Moodabidire Jan 12, 2013: Swami Vivekananda’s 150th birthday was observed in Moodabidire near Mangalore, in which thousands of citzens, students participated. Noted academician Dr Mohan Alva, who also the Vice-President of Swami Vivekananda’s 150th Birth Anniversary celebrations commitee of Karnataka, addressed gathering.

RSS Pracharak Pradeep, Youth Against Corruption activist Suvrath Kumar, other socio-political leaders addressed the gathering during Vivekananda’s 150th birh anniversary and also happens to be the Nationak Youth Day.

ಮೂಡಬಿದಿರೆ: ಇಂದಿನ ಯುವಜನತೆಗೆ ಭಾರತೀಯ ಸಂಸ್ಕೃತಿ, ಜೀವನದ ಪದ್ಧತಿಯ ಬಗ್ಗೆ ಗೌರವವಿದೆ. ಜಾಗತೀಕರಣದ ಪ್ರಭಾವದಿಂದಾಗಿ ಇಂದು ಯುವಜನತೆಗೆ ಕೆಲವು ಗೊಂದಲಳಿದ್ದು ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಸಶಕ್ತ ಭಾರತ ನಿರ್ಮಾಣಕ್ಕೆ ಪ್ರೇರಣೆ ನೀಡುವ ಕೆಲಸ ಆಗಬೇಕಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ ಹೇಳಿದರು.
ಸ್ವಾಮೀ ವಿವೇಕಾನಂದರ 150ನೇ ಜನ್ಮದಿನಾಚರಣಾ ಸಮಿತಿಯ ವತಿಯಿಂದ ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶನಿವಾರ ನಡೆದ ವಿವೇಕಾನಂದ ಜನ್ಮದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದೇಶದ ಯುವಜನತೆಯನ್ನು ಬಡಿದೆಬ್ಬಿಸಿ ದೇಶಕ್ಕೆ ಶಕ್ತಿತುಂಬುವ ಕೆಲಸವಾಗಬೇಕಾಗಿದೆ. ಅದಕ್ಕೆ ವಿವೇಕಾನಂದರ ಚಿಂತನೆಗಳೇ ಸ್ಪೂರ್ತಿ. ಯುವಜನತೆ ದೇಶಭಕ್ತಿ ಸಂಸ್ಕೃತಿಯನ್ನು ಫ್ಯಾಶನ್ನಾಗಿ ತೆಗೆದುಕೊಳ್ಳದೆ ಬದ್ಧತೆಯಿಂದ ಅನುಸರಿಸಬೇಕು. ವಿವೇಕಾನಂದರ ಜೀವನಾದರ್ಶ ತತ್ವಗಳನ್ನು ಬದುಕಿನಲ್ಲಿ ಅಳವಡಿಕೊಳ್ಳಬೇಕು ಎಂದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗದ ಸಹಪ್ರಚಾರಕ ಪ್ರದೀಪ್ ಮಾತನಾಡಿ ತ್ಯಾಗಮತ್ತು ಸೇವೆಯೇ ಈ ದೇಶದ ಜೀವಾಳ ಎಂಬುದನ್ನು ಸ್ವಾಮಿ ವಿವೇಕಾನಂದ ತೋರಿಸಿಕೊಟ್ಟಿದ್ದಾರೆ. ಅದುವೇ ನಮಗೆ ಆದರ್ಶವಾಗಿದೆ. ಎಂದರು. ಮೂಡುಬಿದಿರೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಹುಬಲಿ ಪ್ರಸಾದ್, ನ್ಯಾಯವಾದಿ ಸುವೃತಕುಮಾರ್, ವಿವೇಕಾನಂದ ಜನ್ಮದಿನಾಚರಣಾ ಸಮಿತಿಯ ತಾಲೂಕು ಸಂಚಾಲಕ ಬೆಳುವಾಯಿ ಭಾಸ್ಕರ ಆಚಾರ್ಯ, ಸಹಸಂಚಾಲಕ ಚೇತನ್ ಕುಮಾರ್ ಶೆಟ್ಟಿ, ಜಿಲ್ಲಾ ಸಹಸಂಚಾಲಕ ದೇವಿಪ್ರಸಾದ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಉಪಸ್ಥಿತರಿದ್ದರು. ಉಪನ್ಯಾಸಕ ಜಗನ್ನಾಥ್ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮಕ್ಕೂ ಮುನ್ನ ವಿವಿಧ ಶಾಲಾ ಕಾಲೇಜುಗಳ 3500ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಬೃಹತ್ ಮೆರವಣಿಗೆ ಶನಿವಾರ ಮೂಡುಬಿದಿರೆಯಲ್ಲಿ ನಡೆಯಿತು. ಮೆಸ್ಕಾಂ ಕಛೇರಿಬಳಿ ವಿಪಕ್ಷ ಮುಖ್ಯ ಸಚೇತಕ ಕೆ.ಅಭಯಚಂದ್ರ ಜೈನ್ ಉದ್ಘಾಟಿಸುವ ಮೂಲಕ ಮೆರವಣೆಗೆಗೆ ಚಾಲನೆ ನೀಡಿದರು. ರಾಷ್ಟ್ರಧ್ವಜವನ್ನು ಹಿಡಿದ ವಿದ್ಯಾರ್ಥಿಗಳು ಜ್ಯೋತಿನಗರ ಹಳೆಪೊಲೀಸ್ ಠಾಣೆ  ಮುಖ್ಯ ರಸ್ತೆಯ ಮೂಲಕ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದವರೆಗೆ ಸಾಗಿಬಂದರು. ನಗರದೆಲ್ಲೆಡೆ ವಿವೇಕಾನಂದರ ಬೃಹತ್ ಕಟೌಟ್‌ಗಳನ್ನು ಅಳವಡಿಸಲಾಗಿತ್ತು.

Leave a Reply

Your email address will not be published.

This site uses Akismet to reduce spam. Learn how your comment data is processed.