ಡಾ.ಚೈತ್ರ.ಸಿ, ತುಮಕೂರು

ಎರಡು ಮಹಾಯುದ್ಧಗಳ ಭೀಕರತೆಯ ಪರಿಣಾಮವಾಗಿ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಘೋಷಣೆ (UDHR) ಅಸ್ತಿತ್ವಕ್ಕೆ ಬಂತಾದರು, ಅದರ ಸಾರ್ವರ್ತಿಕ ಅನುಷ್ಠಾನ ಪ್ರಶ್ನೆಯಾಗಿ ಉಳಿದಿದೆ. ಪ್ರಮುಖವಾಗಿ, ಅವಿಭಜಿತ ಭಾರತ ಮತ್ತು ಅಫ್ಘಾನಿಸ್ತಾನ ಪ್ರದೇಶದಲ್ಲಿ ಪಸರಿಸಿದ ಹಿಂದು ಧರ್ಮ, ವಿದೇಶಿ ಆಕ್ರಮಣ ಮತ್ತು ಸಾಮ್ರಾಜ್ಯಶಾಹಿ ಹಿತಾಸಕ್ತಿಗೆ ಬಲಿಪಶುವಾಗಿದ್ದರು, ಇಂದು ಭಾರತ ವಿದೇಶಂಗ ಮಂತ್ರಾಲಯದ ಪ್ರಕಾರ, ಸುಮಾರು 210 ದೇಶಗಳಲ್ಲಿ ಭಾರತೀಯ ಮೂಲದವರನ್ನು (NRIs & PIOs) ಕಾಣಬಹುದಾಗಿದೆ. ಇಂದು ಭಾರತ, ನೇಪಾಲ ಮತ್ತು ಮಾರಿಷ್ಯಸ್‌ ದೇಶಗಳಲ್ಲಿ ಹಿಂದು ಬಹುಸಂಖ್ಯಾತರಿದ್ದು, ಹಿಂದು ಸಂಸ್ಕೃತಿ ಕಾಂಬೋಡಿಯ, ಥೈಲೆಂಡ್‌, ಫಿಲಿಪೈನ್ಸ್‌, ವಿಯಟ್ನಮ್ (ಚಮ್‌ ಸಮುದಾಯ) ಮತ್ತು ಇಂಡೊನೇಸಿಯ(ಬಾಲಿ ಹಿಂದುಗಳು)ದಲ್ಲಿ ಕಾಣಬಹುದಾಗಿದೆ. ಇದರ ಹೊರತಾಗಿಯು ಹಿಂದೂಗಳ ಅಸ್ಮಿತೆಗೆ ನಿರಂತರ ಅಭದ್ರತೆ ಕಾಡುತ್ತಿರುವುದು UDHR ಔಚಿತ್ಯ ಪ್ರಶ್ನಿಸುವಂತೆ ಮಾಡಿದೆ.


ಆರು ಅಲ್ಪಸಂಖ್ಯಾತ ಸಮುದಾಯಗಳಿಗೆ ಸಂವಿಧಾನಿಕ ಮಾನ್ಯತೆ ಮತ್ತು ಬಹು ಸಂಖ್ಯಾತರಂತೆ ಸಮಾನ ಗೌರವ, ಸ್ಥಾನಮಾನ, ಅವಕಾಶಗಳು ಮತ್ತು ಸವಲತ್ತುಗಳನ್ನು ನೀಡುವ ದೇಶದ ಮೂಲ ನಿವಾಸಿ ಹಿಂದೂಗಳಿಗೆ ಇದುವೆ ಜನ್ಮ ಭೂಮಿ, ಇದುವೆ ಪುಣ್ಯಭೂಮಿ. ಆದರೆ, ಹಿಂದೂಗಳ ಮನ ನೋಯಿಸುವ, ಅವರ ಸಹಿಷ್ಣುತೆಯನ್ನೆ ಅವರ ದುರ್ಬಲತೆಯಂತೆ ಕಾಣುವ, ಅವರ ಮಾನವ ಹಕ್ಕುಗಳ ಮೇಲೆ ನಿರಂತರ ಹಲ್ಲೆ ನಡೆಸುವ ಪ್ರಕರಣಗಳು ದೇಶದೊಳಗೆ ಮತ್ತು ಹೊರಗೆ ವ್ಯಾಪಿಸಿದೆ ಎಂದರೆ ತಪ್ಪಾಗಲಾರದು.
ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ನಡೆಯುವ ನಿರಂತರ ಬಲವಂತದ ಮತಾಂತರ ಪ್ರಕರಣಗಳು, ದೇವರ ನಾಡು ಕೇರಳದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ, ಕೇರಳದ ಮೂಲಕ ಕರ್ನಾಟಕ ಕರಾವಳಿಯಲ್ಲಿ ಹಿಂದೂ ಕಾರ್ಯಕರ್ತರ ಕಗ್ಗೊಲೆಗಳು, ಶಕ್ತಿ ದೇವತೆಗಳನ್ನು ಅಪಾರವಾಗಿ ಆರಾಧಿಸುವ ನಾಡು ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮಾರಣ ಹೋಮ, ಒಟ್ಟಾರೆಯಾಗಿ, 9 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿ ಅನುಭವಿಸುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಗೆ ಪರಿಹಾರ ನೀಡುವವರಾರು?


1971 ಯುದ್ಧ ಸಂದರ್ಭದಲ್ಲಿ ಬಂಗಾಲಿ ಮತ್ತು ಹಿಂದೂಗಳ ಜನಾಂಗೀಯ ಕಗ್ಗೊಲೆಗಳು, ಸುಮಾರು 3 ಮಿಲಿಯನ್‌ ಸಾವುಗಳು ಮತ್ತು 2ಲಕ್ಷಕೂ ಹಚ್ಚು ಅತ್ಯಾಚಾರಕ್ಕೆ ಇಂದಿಗೂ ನ್ಯಾಯ ದೊರೆತಿಲ್ಲ. ಪ್ರತಿ ವರ್ಷವೂ ಒಂದು ಸಾವಿರಕ್ಕೂ ಹೆಚ್ಚು ಮುಸ್ಲಿಮೇತರ ಮಹಿಳೆಯರನ್ನು ಅಪಹರಿಸಿ, ಅತ್ಯಾಚಾರವೆಸಗಿ, ಬಲವಂತದ ಮತಾಂತರ ನಡೆಸುವ ಪಾಕಿಸ್ತಾನವನ್ನು ಪ್ರಶ್ನಿಸದವರು, ಭಾರತ ಪೌರತ್ವ ತಿದ್ದುಪಡಿ ಕಾಯ್ದೆ, 2019, ಅಂತರಾಷ್ಟ್ರೀಯ ಮಟ್ಟದಲ್ಲಿ ಖಂಡಿಸುವರು, ತಮ್ಮ ಶಾಸನ ಸಭೆಗಳಲ್ಲಿ ಚರ್ಚಿಸುವರು. ಹಿಂದೂಗಳನ್ನು ದ್ವಿತೀಯ ದರ್ಜೆ ಪ್ರಜೆಗಳಂತೆ ತಮ್ಮ ದೇಶದಲ್ಲಿ ಕಾಣುವವರು, ತಮ್ಮ ಧಾರ್ಮಿಕ ನಂಬಿಕೆಗಳನ್ನು ಹೇರುವ (ಹಲಾಲ್‌, ಹಿಜಾಬ್‌, ಲವ್‌ ಜಿಹಾದ್‌) ಜ್ವಲಂತ ಉದಾಹರಣೆಗಳಾಗಿ ನಮ್ಮ ಮುಂದಿದೆ. ಬಾಂಗ್ಲದೇಶ ಮತ್ತು ಪಾಕಿಸ್ತಾನದಲ್ಲಿ ಹಿಂದೂ ದೇವಾಲಯಗಳನ್ನು ದ್ವಂಸ ಮಾಡುವವರ ಹಾಜಿ ಅಲಿ ದರ್ಗ, ಅಜ್ಮೆರ್‌ ಶರೀಫ್‌ ದರ್ಗ ಭಾರತೀಯ ನೆಲದಲ್ಲಿ ಎಲ್ಲ ಧರ್ಮಿಯರು ಗೌರವಿಸುವರು. ಇದು ಭಾರತದ ಔದಾರ್ಯತಗೆ ಸಾಕ್ಷಿ. ಖಲಿಸ್ತಾನ ಪ್ರತ್ಯೆಕತಾವಾದಿಗಳಿಗೆ ಸಹಾಯ ಮಾಡುವವರು ಬಲೋಚಿಸ್ತಾನದ ಮಾರಣ ಹೋಮಗಳನ್ನು ಮರೆಯುವರು.


ಭಾರತದಲ್ಲಿ ನಡೆಯುವ ಒಂದು ನೂಪುರ ಶರ್ಮ ಪ್ರಕರಣಕ್ಕೆ ವೈಶಮ್ಯದ ಕಗ್ಗೊಲೆಗಳು ನಡೆದಾಗ ಅಭಿವ್ಯಕ್ತಿ ಸ್ವಾತಂತ್ರ ಅನ್ವಯಿಸುವುದಿಲ್ಲ. ಆಗಸ್ಟ್‌ 2020 ರಲ್ಲಿ 42 ಧರ್ಮನಿಂದನೆ ಪ್ರಕರಣಗಳಿಗೆ ಮರಣದಂಡನೆಯಂತಹ ಶಕ್ಷೆವಿಧಿಸಿದ್ದು ಇದೇ ಪಾಕಿಸ್ತಾನದಲ್ಲಿ. 2019ಲ್ಲಿ ಔಷಧಿಗಳನ್ನು ಕೊರಾನ್‌ ಮುದ್ರಿತ ಪತ್ರಿಕೆಯಲ್ಲಿ ನೀಡಿದ್ದ ಪಶು ವೈದ್ಯನಿಗೆ ಧರ್ಮ ನಿಂದನೆಗಾಗಿ ಕಠಿಣ ಶಿಕ್ಸೆ; ಬಾಂಗ್ಲದೇಶದ ಅಹಾಕಿಲ್‌ ದೇವನಾಥ ಎಂಬ ಶಿಕ್ಷಕನ ಮೇಲೆ ಧರ್ಮನಿಂದನೆಗಾಗಿ ಶಿಕ್ಷೆ ಆದರೆ, ಕಾಶ್ಮೀರ ಕಣಿವೆಯಲ್ಲಿ ಪ್ರಾಣತೆತ್ತ ಮತ್ತು ಊರು ತೊರೆದ 350000 ಪಂಡಿತರಿಗೆ ಜೀವನವೆಲ್ಲ ಶಿಕ್ಷೆ. ಧರ್ಮಾಧಾರಿತ ನಿರಾಶ್ರಿತರಿಗೆ (ಯಹೂದಿಗಳು, ಪಾರ್ಸಿಗಳು, ದಲಾಯಿ ಲಾಮಾ ಮತ್ತು ಟಿಬೆಟಿಯನರು, ರೊಹಿಂಗ್ಯರು, ಅಫ್ಘನ್‌ ಮುಸ್ಲಿಂರು, ಅಹಮದೀಯ ಮುಸ್ಲಿಮರು, ಶ್ರಿಲಂಕಾದ ತಮಿಳರು) ಆಶ್ರಯ ನೀಡುವ ಭಾರತದ ಹಿಂದೂಗಳ ಮೇಲೆ ಶೋಷನೆಗೆ ಮಿತಿ ಎಲ್ಲಿ? ಏಷಿಯ ಕಪ್‌ ಗೆದ್ದಾಗ ಮುಸ್ಲಿಮರಿಂದ ಹಿಂದೂಗಳ ಮೇಲೆ ಇಂಗ್ಲೆಂಡ್ನಲ್ಲಿ ದಾಳಿ, ಧರ್ಮ ಯುದ್ದದ ಹೆಸರಲ್ಲಿ ಭಯೋತ್ಪಾದಕ ದಾಳಿಗಳು-ಪುಲ್ವಾಮಾದ ಹುತಾತ್ಮ ಯೋದ್ಧರಿಗಿರಲಿಲ್ಲವೆ ಮಾನವ ಹಕ್ಕುಗಳು?
ಹಿಂದೂಗಳು ಉಳಿದ ಧರ್ಮಗಳಂತೆ ಧರ್ಮಯುದ್ಧಗಳಲ್ಲಿ(crusades) ತೊಡಗಿರಲ್ಲಿಲ್ಲ. ಭಾರತ ಸ್ವಾತಂತ್ರ ಚಳುವಳಿಯು ಉಳಿದ ದೇಶಗಳಂತೆ ಅತೀವ ರಕ್ತ-ಪಾತದಿಂದ ಕೂಡಿರಲ್ಲಿಲ್ಲ. ಇಟಲಿ, ಜರ್ಮನಿ ಏಕೀಕರಣ ಹೋರಾಟಗಳಷ್ಟು ತೀಕ್ಷವಾಗಿರಲಿಲ್ಲ. ಭಾರತ ಎಲ್ಲಾ ವಲಯಗಳಲ್ಲೂ ಅನುಸರಿಸಿದ್ದು ರಕ್ಷನಣಾತ್ಮಕ ತಂತ್ರಗಾರಿಕೆಗಳೆ ಹೊರತು ಆಕ್ರಮಣಕಾರಿ ತಂತ್ರಗಾರಿಕೆಗಳಲ್ಲ. ನಮ್ಮ ಈ ಮೃದು ಧೋರಣೆಗಳ ಕಾರಣ, ಕೆಲವೊಮ್ಮೆ ನ್ಯಾಯಯುತ ಬೇಡಿಕೆಗಳ ಮುಂದಿಟ್ಟ ಕಾರಣ, ಮೂಲಭೂತವಾದಿಗಳು ಎಂದು ಕರೆಸಿಕೊಂಡಿದ್ದು ಇದೆ. ಅಂತರಾಷ್ಟ್ರೀಯ ಮಟ್ಟದಲ್ಲಿದ ಡಿಸ್ಮೇಂಟ್ಲಿಗ್‌ ಹಿಂದೂಯಿಸಂಗೆ ದೊರೆತ ಬೆಂಬಲ ಹಿಂದೂ ಹಕ್ಕುಗಳ ಉಲ್ಲಂಘನೆಯಾದಾಗ ಸಿಗಲ್ಲಿಲ್ಲ. ಅಂತರಾಷ್ಟ್ರೀಯ ಮಟ್ಟದಲ್ಲಿ ಹಿಂದೂ ಮಾನವ ಹಕ್ಕುಗಳಿಗೆ ಸಂಬಂಧಿಸಿದ ಪ್ರಭಾವಶಾಲಿ ಸಂಘ ಸಂಸ್ಥೆಗಳು ವಿರಳ. ಉಳಿದ ಸಮುದಾಯಗಳ ಮೇಲೆ ದೌರ್ಜನ್ಯಗಳಿಗೆ ಆಂತರಿಕವಾರಿ ಕ್ಯಾಂಡಲ್‌ ಲೈಟ್‌ ಮಾರ್ಚ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಖಂಡನೆ ಆದರೆ ಹಿಂದೂಗಳ ಮೇಲೆ ದೌರ್ಜನ್ಯ ನಡೆದರೆ, ಹಿಂದೂಗಳೆ ಸುಮ್ಮನಿರುವರು. ಇತ್ತೀಚೆಗೆ ನಡೆದ ಶ್ರದ್ಧ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ರಾಜಸ್ಥಾನ ಮುಖ್ಯಮಂತ್ರಿ ಅದೊಂದು ಆಕಸ್ಮಿಕ ಸಾವು ಎಂದಿದ್ದು ನೋವು ತರೆಸುವ ವಿಷಯ.


ಹಿಂದೂ ಸಮಾಜ ಜಾತಿ ವೈಷಮ್ಯತೆಯಲ್ಲಿ ನಲುಗಿ ಹಿಂದೂಗಳು ಒಗ್ಗೂಡಲು ಅವಕಾಶ ನೀಡುವುದಿಲ್ಲ. ವಿವಿಧ ದರ್ಮಗಳ ನಡುವೆ ಸಾಮರಸ್ಯ ಮೂಡಲು ಪರಸ್ಪರ ಹಕ್ಕುಗಳ ಬಗ್ಗೆ ಗೌರವ ಅನಿವಾರ್ಯವಾಗಿದೆ. ನಮ್ಮ ವೈಯಕ್ತಿಕ ಹಕ್ಕುಗಳು ಮತ್ತು ಸಾಮುದಾಯಿಕ ಹಕ್ಕುಗಳು ಉಳಿದವುಗಳಿಗಿಂತ ಶ್ರೇಷ್ಠ ಎಂಬ ಭಾವನೆಯಿಂದಾಗಿ ಸಾಮರಸ್ಯ ಸಾಧ್ಯವಿಲ್ಲ. ಅಂತರಾಷ್ಟ್ರೀಯ ಹಸ್ತಕ್ಷೇಪ ಮತ್ತು ನಾಗರೀಕ ಸಮಾಜ ಹಿಂದೂ ಸಮಾಜ ಎಲ್ಲರಂತೆ ತಮ್ಮ ಹಕ್ಕುಗಳನ್ನು ಅನುಭವಿಸಲು ಅವಕಾಶ ನೀಡದಿರುವುದು ಖೇಧನೀಯ ವಿಷಯ. ರಾಷ್ಟ್ರೀಯ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಬರುವ ಹೆಚ್ಚಿನ ಪಾಲಿನ ಪ್ರಕರಣಗಳು ಜಾತಿ ಆಧಾರಿತವಾಗಿರುವುದನ್ನು ಕಾಣಬಹುದು. ಒಂದೆಡೆ ಹಿಂದೂಗಳಂತೆ ಉಳಿದ ಸಮುದಾಯಗಳು ಸಮೀಕರಣಗೊಳ್ಳುವ ಅಥವಾ ಸಹಿಷ್ಣುತೆ ಮನೋಭಾವ ಬೆಳೆಸುವುದಿಲ್ಲ; ಮತ್ತೊಂದೆಡೆ, ಹಿಂದೂಗಳನ್ನು ಬಲಿಪಶು ಮಾಡುವ ಮತ್ತು ಉಳಿದ ಸಮುದಾಯಗಳನ್ನು ಓಲೈಸುವ ವಾಸ್ತವಾಂಶ ಹಿಂದೂಗಳು ಉಳಿದವರಂತೆ ಮಾನವ ಹಕ್ಕುಗಳನ್ನು ಅನುಭವಿಸುವುದನ್ನು ಸ್ಥಳೀಯ, ಪ್ರಾದೇಶಿಕ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕಷ್ಟ ಸಾಧ್ಯ ಮಾಡಿದೆ. ರಾಷ್ಟ್ರವಾದ ಚಿಂತನೆಗಳನ್ನು ಕಳಂಕಿತಗೊಳಿಸುವುದು; ವಂದೇ ಮಾತರಂ ಎಂದವರನ್ನೆಲ್ಲ ಫ್ಯಾಸಿಸ್ಟ್‌ ಮನಸ್ಥಿತಿ ಉಳ್ಳವರು ಎಂದು ತಿಳಿದಿರುವವರ ಮನಸ್ಥಿತಿ ಬದಲಾಯಿಸಲು ಸಾಧ್ಯವೇ?


ಸಾಮ್ಯುಲ್‌ ಹಂಟಿಂಗ್ಟನ್‌ ರವರ ಕ್ಲ್ಯೇಶ್‌ ಆಫ್‌ ಸಿವಿಲೈಜೆಷನ್‌ ಕೃತಿಯಲ್ಲಿ ಹಿಂದೂಗಳ ಬಗ್ಗೆ ಉಲ್ಲೇಖವಿರದಿರಲು ನಾವು ಅಂತರಾಷ್ಟ್ರೀಯ ಮಟ್ಟದಲ್ಲಿಒಕ್ಕೊರಲಿನ ಧ್ವನಿ ಆಗಿರದೇ ಇರುವುದು ಕಾರಣವಿರಬಹುದು. ವಿಶ್ವ ಗುರು ಭರತದ ಪರಿಕಲ್ಪನೆಗೆ ಪ್ರಸ್ತುತ ಸಿಗುತ್ತಿರುವ ಪ್ರಾಮುಖ್ಯತೆ;, ವಸುದೈವ ಕುಟುಂಬಕಂ ಘೋಷನೆಯನ್ನು G-20 ಯಂತಹ ವೇದಿಕೆಯಲ್ಲಿ One Earth, One Family, One Future ರೀತಿಯಲ್ಲಿ ಮುಂದಿಡುವುದು; ಭಾರತ International Solar Alliance ನ ಅಧಿಪತ್ಯ ವಹಿಸುವ ಮೂಲಕ ಸುಸ್ಥಿರ ಅಭಿವೃದ್ಧಿಗೆ ಭಾರತದ ಕೊಡುಗೆ ಮತ್ತು ನಮ್ಮಲಿನ demographic dividend ಇನ್ನು ಮುಂದಾದರು ಹಿಂದೂಗಳಿಗೆ ಸಿಗಬೇಕಾದ ಹಕ್ಕುಗಳನ್ನು ದೊರಕಿಸಿ ಕೊಡಲಿ ಎಂಬ ಆಶಯವು ನಮ್ಮ ಮುಂದಿಟ್ಟಿದೆ. ಭಾರತ ಸಮಾಜದ ಒಂದು ಉದಾಹರಣೆ ನೀಡುವುದಾದರೆ, ಮಂಗಳೂರು ಮಲ್ಲಿಗೆ ಬಿಳೆಯುವವರು ಕ್ರೈಸ್ತರು, ಮಾರುಕಟ್ಟೆಯಲ್ಲಿ ಮಾರಾಟ ಮಾಡುವವರು ಮುಸ್ಲೀಂರು ಮತ್ತು ಹೆಚ್ಚಾಗಿ ಬಳಸುವುದು ಹಿಂದೂ ದೇವಾಲಯಗಳಲ್ಲಿ. ಇಂತಹ ಸೌಹಾರ್ದತೆ ಒಂದು ಲವ್‌ ಜಿಹಾದ್‌ ಪ್ರಕರಣದಿಂದ ಕದಡುವುದು ಕಾಣಬಹುದು. ಎಲ್ಲ ಸಮುದಾಯದವರು ಎಲ್ಲರ ಹಕ್ಕುಗಳನ್ನು ಗೌರವಿಸಿದರೆ ಈ ಸಹಬಾಳ್ವೆ ವಿಶ್ವಕ್ಕೆ ಮಾದರಿಯಾದೀತೇನೋ! ಮಾನವ ಹಕ್ಕುಗಳು ಸಾರ್ಥಕ ಎನಿಸಿಕೊಳ್ಳುತ್ತಿತ್ತು. ಶ್ವೇತಾಶ್ವತಾರಾ ಉಪಾನಿಷದ್‌ ನಲ್ಲಿ ಉಲ್ಲೇಖವಿರುವಂತೆ ಅಮೃತಸ್ಯ ಪುತ್ರಃ ವಯಾಮ್(ಮನುಷ್ಯ ದೈವ ಸಂಭೂತ) ಭಾರತೀಯರು ಪ್ರತಿ ಜೈವಿಕ-ಅಜೈವಿಕ ವಸ್ತುಗಳಲ್ಲಿ ದೈವಾಂಶ ಗುರುತಿಸಿ, ಎಲ್ಲರನ್ನು ಗೌರವಿಸುವುದು ಮಾನವ ಹಕ್ಕುಗಳಿಗೆ ನಮ್ಮ ಪರಂಪರೆ ನೀಡುವ ಮಾನ್ಯತೆಗೆ ಹಿಡಿದ ಕನ್ನಡಿಯಾಗಿದೆ. UDHR ನಲ್ಲಿನ 30 ವಿಧಿಗಳು ಎಲ್ಲರಿಗೆ ಅನ್ವಯಿಸುವಂತೆ ಹಿಂದೂಗಳಿಗೂ ನಿಜ ಅರ್ಥದಲ್ಲಿ ಅನ್ವಯಿಸಿದರೆ ಶಾಂತಿ-ಸಮಚಿತ್ತತೆಯ ದೇಶಕ್ಕೆ ಸಿಗುವ ಕೊಡುಗೆಯಾಗ ಬಹುದು.


ಅಂತರಾಷ್ಟ್ರೀಯ ಮಟ್ಟದಲ್ಲಿ ಅಲ್ಪಸಂಖ್ಯಾರಾಗಿರುವ ಹಿಂದೂಗಳಿಗೇಕಿಲ್ಲ ಮಾನವ ಹಕ್ಕುಗಳು? ಸಾಮ್ರಾಟ ಅಶೋಕ ಕಳಿಂಗ ಯುದ್ಧವನ್ನು ಪರ್ಯಾಯ ದೃಷ್ಟಕೋನದಲ್ಲಿ ನೋಡಿದ್ದು, ಮೌರ್ಯ ಸಾಮ್ರಾಜ್ಯದ ಏಕತೆ ಮತ್ತು ಸಮಗ್ರತೆ ಮುಂದುವರಿಸಿದ್ದರೆ, ಹಿಂದೂಗಳ ಸಂಖ್ಯೆ ಇಷ್ಟು ಕ್ಷೀಣಿಸುತ್ತಿರಲ್ಲಿವೇನೋ; ನಮ್ಮ ಸಂಪತ್ತು ಲೂಟಿ ಮಾಡಲು ವಿದೇಶಿ ಆಕ್ರಮಣಕಾರರಿಗೆ ಕಷ್ಟವಾಗಿರುತ್ತಿತ್ತೇನೋ; ನಮ್ಮ ನಳಂದ, ತಕ್ಷಶಿಲ ವಿಶ್ವವಿದ್ಯಾಲಯಗಳು ನಮ್ಮ ಬೌಧಿಕ ಸಾಮರ್ಥ್ಯ ಮತ್ತು ಆಧ್ಯಾತ್ಮಿಕೆಯನ್ನು ಸಾರುವ, ಸಾರ್ವತ್ರಿರ ಮಾನವ ಹಕ್ಕುಗಳಿಗೆ ಧ್ವನಿಯಾಗಲು ಮತ್ತಷ್ಟು ಬಲ ನೀಡುತ್ತಿತ್ತೇನೋ? ಇತಿಹಾಸದ ತಪ್ಪುಗಳನ್ನು ಸರಿಮಾಡಲು ಸಾಧ್ಯವಿರದಿರಬಹುದು, ದೋಚಿದ ಸಂಪತ್ತು ಹಿಂದಿರುಗಿಸಲೂ ಆಗದಿರಬಹುದು ಆದರೆ ಹಿಂದೂ ಅಸ್ಮಿತೆ ಉಳಿಸಿಕೊಳ್ಳಲು, ಸುಭೀಕ್ಷ, ಶಾಂತಿಯುತ ಪರಿಸರದಲ್ಲಿ ಜೀವಿಸಲು ಎಲ್ಲರಿಗೂ ಅವಕಾಶ ನೀಡಿದರೆ ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನ ಸಾರ್ಥಕವಾಗುವುದು.

Leave a Reply

Your email address will not be published.

This site uses Akismet to reduce spam. Learn how your comment data is processed.