಟಾಗಿದೆ.
ರಾಷ್ಚ್ರಭಕ್ತಿ, ಸಂಸ್ಕೃತಿಗಳ ಪರಮ ಆರಾಧಕರಾಗಿದ್ದು ಅವುಗಳ ಬಗ್ಗೆ ಆಗ್ರಹದಿಂದ ಅಧಿಕಾರಪೂರ್ವಕವಾಗಿ ಹೇಳುತ್ತಿದ್ದ ಆಚಾರ್ಯರ ನಿಧನಕ್ಕೆ ತೀವ್ರ ಸಂತಾಪಗಳು. ಪರಮಾತ್ಮ ಎಲ್ಲರಿಗೂ ನೋವನ್ನು ಭರಿಸುವ ಶಕ್ತಿಯನ್ನೂ ದಿವಂಗತರಿಗೆ ಸದ್ಗತಿಯನ್ನೂ ನೀಡಲೆಂದು ಪ್ರಾರ್ಥನೆ.
ಎಂದು ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆಯವರು ಶ್ರದ್ಧಾಂಜಲಿ ಕೋರಿದ್ದಾರೆ.