ಪ್ರಸಿದ್ಧ ನೃತ್ಯ ಪಟು ನೀನಾ ಪ್ರಸಾದ್ ಅವರ ನೃತ್ಯ ಪ್ರದರ್ಶನದ ವೇಳೆಯಲ್ಲಿ ಅಡ್ಡಿಪಡಿಸಿದ್ದರಿಂದ  ಕೇರಳದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ  ಕಲಮ್ ಪಾಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪೋಲೀಸರು ನ್ಯಾಯಮೂರ್ತಿ ಪಾಶಾ ಅವರ ದೂರಿನ ಅನ್ವಯ ನೃತ್ಯಕಲಾವಿದರ ಪ್ರಸ್ತುತಿಯನ್ನು ನಿಲ್ಲಿಸಿದ್ದಾರೆ.

ನೀನಾ ಪ್ರಸಾದ್ ಅವರು ಅತ್ಯಂತ ನೋವಿನಿಂದ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ತಮಗೆ ಅವಮಾನವಾಗಿದೆ ಎಂದು ಬರೆದುಕೊಂಡಿದ್ದಾರೆ.” ಒಬ್ಬ ಕಲಾವಿದೆಯಾಗಿ ಈ ರೀತಿಯ ಅನುಭವ ನನ್ನ ಜೀವನದಲ್ಲೇ ನಾನು ಕಂಡಿರಲಿಲ್ಲ.ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ನಡೆದ ಮೋಹಿನಿ ಅಟ್ಟಂ ಪದರ್ಶನದ ವೇಳೆ ಈ ರೀತಿ ನನ್ನನ್ನು ಅವಮಾನಿಸಲಾಗಿದೆ.ಜಸ್ಟೀಸ್ ಕಲಮ್ ಪಾಶಾ ಅವರ ದೂರಿನ ಸಲುವಾಗಿ ನೃತ್ಯವನ್ನು ನಿಲ್ಲಿಸಲಾಗಿದೆ”. ಎಂದು ಬರೆದುಕೊಂಡಿದ್ದಾರೆ‌.

ಕಲಾಬವನದ ಹಿಂಭಾಗದಲ್ಲಿರುವ ಮನೆಯಲ್ಲಿ ವಾಸಿಸುವ ನ್ಯಾಯಾಧೀಶರು ಶಾಸ್ತ್ರೀಯ ನೃತ್ಯವನ್ನು ‘Noise’ ಅನ್ನುವ ಕಾರಣ ನೀಡಿ ಪೋಲೀಸರಿಗೆ ದೂರು ಸಲ್ಲಿಸಿದ್ದಾರೆ‌.ಈ ಕಾರಣಕ್ಕಾಗಿ ಪೋಲೀಸರು ಬಂದು ನೃತ್ಯವನ್ನು ನಿಲ್ಲಿಸಿದ್ದಾರೆ‌.ಆದರೆ ಶಾಸ್ತ್ರೀಯ ನೃತ್ಯದ ಪ್ರದರ್ಶನದ ಸಂದರ್ಭದಲ್ಲಿ ಹೊರಭಾಗಕ್ಕೆ ಯಾವುದೇ ಧ್ವನಿ ವರ್ಧಕಗಳನ್ನು ಹಾಕಲಾಗಿರಲಿಲ್ಲ ಎನ್ನಲಾಗಿದೆ.
ಕೊನೆಗೆ ಪ್ರೆಕ್ಷಕರ ಒತ್ತಾಯದ ಮೇರೆಗೆ ಅತ್ಯಂತ ಕಡಿಮೆ ದ್ವನಿಯಲ್ಲಿ ವೇದಿಕೆಗೆ ಹತ್ತಿರವಾಗುವಂತೆ ಕೂರಿಸಿ ಪ್ರದರ್ಶನವನ್ನು ಮುಂದುವರೆಸಲಾಗಿದೆ‌.

Leave a Reply

Your email address will not be published.

This site uses Akismet to reduce spam. Learn how your comment data is processed.