ಲೆಫ್ಟಿನೆಂಟ್ ಜನರಲ್ ಶ್ರೀ ವಿ.ಎಂ ಪಾಟೀಲ್ (84) ನಿಧನ

ಲೆಫ್ಟಿನೆಂಟ್ ಜನರಲ್ ವಿ.ಎಂ ಪಾಟೀಲ್ ಅವರು ನಿವೃತ್ತ ಯೋಧರು. 1962ರ ಭಾರತ ಚೀನಾ ಯುದ್ಧ,1965ರ ಭಾರತ ಪಾಕಿಸ್ತಾನ ಯುದ್ಧದಲ್ಲಿಯೂ ಪಾಲ್ಗೊಂಡಿದ್ದರು. ವಿಯೆಟ್ನಾಂ, ಲಾವೋಸ್ ಮತ್ತು ಕಾಂಬೋಡಿಯಾದ ಭಾರತದ ರಾಯಭಾರ ಕಚೇರಿಯ ಮೊದಲ ಸೇನಾ ಸಲಹೆಗಾರರೂ ಆಗಿದ್ದರು. ಅವರು ವಿಶ್ವ ಸಂಸ್ಥೆಯ ಇರಾಕ್ ಮತ್ತು ಇರಾನಿನ ಮಿಲಿಟರಿ ವೀಕ್ಷಣಾ ದಳದ ಸೇನಾಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದರು.

ಅವರು ಅಖಿಲ ಭಾರತೀಯ ಪೂರ್ವ ಸೈನಿಕ ಸೇವಾ ಪರಿಷತ್‌ನ ಅಧ್ಯಕ್ಷರಾಗಿ ಹಾಗು ಫಿನ್ಸ್‌ನ (Forum For Integrated National Security – FINS)ನ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆಯವರು ಶ್ರೀ ಎಂ.ವಿ.ಪಾಟೀಲ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದು ಶೋಕ ಸಂದೇಶ ನೀಡಿದ್ದಾರೆ.

ಶೋಕ ಸಂದೇಶ.

ಲೆ.ಜ. ಶ್ರೀ ವಿ.ಎಂ. ಪಾಟೀಲ್ ಅವರ ನಿಧನವಾರ್ತೆ ಅತೀವ ದುಃಖಕರ. ಭಾರತೀಯ ಸೈನ್ಯಕ್ಕೆ, ದೇಶದ ಸುರಕ್ಷತೆಗೆ ಅವರ ಕೊಡುಗೆ ಅದ್ವಿತೀಯ. ನಿವೃತ್ತಿಯ ನಂತರವೂ ಸಾಮಾಜಿಕವಾಗಿ ಸಕ್ರಿಯರಾಗಿದ್ದ ವಿ.ಎಂ.ಪಾಟೀಲರು ಅಖಿಲ ಭಾರತೀಯ ಪೂರ್ವ ಸೈನಿಕ ಸೇವಾ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷರಾಗಿ ಹಾಗೂ ಫೋರಂ ಫಾರ್ ಇಂಟಿಗ್ರೇಟೆಡ್ ನ್ಯಾಷನಲ್ ಸೆಕ್ಯೂರಿಟಿ (ಫಿನ್ಸ್) ಸಂಸ್ಥೆಯ ಉಪಾಧ್ಯಕ್ಷರಾಗಿ ಮಾರ್ಗದರ್ಶನ ಮಾಡಿದವರು. ಭಾರತದ ಆಂತರಿಕ ಸುರಕ್ಷೆಯ ವಿವಿಧ ಆಯಾಮಗಳ ಕುರಿತು ಅವರ‌ ಜ್ಞಾನ ಹಾಗೂ ಅನುಭವ ಅಪಾರ. ಶಿಸ್ತು-ಅನುಶಾಸನಕ್ಕೆ ಅವರ ನಡೆ-ನುಡಿಗಳು ಸದಾ ಅನುಪಮ ಉದಾಹರಣೆ. ಸೇನಾಕ್ಷೇತ್ರದ ಹಿರಿಯ ಮುತ್ಸದ್ಧಿಯೋರ್ವರವನ್ನು ನಾವು ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ಭಗವಂತನು ಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥನೆ.

ದತ್ತಾತ್ರೇಯ ಹೊಸಬಾಳೆ
ಸರಕಾರ್ಯವಾಹ
ರಾಷ್ಟ್ರೀಯ ಸ್ವಯಂಸೇವಕ ಸಂಘ
11.12.2022
ಭೋಪಾಲ್

Leave a Reply

Your email address will not be published.

This site uses Akismet to reduce spam. Learn how your comment data is processed.