ರಾಷ್ಟ್ರೀಯ ಸ್ವಯಂಸೇವಕ ಸಂಘವು ಡಿಸೆಂಬರ್ ತಿಂಗಳಲ್ಲಿ ಕರ್ನಾಟಕ ರಾಜ್ಯಾದ್ಯಂತ ಎಲ್ಲ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಹಿಂದುತ್ವದ ಭಾವ ಜಾಗ್ಗ್ರುತಿಗಾಗಿ ಬೃಹತ್ ಹಿಂದೂ ಸಮಾಜೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಬೆಂಗಳೂರಿನಲ್ಲಿ ನಡೆಯಲಿರುವ ಹಿಂದೂ ಸಮಾಜೋತ್ಸವ ಕಾರ್ಯಕ್ರಮಗಳ ವಿವರ ಈ ಕೆಳಗಿನಂತಿದೆ.
1. ಮಲ್ಲೇಶ್ವರಂ :
ದಿನಾಂಕ: ಡಿಸೆಂಬರ್ 12, ಭಾನುವಾರ 2010
ಸ್ಥಳ: ಮಲ್ಲೇಶ್ವರಂ ಆಟದ ಮೈದಾನ ಬೆಂಗಳೂರು
ಸಮಯ: ಸಂಜೆ 4.15 ಶೋಭಾಯಾತ್ರೆ ಮಧ್ಯಾಹ್ನ 2.30 ಕ್ಕೆ
ವಕ್ತಾರ: ಸು. ರಾಮಣ್ಣ, ಹಿರಿಯ ಪ್ರಚಾರಕರು
contact: 9448891472
2. ಜಯನಗರ :
ದಿನಾಂಕ: ಡಿಸೆಂಬರ್ 19, ಭಾನುವಾರ 2010
ಸ್ಥಳ: MES ಮೈದಾನ
ಜಯನಗರ ಬ್ಲಾಕ್ , ಬೆಂಗಳೂರು
ಸಮಯ: ಸಂಜೆ 4.15 ಶೋಭಾಯಾತ್ರೆ ಮಧ್ಯಾಹ್ನ 2.30ಕ್ಕೆ
ವಕ್ತಾರ: ಡಾ| ಪ್ರಭಾಕರ ಭಟ್, ಪ್ರಾಂತ ಕಾರ್ಯವಾಹರು
Contact: 9844454949
3. ಹಲಸೂರು :
ದಿನಾಂಕ: ಡಿಸೆಂಬರ್ 19, ಭಾನುವಾರ 2010
ಸ್ಥಳ: R.B.N.A.M.S ಮೈದಾನ
ಸಮಯ: ಸಂಜೆ 4.15 ಶೋಭಾಯಾತ್ರೆ ಮಧ್ಯಾಹ್ನ 2.30ಕ್ಕೆ
ವಕ್ತಾರ: ಕಜಂಪಾಡಿ ಸುಬ್ರಹ್ಮಣ್ಯ ಭಟ್, ಪ್ರಾಂತ ಸಹಕಾರ್ಯವಾಹ
contact: 9845355727
ಕರ್ನಾಟಕದ ಇತರ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ:
4. ಕುಂದಾಪುರ
ದಿನಾಂಕ: ಡಿಸೆಂಬರ್ 13, ಸೋಮವಾರ 2010
ಸ್ಥಳ: ಕುಂದಾಪುರ ಗಾಂಧಿ ಮೈದಾನ
ಸಮಯ: ಬೆಳಗ್ಗೆ 11.00 ಶೋಭಾಯಾತ್ರೆ ಬೆಳಗ್ಗೆ 9.30 ಕ್ಕೆ
5. ಚನ್ನಪಟ್ಟಣ
ದಿನಾಂಕ: ಡಿಸೆಂಬರ್ 19, ಭಾನುವಾರ 2010
ಸ್ಥಳ: ಚನ್ನಪಟ್ಟಣ ಹಳೆ ಬಸ್ ನಿಲ್ದಾಣ
ಸಮಯ: ಸಂಜೆ 3.30
ಶೋಭಾಯಾತ್ರೆ 2.30
contact: 9448834268
6. ರಾಮನಗರ
ದಿನಾಂಕ: ಡಿಸೆಂಬರ್ 25, ಶನಿವಾರ 2010
ಸ್ಥಳ: ಸರ್ಕಾರಿ ಜ್ಯೂನಿಯರ್ ಕಾಲೇಜು, ರಾಮನಗರ
ಸಮಯ: ಸಂಜೆ 3.30
ಶೋಭಾಯಾತ್ರೆ 2.30
7. ಮಾಗಡಿ
ದಿನಾಂಕ: ಡಿಸೆಂಬರ್ 24, ಶುಕ್ರವಾರ 2010
ಸ್ಥಳ: ರಂಗ ಮಂದಿರ ಮುಖ್ಯ ಬಸ್ ನಿಲ್ದಾಣ ಬಳಿ ,ಮಾಗಡಿ
ಸಮಯ: ಸಂಜೆ 3.30
ಶೋಭಾಯಾತ್ರೆ 2.30
contact: 9448834268
8. ಕನಕಪುರ
ಸ್ಥಳ: ಕನಕಪುರ ಮುನಿಸಿಪಲ್ ಹೈಸ್ಕೂಲ್ ಮೈದಾನ
ದಿನಾಂಕ: ಡಿಸೆಂಬರ್ 24, ಶುಕ್ರವಾರ 2010
ಸಮಯ: ಸಂಜೆ 3.30
ಶೋಭಾಯಾತ್ರೆ 2.30
contact: 9448834268
9. ಸಾಗರ
ಸ್ಥಳ: ಗಾಂಧಿ ಮೈದಾನ, ಸಾಗರ
ದಿನಾಂಕ: ಡಿಸೆಂಬರ್ 15, ಬುಧವಾರ 2010
ಸಮಯ: ಸಂಜೆ 5.30
ಶೋಭಾಯಾತ್ರೆ 2.30
contact: 9448218757
10. ಬಂಟ್ವಾಳ
ತಾಲೂಕು, ಪುತ್ತೂರು
ಸ್ಥಳ: ಬಿ.ಸಿ.ರೋಡ್ ಬಳಿಯ ಕಂಬಳ ಗದ್ದೆ ಸಮೀಪ ಹನುಮನಗರ ಮೈದಾನ, ಬಂಟ್ವಾಳ
ದಿನಾಂಕ: ಡಿಸೆಂಬರ್ 12, ಭಾನುವಾರ 2010
ಸಮಯ: ಸಂಜೆ 5.00
ಶೋಭಾಯಾತ್ರೆ 2.30
contact: 9481148297
11. ಸುಳ್ಯ
ಸ್ಥಳ: ಚೆನ್ನಕೇಶವ ದೇವಸ್ಥಾನದ ಎದುರಿನ ಮೈದಾನ, ಸುಳ್ಯ
ದಿನಾಂಕ: ಡಿಸೆಂಬರ್ 13, ಸೋಮವಾರ 2010
ಸಮಯ: ಸಂಜೆ 4.00
ಶೋಭಾಯಾತ್ರೆ 2.30
12. ಪುತ್ತೂರು
ಸ್ಥಳ: ಮಹಾಲಿಂಗಶ್ವರ ದೇವಸ್ಥಾನದ ಜಾತ್ರೆ ಮೈದಾನ, ಪುತ್ತೂರು
ದಿನಾಂಕ: ಡಿಸೆಂಬರ್ 13, ಸೋಮವಾರ 2010
ಸಮಯ: ಸಂಜೆ 4.30
ಶೋಭಾಯಾತ್ರೆ 2.30
ವಕ್ತಾರ: ಸು. ರಾಮಣ್ಣ, ಆರಸ್ಸೆಸ್ ಹಿರಿಯ ಪ್ರಚಾರಕರು.
13. ಬೆಳ್ತಂಗಡಿ
ಸ್ಥಳ: ತಾಲೂಕು ಕೀಡಾಂಗಣ, ಬೆಳ್ತಂಗಡಿ
ದಿನಾಂಕ: ಡಿಸೆಂಬರ್ 12, ಭಾನುವಾರ 2010
ಸಮಯ: ಸಂಜೆ 4.30
ಶೋಭಾಯಾತ್ರೆ 2.30
ವಕ್ತಾರ: ಸು. ರಾಮಣ್ಣ, ಆರಸ್ಸೆಸ್ ಹಿರಿಯ ಪ್ರಚಾರಕರು.
14. ಮಂಗಳೂರು
ಸ್ಥಳ: ಕೇಂದ್ರ ಮೈದಾನ, ಮಂಗಳೂರು
ದಿನಾಂಕ: ಜನವರಿ 2, ಭಾನುವಾರ 2011
ಸಮಯ: ಸಂಜೆ 4.30
ಶೋಭಾಯಾತ್ರೆ 3.00 ಜ್ಯೋತಿ ವೃತ್ತದಿಂದ
ವಕ್ತಾರ: ಡಾ| ಪ್ರವೀಣ್ ಭಾಯ್ ತೊಗಾಡಿಯಾ, ವಿಹಿಂಪ ಅಂತಾರಾಷ್ಠ್ರೀಯ ಪ್ರಧಾನ ಕಾರ್ಯದರ್ಶಿ.
15. ಕಾಸರಗೋಡು
ಸ್ಥಳ: ತಾಳಿಪಡ್ಪು ಮೈದಾನ, ಕಾಸರಗೋಡು
ದಿನಾಂಕ: ಡಿಸೆಂಬರ್ 26, ಭಾನುವಾರ 2011
ಸಮಯ: ಸಂಜೆ 4.30
ಶೋಭಾಯಾತ್ರೆ 3.30
16. ಕಾಪು
ದಿನಾಂಕ: ಡಿಸೆಂಬರ್ 12, ಭಾನುವಾರ 2011
ಸಮಯ: ಸಂಜೆ 4.30
ಶೋಭಾಯಾತ್ರೆ 2.30
17. Davanagere
date: December 18, 2010
venue: Davanagere Highschool Field
time: 4pm
procession: 2.00pm
speaker: Dr. Praveen Bhay Togadiya, Dr. Kalladka Prabhakara Bhat
contact: 9480138123
19. chithradurga:
Dec 18th at chitradurga
ಬೃಹತ್ ಹಿಂದೂ ಸಮಾಜೋತ್ಸವ ಕಾರ್ಯಕ್ರಮಗಳ ಉದ್ದೇಶ?
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಕಳೆದ ಆರು ಶತಮಾನಗಳಿಂದ ನಡೆದಿರುವ ಹೋರಾಟ ಇಂದು ಪ್ರಮುಖ ತಿರುವನ್ನು ಪಡೆದಿದೆ. ಅಲಹಾಬಾದ್ ನ್ಯಾಯಪೀಠದ ತೀರ್ಪಿನಲ್ಲಿ ವಿವಾದಿತ ಜಾಗವು ಶ್ರೀರಾಮ ಜನ್ಮಸ್ಥಾನ ಎಂದು ದೃಢಪಟ್ಟಿದೆ. ಸಾವಿರಾರು ಸಾಕ್ಷ್ಯಗಳು ಹಿಂದುಗಳ ಪರವಾಗಿ ಇದ್ದರೂ, ನ್ಯಾಯಾಲಯವು ಇದನ್ನು ರಾಮ ಜನ್ಮಸ್ಥಾನವೆಂದು ಸಾರಿದರೂ ದೇಶ ಆಳುತ್ತಿರುವ ನಾಯಕರಿಗೆ ಈ ಸತ್ಯವನ್ನು ಗೌರವಿಸುವ ಧೈರ್ಯವಿಲ್ಲ. ಸಾಧುಸಂತರ ಸಮುದಾಯದ ಸಂಕಲ್ಪ, ಕೋಟ್ಯಾಂತರ ದೇಶವಾಸಿಗಳ ಆಶಯ, ಲಕ್ಷಾಂತರ ರಾಮಭಕ್ತರ ಬಲಿದಾನಗಳು ಸಾರ್ಥಕವಾಗಬೇಕಾದರೆ ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾನ ಭವ್ಯವಾದ ಮಂದಿರ ನಿರ್ಮಾಣವಾಗಲೇ ಬೇಕು. ಇದು ಸಾಧ್ಯವಾಗುವುದು ಪ್ರಬಲವಾದ ಜನ ಸಮರ್ಥನೆಯಿಂದ.
ಎಲ್ಲ ಹಿಂದುಗಳು ಒಂದಾಗಿ ಇದಕ್ಕೆ ಒತ್ತಾಯ ಮಾಡಿದಾಗ ಮಾತ್ರ ಸರ್ಕಾರವು ಬಾಗುತ್ತದೆ. ವೈಭವಪೂರ್ಣ ರಾಮಮಂದಿರದ ನಿರ್ಮಾಣದ ಹಾದಿ ಸುಗಮವಾಗಲಿದೆ.
ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಈಗಿರುವ ಜಮ್ಮು ಕಾಶ್ಮೀರದ ಜೊತೆಗೆ ಪಾಕಿಸ್ಥಾನದ ವಶದಲ್ಲಿರುವ ಗಿಲ್ಗಿಟ್, ಬಾಲ್ಟಿಸ್ಥಾನ ಮುಂತಾದ ಪ್ರದೇಶಗಳು, ಚೀನಾದ ವಶದಲ್ಲಿರುವ ಅಕ್ಸಯ್ಚಿನ್ ಇವೆಲ್ಲವು ನಮ್ಮ ದೇಶದ ಭಾಗವೇ. ಹತ್ತಾರು ಸಾವಿರ ವ?ಗಳಿಂದ ರೂಪಿತವಾದ ಸಾಂಸ್ಕೃತಿಕ ಸಂಬಂಧ ಕಾರಣದಿಂದಾಗಿ ಪ್ರತಿಯೊಬ್ಬ ದೇಶವಾಸಿಯೂ ‘ಕಾಶ್ಮೀರ ನಮ್ಮದು’ ಎಂದು ಘೋಷಿಸುತ್ತಾನೆ. ಆದರೆ ಪಾಕಿಸ್ಥಾನದ ?ಡ್ಯಂತ್ರ, ಮತಾಂಧ ಮುಸಲ್ಮಾನರ ಕುತಂತ್ರ ಮತ್ತು ಭಾರತ ದೇಶದ ನಾಯಕತ್ವದ ದೃಢನಿಲುವುಗಳ ಕೊರತೆಯಿಂದಾಗಿ ಕಾಶ್ಮೀರದ ಜನ ಇಂದು ಅತಂತ್ರರಾಗಿದ್ದಾರೆ. ಏಳು ಲಕ್ಷ ಹಿಂದುಗಳು ಅಲ್ಲಿಂದ ಹೊರದೂಡಲ್ಪಟ್ಟಿದ್ದಾರೆ ಮತ್ತು ನಮ್ಮದೇ ದೇಶದಲ್ಲಿ ನಿರಾಶ್ರಿತರಾಗಿ ಜೀವಿಸುತ್ತಿದ್ದಾರೆ. ಕಾಶ್ಮೀರದ ಹಿಂದೂ ಹೆಣ್ಣುಮಕ್ಕಳು ನಿತ್ಯ ಮಾನಾಪಹರಣದ ಭಯದಿಂದ ಜೀವಿಸುವಂತಾಗಿದೆ. ಸಾವಿರಾರು ದೇವಾಲಯಗಳು ನೆಲಸಮವಾಗಿವೆ. ಕಣಿವೆ ಪ್ರದೇಶಕ್ಕೆ ಸೀಮಿತವಾಗಿದ್ದ ಈ ಮತಾಂಧತೆಯ ಬೆಂಕಿ ಈಗ ಜಮ್ಮು ಮತ್ತು ಲಡಾಖ್ ಪ್ರದೇಶಗಳನ್ನು ಸುಡಲಾರಂಭಿಸಿದೆ. ಈಗಿನ ಕೇಂದ್ರ ಸರಕಾರವು ಪ್ರತ್ಯೇಕತೆಯ ಕೂಗಿಗೆ ಉಗ್ರ ಕ್ರಮ ಕೈಗೊಳ್ಳುವುದನ್ನು ಬಿಟ್ಟು, ಅವರ ಬೆದರಿಕೆಯ ತಂತ್ರಗಳಿಗೆ ಶರಣಾಗುವ ಲಕ್ಷಣಗಳೇ ಕಾಣುತ್ತಿವೆ. ಅಮೇರಿಕಾ, ಪಾಕಿಸ್ಥಾನ ಹಾಗೂ ಚೀನಾ ಕೂಡಾ ಈ ಬೆಂಕಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಕೆಲಸದಲ್ಲಿ ತೊಡಗಿವೆ. ನಮ್ಮ ಸಮಸ್ಯೆಯನ್ನು ನಾವೇ ಪರಿಹರಿಸಿಕೊಳ್ಳಬೇಕು. ಬೇರೆಯವರಿಂದ ಇದನ್ನು ನಿರೀಕ್ಷಿಸಲಾಗದು. ಕಾಶ್ಮೀರ ಸಮಸ್ಯೆಯು ಎಲ್ಲ ಭಾರತೀಯರದ್ದು.
ಇಡೀ ದೇಶ ಒಂದಾಗಿ ಧ್ವನಿ ಗೂಡಿಸಿದಾಗ ಮಾತ್ರ ಇದಕ್ಕೆ ಪರಿಹಾರ ಸಿಗಬಲ್ಲದು.
ಹಿಂದೂ ಭಯೋತ್ಪಾದನೆ ಎಂಬ ಷಡ್ಯಂತ್ರ
ಸಗಟು ಮುಸ್ಲಿಂ ಓಟ್ ಬ್ಯಾಂಕ್ ಮೇಲೆ ಕಣ್ಣಿರಿಸಿರುವ ನಮ್ಮ ದೇಶದ ಕೆಲವು ಕುಂತಂತ್ರಿ ರಾಜಕಾರಣಿಗಳು ಹಿಂದೂ ಸಂಘಟನೆಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಅಪಪ್ರಚಾರ ಮಾಡಲಾರಂಭಿಸಿದ್ದಾರೆ. ಈ ಹಿಂದೆ ಕಂಚಿ ಶಂಕರಾಚಾರ್ಯ, ಬಾಬಾರಾಮ್ದೇವ್ರಂತಹ ಸಾಧು ಸಂತರಿಗೆ ಕಿರುಕುಳ ನೀಡಿದ್ದ ಹಿಂದು ವಿರೋಧಿ ಶಕ್ತಿಗಳು ಇದೀಗ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್)ದ ಪ್ರಮುಖರನ್ನು ಗುರಿಯಾಗಿರಿಸಿಕೊಂಡು, ಸಂಘದ ವರ್ಚಸ್ಸಿಗೆ ಕಪ್ಪು ಮಸಿ ಬಳಿಯುವ ಪ್ರಯತ್ನ ಮಾಡುತ್ತಿದೆ. ದೇಶಾದ್ಯಂತ ಸಾವಿರಾರು ಸಂಖ್ಯೆಯ ಸಾಮಾಜಿಕ ಪರಿವರ್ತನೆಯ ಚಟುವಟಿಕೆಗಳಲ್ಲಿ ತೊಡಗಿರುವ ಆರೆಸ್ಸೆಸ್ನ್ನು ಭಯೋತ್ಪಾದನೆಯಂತಹ ಕರಾಳ ಮುಖದೊಂದಿಗೆ ಜೋಡಿಸುವ ಮೂಲಕ ಹಿಂದೂ ಸಂಘಟನೆಗಳ ಮನೋಬಲ ಕುಗ್ಗಿಸುವ ಕೆಟ್ಟಕೆಲಸಕ್ಕೆ ಕೆಲವು ರಾಜಕಾರಣಿಗಳು ಕೈ ಹಾಕಿದ್ದಾರೆ. ಆದರೆ ಹಿಂದೂ ಸಂಘಟನೆಗಳು ಇದನ್ನು ಪ್ರಜಾಪ್ರಭುತ್ವದ ರೀತಿಯಲ್ಲೇ ಸಮರ್ಥವಾಗಿ ಎದುರಿಸಲಿದೆ. ಹಿಂದೂಜನ ಶಕ್ತಿ ಎದ್ದು ನಿಂತು ಈ ಷಡ್ಯಂತ್ರವನ್ನು ವಿಫಲಗೊಳಿಸುವುದೇ ಸರಿಯಾದ ಮಾರ್ಗ.
ನಾವೇನು ಮಾಡೋಣ?
– ಬನ್ನಿ, ಅಯೋಧ್ಯೆಯಲ್ಲಿ ಭವ್ಯರಾಮಮಂದಿರ ನಿರ್ಮಿಸಲು,
-ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂಬ ಸತ್ಯವನ್ನು ಬಿಂಬಿಸಲು,
– ‘ಹಿಂದೂ ಭಯೋತ್ಪಾದನೆ’ ಎಂಬ ಷಡ್ಯಂತ್ರವನ್ನುಸೋಲಿಸಲು,
-ಒಂದಾಗಿ ಸೇರೋಣ, ಹಿಂದೂ ಸಮಾಜೋತ್ಸವದಲ್ಲಿ ಪಾಲ್ಗೊಳ್ಳೋಣ,
-ಹಿಂದೂ ವಿರೋಧಿ ಶಕ್ತಿಗಳಿಗೆ ಸೂಕ್ತ ಉತ್ತರ ನೀಡೋಣ,-
-ಮೇಲೆ ಉಲ್ಲೇಖಿಸಿದ ವಿ?ಯವನ್ನು ಉಳಿದವರೊಂದಿಗೆ ಚರ್ಚಿಸೋಣ, ದೇಶದ ಪರಿಸ್ಥಿತಿಯನ್ನು ಕುರಿತು ಅವರಲ್ಲಿ ಜಾಗೃತಿ ಮೂಡಿಸೋಣ,
-ಹನುಮಾನ್ ಚಾಲೀಸಾ ನಮ್ಮ ಮನೆ, ನೆರೆಯವರೊಂದಿಗೆ ಸೇರಿ ಒಂದಾಗಿ ಪಠಿಸೋಣ,
– ನಮ್ಮ ಮನೆಯ ಹಿರಿಯ, ಕಿರಿಯ, ಪುರು?, ಮಹಿಳಾ, ಸದಸ್ಯರೆಲ್ಲರೊಡಗೂಡಿ ಸಮಾಜೋತ್ಸವದಲ್ಲಿ ಪಾಲ್ಗೊಳ್ಳೋಣ,
-ನಮಗೆ ಪರಿಚಿತರಾಗಿರುವ, ಸಂಪರ್ಕಕ್ಕೆ ಬರುವ ಎಲ್ಲ ಸಮಾಜ ಬಾಂಧವರಿಗೆ ಈ ವಿಚಾರ ತಿಳಿಸೋಣ. ಅವರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡೋಣ.
ಕರ್ನಾಟಕದ ಪ್ರತಿಯೊಂದು ತಾಲ್ಲೂಕು-ಜಿಲ್ಲಾಕೇಂದ್ರಗಳಲ್ಲಿ ಡಿಸೆಂಬರ್ ತಿಂಗಳಲ್ಲಿ
ನಡೆಯುವ ಬೃಹತ್ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ನೀವೂ ಪಾಲ್ಗೊಳ್ಳಿ.