Moodubidire: ತ್ಯಾಗ ಭೂಮಿಯಾದ ನಮ್ಮ ರಾಷ್ಟ್ರದ ಉದ್ದಗಲ ಇಂದು ಇಸ್ಲಾಂ ಭಯೋತ್ಪಾದನೆ ವಿಸ್ತರಿಸುತ್ತಿದೆ.ಆದರೆ ಕೇಂದ್ರದ ಗೃಹ ಸಚಿವರೇ ‘ಹಿಂದು, ಕೇಸರಿ ಭಯೋತ್ಪಾದನೆ’ ಎನ್ನುವ ಮೂಲಕ ಹಿಂದು ಸಮಾಜದ ಸ್ವಾಭಿಮಾನವನ್ನು ಕೆಣಕಿದ್ದಾರೆ. ಕಸಬ್, ಅಫ್ಜಲ್ ಗುರು, ಪ್ರಕರಣಗಳ ಇತ್ಯರ್ಥಕ್ಕೆ ಅನಗತ್ಯ ಕಾಲಹರಣ ಮಾಡಲಾಗುತ್ತಿದೆ.

ರೆಡ್ ಕಾರಿಡಾರ್ ಕನಸಿನಲ್ಲಿ, ಹಾದಿ ತಪ್ಪಿದ ನಕ್ಸಲೀಯರ ಬಗ್ಗೆ ಗಮನವಿಲ್ಲ. ಹಿಂದು ಸಮಾಜದ ಮೇಲೆ ಸುಳ್ಳು ಆರೋಪ ಮಾಡುವವರು ನಿಜವಾದ ಭಯೋತ್ಪಾದಕರನ್ನು ಗುರುತಿಸಿ ಅವರನ್ನ ಎಲ್ಲಿಡಬೇಕೋ ಅಲ್ಲಿಡಬೇಕು. ಪ್ರತ್ಯೇಕತೆಯ ವಿಷ ಬೀಜ ಬಿತ್ತುತ್ತಿರುವ ಇಸ್ಲಾಮೀಕರಣದ ವಿರುದಟಛಿ ಹಿಂದು ಸಮಾಜ ಸಂಘಟಿತವಾಗಬೇಕು ಎಂದು ವಿಹಿಂಪ ಪ್ರಾಂತ ಗೋರಕ್ಷಾ ಪ್ರಮುಖ್ ಮಂಜುನಾಥ ಸ್ವಾಮಿ ನುಡಿದರು.

ಮೂಡುಬಿದಿರೆಯಲ್ಲಿ ಶ್ರೀ ಹನುಮಾನ್ ಶಕ್ತಿ ಜಾಗರಣ ಅಭಿಯಾನ ಸಮಿತಿ ವತಿಯಿಂದ ಭಾನುವಾರ ಸಂಜೆ ಇಲ್ಲಿನ ಆಲಂಗಾರು ಶ್ರೀ ಬಡಗು ಮಹಾಲಿಂಗೇಶ್ವರ ದೇವಸ್ಥಾನದ ಮೈದಾನದಲ್ಲಿ ನಡೆದ ಹಿಂದು ಸಮಾಜೋತ್ಸವದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.

ವಿಶ್ವ ವೇದಿಕೆಯಲ್ಲಿ ವಿವೇಕಾನಂದರಿಂದ ಭಾರತದ ದಿಗ್ವಿಜಯವಾದದ್ದು ಭಯೋತ್ಪಾದನೆಯಿಂದಲ್ಲ. ನಾವು ನಮ್ಮ ಆಚಾರ-ವಿಚಾರಗಳಿಂದ ಜಗತ್ತನ್ನೇ ಗೆದ್ದಿದ್ದೇವೆ. ನಮ್ಮ ರಾಷ್ಟ್ರವನ್ನು ಇಸ್ಲಾಮೀಕರಿಸುವ ಅನೇಕ ದಾಳಿಗಳು ಇಲ್ಲಿನ ಮಹಾಸಾಗರಗಳಲ್ಲಿ ಕೊಚ್ಚಿಹೋಗಿವೆ. ಈಗ ಹಿಂದುಗಳು ಅಲ್ಪಸಂಖ್ಯಾತರಾಗಿರುವ ಕಡೆಗಳಲ್ಲೆಲ್ಲ ಇಸ್ಲಾಮೀಕರಣದ ಹುನ್ನಾರ ನಡೆದಿದೆ. ರಾಷ್ಟ್ರೀಯ ಹಿತಾಸಕ್ತಿಯ ‘ಸಂಘ’ಟನೆಗೆ ಕೋಮುವಾದಿ ಪಟ್ಟ ಕಟ್ಟಲಾಗುತ್ತಿದೆ. ಆದರೆ ಕೋಮು ಹೆಸರಲ್ಲಿರುವ ವೇದಿಕೆಯ ಡೋಂಗಿ ಜಾತ್ಯತೀತವಾದಿಗಳೇ ಸಮಸ್ಯೆಯ ನಿಜವಾದ ಮೂಲಗಳು ಎಂದು ಸ್ವಾಮೀಜಿ ಆರೋಪಿಸಿದರು.

ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಗಾಂಧೀಜಿ ಕರೆ ನೀಡಿದಾಗ ೬೦ಸಾವಿರ ಮಂದಿ ಬಂಧಿತರಾಗಿದ್ದರು. ೧೯೭೫ರಲ್ಲಿ ತುರ್ತು ಪರಿಸ್ಥಿತಿ ವಿರೋಧಿಸಿ ಸುಮಾರು ೧.೪೦ಲಕ್ಷ ಮಂದಿ ಜೈಲು ಸೇರಿದ್ದರು. ಆದರೆ ೧೯೯೦ರಲ್ಲಿ ಅಯೋಧ್ಯೆಯಲ್ಲಿ ಮೊದಲ ಕರಸೇವೆ ನಡೆದಾಗ ಕೇವಲ ಉತ್ತರಪ್ರದೇಶ ರಾಜ್ಯವೊಂದರಿಂದಲೇ ೧.೮೦ ಲಕ್ಷ ಕಾರ್ಯಕರ್ತರು ಪಾಲ್ಗೊಂಡದ್ದು ಹಿಂದು ಸಮಾಜದ ಸಾಮರ್ಥ್ಯಕ್ಕೆ ಸಾಕ್ಷಿ ಎಂದು ಸ್ವಾಮೀಜಿ ವಿವರಿಸಿದರು.

ಬ್ರಿಟಿಷರಿಗೆ ಕ್ವಿಟ್ ಇಂಡಿಯಾ ಕರೆ ನೀಡಿದಾಗ ಮೊದಲು‘ ಸ್ಪ್ಲಿಟ್ ಇಂಡಿಯಾ, ನಂತರ ಕ್ವಿಟ್ ಇಂಡಿಯಾ’ ಎಂದ ಜಿನ್ನಾ ಸಂತತಿಯವರ ಜತೆ ಮಾತುಕತೆಯಿಂದ ಮಂದಿರ ನಿರ್ಮಾಣವಾಗುವುದೆಂಬ ಭ್ರಮೆ ನಮಗಿಲ್ಲ. ಅಯೋಧ್ಯೆಯ ವಿವಾದಿತ ಜಾಗದಲ್ಲಿ ಮಂದಿರವಿತ್ತು ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಆದರೆ ನಾವು ಪಾಲು ಕೇಳಿರಲಿಲ್ಲ. ತೀರ್ಪು ‘ಹಂಚಿ’ ಕೊಡಲಾಗಿದೆ. ಇನ್ನಾದರು ಕೇಂದ್ರ ಸರ್ಕಾರ ಹಿಂದು ಭಾವನೆಗಳಿಗೆ ಬೆಲೆಕೊಟ್ಟು ಮಂದಿರ ನಿರ್ಮಾಣಕ್ಕೆ ಸೂಕ್ತ ನಿರ್ಣಯ ಕೈಗೊಳ್ಳಬೇಕು. ಹಿಂದೆ ಗುಜರಾತ್‌ನಲ್ಲಿ ಸೋಮನಾಥ ದೇವಾಲಯ ಪುನರ್ ನಿರ್ಮಾಣದ ಪ್ರಕರಣ ಅವರಿಗೆ ಮಾದರಿಯಾಗಬೇಕು ಎಂದು ಸ್ವಾಮೀಜಿ ವಿವರಿಸಿದರು.

ಯಾವ ಕಾರಣಕ್ಕೂ ಅಯೋಧ್ಯೆಯ ಸ್ಥಳದಲ್ಲಿ ಮಸೀದಿ ನಿರ್ಮಿಸಲು ಬಿಡುವುದಿಲ್ಲ. ದೇಶದ ಯಾವುದೇ ಭಾಗದಲ್ಲಿ ಬಾಬರ್ ಹೆಸರಲ್ಲಿ ಮಸೀದಿ ನಿರ್ಮಾಣ ಸಹಿಸಲಾಗದು ಎಂದವರು ಎಚ್ಚರಿಸಿದರು.

ಹಿಂದು ಸಮಾಜದಲ್ಲಿ ಉತ್ಸವಗಳು ಜಾಸ್ತಿಯಾಗಿವೆ. ಆದರೆ ಅನುಷ್ಟಾನ ಕಡಿಮೆಯಾಗಿದೆ.ಅನುಷ್ಟಾನದಿಂದ ಶಕ್ತಿ ಸಂಚಯವಾಗುವುದು. ವಿಜ್ಞಾನ ಮುನ್ನಡೆ ತೋರಿದರೆ ಆಧ್ಯಾತ್ಮ ಹಿನ್ನಡೆ ಎಂದು ಭಾವಿಸಕೂಡದು. ಇಲ್ಲಿ ಹಿನ್ನಡೆಯುವುದು ಭಗವಂತನ ಕಡೆಗೆ ಎಂಬ ಅರಿವು ನಮಗಾಗಬೇಕು. ಎಂದು ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ನುಡಿದರು.

PæàÓÜÄ¿á®Üá° PæÃÜÚÓÜ©Ä

ಭಾರತಮಾತೆಯ ಕೈಯಲ್ಲಿ ಕೇಸರಿ ಧ್ವಜವಿದೆ. ಕಾಲಬುಡದಲ್ಲಿ ಕೇಸರಿ(ಸಿಂಹ) ಇರುವುದನ್ನು ಗಮನಿಸಬೇಕು. ತ್ಯಾಗದ ಸಂಕೇತವಾಗಿರುವ ‘ಕೇಸರಿ’ಯ ಬಗ್ಗೆ ಅನಗತ್ಯವಾಗಿ ವಿವಾದ ಮಾಡುವವರು ಹಿಂದು ಸಮಾಜದ ಶಕ್ತಿಯ ಬಗ್ಗೆ ಎಚ್ಚರದಿಂದಿರಬೇಕು ಎಂದು ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ ನುಡಿದರು.

ಮೂಡುಬಿದಿರೆಯ ಜಾನಕೀ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಧಮೇಂದ್ರ ಗಣೇಶಪುರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಕೇಂದ್ರದಲ್ಲಿ ಅಧಿಕಾರದ ಆಶೆಯಿಂದ ಯುವನಾಯಕರು ಹಿಂದುಗಳ ಬಗ್ಗೆ ನೀಡಿರುವ ಹೇಳಿಕೆ ,ಅದಕ್ಕೆ ಬರುತ್ತಿರುವ ಪ್ರತಿಕ್ರಿಯೆಯನ್ನು ಜಗತ್ತು ಕುತೂಹಲದಿಂದ ಗಮನಿಸುತ್ತಿದೆ.ನಮ್ಮನ್ನು ಕೆಣಕಿದವರ ವಿರುದಟಛಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಬೇಕಿದೆ ಎಂದು ಧರ್ಮೇಂದ್ರ ನುಡಿದರು.

ಉದ್ಯಮಿಗಳಾದ ಶ್ರೀಪತಿ ಭಟ್,ತಿಮ್ಮಯ್ಯಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.ಮೂಡುಬಿದಿರೆ ತಾಲೂಕು ಸಂಘಚಾಲಕ ಎಂ.ವಾಸುದೇವ ಭಟ್ ಉಪಸ್ಥಿತರಿದ್ದರು. ಶ್ರೀಹನುಮಾನ್ ಶಕ್ತಿ ಜಾಗರಣ ಅಭಿಯಾನ ಸಮಿತಿಯ ಅಧ್ಯಕ್ಷ ಪೂವಪ್ಪ ಕುಂದರ್ ಸ್ವಾಗತಿಸಿ,ಆರೆಸ್ಸೆಸ್ ತಾಲೂಕು ಕಾರ್ಯವಾಹ ಕೇಶವ ಹೆಗ್ಡೆ ಪ್ರಸ್ತಾವಿಸಿದರು. ನಗರ ಕಾರ್ಯವಾಹ ಚೇತನ್‌ಕುಮಾರ್ ವಂದಿಸಿದರು. ಸಮಿತಿಯ ಜೊತೆ ಕಾರ್ಯದರ್ಶಿ ವೆಂಕಟರಮಣ ಕೆರೆಗದ್ದೆ ನಿರೂಪಿಸಿದರು.

ಸಭೆಯ ಆರಂಭದಲ್ಲಿ ಬೊಗುರುಗುಡ್ಡೆ ಶಾಖಾ ಸ್ವಯಂಸೇವಕರಿಂದ ಹನುಮಾನ್ ಚಾಲೀಸಾ ಪಠಣ ನಡೆಯಿತು. ಕಲ್ಲಬೆಟ್ಟಿನ ಪ್ರತೀಕ್ಷಾ ಮತು ಶ್ರಾವ್ಯ ವಂದೇಮಾತರಂ ಹಾಡಿದರು. ಸಮಿತಿ ವತಿಯಿಂದ ಆಲಂಗಾರು ಈಶ್ವರ ದೇವಸ್ಥಾನದಲ್ಲಿ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಸಂಕಲ್ಪಕ್ಕಾಗಿ ವಾಯುಸ್ತುತಿ ಪುನಶ್ಚರಣ ಹೋಮ ವೇದಮೂರ್ತಿ ಈಶ್ವರ ಭಟ್ ನೇತೃತ್ವದಲ್ಲಿ ನಡೆಯಿತು. ಸ್ವರಾಜ್ಯ ಮೈದಾನದಿಂದ ಸಭಾಂಗಣವರೆಗೆ ಅಪರಾಹ್ನ ಆಕರ್ಷಕ ಮೆರವಣಿಗೆ ಪೇಟೆಯ ಮುಖ್ಯ ಬೀದಿಗಳಲ್ಲಿ ನಡೆಯಿತು.

Leave a Reply

Your email address will not be published.

This site uses Akismet to reduce spam. Learn how your comment data is processed.