Kasaragod March 18: Condemning the failure of District Police to stop continuous attack of Hindu temples and on Hindus in Kasaragod over last few years, Sanghparivar organisations unitedly demonstrated a massive protest rally  “To the SP office March” at Kasaragod today.  The protest was held from Ramadas nagar to SP office, in which thousands of Sanghparivar cadres, prominent Sanghparivar leaders of Kasaragod district participated.

DSC_5378

The protest march was lead by Dinesh, RSS Sanghachalak of Kasaragod, Janardhan Kaikamba, RSS Jilla Karyavah, Kuntaru Ravish Tantri of Hindu Aikya Vedi, K Surendran of BJP, Muralidharan of BMS and other noted Sanghparivar Cadres. 

DSC_5367

DSC_5342

 

ಕಾಸರಗೋಡು ಜಿಲ್ಲೆಯಲ್ಲಿ ನಡೆಯುತ್ತಿರುವ ಹಿಂದುಗಳ ಮೇಲೆ ನಡೆಯುತ್ತಿರುವ ನಿರಂತರ ಆಕ್ರಮಣವನ್ನು ತಡೆಯುವಲ್ಲಿ ವಿಫಲವಾಗಿರುವ ಹಾಗೂ ತಾರತಮ್ಯದ ನೀತಿಯನ್ನುಅನುಸರಿಸುತ್ತಿರುವ ಪೋಲೀಸ್ ವರ್ತನೆಯನ್ನು ಖಂಡಿಸಿ ಕಾಸರಗೋಡಿನ ರಾಮದಾಸ್ ನಗರದಿಂದ “ಎಸ್ಪಿ ಕಛೇರಿಗೆ ಮಾರ್ಚ್” ನಡೆಯಿತು. ಸಂಘ ಪರಿವಾರದ ಸಾವಿರಾರುಕಾರ್ಯಕರ್ತರು ಈ

ಮೆರವಣಿಗೆಯಲ್ಲಿ ಪಾಲ್ಗೊಂಡರು.

ನಂತರ ನಡೆದ ಸಭೆಯಲ್ಲಿ ಹಿಂದು ಐಕ್ಯವೇದಿಯ ಶ್ರೀ ರವೀಶ್ ತಂತ್ರಿ ಯವರು ಹಿಂದುಗಳು ನಿರ್ವೀರ್ಯರಲ್ಲ ,ಹಿಂದುಗಳ ಸಹಿಷ್ಣುತೆಯನ್ನು ದುರ್ಬಲತೆ ಎಂದು ತಿಳಿಯಬಾರದುಎಂದರು.ಅಪರಾಧಗಳು ನಡೆದಾಗ ಆ ಅಪರಾಧಿ ಯಾವುದೇ ಧರ್ಮ, ಮತ ಅಥವಾ ಜಾತಿಯವನೇ ಆಗಿದ್ದರೂ ಪೋಲೀಸ್ ತನ್ನ ನಿಷ್ಕ್ರಿಯತೆಯನ್ನು ಬಿಟ್ಟು ಯಾವುದೇ ಒತ್ತಡಗಳಿಗೆಒಳಗಾಗದೆ ಅಪರಾಧಿಯನ್ನು ಬಂಧಿಸಬೇಕು ಎಂದರು.ಧರ್ಮ ರಾಜ್ಯದ ಸ್ಥಾಪನೆಗೆ ಕೈಯಲ್ಲಿ ಅಸ್ತ್ರವನ್ನು ಹಿಡಿಯಲು ಕೂಡ ಸಿದ್ದರಾಗಬೇಕೆಂದು ಶ್ರೀಕೃಷ್ಣ ಪರಮಾತ್ಮ ಪಾಂಡವರಿಗೆಹೇಳಿದ ಮಾತನ್ನು ನೆನಪಿಸಿದರು. ಮುಂದಿನ ದಿನಗಳಲ್ಲಿ ಯಾವುದೇ ಅಪರಾಧ ನಡೆದಲ್ಲಿ ತಕ್ಷಣ ಅಪರಾಧಿಯನ್ನು ಬಂಧಿಸುವ ಕೆಲಸದ ಪೋಲಿಸ್ ಇಲಾಖೆ ಮಾಡಬೇಕು, ಹಾಗುಅಪರಾಧಿ ಯಾರೇ ಆಗಿದ್ದರೂ ಕಠಿಣ ಶಿಕ್ಷೆಯನ್ನು ನೀಡುವ ಕೆಲಸವನ್ನು ಮಾಡಬೇಕು ಎಂದರು.ಮುಂದಿನ ದಿನಗಳಲ್ಲಿ ಸರಕಾರ ಹಾಗೂ ಪೋಲಿಸ್ ಇಲಾಖೆ ತನ್ನ ಕರ್ತವ್ಯದಲ್ಲಿಹಿಂಜರಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದರು.

DSC_5382

 

ಕೆ ಸುರೇಂದ್ರನ್ ಮಾತನಾಡಿ ಜಿಲ್ಲೆಯಲ್ಲಿ ಪೋಲಿಸ್ ಹಿಂದುಗಳಿಗೆ ಮತ್ತು ಅಲ್ಪಸಂಖ್ಯಾತರಿಗೆ ತಾರತಮ್ಯದ ನೀತಿಯನ್ನು ಅನುಸರಿಸಿತ್ತದೆಎಂದರು.ಇತ್ತೀಚೆಗೆ ನಡೆದ ಹಲವಾರು ಕೊಲೆ ಘಟನೆಗಳಲ್ಲಿ ಅಪರಾಧಿಗಳು ಯಾರೆಂದು ತಿಳಿದಿದ್ದರೂ ಅಪರಾಧಿಗಳನ್ನು ಬಂಧಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.ಮೀಪುಗುರಿದುರ್ಗಾ ಕ್ಷೇತ್ರದಲ್ಲಿ ಕೋಣನ ತಲೆ ಇಟ್ಟು ಅಶುದ್ದಗೊಳಿಸಿದ ಘಟನೆಯಲ್ಲಿ ಅಪರಾಧಿಯನ್ನು ಬಂಧಿಸುವಲ್ಲಿ ಪೋಲೀಸ್ ತನ್ನ ನಿಷ್ಕ್ರಿಯತೆಯನ್ನು ಪ್ರದರ್ಶಿಸಿದೆ. ಹಿಂದುಗಳ ತಾಳ್ಮೆಯನ್ನುಪರೀಕ್ಷಿಸುವುದು ಬೇಡ , ಯಾವುದೇ ಔದಾರ್ಯವನ್ನು ನಾವೂ ಕೇಳುವುದಿಲ್ಲ. ಭಾರತದ ಸಂವಿಧಾನ ದ ಹಕ್ಕನ್ನು ನಾವು ಕೇಳುತ್ತಿದ್ದೇವೆ , ನಮ್ಮ ಈ ಎಚ್ಚರಿಕೆಯನ್ನು ಗಂಭೀರವಾಗಿಪರಿಗಣಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.,

ಬಿಎಂಎಸ್ ನ ಶ್ರೀ ಮುರಳೀಧರನ್ ಮಾತನಾಡಿ ಹಿಂದುಗಳು ಕಾಸರಗೋಡಿನಲ್ಲಿ ಪೋಲೀಸ್ ನಡೆಸುವ ಇಬ್ಬಗೆಯ ನೀತಿಯನ್ನು ನಿಲ್ಲಿಸಬೇಕು. ಯಾವುದೇ ವಿನಂತಿಯನ್ನು ಮಾಡಲು ಇಲ್ಲಿ ನಾವು ಸೇರಿಲ್ಲ , ಬದಲಾಗಿ ಸಾಂವಿಧಾನಿಕವಾಗಿ ದೊರೆಯಬೇಕಾದ ಹಕ್ಕನ್ನು ಪಡೆಯಲು ಈ ಪ್ರತಿಭಟನೆಯನ್ನು ನಡೆಸುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ RSS ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯವಾಹ ಶ್ರೀ ಜನಾರ್ದನ ಶ್ರೀ ದಿನೇಶ ಕಾಸರಗೋಡು, ಅಂಗಾರ ಶ್ರೀಪಾದ , ಪ್ರಶಾಂತ್, ಪಿ ರಮೇಶ್, ಹಾಗೂ ಇತರ ಸಂಘಪರಿವಾರದ ಪ್ರಮುಖರು ಉಪಸ್ತಿತರಿದ್ದರು.

DSC_5380

Leave a Reply

Your email address will not be published.

This site uses Akismet to reduce spam. Learn how your comment data is processed.