Bangalore January 19: Noted scholar Dr Ramachandra Bhat Kotemane will be the new Vice-Chancellor of reputed SVYASA Univerity near Prashanti Kuteeram, Jigani Bangalore. Dr HR Nagendra, who earlier serving as Vice-Chancellor of SVYAYA univerity, now promoted as Chancellor of the University replacing noted academician, thinker and spiritual leader Dr Pranav Pandya. The new announcement was made recently on Makara Sankranti.
Swami Vivekananda Yoga Anusandhana Samsthana or S-VYASA is a Yoga University declared deemed-to-be University under Section 3 of the UGC Act, 1956 vide Notification Number F.9-45/2001-U.3 dated 8/5/2001 of the Government of India. Yoga Research and Yoga Therapy – two Yoga fields which S-VYASA has poured life into! ( http://svyasa.org/ )
Over the years, S-VYASA has been substantiating scientific validation through Research @ S-VYASA. We have successfully published more than 221 papers which have all been indexed in Medline and/or Psychlit/Psychinfo. S-VYASA has carried itself as a Centre of Advanced Research (CAR) in Yoga and Neurophysiology accredited by the Indian Council of Medical Research (ICMR).
S-VYASA also houses one-of-its-kind Yoga Therapy Home with a 250-bed inpatient treatment facility called Arogyadhama. This is a Yoga Research Health Home which has been envisioned for prevention and treatment of Diseases, long-term rehabilitation and for Promotion of Positive Health.
Yoga Courses at our S-VYASA Yoga University are recognised by the University Grants Commission, Government of India. We now have 50 PhDs 100 MScs and over 350 students in various branches. We have so far produced 6 PhDs and 2 MDs from our University, one from HUA, 6 from Bangalore University.
S-VYASA campus is 32 kms away from Bangalore. The campus is called Prashanti Kutiram, the Abode of Peace. Lying in the lap of nature amidst greenery, the campus lies sprawling over 100 acres. The campus is about 15 kms from the bountiful Bannerughatta National Park.
S-VYASA has an exhaustive Yoga Library with a good collection of 15000 books, videos and books SVYP (Swami Vivekananda Yoga Prakashan) is the publication wing of S-VYASA. We have about 35 titles, Videos and Audios
Svyasa has, over the years, standardized such Advanced Yoga techniques as CM (Cyclic Meditation), PET (Pranic Energisation Technique), MSRT (Mind Sound Resonance Technique), MEMT (Mastering the Emotions Technique), MIRT (Mind Imagery Technique), VISAK (Vignana Sadhana Kausalya) and ANAMS (Anandamrita Sinchana)
International Yoga Conferences at S-VYASA have been very popular in attracting some of the best Academia IJOY or International Journal of Yoga has been officially launched and will soon be indexed. On the IJOY website, one can read entire research papers published freely. We are hoping to make this journal a platform to bring together all researches by all Schools of Yoga!
ಯೋಗಯಜ್ಞಕ್ಕಾಗಿ ವಿಶ್ವವಿದ್ಯಾಲಯ
ಜನವರಿ ೧೪ ಸಂಕ್ರಾಂತಿಯ ದಿನ. ಬೆಂಗಳೂರಿನಿಂದ ಬನ್ನೇರುಘಟ್ಟ ರಸ್ತೆಯಲ್ಲಿ ಮುನ್ನಡೆದರೆ ಜಿಗಣಿ ಕೈಗಾರಿಕಾನಗರದಿಂದ ಗ್ರಾಮೀಣ ಒಳಪ್ರದೇಶಕ್ಕೆ ನಡೆದರೆ ಅಲ್ಲಿ ನೀವು ವಿಶ್ವವ್ಯಾಪ್ತಿಯಿರುವ ಯೋಗವಿಶ್ವವಿದ್ಯಾಲಯವೊಂದನ್ನು ಕಾಣುತ್ತೀರಿ. ಸುಮಾರು ನೂರು ಎಕರೆ ಈ ಜಾಗದಲ್ಲಿ ವೀರಸಂನ್ಯಾಸಿ ವಿವೇಕಾನಂದರ ಜ್ಞಾನಯೋಗ, ಕರ್ಮಯೋಗ, ಭಕ್ತಿಯೋಗ ಮತ್ತು ರಾಜಯೋಗಗಳ ಸಂದೇಶಧ್ವನಿ ಅನುರಣಿಸುತ್ತಿರುತ್ತದೆ. ಇದೇ ವಿವೇಕಾನಂದ ಯೋಗವಿಶ್ವವಿದ್ಯಾಲಯ ಪ್ರಶಾಂತಿಕುಟೀರ.
ಈ ವರ್ಷದ ಸಂಕ್ರಾಂತಿ ದಿನದಂದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕೋಟೆಮನೆ ಗ್ರಾಮಸಂಜಾತರಾದ ಪ್ರೋ|| ರಾಮಚಂದ್ರಭಟ್ಟರು ಶ್ರೀವಿವೇಕಾನಂದ ಯೋಗವಿಶ್ವವಿದ್ಯಾಲಯದ ಕುಲಪತಿಗಳಾಗಿ ಪದಗ್ರಹಣ ಮಾಡಿದರು. ಶ್ರೀಯುತರು ತಮ್ಮ ಊರಿನ ಪಾಠಶಾಲೆಯಲ್ಲಿ ಗೋಕರ್ಣಕ್ಷೇತ್ರದಲ್ಲಿ ಅಲ್ಲಿಂದ ಮುಂದೆ ಮೈಸೂರಿನ ಮಹಾರಾಜ ಸಂಸ್ಕೃತಮಹಾಪಾಠಶಾಲೆಯಲ್ಲಿ, ಮಹಾರಾಜಕಾಲೇಜಿನಲ್ಲಿ, ಮಾನಸಗಂಗೋತ್ರಿಯಲ್ಲಿ ವೇದವೇದಾಂತವಿಜ್ಞಾನ ವಿದ್ಯಾಸೋಪಾನಗಳನ್ನು ವಿನಮ್ರವಾಗಿ ಏರುತ್ತಾ ರಾಷ್ಟ್ರೀಯ ಅಂತಾರಾಷ್ಟ್ರೀಯ ಖ್ಯಾತಿಯನ್ನು ಸಂಪಾದಿಸುತ್ತಾ ಬೆಂಗಳೂರಿನ ಸನಿಹದ ಮಾಗಡಿ ರಸ್ತೆಯ ಚನ್ನೇನಹಳ್ಳಿಯಲ್ಲಿರುವ ವೇದವಿಜ್ಞಾನಗುರುಕುಲವನ್ನೇ ತಮ್ಮಸಾಧನಕ್ಷೇತ್ರವನ್ನಾಗಿ ಮಾಡಿಕೊಂಡು ಮುಂದುವರೆದಿದ್ದಾರೆ.
2002 ರಿಂದ ಕೇಂದ್ರಸರಕಾರದ ಮಾನ್ಯತೆ ಪಡೆದು, ಶ್ರೀ ವಿವೇಕಾನಂದ ಯೋಗಾನುಸಂಧಾನ ಸಂಸ್ಥಾನವು ಪೂರ್ಣ ಪರಿಮಾಣದ ವಿಶ್ವವಿದ್ಯಾಲಯದ ರಾಷ್ಟ್ರೀಯ ಹೆದ್ದಾರಿಯುಲ್ಲಿ ದಾಪುಗಾಲಿಡುವಾಗ ಗುರುಕುಲದ ಸಹಕಾರವನ್ನು ಜೋಡಿಸಿಕೊಂಡಿತು. ವಿಶ್ವವಿದ್ಯಾಲಯದಲ್ಲಿರುವ ಯೊಗಾಧ್ಯಾತ್ಮವಿಭಾಗದಲ್ಲಿ ಡಾ| ರಾಮಚಂದ್ರಭಟ್ಟರವರು ವಿಭಾಗಾಧ್ಯಕ್ಷರಾಗಿ ನಿಯುಕ್ತರಾದರು. ಅಲ್ಲಿಂದ ಮುಂದೆ ವಿಶ್ವವಿದ್ಯಾಲಯದ ಅಧ್ಯಯನ ಸಂಶೋಧನ ವಿಭಾಗದಲ್ಲಿ ಸಕ್ರಿಯರಾಗಿ ಪಾಲ್ಗೊಂಡ ಇವರನ್ನು ವಿಶ್ವವಿದ್ಯಾಲಯದ 5 ವಿಭಾಗಗಳ ಶಿಕ್ಷಣಪ್ರಮುಖರನ್ನಾಗಿ (Dean of academic programs) ನಿಯೋಜಿಸಲಾಯಿತು.
ನಿಜವಾದ ಅರ್ಥದಲ್ಲಿ ವಿಶ್ವವಿದ್ಯಾಲಯ
ವಿಜ್ಞಾನದ ಇಂಜಿನಿಯರಿಂಗ್ ವಿಭಾಗದಲ್ಲಿ ಅತ್ಯುನ್ನತ ಪದವಿ ಪಡೆದ ಡಾ|| ಹೆಚ್. ಆರ್. ನಾಗೇಂದ್ರ ಅವರು ಅಮೇರಿಕಾದ ನಾಸಾದಲ್ಲಿ ಸೇವೆ ಸಲ್ಲಿಸಿ ಅನುಭವ ಪಡೆದವರು. ಮಾನ್ಯರಾದ ಶ್ರೀ ಹೋ. ವೆ. ಶೇಷಾದ್ರಿ, ಪ್ರಾ|| ಶ್ರೀ ಸತ್ಯನಾರಾಯಣಶಾಸ್ತ್ರಿಗಳು, ಶ್ರೀ ಲಕ್ಷ್ಮೀಅಮ್ಮ ಮುಂತಾದವರ ಪ್ರೇರಣೆಯಿಂದ ೮೦ರ ದಶಕದಲ್ಲಿ ಆನೇಕಲ್ ತಾಲೂಕಿನ ಭೂಪ್ರದೇಶದಲ್ಲಿ ಪ್ರಶಾಂತಿ ಕುಟೀರವನ್ನು ಸ್ಥಾಪಿಸಿದರು. ಡಾ| ಹೆಚ್. ಆರ್. ನಾಗರತ್ನಾ, ಶ್ರೀ ಮೊಹನಜೀ, ಶ್ರೀಮತೀ ಸುಭದ್ರಾಜೀ ಮುಂತಾದವರ ತಪಸ್ಸಿನ ಫಲವಾಗಿ ಆ ಜಾಗದಲ್ಲಿ ಇಂದು 30 ಕ್ಕಿಂತ ಹೆಚ್ಚು ರಾಷ್ಟ್ರಗಳಲ್ಲಿ ಮತ್ತು ಭಾರತದ ಹೆಚ್ಚಿನ ರಾಜ್ಯಗಳಲ್ಲಿ ಚಟುವಟಿಕೆಯ ಜಾಲಗಳನ್ನು ಹಬ್ಬಿಸಿಕೊಂಡ SVYASA ಸಂಸ್ಥೆ ಮುನ್ನಡೆದಿದೆ.
ಮುನ್ನಡೆಯ ಮಾರ್ಗ
ಯೋಗ ವೇದಾಂತ ವಿಜ್ಞಾನಗಳ ಆರ್ಷ ಆಧುನಿಕ ಕುಂಭಮೇಳದಂತೆ ಈ ವಿಶ್ವವಿದ್ಯಾಲಯ ಇಲ್ಲಿ ಮೈದಳೆದಿದೆ. ಇಲ್ಲಿನ ವಿಜ್ಞಾನ ವಿಭಾಗ ’ಅನ್ವೇಷಣ’ದಿಂದ ಸಜ್ಜಾದ ಶೋಧಪ್ರಬಂಧಗಳು ವಿಶ್ವವಿಖ್ಯಾತ Journalಗಳಲ್ಲಿ ಪ್ರಕಾಶಗೊಂಡಿದೆ. ಪ್ರತಿ ತಿಂಗಳು ಪ್ರಕಾಶಗೊಳ್ಳುವ ’ಯೋಗಸುಧಾ’ ಪತ್ರಿಕೆ ವಿಶ್ವವಿಖ್ಯಾತವಾಗಿದೆ. ಪ್ರತಿ ೨ ವರ್ಷಕ್ಕೊಮ್ಮೆ ನಡೆಯುವ ವಿಶ್ವ ಯೋಗಸಮ್ಮೇಳನದಿಂದ ಈ ಸಂಸ್ಥೆ ಸಾಧಕರ ಮನೆಮಾತಾಗಿದೆ. ಡಾ| ನಾಗರತ್ನಾ, ಡಾ| ಶ್ಯಮಂತಕ ಮಣಿ ಮುಂತಾದವರ ಯೋಗ ಆಧುನಿಕ ನೈಸರ್ಗಿಕ ಪೂರ್ಣಾತ್ಮಕ ಚಿಕಿತ್ಸಾ ವಿಧಾನ ಸಹಸ್ರಾರು ಜನರಿಗೆ ಆರೋಗ್ಯ ಭಾಗ್ಯ ನೀಡಿದೆ.
ಯೋಗ-ಅಧ್ಯಾತ್ಮ, ಯೋಗ-ಭೌತವಿಜ್ಞಾನ, ಯೋಗ-ನಿರ್ವಹಣವಿಜ್ಞಾನ, ಯೋಗ-ಜೀವವಿಜ್ಞಾನ, ಯೋಗ-ಮಾನವಿಕವಿಜ್ಞಾನ ಎಂಬ ೫ ವಿಭಾಗಗಳೊಂದಿಗೆ ಸಂಸ್ಕೃತ, ವೇದ, ವೇದಾಂತ, ಯೋಗ, ಆಯುರ್ವಿಜ್ಞಾನ ಮುಂತಾದ ಋಷಿಕಲ್ಪದ ತಿಳಿವಿನ ಬುತ್ತಿಯನ್ನು ಯುವಸಾಧಕರಿಗೆ ನೀಡುವ ಈ ವಿಶ್ವವಿದ್ಯಾಲಯ ನೂರಾರು ಅಂತರ್ಬಾಹ್ಯತಜ್ಞರು ಸಾವಿರಾರು ಛಾತ್ರಪ್ರಶಿಕ್ಷಣಾರ್ಥಿಗಳಿಂದ ಸಮಗ್ರ ವರ್ಷ ಚಿನ್ಮಯ ಚಿಲುಮೆಯಾಗಿರುತ್ತದೆ.
ನೇತೃತ್ವಕ್ಕೆ ಪುಷ್ಟಿ, ತುಷ್ಟಿ
೭೦ ವರ್ಷದ ಹಿರಿತನದಲ್ಲಿ ಡಾ| ನಾಗೇಂದ್ರರವರು ಸಂಸ್ಥೆಯ ಕುಲಾಧಿಪತಿ ಸ್ಥಾನವನ್ನು ಅಲಂಕರಿಸಿ ಮುನ್ನಡೆಸುತ್ತಾ ವಿಶ್ವವನ್ನೇ ಯೋಗಗ್ರಾಮವನ್ನಾಗಿ ಮಾಡುವ ಹಂಬಲವನ್ನು ಹೊತ್ತಿದ್ದಾರೆ. ಗುರುಕುಲಸಂಸ್ಕೃತಿಯ ಋಷಿಕಲ್ಪಕ್ಕೆ ಕಾಲೋಚಿತವಾದ ವೈಜ್ಞಾನಿಕ ದೃಷ್ಟಿಯನ್ನು ಜೋಡಿಸಿ ವಿಶ್ವವಿದ್ಯಾಲಯವನ್ನು ಮುನ್ನಡೆಸುವ ಸಂಕಲ್ಪವನ್ನು ಕುಲಪತಿಗಳಾದ ಡಾ| ರಾಮಚಂದ್ರಭಟ್ಟ್ ಕೋಟೆಮನೆ ಅವರು ಸ್ವೀಕರಿಸಿದ್ದಾರೆ. ಸಮಾಜದಲ್ಲಿರುವ ಸಜ್ಜನ ಸಾಧಕರು ಸಹಯೋಗ ನೀಡಬೇಕೆಂದು ಈ ಸಂದರ್ಭದಲ್ಲಿ ಇವರು ನಿವೇದಿಸಿಕೊಳ್ಳುತ್ತಾರೆ.
ವರದಿ: ಶ್ರುತಿಪ್ರಿಯ ಶರ್ಮಾ ಆಚಾರ್ಯಃ ವೇದವಿಜ್ಞಾನಗುರುಕುಲಮ್ ಬೆಂಗಳೂರು