RSS Pranth Pracharak Mukund speaks at Jayanagar

Jayanagar Bangalore Jan 12, 2013: ಜಯನಗರ, ಬೆಂಗಳೂರು: ನಮ್ಮ ದೇಶದ ಸಾಮಾನ್ಯ ಯುವಕರು ವಿವೇಕಾನಂದರ ವಾಣಿಯಂತೆ ಒಂದು ಆದರ್ಶವನ್ನು ಮನಸ್ಸಿನಲ್ಲಿ ಹೊತ್ತು ಅದಕ್ಕಾಗಿಯೇ ಬದುಕಿದಲ್ಲಿ ನಮ್ಮದೇಶ ಎದುರಿಸುತ್ತಿರುವ ಅನೇಕ ಸಮಸ್ಯಗಳಿಗೆ ಉತ್ತರ ನೀಡಬಲ್ಲದು ಎಂದು RSS ಕರ್ನಾಟಕದಕ್ಷಿಣ ಪ್ರಾಂತ ಪ್ರಚಾರಕ್ ಮುಕುಂದ್ ಹೇಳಿದ್ದಾರೆ.

RSS Pranth Pracharak Mukund speaks at Jayanagar

ವಿವೇಕಾನಂದ 150ನೇ ವರ್ಷಾಚರಣಾ ಸಮಿತಿ ಜಯನಗರ ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು , “ಭಾರತವನ್ನು ತಿಳಿದುಕೊಳ್ಳಬೇಕಾದರೆ ವಿವೇಕಾನಂದರನ್ನು ಓದಿ’ ಎಂದು ರವಿಂದ್ರನಾಥ ಠಾಗೂರ್ ಹೇಳಿದ್ದಾರೆ. Vivekananda saved India, Vivekananda saved Hinduism! ನಮ್ಮ ದೇಶದ ಮೊತ್ತಮೊದಲ ಗವರ್ನರ್‌ ಜನರಲ್‌ ರಾಜಾಜಿ, ವಿವೇಕಾನಂದರು ಬದುಕಿದ್ದರೆ ನಾನವರ ಪದತಲದಲ್ಲಿರುತ್ತಿದ್ದೆ. ಯಾರ್‍ಯಾರು ಅವರ ಜೊತೆ ಇದ್ದರೋ ಅವರಿಗೂ ವರ್ಣನೆ ಮಾಡಲು ಅಸಾಧ್ಯವಾದಂತಹ ಅಪರೂಪದಲ್ಲಿ ಅಪರೂಪದ ಮನುಷ್ಯ ಸ್ವಾಮಿ ವಿವೇಕಾನಂದ. ಜಗತ್ತಿನ ಮತ್ತು ಭಾರತದ ಎಲ್ಲರನ್ನೂ ಮಂತ್ರಮುಗ್ದಗೊಳಿಸುವ ವ್ಯಕ್ತಿತ್ವ ವಿವೇಕಾನಂದರದ್ದು ಎಂದು ಸುಭಾಷ್‌ಚಂದ್ರ ಬೋಸ್ ಹೇಳುತ್ತಾರೆ. ಟಾಲ್ ಸ್ಟಾಯಿ, ಮ್ಯಾಕ್ ಮೇಲ್ ಮುಂತಾದ ಜಗತ್ತನ್ನೆ ನೋಡಿದಂತಹ ಚಿಕಿತ್ಸಕ ಮನೋಬುದ್ಧಿಯ ಅನೇಕ ಮಹಾಪುರುಷರೂ ವಿವೇಕಾಂದರ ವ್ಯಕ್ತಿತ್ವವನ್ನು, ಅವರ ವಿಚಾರವನ್ನು, ಅವರ ಭವ್ಯ ಪ್ರಭಾವವನ್ನುಒಪ್ಪಿಕೊಂಡಿದ್ದನ್ನು ಸ್ಮರಣೆ ಮಾಡಿದರೆ ಸಾಕು ದೇಶಕ್ಕಾಗಿ, ಒಂದು ವಿಚಾರಕ್ಕಾಗಿ ಕೆಲಸ ಮಾಡುವಂತಹವರಿಗೆ ಪ್ರೇರಣೆ ಸಹಜವಾಗಿಯೇ ಬರುತ್ತದೆ. ವಿವೇಕಾನಂದರು 150 ವರ್ಷದ ನಂತರ ನಮಗೇಕೆ ನೆನಪಾಗಬೇಕು? ಪತ್ರಿಕೆಗಳಲ್ಲಿ ಯಾವಾಗಲೂ ಬರುವ ಹೆಸರು ಅವರಲ್ಲ, ನೊಬೆಲ್, ಜ್ಞಾನಪೀಠದಂತಹ ಪ್ರಶಸ್ತಿ ಪಡೆದುಕೊಂಡವರೂ ಅಲ್ಲ ಅಥವಾ ಸಾವಿರಾರು ರೂಪಾಯಿ ಗಳಿಸಿ ಫೋರ್ಬ್ಸ್ ಪಟ್ಟಿಯಲ್ಲಿನ ಪ್ರಮುಖ ಸ್ಥಾನದಲ್ಲೂ ಇದ್ದವರಲ್ಲ, ಹೀಗಿದ್ದೂ ವಿವೇಕಾನಂದರು 150 ವರ್ಷಗಳ ನಂತರವೂ ನಮಗೆ ನೆನಪಾಗುತ್ತಾರೆ” ಎಂದರು.

ಪ್ರತಿನಿತ್ಯ ಪತ್ರಿಕೆಗಳಲ್ಲಿ, 24 ಗಂಟೆ ಸಾಲದು ಎಂದು ಪರಿತಪಿಸುವ ಟಿವಿ ಚಾನೆಲ್‌ಗಳಿಗೆ, ರಸ್ತೆ ಬದಿಯ ಟೀ ಅಂಗಡಿಗಳ ಬದಿಯಲ್ಲಿ ಕುಳಿತು ಮಾತನಾಡುವ ವಿಷಯಗಳಿಗೆ ಈ ಎಲ್ಲ ಸಂದರ್ಭಗಳಲ್ಲೂ ನಮಗೆ ವಿವೇಕಾನಂದರು ನೆನಪಾಗುತ್ತಾರೆ. ಬಾರತ-ಪಾಕ್‌ ಗಡಿಯಲ್ಲಿ 24 ಗಂಟೆಗಳ ಕಾಲ ನಮ್ಮ ನಿಮ್ಮೆಲ್ಲರ ಸ್ವಾತಂತ್ರ್ಯದ ಉಳಿವಿಗಾಗಿ ಹಗಲು-ರಾತ್ರಿ ದೇಶವನ್ನು ಕಾಯುತ್ತಿದ್ದವರನ್ನು ಪಾಕಿಸ್ಥಾನದ ಪಾಪಿಗಳು, ಅಲ್‌ಖೈದಾ, ಲಷ್ಕರ್‌ನಂತಹ ಭಯೋತ್ಪಾದಕರು ಕೊಂದುಹಾಕಿ ದೇಹ ತುಂಡು ತುಂಡು ಮಾಡಿದಾಗ ನಮ್ಮ ಸರ್ಕಾರ ಯಾವ ರೀತಿ ನಡೆದುಕೊಂಡಿತು? ಯಾಕೆಂದರೆ ಸರ್ಕಾರ ರಾಷ್ಟ್ರೀಯವಾಗಿ ಯೋಚನೆ ಮಾಡುತ್ತಿಲ್ಲ. ಇನ್ನೂ ಶಾಂತಿ ಮಂತ್ರವನ್ನೇಕೆ ಜಪಿಸುತ್ತಿದೆ? ವಿವೇಕಾನಂದರ ವಾಣಿ ‘I want men with capital ‘M’. ನನಗೆ ಪುರುಷಸಿಂಹರು ಬೆಕಾಗಿದ್ದಾರೆ!  With national men mainly we create a nation. ಗಡಿಗಳ ರಾಷ್ಟ್ರೀಯ ಚಿಂತನೆ ಮಾಡುವವರು ನಮ್ಮದೇಶದ ನಾಯಕರಾಗಿದ್ದರೆ ಒಂದು ಪುರುಷ ಸದೃಶ ರಾಷ್ಟ್ರ ನಿರ್ಮಾಣ ಮಾಡಬಹುದಿತ್ತು. ಯಾರು ನಮ್ಮದೇಶದ ಯೋಧರ ಪ್ರಾಣಕ್ಕೆ ಕೈ ಹಾಕುತ್ತಾರೋ ಅವರಿಗೆ ತಕ್ಕ ಉತ್ತರ ಕೊಡುವಂತಹ ಪುರುಷ ಸದೃಶ ನೇತೃತ್ವ, ವ್ಯಕ್ತಿತ್ವ ನಮ್ಮ ದೇಶದಲ್ಲಿ ಇಲ್ಲ ಎನ್ನುವುದು ವಿವೇಕಾನಂದರನ್ನು ನಮಗಿಂದು ನೆನಪು ಮಾಡುತ್ತೆ. ಛತ್ತಿಸ್‌ಗಢದಲ್ಲಿ ಮುಗ್ದ ವನವಾಸಿಗಳ ಮನಸ್ಸಿನಲ್ಲಿ ದ್ವೇಷವನ್ನು ಬಿತ್ತಿ ಸಮಾಜದ ರಕ್ಷಣೆಗೆ ನಿಂತಂತಹ ಪೊಲೀಸರನ್ನು ಕೊಂದು ಅವರ ದೇಹದಲ್ಲಿ ಬಾಂಬ್‌ ಇಡುವಂತಹ ವಿಕೃತ ಮನಸ್ಥಿತಿಯ ಹಾದಿ ತಪ್ಪಿದ ನಕ್ಸಲೈಟ್‌ರನ್ನು ನೋಡಿದಾಗ, ಬಾರತದ ವೈಭವ ಹಿಂಸೆಯಲ್ಲಿಲ್ಲ ಎಂದು ತಿಳಿಯಬೇಕಾಗಿದೆ. India would not raise with the power of violence. But it will raise with the power of spirit. It  will not raise with the flag of destruction . But it will raise with flag of love and peace ಎಂದು ಹೇಳಿದಂತಹ ಶಾಂತಿ ಮತ್ತು ಪ್ರೀತಿಯ ಸುದೃಢವಾದ ಸಮಾಜ ನಿರ್ಮಾಣದಿಂದ ಭಾರತವನ್ನು ಮೇಲೆತ್ತಬಹುದೇ ಹೊರತು ಹಿಂಸೆಯಿಂದ ಸಾಧ್ಯವಿಲ್ಲ ಎಂದು ಹೇಳಿದ ವಿವೇಕಾನಂದರು ನಮಗೆ ನೆನಪಾಗಬೇಕು. ಅಥವಾ ದೆಹಲಿಯ ಬಸ್ಸಿನಲ್ಲಿ ನಮ್ಮದೇ ಸಮಾಜದ ಅಮಾಯಕ ಹೆಣ್ನುಮಗಳ ಮೆಲೆ ಅತ್ಯಾಚಾರ ಮಾಡಿದ ದಾರಿತಪ್ಪಿದ ವಿಕೃತವಾದ ಮನಸ್ಥಿತಿಯವರು ಈ ಸುದ್ಧಿಯನ್ನು ನೋಡಿದಾಗಲೂ ಇಡೀ ಪ್ರಪಂಚವನ್ನೇ ಸೋದರ ಸೋದರಿಯರು ಎಂದು ನೋಡಿದಂತಹ ವಿವೇಕಾನಂದರ ನೆನಪಾಗಬೇಕು. ಪ್ರತಿನಿತ್ಯ ಪತ್ರಿಕೆಗಳಲ್ಲಿ ಬರುವ ಅತ್ಯಾಚಾರ ಅನಾಚಾರಗಳನ್ನು ನಿಗ್ರಹಿಸಲು ವಿವೇಕಾನಂದರ ವಾಣಿ, ವ್ಯಕ್ತಿತ್ವ ನಿಶ್ಚಿತವಾಗಿ ಪ್ರೇರಣೆ ಕೊಡುತ್ತದೆ. ಇವೆಲ್ಲಕ್ಕೂ ಉತ್ತರ ವಿವೇಕಾನಂದರು ಹೇಳಿದ ವ್ಯಕ್ತಿ ನಿರ್ಮಾಣದಲ್ಲಿದೆ. Take up one idea, make that one idea in your life. Think of it, dream of it wit all the ideas alone.

‘ಒಂದು ಆದರ್ಶಕ್ಕಾಗಿ ಬದುಕಿ’ ಎಂದು ವಿವೇಕಾನಂದರು ಕರೆಕೊಟ್ಟಿದ್ದರೋ ಈ ಮಾತನ್ನು ನಮ್ಮ ದೇಶದ ಸಾಮಾನ್ಯ ಯುವಕ ತನ್ನ ದೇಹದಲ್ಲಿ ಮನಸ್ಸಿನಲ್ಲಿ ಹೊತ್ತುಕೊಂಡರೆ ಇವತ್ತು ನಮ್ಮ ದೇಶ ಎದುರಿಸುತ್ತಿರುವ ಅನೇಕ ಸಮಸ್ಯಗಳಿಗೆ ಪರಿಹಾರ ಸಿಗಬಹುದು. ಹೀಗಾಗಿ ವಿವೇಕಾನಂದರು ನಮ್ಮ ದೇಶಕ್ಕೆ ಅತ್ಯಂತ ಪ್ರಸ್ತುತ ವ್ಯಕ್ತಿ. ಅವರ ವಿಚಾರ ನಮ್ಮ ದೇಶ, ನಮ್ಮ ಸಮಾಜದದ ನೇತೃತ್ವ ವಹಿಸಿರುವವರಿಗೆ, ಸಾಮಾನ್ಯ ಜನರಿಗೆ ಮಾರ್ಗದರ್ಶನ ನೀಡುವಂತಹದ್ದಾಗಿದೆ. ಇಡೀ ವರ್ಷ ಮೋಳಗಲಿರುವ ವಿವೇಕವಾಣಿ ರಾಷ್ಟ್ರೀಯತೆಯ, ಹಿಂದುತ್ವದ, ಸಂಸ್ಕೃತಿ ರಕ್ಷಣೆಯ ಒಂದು ಅಮೋಘವಾದ ಪ್ರವಾಹವನ್ನು ಹರಿಸಲಿ. ಭಾರತದ ನಾಗರಿಕರು ಪರಸ್ಪರ ಪ್ರೀತಿ, ವಿಶ್ವಾಸ, ಸಹಕಾರದಿಂದ ಬದುಕುವುದನ್ನು ಮರೆತು ದ್ವೇಷ ಅಸೂಯೆಯಲ್ಲಿ ತೊಡಗಿದ್ದರಿಂದಲೇ ಈ ದೇಶ ಪರಕೀಯರ ಆಳ್ವಿಕೆಗೆ ತುತ್ತಾಯಿತು. ಇದನ್ನು ಅರಿತು ಮುಂದಡಿ ಇಡಬೇಕಾಗಿದೆ. ಭರತ ಖಂಡದ ಸಿದ್ಧಾಂತ ಮತ್ತು ಸಂಸ್ಕೃತಿಯನ್ನು ಜಗತ್ತಿನ್ನೆಲ್ಲೆಡೆ ಪಸರಿಸಿ, ಅದರ ಬಗೆಗೆ ಹೆಮ್ಮೆ ತರುವಂತೆ ಮಾಡಿದ ವಿವೇಕಾನಂದರ ಜೀವನ ಮತ್ತು ಸಂದೇಶನ್ನು ನಾವೆಲ್ಲ ಪಾಲಿಸಬೇಕಾಗಿದೆ. ಅವರ ಸಂದೇಶದಂತೆ ಭಾಷೆ, ಜಾತಿ, ಮತವೆಂಬ ಬೇಧವನ್ನು ಮರೆತು ಭಾರತದ ಎಳ್ಗೆಗಾಗಿ ಒಂದಾಗಬೇಕು’ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ರಾಜ್ಯ ನಿವೃತ್ತ ಪೊಲೀಸ ಮಹಾನಿರ್ದೇಶಕರಾದ ಶಂಕರ್ ಬಿದರಿ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಾಂತ ಸಮಿತಿಯ ಸದಸ್ಯರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ಖ್ಯಾತ ಚಿತ್ರನಟ ಅನಿರುದ್ಧ್ ಮತ್ತಿರರರು ಬಾಗವಹಿಸಿದ್ದರು.

Report by Anil Kumar

Leave a Reply

Your email address will not be published.

This site uses Akismet to reduce spam. Learn how your comment data is processed.