ಭಯೋತ್ಪಾದನೆಯ ಕರಿನೆರಳಲ್ಲಿ ನರಳಬೇಕಾದ ಸರದಿ ಇದೀಗ ಕನ್ನಡಿಗರದ್ದು. ಕನ್ನಡ ನೆಲದಲ್ಲೇ ಹುಟ್ಟಿ ಇಲ್ಲೇ ಬೆಳೆದು, ಇಲ್ಲೇ ಉದ್ಯೋಗ ಹೊಂದಿದ್ದ, ಆದರೆ ವಿಧ್ವಂಸಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ 11 ಉಗ್ರರನ್ನು ಬೆಂಗಳೂರು-ಹುಬ್ಬಳ್ಳಿಯಲ್ಲಿ ಬಂಧಿಸಿದಾಗಲೇ ಕರ್ನಾಟಕ ಅದೆಷ್ಟು ಸುರಕ್ಷಿತ ಎಂದು ಅನೇಕರಿಗೆ ಅರಿವಾದದ್ದು!

Karnataka Police arresting the terrorists

ಕೇಂದ್ರ ಸರಕಾರದಿಂದ ನಿಷೇಧಿಸಲ್ಪಟ್ಟಿರುವ ಹುಜಿ (ಹರ್ಕತ್ ಉಲ್ ಜಿಹಾದಿ ಅಲ್ ಇಸ್ಲಾಮಿ) ಮತ್ತು ಲಷ್ಕರ್-ಇ-ತೋಯ್ಬಾ (ಎಲ್‌ಇಟಿ) ಎಂಬೆರಡು ಭಯೋತ್ಪಾದನಾ ಸಂಘಟನೆಗಳಿಗೆ ಸೇರಿದ ಒಟ್ಟು 17 ಮಂದಿಯನ್ನು ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಿಂದ ಪೊಲೀಸರು ಬಂಧಿಸಿದ್ದಾರೆ. ಅತಿ ವಿದ್ಯಾವಂತರಾಗಿರುವ ಯುವಕರೇ ಈ ರಾಷ್ಟ್ರದ್ರೋಹಿ ಕೃತ್ಯಕ್ಕೆ ಮುಂದಾದವರು. ಕರ್ನಾಟಕದ ಪ್ರಮುಖ ಹಿಂದೂ ನಾಯಕರುಗಳು, ರಾಜಕಾರಣಿಗಳು, ಪತ್ರಕರ್ತರನ್ನು ಗುರಿಯಾಗಿರಿಸಿ ಕಾರ‍್ಯಾಚರಣೆ ನಡೆಸುತ್ತಿದ್ದ ಉಗ್ರರು ತಮ್ಮ ಯೋಜನೆಗೆ ಮುನ್ನವೇ ಸೆರೆಸಿಕ್ಕಿರುವುದರಿಂದ ಆಗಬೇಕಿದ್ದ ಮಹಾದುರಂತವೊಂದು ತಪ್ಪಿಹೋಗಿದೆ. ಸೆರೆಸಿಕ್ಕ ಉಗ್ರರಲ್ಲಿ ರಾಜ್ಯದ ಪ್ರತಿಷ್ಠಿತ ಆಂಗ್ಲದೈನಿಕ ’ಡೆಕ್ಕನ್ ಹೆರಾಲ್ಡ್’ನ ಪತ್ರಕರ್ತನೂ ಸೇರಿದ್ದಾನೆ ಎನ್ನುವುದು ಚಿಂತಕರ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರಿನ ಬಸವೇಶ್ವರ ನಗರದ ಬಳಿಯ ಮುನಿರೆಡ್ಡಿ ಪಾಳ್ಯದ ಮುಹಲ್ಲಾದ ಮನೆಯೊಂದರಿಂದಲೇ ಆರು ಉಗ್ರರನ್ನು ಬಂಧಿಸಲಾಯಿತು. ಶಾಹಿಬ್ ಅಹ್ಮದ್ ಮಿರ್ಜಾ ಅಲಿಯಾಸ್ ಚೋಟು, ಏಜಾಜ್ ಅಹಮ್ಮದ್ ಮಿರ್ಜಾ, ಮಹಮ್ಮದ್ ಯೂಸುಫ್ ನಲಬಂದ್, ರಿಯಾಜ್ ಅಹ್ಮದ್ ಬ್ಯಾಹಟಿ ಮತ್ತು ಮತಿ-ಉರ್-ರಹಮಾನ್ ಸಿದ್ಧಿಕಿ – ಈ ಉಗ್ರರು ಕೃತ್ಯಕ್ಕೆ ಅಣಿಯಾಗುತ್ತಿರುವಾಗಲೇ ಪೊಲೀಸರ ಬಂಧನಕ್ಕೊಳಗಾದವರು. ಆಶ್ಚರ‍್ಯವೆಂದರೆ ಏಜಾಜ್ ಅಹ್ಮದ್ ಮಿರ್ಜಾ, ಭಾರತ ಸರ್ಕಾರದ ರಕ್ಷಣಾ ಇಲಾಖೆಯ ಸಂಶೋಧನಾ ಕೇಂದ್ರವಾದ ಡಿ.ಆರ್.ಡಿ.ಓ.ದಲ್ಲಿ ಕಿರಿಯ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿದ್ದ; ಈತನ ತಮ್ಮ ಶೋಹಿಬ್ ಅಹ್ಮದ್ ಮಿರ್ಜಾ, ಓರ್ವ ಪತ್ರಿಕೋದ್ಯಮ ವಿದ್ಯಾರ್ಥಿ!

ಬಂಧಿತರಲ್ಲಿ ಪ್ರಮುಖನಾದ ಮುತಿ-ಉರ್-ರಹಮಾನ್ ಸಿದ್ಧಿಕಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಪತ್ರಕರ್ತನಾಗಿ ಬೆಂಗಳೂರಿನ ರಸ್ತೆ-ವ್ಯವಸ್ಥೆ-ವ್ಯಕ್ತಿಗಳನ್ನು ಚೆನ್ನಾಗಿ ಬಲ್ಲವನು. ಈ ಮುಂಚೆ ಹುಬ್ಬಳ್ಳಿಯಲ್ಲಿದ್ದ ಸಿದ್ಧಿಕಿ ಇಂಡಿಯನ್ ಇಸ್ಲಾಮಿಕ್ ಯೂನಿಯನ್ ಎಂಬ ಸಂಘಟನೆಯಲ್ಲಿ ಸಕ್ರಿಯನಾಗಿದ್ದ. ಸೌದಿ ಅರೇಬಿಯಾ ಸೇರಿದಂತೆ ವಿದೇಶೀ ಮುಸ್ಲಿಂ ಪತ್ರಿಕೆಗಳಿಗೆ ಸುದ್ದಿ ಲೇಖನ ಕಳುಹಿಸುತ್ತಿದ್ದ ಎಂಬ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಹುಬ್ಬಳ್ಳಿಯಲ್ಲಿ ಬಂಧಿತರಾದ ಐದು ಉಗ್ರರು ಇನ್ನೂ ಅಪಾಯಕಾರಿ ಯೋಜನೆ ಹೊಂದಿದ್ದವರು. ರಾಜ್ಯದ ಪ್ರಮುಖ ಗಣ್ಯವ್ಯಕ್ತಿಗಳನ್ನು, ವಿಶೇಷವಾಗಿ ಹಿಂದೂ ಸಂಘಟನೆಗಳ ನಾಯಕರುಗಳು-ಹಿಂದೂ ಹಿತದೃಷ್ಟಿಯಿಂದ ಪ್ರಖರ ಲೇಖನ ಬರೆಯುವ ಪತ್ರಕರ್ತರನ್ನು ಹತ್ಯೆಗೈಯುವ ಸಂಚು ರೂಪಿಸಿದ್ದ ಈ ಉಗ್ರರು ಇದೀಗ ಪೊಲೀಸರ ಸಮಯೋಚಿತ ಕಾರ‍್ಯಾಚರಣೆಯಿಂದ ಬಂಧಿಗಳಾಗಿದ್ದಾರೆ. ಹುಬ್ಬಳ್ಳಿಯ ಕೇಶ್ವಾಪುರ ಬಳಿಯ ಬಾದಾಮಿ ನಗರದ ಡಾ|ಜಾಫರ್ ಶೋಲಾಪುರ್, ಆರೂಢನಗರ ನಿವಾಸಿ ವಾಹಿದ್ ಹುಸೇನ್ ಕನಕೇನವರ, ಮಂಟೂರ್ ರಸ್ತೆ ನಿವಾಸಿ ಸಾದಿಕ್ ಲಷ್ಕರ್ ವಸಂತನಗರ ನಿವಾಸಿ ಇಮ್ರಾನ್ ಬಹಾದ್ದುರ್, ಯಲ್ಲಾಪುರ ಓಣಿ ಎಂ.ಡಿ. ಕಾಲೋನಿಯ ಮೆಹಬೂಬ್ ಬಾಗಲಕೋಟ-ಬಂಧಿತ ಉಗ್ರರು.

ಕರ್ನಾಟಕದ ವಿವಿಧ ನಗರಗಳು-ಜಿಲ್ಲೆಗಳಲ್ಲಿ ಓಡಾಡಿರುವ ಈ ಕನ್ನಡಿಗರೇ ’ಉಗ್ರರು’ ಎಂಬ ಕಹಿಸತ್ಯವನ್ನು ಕರ್ನಾಟಕದ ಜನತೆ ಇನ್ನೂ ಅರಗಿಸಿಕೊಂಡಿಲ್ಲ. ನಮ್ಮದೇ ನೆಲದಲ್ಲಿ ಓಡಾಡಿ ಅನ್ನ-ನೀರು-ಗಾಳಿಗೆ ಮೈಯೊಡ್ಡಿ, ನಮ್ಮ ಸಮಾಜದ ವಿರುದ್ಧವೇ ವಿಧ್ವಂಸಕ ಚಟುವಟಿಕೆ ನಡೆಸಲು ತಯಾರಾಗಿರುವ ಸಾವಿರಾರು ಜಿಹಾದಿ ಉಗ್ರರ ಪೈಕಿ ಸೆರೆಸಿಕ್ಕಿದವರು ಕೇವಲ ಹನ್ನೊಂದು ಮಂದಿ ಮಾತ್ರ! 11 ಮಂದಿಯನ್ನು ಬಂಧಿಸಿದ ಮಾತ್ರಕ್ಕೆ ಎಲ್ಲಾ ಉಗ್ರರು ಬಂಧನದಲ್ಲಿದ್ದಾರೆ. ಕರ್ನಾಟಕ ಸುರಕ್ಷಿತ ಎಂದು ಅಂದುಕೊಳ್ಳುವಂತಿಲ್ಲ. ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ  ವಿಶ್ವೇಶ್ವರ ಭಟ್ ರ ಕಾಲಾವಧಿ ಕನ್ನಡ ಮಾಧ್ಯಮ – ವೈಚಾರಿಕ ರಂಗಕ್ಕೆ ಒಂದು ಮಹತ್ವದ ತಿರುವು ನೀಡಿತು. ಬಲಪಂಥೀಯ ಎಂದೆನಿಸುವ, ಭಾರತೀಯ ಚಿಂತನೆಗಳನ್ನು ಪೋಷಿಸುವ ಬರಹ-ಚರ್ಚೆಗಳು, ದಿಟ್ಟತನದಿಂದ  ಬಲಪಂಥೀಯ ವಿಷಯಗಳನ್ನು ಪ್ರತಿಪಾದಿಸುವ ಪ್ರತಾಪ್ ಸಿಂಹರಂತಹ ಲೇಖಕರ ಮೊನಚು ಲೇಖನಗಳು, ನಂತರದ ದಿನಗಳಲ್ಲಿ ಉಗ್ರರ ಗಮನ ಸೆಳೆದದ್ದರಲ್ಲಿ ಆಶ್ಚರ್ಯವಿಲ್ಲ. ಇದೆ ಕಾರಣಕ್ಕಾಗಿ ವಿಶ್ವೇಶ್ವರ ಭಟ್ , ಪ್ರತಾಪ್ ಸಿಂಹ ಮೊದಲಾದ noted ಪತ್ರಕರ್ತರನ್ನು ಸೆರೆ ಸಿಕ್ಕ ಉಗ್ರರು ಗುರಿಯಾಗಿಸಿದ್ದರು ಎಂಬ ಅಂಶ ತನಿಖೆ ವೇಳೆ ಬಹಿರಂಗಗೊಂಡಿದೆ. ಅಂದರೆ, ನಮ್ಮೂರಲ್ಲೇ ಓಡಾಡಿ ಬೆಳೆದ ಮುಸ್ಲಿಂ ಯುವಕನೊಬ್ಬ ಯಾವುದೋ ಗೊಡ್ಡು ವಿಚಾರಕ್ಕೆ ಜೋತುಬಿದ್ದು, ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿ, ನಮ್ಮೂರಿನ ಪ್ರಭಾವೀ ವ್ಯಕ್ತಿಗಳ ಹತ್ಯೆಗೆ ಮುಂದಾಗಿರುವುದನ್ನು ನಾವು ಕಡೆಗಣಿಸುವಂತಿಲ್ಲ.

News Alert: Terrorist arrested in Karnataka, planned to kill a columnist in a Kannada Daily

ವಿಧ್ವಂಸಕನಾದ ವಿದ್ವಾಂಸ!

ಹುಬ್ಬಳ್ಳಿಯಲ್ಲಿ ಬಂಧನಕ್ಕೊಳಗಾದ ವಾಹಿದ್ ಹುಸೇನ್ ಕನಕವರ್ ಓರ್ವ ಎಂಬಿಎ ಪದವೀಧರ. ಮಲೇಷಿಯಾದಲ್ಲಿ ಒಂದಷ್ಟು ಸಮಯ ತಂಗಿದ್ದ ಈತ ಹುಬ್ಬಳ್ಳಿಗೆ ಮರಳಿದ್ದ. ಯಾವುದೇ ನೌಕರಿಗೆ ಸೇರದೆ ಭಯೋತ್ಪಾದನಾ ಚಟುವಟಿಕೆಗಳಿಗೆ ಪೂರ್ಣಪ್ರಮಾಣ ದಲ್ಲಿ ತೊಡಗಿದ್ದ. ಬೆಂಗಳೂರಿನ ಮಹಾತ್ಮಾಗಾಂಧಿ ರಸ್ತೆಯಲ್ಲಿರುವ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ವರದಿಗಾರ ರಹಮಾನ್ ಸಿದ್ಧಿಕಿ ಬೆಂಗಳೂರಿನ ಹಾಗೂ ದಕ್ಷಿಣ ಭಾರತದ ರಾಜಕೀಯ-ಸಾಮಾಜಿಕ ವಿದ್ಯಮಾನಗಳು, ರಾಜಕಾರಣಿ-ಹಿಂದೂ ನಾಯಕರ ಚಲನವಲನಗಳ ಬಗ್ಗೆ ಮಾಹಿತಿ ಕಲೆಹಾಕಿ ಸೌದಿ ರಾಷ್ಟ್ರಗಳ ಉಗ್ರರಿಗೆ ಸುದ್ದಿ ರವಾನಿಸುತ್ತಿದ್ದ. ಅಲ್ಲಿಂದ ಬಂದ ಸಂದೇಶಗಳನ್ನು ರಾಜ್ಯದ ಉಗ್ರರಿಗೂ ನೀಡುತ್ತಿದ್ದ ಎಂಬ ಆತಂಕಕಾರಿ ಸಂಗತಿ ತನಿಖೆ ವೇಳೆ ತಿಳಿದುಬಂದಿದೆ. ಹುಬ್ಬಳ್ಳಿಯ ಬಾದಾಮಿನಗರದ ಡಾ|| ಜಾಫರ್ ಶೋಲಾಪುರ್‌ನ ಕುಟುಂಬವೇ ವಿದ್ಯಾವಂತರದ್ದು. ಆತನ ತಂದೆ ಉಡುಪಿಯ ಅರಣ್ಯ ಇಲಾಖೆಯಲ್ಲಿ ಎಸಿಫ್ ಆಗಿ ಸೇವೆಯಲ್ಲಿದ್ದರೆ, ಇಬ್ಬರು ಸಹೋದರರು ವೈದ್ಯರಾಗಿದ್ದಾರೆ! ಬೆಂಗಳೂರಲ್ಲಿ ಸೆರೆಸಿಕ್ಕಿದ್ದ ಉಗ್ರ ಏಜಾಜ್ ಮಹಮ್ಮದ್ ಮಿರ್ಜಾ ಭಾರತ ಸರ್ಕಾರದ ರಕ್ಷಣಾ ಇಲಾಖೆಯ ಡಿಆರ್‌ಡಿಓ ಸಂಶೋಧನಾ ಕೇಂದ್ರದಲ್ಲಿ ವಿಜ್ಞಾನಿಯಾಗಿ ಸರ್ಕಾರಿ ಸಂಬಳ ಪಡೆಯುತ್ತಿದ್ದವ! ಅವನ ತಮ್ಮ ಬಂಧಿತ ಉಗ್ರ ಶೋಹಿಬ್ ಅಹ್ಮದ್ ಮಿರ್ಜಾ ಬೆಂಗಳೂರಿನ ಪ್ರತಿಷ್ಠಿತ ಅಲ್-ಅಮೀನ್ ಕಾಲೇಜಿನ ಪ್ರತಿಭಾವಂತ ಪತ್ರಿಕೊದ್ಯಮ ವಿದ್ಯಾರ್ಥಿ! ಹೀಗೆ, ವಿದ್ಯಾವಂತ ಕನ್ನಡಿಗ ಮುಸ್ಲಿಂ ಯುವಕರುಗಳೇ ಉಗ್ರರಾಗಿದ್ದಾರೆ ಎಂದರೆ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ. ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.

ಇನ್ನಷ್ಟು ದೊಡ್ಡ ಉಗ್ರ ಕುಳಗಳು ಪೊಲೀಸರ ಕಣ್ಣು ತಪ್ಪಿಸಿ ಕಾರ‍್ಯಾಚರಿಸುತ್ತಿವೆ. ಬೆಂಗಳೂರು, ಮಂಗಳೂರು, ಮೈಸೂರು, ಹಾಸನ, ಶಿವಮೊಗ್ಗ-ಹುಬ್ಬಳ್ಳಿ-ಧಾರವಾಡ, ದಾವಣಗೆರೆ ಸೇರಿದಂತೆ ಅನೇಕ ಕಡೆಗಳಲ್ಲಿ ಈ ಬಂಧಿತ ಉಗ್ರರಿಗೆ ಸಂಪರ್ಕಜಾಲ ಹೊಂದಿರುವುದು ಖಚಿತಗೊಂಡಿದೆ. ಅಂದರೇನರ್ಥ? ಆ ಎಲ್ಲಾ ಪ್ರದೇಶಗಳಲ್ಲೂ ಉಗ್ರರ ಬಾಹುಗಳು ಬೇರೂರಿವೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರರು ಆ ಪ್ರದೇಶಗಳಲ್ಲಿ ತಲೆ ಎತ್ತಲಿದ್ದಾರೆ. ಸಮಾಜವಿರೋಧಿ ಕೃತ್ಯಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಬಂಧಿತ ಉಗ್ರಿರಮದ ಭಯೋತ್ಪಾದನಾ ಕೃತ್ಯಕ್ಕೆ ಅಣಿಯಾಗಬೆಕಾಗಿದ್ದ ಸಂಭಾಷಣೆ, ಇ-ಮೇಲ್ ಮಾತುಕತೆಗಳು, ವಿಡಿಯೋ ಸಿಡಿಗಳು, ಉಗ್ರವಾದದ ಲೇಖನಗಳು ಕಡತಗಳು, ಲ್ಯಾಪ್‌ಟಾಪ್, ಕಂಪ್ಯೂಟರ್, ವಿದೇಶೀ ನಿರ್ಮಿತ ೭.೬೫ ಎಂ.ಎಂ. ಪಿಸ್ತೂಲುಗಳು, ೧೭ ಮೊಬೈಲ್, ೮ ಸಿಮ್ ಕಾರ್ಡ್, ಮದ್ದುಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸೌದಿ ಉಗ್ರರ ಬಳಿಗೆ ದೇಶದ ರಕ್ಷಣಾ ಇಲಾಖೆಯ ಎಲ್ಲಾ ಮಾಹಿತಿಗಳನ್ನು ವರ್ಗಾಯಿಸುತ್ತಿದ್ದ ಏಜಾಜ್ ಅಹಮ್ಮದ್ ಮಿರ್ಜಾನಿಂದಾಗಿ, ದೇಶದ ರಕ್ಷಣಾ ವ್ಯವಸ್ಥೆಗಳ ಅನೇಕ ರಹಸ್ಯಗಳು ಉಗ್ರರ ಪಾಲಾಗಿವೆ. ಸೆರೆಸಿಗದ ಇನ್ನಷ್ಟು ಪ್ರಮುಖ ಉಗ್ರರು ಕರ್ನಾಟಕದಲ್ಲಿ ಬೀಡುಬಿಟ್ಟಿದ್ದಾರೆ. ಮಹಾರಾಷ್ಟ್ರದ ನಾಂದೇಡ್‌ನ ಮಹಮ್ಮದ್ ಅಕ್ರಮ್ ಖಾಲಿದ್ ಅಲಿಯಾನ್ ಇಮ್ರಾನ್ ಖಾನ್ ಎಂಬ ಮತ್ತೊಬ್ಬ ಉಗ್ರನನ್ನು ಬೆಂಗಳೂರಿನ ಪೊಲಿಸರು ಬಂಧಿಸಿದ್ದಾರೆ. ಇದೀಗ ಒಟ್ಟಾರೆ ೧೭ ಉಗ್ರರು ಬಂಧನದಲ್ಲಿದ್ದಾರೆ. ಹೈದರಾಬಾದ್‌ನಲ್ಲಿ ಬಂಧಿತನಾದ ಒಬೇದುಲ್ಲಾ ರೆಹಮಾನ್, ವಿಶ್ವ ಹಿಂದೂ ಪರಿಷತ್‌ನ ನಾಯಕರ ಕೊಲೆ ಸಂಚಿನ ಯೋಜನೆಯನ್ನು ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ.

ಅಲ್-ಖೈದಾ ಉಗ್ರ ಸಂಘಟನೆ ಮುಖವಾಣಿ ಪತ್ರಿಕೆ ’ಇನ್‌ಸ್ಪೈರರ್’ನಲ್ಲಿ ಅಮೇರಿಕಾ, ಭಾರತ, ಇಸ್ರೇಲ್ ಮತ್ತು ಇತರ ಪಾಶ್ಚಿಮಾತ್ಯ ರಾಷ್ಟ್ರಗಳ ವಿರುದ್ದ ಶಸ್ತ್ರಸಜ್ಜಿತ ಸಮರ ಸಾರಬೇಕೆಂಬುದರ ಬಗ್ಗೆ ಮುಸ್ಲಿಂ ಯುವಕರಿಗೆ ಕರೆನೀಡುತ್ತಿದ್ದ ಲೇಖನಗಳನ್ನು ನಿರಂತರವಾಗಿ ಓದುತ್ತಿದ್ದ ಈ ಉಗ್ರರು ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಪ್ರೇರಣೆ ಪಡೆದಿದ್ದರು. ಕೈಗಾ ಅಣುಸ್ಥಾವರ, ಕಾರವಾರದ ನಿವಾಸಿ ತಾಣಗಳ ಮೇಲೂ ಉಗ್ರರ ಕಣ್ಣು ಬಿದ್ದಿತ್ತು. ಬಂಧಿತ ಉಗ್ರ ಅಬ್ದುಲ್ ಹಕೀಂನ ಹೇಳಿಕೆಯಂತೆ ಮುಸ್ಲಿಮರ ಮೇಲೆ ಆಗುತ್ತಿರುವ ದೌರ್ಜನ್ಯ, ಅವರ ವಿರುದ್ಧ ಬರೆಯುವ ಲೇಖಕರು, ಪತ್ರಕರ್ತರ ವಿರುದ್ಧ ಸೆಟೆದು ನಿಲ್ಲಲು ಉಗ್ರರು ತಯಾರಾಗಿದ್ದರು. ಹತ್ತಾರು ಕಡೆಗಳಲ್ಲಿ ತರಬೇತಿ ಶಿಬಿರವೂ ನಡೆಯುತ್ತಿತ್ತು. ಬೆಂಗಳೂರಿನಲ್ಲಿ ಉಗ್ರ ಕೃತ್ಯಗಳಿಗಾಗಿ ಕಳವು ಮಾಡಿದ ಬೈಕ್‌ಗಳನ್ನು ಬಳಸಲಾಗುತ್ತಿತ್ತು. ಉಗ್ರ ತರಬೇತಿ ಶಿಬಿರಗಳು ಮದರಸಾಗಳಲ್ಲಿ ನಡೆಯುತ್ತಿದೆಯೇ ಎಂಬುದರ ಕುರಿತು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಉಗ್ರರಿಗೆ ಹಣಕಾಸು ನೆರವು ನೀಡುತ್ತಿದ್ದ ದಾವಣಗೆರೆಯ ಡಾ| ನಯೀಮ್ ಸಿದ್ಧಿಕಿ ಕೂಡಾ ಬೆಂಳೂರಿನಲ್ಲಿ ಬಂಧಿಯಾಗಿದ್ದಾನೆ.

ಮಿತಿಮೀರಿದ ಹಿಂದೂ ದ್ವೇಷ, ದಾರಿತಪ್ಪಿದ ಧಾರ್ಮಿಕ ಅಂಧಶ್ರದ್ಧೆ, ಅತಿಯಾದ ಮೂಲಭೂತವಾದಿತನ ಇತ್ಯಾದಿಗಳಿಂದ ಮುಸ್ಲಿಂ ಯುವಕರು ದಾರಿ ತಪ್ಪುತ್ತಿದ್ದಾರೆ. ಕನ್ನಡ ನೆಲದ ಮುಸ್ಲಿಂ ಯುವಕರು ಇದೀಗ ಅಂತರರಾಷ್ಟ್ರೀಯ ಉಗ್ರರ ಪಟ್ಟಿಯಲ್ಲಿ ಸೇರಿರುವುದು ಆತಂಕಕಾರಿ ಅಂಶವೇ ಸರಿ. ನಿಮ್ಮೂರಿನ ಸುತ್ತಮುತ್ತ ಪ್ರದೇಶಗಳಲ್ಲಿ ಸಂದೇಹಾಸ್ಪದ ವ್ಯಕ್ತಿಗಳು, ಸಂಶಯಕ್ಕೆಡೆಮಾಡಿಕೊಡುವ ವಿದ್ಯಮಾನಗಳು ಸಂಭವಿಸಿದರೆ ತತ್‌ಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಸುದ್ದಿ ತಿಳಿಸಿ. ಭಯೋತ್ಪಾದನೆ ಮಟ್ಟಹಾಕುವಲ್ಲಿ ಪೋಲಿಸರೊಂದಿಗೆ ಕೈ ಜೋಡಿಸಿ. ಶಾಂತಿಯುತ ಕರ್ನಾಟಕ ನಮ್ಮದಾಗಬೇಕಾಗಿದ್ದರೆ ಇಂದು ಪ್ರತಿಯೋರ್ವ ಕನ್ನಡಿಗನೂ ’ಎಚ್ಚರ’ದಿಂದಿರಬೆಕು. ಮೈಮರೆತರೆ ಕರ್ನಾಟಕವೇ ಉಗ್ರರ ನೆಲೆವೀಡಾದೀತು!

-Rajesh Padmar, Bangalore

Leave a Reply

Your email address will not be published.

This site uses Akismet to reduce spam. Learn how your comment data is processed.