Padubidri: ಹಿಂದೂ ಭಾಂಧವರ ಶ್ರದಾಟಛಿಕ್ಷೇತ್ರವಾದ ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕನಸು ನನಸು ಮಾಡುವುದಕ್ಕಾಗಿ ಈ ಸಮಾಜೋತ್ಸವ ಏರ್ಪಡಿಸಲಾಗಿದೆ ಎಂಬುದಾಗಿ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯವಾಹ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿzರೆ.
ಭಾನುವಾರ ಕಾಪುವಿನ ಹೊಸ ಮಾರಿಗುಡಿ ದೇವಸ್ಥಾನದ ಮುಂಭಾಗದಲ್ಲಿ ಹನುಮದ್ ಶಕ್ತಿ ಜಗರಣ ಸಮಿತಿ ಕಾಪು ಪ್ರಖಂಡದ ವತಿಯಿಂದ ಬೃಹತ್ ಹನುಮದ್ ಶಕ್ತಿ ಜಗರಣ ಯಜ್ಞ ಹಾಗೂ ಹಿಂದೂ ಸಮಾಜೋತ್ಸವಕ್ಕಾಗಿ ನಿರ್ಮಾಣ ಮಾಡಿದ ಭವ್ಯ ವೇದಿಕೆಯಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಹಿಂದೂ ಸಮಾಜಕ್ಕೆ, ರಾಮ ಜನ್ಮಭೂಮಿಗಾದ ಅನ್ಯಾಯವನ್ನು ಪ್ರತಿಭಟಿಸಿ ವಿವಿಧ ರಥಯಾತ್ರೆಗಳನ್ನು ಮಾಡಲಾಗಿದೆ. ಯಾವುದೇ ದೇವಸ್ಥಾನಕ್ಕೆ ಮಣ್ಣಿನೊಂದಿಗೆ ಸಂಬಂಧವಿರುತ್ತದೆ. ಆದರೆ ಮಸೀದಿಗೆ ಮಣ್ಣಿನೊಂದಿಗೆ ಯಾವುದೇ ಸಂಬಂಧವಿಲ್ಲ. ಆ ಕಾರಣದಿಂದ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಸಾಧ್ಯವಿಲ್ಲ, ಅದು ಕೂಡ ಹೊರ ದೇಶದ ಬಾಬರನ ಹೆಸರಲ್ಲಿ ಮಸೀದಿ ನಿರ್ಮಾಣ ಕೂಡದು ಎಂದವರು ಹೇಳಿದರು.
ಯುವಜನತೆ ದಾರಿ ತಪ್ಪುತ್ತಿರುವ ಬಗ್ಗೆ ಮಾತನಾಡಿದ ಅವರು, ಲವ್ ಜಿಹಾದ್ ಹೆಸರಲ್ಲಿ ಹಿಂದೂ ಹುಡುಗಿಯರನ್ನು ಉದೆಟಛೀಶ ಪೂರ್ವವಾಗಿ ಮರುಳು ಮಾಡಲಾಗುತ್ತಿದೆ. ಯಾವೊಬ್ಬ ಮುಸ್ಲಿಂ ಆತನ ಸಮಾಜದ ಹುಡುಗಿಯೊಂದಿಗೆ ಪಲಾಯನ ಮಾಡಿದ ದಾಖಲೆಗಳಿಲ್ಲ. ಮಾನವ ಹಕ್ಕು ಮಾಹಿತಿ ಪ್ರಕಾರ ಹತ್ತು ಸಾವಿರ ಹಿಂದು ಹುಡುಗಿಯರನ್ನು ಮುಸ್ಲಿಂ ಯುವಕರು ಅಪಹರಿಸಿದ ಮಾಹಿತಿ ಇದೆ ಎಂದ ಅವರು, ಈ ವಿಚಾರದಲ್ಲಿ ಮಕ್ಕಳ ಹೆತ್ತವರ ಪಾತ್ರವೂ ಇದ್ದು, ಮಕ್ಕಳು ಧರಿಸುವ ಬಟ್ಟೆಬರೆಗಳ ಬಗ್ಗೆ ಗಮನ ಹರಿಸುವುದು ಕಡಿಮೆಯಾಗಿದೆ. ಕಾಲ ಬದಲಾಗಿದೆ ಎಂಬ ಮಾತು ಸುಳ್ಳು. ಕಾಲ ಬದಲಾಗಿಲ್ಲ. ಜನ ಬದಲಾಗಿದ್ದಾರೆ ಎಂದರು.
ಆಶೀರ್ವಚನ ನೀಡಿದ ಶ್ರೀ ಆನೆಗುಂದಿ ಸಂಸ್ಥಾನ ಕಟಪಾಡಿಯ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ, ಹಿಂದೂ ಸಮಾಜ ಒಂದಾಗಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ. ನಮ್ಮ ಈ ಪುಣ್ಯ ಭೂಮಿಯಲ್ಲಿ ಮರ್ಯಾದಾ ಪುರುಷೋತ್ತಮನಾದ ಶ್ರೀರಾಮಚಂದ್ರ ಹುಟ್ಟಿಲ್ಲ ಎನ್ನುವ ರಾವಣರಿದ್ದು ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವವರೆಗೆ ತಾನು ವಿಶ್ರಮಿಸೋಲ್ಲ ಎಂಬ ಪ್ರತಿeಯನ್ನು ಪ್ರತಿಯೋರ್ವ ಹಿಂದೂ ಮಾಡಬೇಕಾಗಿದೆ ಎಂದರು.
ಆರಂಭದಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಹಿಂದೂ ಬಾಂಧವರು ಕಾಪುವಿನ ಬಂಗ್ಲೆ ಮೈದಾನದಿಂದ ಶೋಭಾಯಾತ್ರೆ ಮೂಲಕ ಹೊಸ ಮಾರಿಗುಡಿ ದೇವಸ್ಥಾನದ ಮುಂಭಾಗದ ಭವ್ಯ ಚಪ್ಪರಕ್ಕೆ ಆಗಮಿಸಿತು. ಸಭಾಧ್ಯಕ್ಷರಾಗಿ ಹೊಸ ಮಾರಿಗುಡಿ ದೇವಸ್ಥಾನ ಕಾಪು ಇದರ ಆಡಳಿತ ಮೋಕ್ತೆಸರ ನಡಿಕೆರೆ ರತ್ನಾಕರ ಶೆಟ್ಟಿ , ಅತಿಥಿಗಳಾಗಿ ಹನುಮದ್ ಶಕ್ತಿ ಜಗರಣ ಸಮಿತಿಯ ಜಿಧ್ಯಕ್ಷ ಅಂಡಾರು ದೇವಿಪ್ರಸಾದ್ ಶೆಟ್ಟಿ ಹಾಗೂ ಹನುಮತ್ ಶಕ್ತಿ ಜಗರಣ ಸಮಿತಿ ಕಾಪು ಪ್ರಖಂಡದ ಸಂಚಾಲಕ ತಾರನಾಥ್ ಕೋಟ್ಯಾನ್ ಉಪಸ್ಥಿತರಿದ್ದರು.
ಕಾಪು ಪ್ರಖಂಡದ ಅಧ್ಯಕ್ಷ ತಾರನಾಥ್ ಕೋಟ್ಯಾನ್ ಸ್ವಾಗತಿಸಿ, ವೀರೇಂದ್ರ ಪಾಟ್ಕರ್ ವಂದಿಸಿದರು. ಸತೀಶ್ ಕುತ್ಯಾರು ನಿರೂಪಿಸಿದರು.