HALASUR HINDU SAMAJOTSAV DIAS

HALASUR HINDU SAMAJOTSAV DIAS

HALASUR:

ಎಲ್ಲೆಲ್ಲೂ ಕೇಸರಿ ಕಲರವ, ಮೊಳಗಿದ ಭಾರತ್ ಮಾತಾ ಕೀ ಜೈ, ಹರಿದು ಬಂದ ಜನಸಾಗರ .ಇವು ಭಾನುವಾರ ಹಲಸೂರಲ್ಲಿ ಕಂಡು ಬಂದ ದೃಶ್ಯಾವಳಿ. ಇಲ್ಲಿನ ಆರ್‌ಬಿಎಎನ್‌ಎಂಎಸ್ ಮೈದಾನದಲ್ಲಿ ಭಾನುವಾರ ಹನೂಮತ್ ಶಕ್ತಿ ಜಾಗರಣ ಸಮಿತಿ ಆಯೋಜಿಸಿದ್ದ ಬೃಹತ್ ಹಿಂದೂ ಸಮಾಜೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಇಡೀ ದಂಡು ಪ್ರದೇಶ ಕೇಸರಿಮಯವಾಗಿತ್ತು.

HALASUR HINDU SAMAJOTSAV DIAS
HALASUR HINDU SAMAJOTSAV DIAS

ಆ ಭಾಗದ ಎಲ್ಲ ರಸ್ತೆಗಳೂ ಕೇಸರಿ ಬಾವುಟ, ಬ್ಯಾನರ್, ಬಂಟಿಂಗ್ಸ್‌ಗಳಿಂದ ತುಂಬಿದ್ದವು. ಹೀಗಾಗಿ ಇಡೀ ಪ್ರದೇಶ ಕೇಸರಿಮಯವಾಗಿ ಕಂಗೊಳಿಸುತ್ತಿತ್ತು. ಹಿಂದೂ ಸಮಾಜೋತ್ಸವದ ಹಿನ್ನೆಲೆಯಲ್ಲಿ ನಡೆದ ಎರಡು ಶೋಭಾಯಾತ್ರೆ ತನ್ನ ವಿಶಿಷ್ಟತೆಯಿಂದ ನೋಡುಗರ ಗಮನ ಸೆಳೆಯಿತು. ಪುಲಿಕೇಶಿನಗರ ವೃತ್ತದಿಂದ ಹೊರಟ ಶ್ರೀಕೃಷ್ಣದೇವರಾಯ ಶೋಭಾಯಾತ್ರೆಯು ಗಣೇಶ ದೇವಸ್ಥಾನ ಬಳಿಯ ಮೋರ್  ರಸ್ತೆ, ಕೋಲ್ಸ್ ಪಾರ್ಕ್, ಸಪ್ಪಿಂಗ್ಸ್ ರಸ್ತೆ, ತಿಮ್ಮಯ್ಯ ರಸ್ತೆ, ಕಾಮರಾಜ ರಸ್ತೆ, ಸೆಂಟ್ ಜಾನ್ ರಸ್ತೆ ಮೂಲಕ ಸಮಾಜೋತ್ಸವ ನಡೆದ ಆರ್‌ಬಿಎಎನ್‌ಎಂಎಸ್ ಮೈದಾನ ತಲುಪಿತು. ಜೋಗುಪಾಳ್ಯ ಆಟದ ಮೈದಾನದಿಂದ ಹೊರಟ ಶ್ಯಾಮಪ್ರಸಾದ್ ಮುಖರ್ಜಿ ಶೋಭಾಯಾತ್ರೆಯು ಜೋಗುಪಾಳ್ಯ ರಸ್ತೆ, ಹಲಸೂರು ಮಾರುಕಟ್ಟೆ ಬೀದಿ, ಗಂಗಾಧರ ಚೆಟ್ಟಿ ರಸ್ತೆ ಮೂಲಕ ಸಮಾಜೋತ್ಸವ ನಡೆದ ಆರ್ ಬಿಎಎನ್‌ಎಂಎಸ್ ಮೈದಾನ ತಲುಪಿತು. ಈ ಭಾಗದಲ್ಲಿ ತಮಿಳರೆ ಹೆಚ್ಚಿರುವ ಕಾರಣ ಆರೆಸ್ಸೆಸ್‌ನ ತಮಿಳುನಾಡು ಹಿರಿಯ ಪ್ರಚಾರಕ ಸುಂದರಜ್ಯೋತಿ ಅವರ ತಮಿಳು ಭಾಷಣಕ್ಕೆ ಭಾರೀ ಕರತಾಡನ ವ್ಯಕ್ತವಾಯಿತು.

“ಜಾತೀಯತೆಯ ಬೇರು ಕಡಿದು ಹಾಕಿ ಎಲ್ಲರನ್ನೂ ಪ್ರೀತಿಸುವುದನ್ನು ಹಿಂದುಗಳು ಕಲಿಯಬೇಕಿದೆ”

ರಾಮಜನ್ಮ ಭೂಮಿಯಲ್ಲಿ ಭವ್ಯ ಶ್ರೀ ರಾಮ ಮಂದಿರ ನಿರ್ಮಿಸುವ ಸಂಕಲ್ಪ ತೊಡುವಂತೆ ಮಧ್ಯಪ್ರದೇಶ ಬೃಂದಾವನ ಆಶ್ರಮದ ಪೂಜ್ಯ ಸಾಧ್ವಿ ಸರಸ್ವತಿ ಕರೆ ನೀಡಿದರು. ಹನುಮತ್ ಶಕ್ತಿ ಜಾಗರಣ ಸಮಿತಿ ಭಾನುವಾರ ಹಲಸೂರಿನ ಆರ್‌ಬಿಎಎನ್ ಎಂಎಸ್ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ಹಿಂದು ಸಮಾಜೋತ್ಸವದಲ್ಲಿ ಪಾಲ್ಗೊಂಡು ಅವರು ಪ್ರಧಾನ ಭಾಷಣ ಮಾಡಿದರು. ಅಯೋಧ್ಯೆ ರಾಮಜನ್ಮಭೂಮಿ ಎಂಬುದು ನಿರ್ವಿವಾದಿತ ಸಂಗತಿ. ಹೀಗಿರುವಾಗ ರಾಮಜನ್ಮಭೂಮಿಯಲ್ಲಿ ಮುಸ್ಲಿಮರಿಗೇಕೆ ಪಾಲು ಕೊಡಬೇಕು ಎಂದು ಪ್ರಶ್ನಿಸಿದ ಅವರು, ಮುಸ್ಲಿಮರಿಗೆ ಭಾಗ ಕೊಡಲಿಲ್ಲವೆಂದರೆ ದಂಗೆ ಏಳುತ್ತಾರೆಂಬ ಕಾರಣಕ್ಕೆ ಆಲಹಾಬಾದ್ ಹೈಕೋರ್ಟ್ ಅವರಿಗೂ ಪಾಲು ನೀಡಿ ಖಾಜಿ ನ್ಯಾಯ ಮಾಡಿದೆ. ಇದನ್ನು ಒಪ್ಪಲು ಸಾಧ್ಯವೇ ಇಲ್ಲವೆಂದು ಸಾಧ್ವಿ ಸರಸ್ವತಿ ಪ್ರತಿಪಾದಿಸಿದರು. ದೇಶ ಮತ್ತು ಧರ್ಮ ಸಂಕಷ್ಟದಲ್ಲಿರುವಾಗ ಹಿಂದೂ ಸಮಾಜ ಶಾಂತಿಮಂತ್ರ ಜಪಿಸುತ್ತ ಕೂರುವುದು ತರವಲ್ಲ. ಹಿಂದೂ ವಿರೋಧಿ ಶಕ್ತಿಗಳ ವಿರುದಟಛಿ ಖಡ್ಗ ಝಳಪಿಸಿ ಭಾರತ ಮಾತೆಗೆ ರಕ್ತ ತರ್ಪಣ ನೀಡುವ ಮೂಲಕ ಮಾತ್ರ ಶಾಂತಿ ಸ್ಥಾಪನೆ ಮಾಡಬೇಕಿದೆ.

ಹಿಂದೂಸ್ಥಾನಕ್ಕೆ ಕಳಶಪ್ರಾಯವಾಗಿರುವ ಕಾಶ್ಮೀರದಲ್ಲಿ ಹಿಂದೂಗಳು ಇಂದು ಅಲ್ಪಸಂಖ್ಯಾತರಾಗಿದ್ದು, ಧರ್ಮ ವಿರೋಧಿಗಳ ಹೊಡೆತ ತಾಳದೆ ದಿಲ್ಲಿಯ ಹಾದಿ-ಬೀದಿಗಳಲ್ಲಿ ಜೀವಿಸುವಂತಾಗಿದೆ. ಎಂದು ಆತಂಕ ವ್ಯಕ್ತಪಡಿ ಸಿದ ಸಾಧ್ವಿ, ಸಂಸತ್ ಭವನದ ಮೇಲೆ ದಾಳಿ ಮಾಡಿ ಸೆರೆ ಸಿಕ್ಕ ಅಪ್ಜಲ್ ಗುರುವಿಗೆ ಮರಣದಂಡನೆ ವಿಧಿಸುವಂತೆ ಸರ್ವೋಚ್ಛ ನ್ಯಾಯಾಲಯ ಆದೇಶಿಸಿದ್ದರೂ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿದೆ. ಅಲ್ಪಸಂಖ್ಯಾತರೇ ಆಗಿರುವ ಮುಸ್ಲಿಮರು ರಾಷ್ಟ್ರಪತಿ, ಸಿಖ್ ಸಮುದಾಯದ ಒಬ್ಬರು ಪ್ರಧಾನಿಯಾಗಲು ಭಾರತದಲ್ಲಿ ಮಾತ್ರ ಸಾಧ್ಯ ಎಂಬುದನ್ನು ಎಲ್ಲರೂ ಗಮನಿಸಬೇಕಿದೆ ಎಂದುರು. ಇಸ್ಲಾಂ ಧರ್ಮವನ್ನು ಅವಹೇಳನ ಮಾಡಿದರೆ ಯಾವುದೇ ಮುಸಲ್ಮಾನ ಸಹಿಸುವುದಿಲ್ಲ. ಆದರೆ, ಭಾರತಮಾತೆಗೆ ಅಪಮಾನವಾಗುತ್ತಿದ್ದರೂ ಭಾರತೀಯರು ಕೈಕಟ್ಟಿ ಕುಳಿತಿದ್ದೇವೆ. ಇದು ಹಿಂದೂ ಸಮಾಜಕ್ಕೆ ಹಿಂದೂಗಳೇ ಶತ್ರುಗಳಿದ್ದಂತೆ ಎಂದು ಸಾಧ್ವಿ ಸರಸ್ವತಿ ವ್ಯಾಖ್ಯಾನಿಸಿದರು.

ಚುನಾವಣೆ ಸಂದರ್ಭದಲ್ಲಿ ಹಣ ಮತ್ತಿತರೆ ತಾತ್ಕಾಲಿಕ ಆಮಿಷ ಒಡ್ಡುವವರಿಗೆ ಮರುಳಾಗದೆ ರಾಷ್ಟ್ರಭಕ್ತರಿಗೆ ಮತವನ್ನು ಮೀಸಲಿಡುವಂತೆ ಸಾಧ್ವಿ ಸರಸ್ವತಿ ಕರೆ ನೀಡಿದರು. ಈ ಕಾರ್ಯಕ್ಕೆ ಹಿಂದೂ ಸಮಾಜ ತನ್ನೊಳಗಿನ ಸಂಕುಚಿತ ಮನೋಭಾವನೆಯನ್ನು ಹೊಡೆದೊಡಿಸಿ ಸಂಘಟಿತರಾಗಬೇಕಿದೆ. ದೇಶದಲ್ಲಿ ಭ್ರಷ್ಟಾಚಾರ ಮತ್ತು ಆತಂಕವಾದ ವ್ಯಾಪಕವಾಗಿ ಬೆಳೆದು ನಿಂತಿದ್ದು, ಭಾರತವನ್ನು ರಾವಣ ರಾಜ್ಯವನ್ನಾಗಿಸಲಾಗುತ್ತಿದೆ. ಇದರ ವಿರುದಟಛಿ ಹಿಂದೂಗಳು ಸಿಡಿದೇಳಬೇಕಿದೆ. ಶಿಕ್ಷಣ ನೀಡಿಕೆ ಹೆಸರಿನಲ್ಲಿ ಶಾಲೆಗಳನ್ನು ತೆರೆದಿರುವ ಕ್ರೈಸ್ತ ಮಿಷನರಿಗಳು ಅಲ್ಲಿಂದಲೇ ಹಿಂದೂಗಳ ಮತಾಂತರ ಕಾರ್ಯವನ್ನು ನಡೆಸುತ್ತಿವೆ. ಇದನ್ನು ತಪ್ಪಿಸಲು ಹಿಂದೂ ಸಮಾಜದಲ್ಲಿ ಜಾಗೃತಿ ಮೂಡಬೇಕಿದೆ ಎಂದು ಅವರು ಘರ್ಜಿಸಿದರು.ಮಾತೃಭೂಮಿಗೆ ಅಪಮಾನವಾಗುವುದನ್ನು ಯಾವುದೇ ಹಿಂದೂ ಸಹಿಸಬಾರದು, ಭಾರತದಲ್ಲಿ ಜೀವಿಸಬೇಕಾದಲ್ಲಿ ಹಿಂದೂ ಸಮಾಜಕ್ಕೆ ನಿಷ್ಠೆ ತೋರಬೇಕು. ಇಲ್ಲದಿದ್ದಲ್ಲಿ ಅಂತಹವರ ಅಗತ್ಯ ಭಾರತಕ್ಕೆ ಬೇಕ್ಕಿಲ್ಲ. ಭಾರತದ ತಾಯಂದಿರು ಸ್ವಾಮಿ ವಿವೇಕಾನಂದ, ಛತ್ರಪತಿ ಶಿವಾಜಿ, ಭಗತ್ ಸಿಂಗ್ ರಂತಹವರಿಗೆ ಜನ್ಮ ನೀಡಬೇಕೇ ಹೊರತು ದೇಶದ್ರೋಹಿ ಅಫ್ಜಲ್‌ ಗುರುವಿನ ಸಂತಾನಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಅವರು ಮನವಿ ಮಾಡಿದರು. ಆದಿ ಜಾಂಬವ ಮಠದ ಶ್ರೀ ಷಡಕ್ಷರಿಮುನಿ ಸ್ವಾಮೀಜಿ ಆಶೀರ್ವಚನ ನೀಡಿದರು. ಆರೆಸ್ಸೆಸ್‌ನ ಹಿರಿಯ ಪ್ರಚಾರಕ ಸುಂದರಜ್ಯೋತಿ, ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಸಾಧು ರಂಗರಾಜನ್, ರಾಮಾನುಜಾಚಾರ‍್ಯ, ದಕ್ಷಿಣ ಆಫ್ರಿಕಾದ ಶಂಕರ ಮಿಷನ್‌ನ ಯೋಗಾನಂದ, ವೇದಾಂತ ಸ್ವಾಮೀಜಿ, ಮಾತಾ ರಾಮಪ್ರಿಯ ಅಂಬಾ, ಸಾಧ್ವಿ ಸರಸ್ವತಿ ಅವರ ತಂದೆ ಡಾ.ಮಿಶ್ರಾ ಮೊದಲಾದವರು ಉಪಸ್ಥಿತರಿದ್ದರು.

ಕಂಚಿನ ಕಂಠದ ಪ್ರಖರ ವಾಗ್ಮಿ ಮಧ್ಯಪ್ರದೇಶದ ಬೃಂದಾವನ ಆಶ್ರಮದ ಸಾಧ್ವಿ ಸರಸ್ವತಿ. ಕೇವಲ ೧೩ ವರ್ಷದ ಬಾಲ್ಯದಲ್ಲಿಯೇ ಸನ್ಯಾಸತ್ವ ಸ್ವೀಕರಿಸಿ ಹಿಂದೂ ಧರ್ಮದ ಪುನರುತ್ಥಾನದಲ್ಲಿ ತೊಡಗಿಸಿಕೊಂಡಿರುವ ಈ ಸಾಧ್ವಿಗೆ ಸ್ವತಃ ಆಕೆಯ ತಂದೆ ಡಾ. ಮಿಶ್ರಾ ಅವರೇ ಈ ಕಾರ್ಯದಲ್ಲಿ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಭಾನುವಾರ ಹಲಸೂರಿನ ಆರ್‌ಬಿಎಎನ್‌ಎಂಎಸ್ ಮೈದಾನದಲ್ಲಿ ಹನೂಮತ್ ಶಕ್ತಿ ಜಾಗರಣ ಸಮಿತಿ ಆಯೋಜಿಸಿದ್ದ ಬೃಹತ್ ಹಿಂದೂ ಸಮಾಜೋತ್ಸವದಲ್ಲಿ ಸಾಧ್ವಿ ಸರಸ್ವತಿ ತಮ್ಮ ಪ್ರಖರ ಭಾಷಣದಿಂದ ಎಲ್ಲರಗಮನ ಸೆಳೆದು ಸಮಾಜೋತ್ಸವಕ್ಕೆ ಕಳೆ ತಂದರು. ನಿರಂತರ ೪೫ ನಿಮಿಷಗಳ ಕಾಲ ಮಾಡಿದ ಭಾಷಣದಲ್ಲಿ ಭಾರತ, ಹಿಂದೂ ಸಮಾಜ ಎದುರಿಸುತ್ತಿರುವ ಸಮಸ್ಯೆ, ಸವಾಲುಗಳೆಲ್ಲವನ್ನೂ ಎಳೆ ಎಳೆಯಾಗಿ ಬಿಡಿಸಿಟ್ಟ ಸಾಧ್ವಿ ಸರಸ್ವತಿ ವಾಕ್ಚಾತುರ್ಯಕ್ಕೆ ವೇದಿಕೆಯಲ್ಲಿದ್ದ ಗಣ್ಯರು ತಲೆದೂಗಿದರು. ಆಕೆ ಭಾಷಣ ಮಾಡುವಾಗ ಇಡೀ ಮೈದಾನದಲ್ಲಿದ್ದ ಸಹಸ್ರಾರು ಜನರು ಮೂಕವಿಸ್ಮಿತವಾಗಿ ಆಲಿಸಿ ಸಾಧ್ವಿಗೆ ಜಯಘೋಷ ಹಾಕಿದರು.

–          ದೇಶದಲ್ಲಿ ಭ್ರಷ್ಟಾಚಾರ ಮತ್ತು ಆತಂಕವಾದ ವ್ಯಾಪಕವಾಗಿ ಬೆಳೆದು ನಿಂತಿದ್ದು, ಭಾರತವನ್ನು ರಾವಣ ರಾಜ್ಯವನ್ನಾಗಿಸಲಾಗುತ್ತಿದೆ. ಇದರ ವಿರುದಟಛಿ ಹಿಂದೂಗಳು ಸಿಡಿದೇಳಬೇಕಿದೆ. ಶಿಕ್ಷಣ ನೀಡಿಕೆ ಹೆಸರಿನಲ್ಲಿ ಶಾಲೆಗಳನ್ನು ತೆರೆದಿರುವ ಕ್ರೈಸ್ತ ಮಿಷನರಿಗಳು ಅಲ್ಲಿಂದಲೇ ಹಿಂದೂಗಳ ಮತಾಂತರ ಕಾರ್ಯವನ್ನು ನಡೆಸುತ್ತಿವೆ. ಇದನ್ನು ತಪ್ಪಿಸಲು ಹಿಂದೂ ಸಮಾಜದಲ್ಲಿ ಜಾಗೃತಿ ಮೂಡಬೇಕಿದೆ. ರಾವಣನಂತಿರುವ ತಥಾಕಥಿತ ಬುದಿಟಛಿಜೀವಿಗಳು ಮತಾಂತರಿತ ಮುಸ್ಲಿಂ, ಕ್ರೈಸ್ತರು ಸೀತೆಯನ್ನು(ಹಿಂದೂ ಯುವತಿ) ಅಪಹರಿಸುತ್ತಿದ್ದಾರೆ. ಹಿಂದೂ ಸಮಾಜ ಹನೂಮಾನ್ ಚಾಲೀಸ ಪಠಣ ಮಾಡಿದರೆ ಆ ಸೀತೆಯರು ನಮ್ಮ ಹತ್ತಿರ ಬರುತ್ತಾರೆ. ಈ ವಿಚಾರದಲ್ಲಿ ಪ್ರಾಮಾಣಿಕ ಪ್ರಯತ್ನವಾಗಲಿ.

ಕಜಂಪಾಡಿ ಸುಬ್ರಹ್ಮಣ್ಯ ಭಟ್ ಆರೆಸ್ಸೆಸ್ ಸಹಕಾರ್ಯವಾಹ, ಕರ್ನಾಟಕ ದಕ್ಷಿಣ ಪ್ರಾಂತ

–          ಹಿಂದೂ ಎಂದರೆ ಭಯೋತ್ಪಾದನೆಯಲ್ಲ ಜನಶಕ್ತಿ. ರಾಹುಲ್ ಗಾಂಧಿ ಈ ದೇಶದ ಚರಿತ್ರೆ ತಿಳಿದಿಲ್ಲ.ಮೊದಲು ಚರಿತ್ರೆ ತಿಳಿದು ನಂತರ ಮಾತನಾಡಲಿ.

ಸುಂದರ ಜ್ಯೋತಿ, ಆರೆಸ್ಸೆಸ್ ಹಿರಿಯ ಪ್ರಚಾರಕರು, ತಮಿಳುನಾಡು

–          ಜಾತೀಯತೆಯ ಬೇರು ಕಡಿದು ಹಾಕಿ ಎಲ್ಲರನ್ನೂ ಪ್ರೀತಿಸುವುದನ್ನು ಹಿಂದುಗಳು ಕಲಿಯಬೇಕಿದೆ. ಚುನಾವಣೆ ಸಂದರ್ಭದಲ್ಲಿ ಹಿಂದೂ ಸಮಾಜವನ್ನು ಗೌರವಿಸುವವರಿಗೆ ಮತ ನೀಡಬೇಕಿದೆ.

ಶ್ರೀಷಡಕ್ಷರಿ ಮುನಿ ಸ್ವಾಮೀಜಿ, ಆದಿಜಾಂಬವ ಮಠ, ಕೋಡಿಹಳ್ಳಿ, ಹಿರಿಯೂರು.

Leave a Reply

Your email address will not be published.

This site uses Akismet to reduce spam. Learn how your comment data is processed.