
ಬೆಂಗಳೂರು: ಕರ್ನಾಟಕದ ಖ್ಯಾತ ವಾಗ್ಮಿಗಳಾದ, ದಕ್ಷಿಣ ಕನ್ನಡದ ಡಾ. ಕಲ್ಲಡ್ಕ ಪ್ರಭಾಕರ ಭಟ್ಟರು ಟೀಮ್ ಹಿಂದುತ್ವ ನಡೆಸುತ್ತಿರುವ ಕ್ಲಬ್ ಹೌಸ್ ಕಾರ್ಯಕ್ರಮವಾದ ‘ವಿರಾಟ್ ಹಿಂದೂ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡುವವರಿದ್ದಾರೆ.

ಕಲ್ಲಡ್ಕ ಪ್ರಭಾಕರ ಭಟ್ಟರು ದಶಕಗಳಿಂದ ಕಂಡ ಹಿಂದೂ ಸಮಾಜದ ಏಳಿಗೆ ಮತ್ತು ಏಳು- ಬೀಳು ಹಾಗೂ ಮುಂದಿನ ಭವಿತವ್ಯದ ಕುರಿತು ದಿಕ್ಸೂಚಿ ಭಾಷಣ ಮಾಡಲಿರುವುದನ್ನ ಕೇಳಿಯೇ ಕುತೂಹಲದ ನೆರಿಗೆಗಳು ಸದ್ದಿಲ್ಲದೆ ಎದ್ದಿವೆ. ಇವರ ಜೊತೆಗೆ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿಗಳ ದಿವ್ಯ ಸಾನ್ನಿಧ್ಯವಿರುತ್ತದೆ.
ಕಾರ್ಯಕ್ರಮದ ನಿರೂಪಣೆಯನ್ನು ಖ್ಯಾತ ಅಂಕಣಕಾರ ಪ್ರಖರ ವಾಗ್ಮಿ ರೋಹಿತ್ ಚಕ್ರತೀರ್ಥ ನೆಡೆಸಿಕೊಡಲಿದ್ದಾರೆ. ಜೊತೆಗೆ ಪ್ರಖ್ಯಾತ ಗಾಯಕಿ ರಮ್ಯ ವಸಿಷ್ಟ ಅವರಿಂದ ಪ್ರಾರ್ಥನೆ ಮತ್ತು ವಂದೇ ಮಾತರಂ ಗಾಯನ ನೆಡೆಯಲಿದೆ.
ಇದೇ ಆಗಸ್ಟ್ 30 ರಂದು ರಾತ್ರಿ 7.30 ಕ್ಕೆ ಕ್ಲಬ್ ಹೌಸ್ ನ Hindutva ಕ್ಲಬ್ನಲ್ಲಿ (ಪೇಜ್ ನಲ್ಲಿ) “ಹಿಂದೂ ಸಮಾವೇಶ”ವನ್ನು ಟೀಮ್ ಹಿಂದುತ್ವ ಅವರು ಆಯೋಜಿಸಿದ್ದಾರೆ. ನೀವು ಸಹ ಈ ಕಾರ್ಯಕ್ರಮಕ್ಕೆ ಸೇರಿಕೊಳ್ಳಲು ಈ ಕೆಳಗಿನ ಲಿಂಕ್ ಒತ್ತಿ https://www.clubhouse.com/event/xXgnQ7Xb