Kashmir- A Paradise in Flames

Kashmir- A Paradise in Flames

ಇತ್ತೀಚಿನ ಮೂರು ತಿಂಗಳುಗಳಲ್ಲಿ ಕಾಶ್ಮೀರ

ಯಾವಾಗ ೨೦೦೮ರಲ್ಲಿ ಜಮ್ಮು-ಕಾಶ್ಮೀರದ ವಿಧಾನಸಭೆಗೆ ಚುನಾವಣೆ ಆಯಿತೋ ಅಂದಿನಿಂದ ಕಣಿವೆಯಲ್ಲಿ ತನ್ನ ಪ್ರಾಬಲ್ಯ ಮುಸುಕಾಗುತ್ತಿರುವುದು ಹುರಿಯತ್‌ಗೆ ಪಕ್ಕಾ ಆಗುತ್ತಿದೆ. “ಈ ಚುನಾವಣೆಗಳು ಭಾರತವು ಕಾಶ್ಮೀರದ ವಿಷಯದಲ್ಲಿ ಜನಾಭಿಪ್ರಾಯ ಕೇಳಿದಂತೆ. ಹೀಗಾಗಿ ನಾವು ಇಡೀ ಪ್ರಕ್ರಿಯೆಯನ್ನೇ ಬಹಿಷ್ಕರಿಸುತ್ತಿದ್ದೇವೆ’ ಎಂದು ಆ ಸಂದರ್ಬದಲ್ಲಿ ಪ್ರತ್ಯೇಕತಾವಾದಿ ನಾಯಕ ಮಿರ್‌ವಾಯಿಜ್ ಫರೂಕ್ ಹೇಳಿದ್ದ. “ಮುಖ್ಯವಾಹಿನಿಯ ರಾಜಕಾರಣಿಗಳು ಎಂದು ಗುರುತಿಸಿಕೊಳ್ಳುತ್ತಿರುವವರು ಪ್ರತ್ಯೇಕತಾವಾದಿ ಚಳವಳಿ ಸೇರಲು ಇದು ಕೊನೆಯ ಅವಕಾಶ’ ಎಂದೂ ಆತ ಸಾರಿದ್ದ. ಈ ಅಬ್ಬರದ ಬೆನ್ನಲ್ಲೇ ಆತನಿಗೆ ಮುಖಭಂಗವಾಯಿತು. ಆತ ಹೀಗೊಂದು ಬೆದರಿಕೆ ಒಡ್ಡಿದ್ದ ವಾರದ ನಂತರ, ನೊಂದಾಯಿತ ಮತದಾರರಲ್ಲಿ ಅರ್ಧದಷ್ಟು ಮಂದಿ ಚುನಾವಣೆಯಲ್ಲಿ ಭಾಗವಹಿಸಿದ್ದರು.

Kashmir- A Paradise in Flames
Kashmir- A Paradise in Flames

ಕಳೆದ ವರ್ಷ ಶೋಪಿಯಾನ್‌ನಲ್ಲಿ ಇಬ್ಬರು ಕಾಶ್ಮೀರಿ ಮಹಿಳೆಯರ ಅತ್ಯಾಚಾರ ಹಾಗೂ ಹತ್ಯೆಯ ಆರೋಪವನ್ನು ಮುಂದಿಟ್ಟುಕೊಂಡು ನಡೆಸಿದ ಪ್ರತಿಭಟನೆ ಸಹ ಹುರಿಯತ್‌ನ ಕುಗ್ಗಿದ ವ್ಯಾಪ್ತಿಯನ್ನು ಪ್ರತಿಬಿಂಬಿಸಿತ್ತು. ಅವು ಆಕಸ್ಮಿಕ ಸಾವುಗಳಷ್ಟೆ ಎಂದು ಸಿಬಿಐ ವಿಚಾರಣೆಯ ನಂತರ ಸಾರಿತು. ೨೦೦೯ರ ಮೇ ೩೦ರಿಂದ ಜೂನ್ ೩೦ರವರೆಗೆ ಶೊಪಿಯಾನ್ ಸಂಬಂಧ ನಡೆದ ಒಟ್ಟಾರೆ ೧೧೧ ಪ್ರತಿಭಟನೆಗಳಲ್ಲಿ ೧೭ ಮಾತ್ರ ಗ್ರಾಮೀಣ ಭಾಗಗಳಲ್ಲಿ ನಡೆದಂಥವುಗಳು. ಕೆಲವೇ ಕೆಲ ರ‍್ಯಾಲಿಗಳು ಮಾತ್ರವೇ ಸಾವಿರಕ್ಕೆ ಮೀರಿದ ಜನರನ್ನು ಹೊಂದಿದ್ದವು.

ಭಾರತೀಯ ಪಡೆಗಳು ಕಣಿವೆಯಲ್ಲಿನ ಭಯೋತ್ಪಾದಕರ ಜಾಲವನ್ನು ಸಂಪೂರ್ಣ ನಿರ್ನಾಮ ಮಾಡಿದ್ದಾರೆ ಎಂಬುದೂ ಇಲ್ಲಿ ಗಮನಾರ್ಹ. ಗುಪ್ತಚರ ವರದಿಗಳ ಪ್ರಕಾರ ಕಣಿವೆಯಲ್ಲಿ ಸದ್ಯಕ್ಕಿರುವ ಜಿಹಾದಿಗಳ ಸಂಖ್ಯೆ ೫೦೦-೬೦೦ರಷ್ಟು. ಇದು ೨೦೦೧ರಲ್ಲಿದ್ದ ಸಂಖ್ಯೆಗಿಂತ ೧೦ ಪಟ್ಟು ಕಡಿಮೆ.

ಕಣಿವೆಯಲ್ಲಿ ಸುಧಾರಣೆಗೊಂಡ ಕಾನೂನು- ಸುವ್ಯವಸ್ಥೆಯ ಪರಿಸ್ಥಿತಿ ಹಾಗೂ ಇಲ್ಲಿನ ಶಾಂತಿ, ಪ್ರತ್ಯೇಕತಾವಾದಿಗಳಿಗೆ ಮತ್ತು ಇವರಿಗೆ ಗಡಿಯಾಚೆಯಿಂದ ಕುಮ್ಮಕ್ಕು ನೀಡುತ್ತಿರುವ ಇವರ ಮುಖಂಡರುಗಳಿಗೆ ತಲೆಬಿಸಿ ಉಂಟುಮಾಡಿತು. ಕಣಿವೆಯ ಯುವಕರೂ ಪ್ರಜಾಪ್ರಭುತ್ವ ಮಾದರಿಯತ್ತ ವಾಲಿದ್ದರು. ಹೀಗಾಗಿಯೇ ಈ ಪ್ರತ್ಯೇಕತಾವಾದಿಗಳ ಗುಂಪು, ಉಗ್ರವಾದಿಗಳೊಂದಿಗೆ ಯುವಕರನ್ನೂ ಸೇರಿಸಿಕೊಂಡು ದೇಶ ವಿರೊಧಿ ಆಂದೋಲನ ರೂಪಿಸಬೇಕೆಂದು ಯೋಚಿಸಿತು. ಕಲ್ಲು ತೂರಾಟದ ಸಮೂಹ ಹಿಂಸೆಯ ತಂತ್ರ ಒಡಮೂಡಿದ್ದು ಈ ಹಂತದಲ್ಲೇ. ಒಸಾಮಾ ಬಿನ್ ಲಾಡೆನ್‌ನ ನಂಬರ್ ೨ ಆಪ್ತ ಎಂದೇ ಗುರುತಿಸಲಾಗುವ ಅಲ್ ಜವಾಹರಿ, ೨೦೦೭ರ ಫೆಬ್ರವರಿ ೧೨ರಂದು ನೀಡಿದ ಸಂದೇಶದಲ್ಲಿ ಜಾಗತಿಕ ಜಿಹಾದಿ ಚಳವಳಿಯ ಬಗ್ಗೆ ಮಾತನಾಡಿದ್ದೂ ಇದೇ ನಿಟ್ಟಿನಲ್ಲಿ.

ಇನ್ತೆಫೆದಾ: ನವ ಭಯೋತ್ಪಾದನೆ

ಇನ್ತೆಫೆದಾ ಎಂಬುದೊಂದು ಜನಪ್ರಿಯ ಪ್ರತಿರೋಧಿ ಆಂದೋಲನ. ಇದು ಪ್ರೇರೇಪಣೆಗೆ ಒಳಗಾದ ಮುಸ್ಲಿಂ ವ್ಯಕ್ತಿಗಳ ಪಾತ್ರವನ್ನೇ ಅವಲಂಬಿಸಿದ್ದು, ಸಂಘಟನೆಯ ಪಾತ್ರವಿಲ್ಲ ಕಿರಿದು.ಸಂಘಟನೆ ಒಮ್ಮೆ ದುರ್ಬಲವಾದರೂ ಇನ್ತೆಫೆದಾ ಹಾಗೆಯೇ ಇರಬೇಕು ಎಂಬುದಿಲ್ಲಿಯ ಯೋಜನೆ. ಇಂಥ ಇನ್ತೆಫೆದಾ ತೀವ್ರಗತಿಯನ್ನು ಪಡೆದುಕೊಂಡು ವ್ಯಕ್ತಿಗಳ ಬಲಿದಾನ ಹೆಚ್ಚುತ್ತ ಸಾಗಬೇಕು ಎಂಬುದು ಜವಾಹರಿಯ ಬಯಕೆ. ಇಲ್ಲಿ ಯಾವುದೇ ಕೇಂದ್ರೀಕೃತ ಕಮಾಂಡ್ ಆಗಲೀ ನಿಯಂತ್ರಣವಾಗಲೀ ಪ್ರಮುಖವಾಗಿ ಕಾರ‍್ಯನಿರ್ವಹಿಸುವುದಿಲ್ಲ. ಇನ್ತೆಫೆದಾ ಎಂಬುದು ಮಿಲಿಟರಿ ಹಾಗೂ ಮಿಲಿಟರಿಯೇತರ ಕಾರ‍್ಯತಂತ್ರಗಳ ಸಮ್ಮಿಳನ.

ನಾವು ಜಮ್ಮು-ಕಾಶ್ಮೀರದ ಕೆಲ ಭಾಗಗಳಲ್ಲಿ ಕಳೆದ ಮೂರು ತಿಂಗಳುಗಳಿಂದ ಏನನ್ನು ನೋಡುತ್ತಿದ್ದೇವೆಯೋ ಅದು ಜವಾಹರಿಯ ಇನ್ತೆಫೆದಾ ಆಂದೋಲನದ ಪ್ರಾರಂಬ. ಜಮ್ಮು-ಕಾಶ್ಮೀರದ ಗಲಭೆಯಲ್ಲಿ ಅಲ್ ಕಾಯಿದಾದ ಪಾತ್ರ ಇದೆಯೋ ಇಲ್ಲವೋ ಎಂಬುದು ತಿಳಿದಿಲ್ಲ. ಆದರೆ ಅದರ ಯೋಚನಾ ದಾಟಿ ಮಾತ್ರ ಇಲ್ಲಿ ಕಾರ‍್ಯರೂಪಕ್ಕೆ ಬರುತ್ತಿದೆ. ಜಿಹಾದ್ ಎಂಬ ಸಂಘಟಿತ ಭಯೋತ್ಪಾದನಾ ಮಾದರಿಯನ್ನು ಕೈಬಿಟ್ಟು ನಾಯಕತ್ವವೇ ಇಲ್ಲದ ಬೀದಿ ಹಿಂಸೆಯ ಮೂಲಕ ಗುರಿ ಸಾಧಿಸಿಕೊಳ್ಳುವ ಈ ತಂತ್ರ, ಕಾಶ್ಮೀರದ ಒಂದು ವರ್ಗದ ಯುವಕರ ವರ್ತನೆಯಲ್ಲಿ ಢಾಳಾಗಿ ಅಭಿವ್ಯಕ್ತಗೊಳ್ಳುತ್ತಿದೆ.

ಅನುಯಾಯಿಗಳೇ ಇಲ್ಲದ ನಾಯಕರು ಹಾಗೂ ನಾಯಕರನ್ನೇ ಹೊಂದಿರದ ಅನುಯಾಯಿಗಳಿರುವ ವಿಚಿತ್ರ ಸನ್ನಿವೇಶವನ್ನು ನಾವು ಎದುರಿಸುತ್ತಿದ್ದೇವೆ. ಜಮ್ಮು- ಕಾಶ್ಮೀರದ ಸಾಂಪ್ರದಾಯಿಕ ರಾಜಕೀಯ ಮುಖಂಡರಿಗೆ ಈ ಪರಿಸ್ಥಿತಿಯ ಮೇಲೆ ಅಷ್ಟಾಗಿ ಹಿಡಿತವಿಲ್ಲ. ಈ ಹಿಂಸಾಚಾರವನ್ನು ತೀವ್ರಗೊಳಿಸುವುದರಲ್ಲಿ ಪಾಕಿಸ್ತಾನದ ಪಾತ್ರ ಎಷ್ಟರಮಟ್ಟಿಗೆ ಇದೆಯೋ ಗೊತ್ತಿಲ್ಲವಾಗಲೀ ಅದು ಹಿಂಸೆಯನ್ನು ಪ್ರಾರಂಭಿಸಿದ ಅಂಶವಂತೂ ಅಲ್ಲ. ಆದಾಗ್ಯೂ ಇವತ್ತಿನ ಪ್ರಕ್ಷುಬ್ಧ ಪರಿಸ್ಥಿತಿಯನ್ನು ಅದು ತನಗೆ ಬೇಕಾದಂತೆ ಬಳಕೆ ಮಾಡಿಕೊಳ್ಳುತ್ತಿರುವುದು ಖರೆ.

ಯಾಕೀ ಪ್ರತಿಭಟನೆ?

ಬೇರೆ ಬೇರೆ ಕಾರಣಗಳಿಗೆ ಕಣಿವೆಯ ಯುವಕರನ್ನು ಒಂದುಗೂಡಿಸಿ ಭಾರತವನ್ನು ಅಸ್ಥಿರಗೊಳಿಸಲು ಪ್ರತ್ಯೇಕತಾವಾದಿ ನಾಯಕರು ಒಂದಾಗಿದ್ದಾರೆ ಎಂಬುದು ತುಂಬ ಸ್ಪಷ್ಟವಾಗಿ ತಿಳಿದುಬರುತ್ತಿರುವ ಅಂಶ. ಈ ಸಮಯಕ್ಕೆ ಅವರು ನೀಡುತ್ತಿರುವ ಕಾರಣ ಎಂದರೆ, ಭದ್ರತಾ ಪಡೆ ತಮ್ಮ ವಿಷಯದಲ್ಲಿ ಸಂವೇದನೆ ಕಳೆದುಕೊಂಡು ವತಿಸುತ್ತಿದೆ ಎಂದು. ಒಳನುಸುಳುವಿಕೆಯನ್ನು ತಡೆಯುವ ಕಾರ‍್ಯಾಚರಣೆಯಲ್ಲಿ ವಿಫಲವಾಗಿರುವ ಪಡೆ ಸುಳ್ಳು ಎನ್‌ಕೌಂಟರ್‌ಗಳನ್ನು ಮಾಡುತ್ತಿದೆ ಹಾಗೂ ಜನರ ವಿರುದ್ಧ ಬಲ ಪ್ರಯೋಗಕ್ಕೆ ಇಳಿದಿದೆ ಎಂಬ ಆರೋಪ. ಸಾರ್ವಜನಿಕವಾಗಿ ಭದ್ರತಾ ಪಡೆ ವಿರುದ್ಧ ಸಿಟ್ಟು ಹೊರಹಾಕಿದಂತೆಲ್ಲ ಹೆಚ್ಚಿನ ಪಡೆಯನ್ನು ನಿಯೋಜಿಸಲಾಗುತ್ತದೆ ಹಾಗೂ ಅವರು ಜನರನ್ನು ಹದ್ದುಬಸ್ತಿನಲ್ಲಿಡಲು ಮುಂದಾಗುತ್ತಾರೆ. ಈ ಆಕ್ರೋಶವನ್ನು ಚಾಲ್ತಿಯಲ್ಲಿಡಲು ಪಾಕಿಸ್ತಾನದಲ್ಲಿ ಹಣ ಸಂಗ್ರಹ ಕಾರ‍್ಯ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಅಂತಾರಾಷ್ಟ್ರೀಯ ಸಮುದಾಯವು ಜಮ್ಮು ಕಾಶ್ಮೀರವನ್ನು ಒಂದು ವಿವಾದಿತ ಪ್ರದೇಶವನ್ನಾಗಿ ನೋಡುತ್ತಿರುವುದರಿಂದ, ಈ ವಿಷಯದಲ್ಲಿ ಪಾಕಿಸ್ತಾನದ ವಿರುದ್ಧ ಮುಂಬಯಿ ದಾಳಿಯ ನಂತರ ನಿರ್ಮಿಸಿದ ಒತ್ತಡಕ್ಕೆ ಮುಂದಾಗುವುದಿಲ್ಲ. ಸೆಪ್ಟೆಂಬರ್ ಮಧ್ಯಭಾಗದಲ್ಲಿ ಅಮೆರಿಕದಲ್ಲಿ ಕುರಾನ್‌ನ ಪ್ರತಿಯನ್ನು ದಹಿಸಿದ ವರದಿ ಬಂತು. ಆದರೆ ಆ ಸಿಟ್ಟನ್ನು ಕಾಶ್ಮೀರದಲ್ಲಿ ನಮ್ಮ ಪಡೆ ವಿರುದ್ಧ ಕಲ್ಲು ತೂರಾಡುವುದರಲ್ಲಿ ತೀರಿಸಿಕೊಳ್ಳಲಾಯಿತು. ಭಾರತವನ್ನು ಅಸ್ಥಿರಗೊಳಿಸುವುದಕ್ಕೆ ಸಕ್ರಿಯವಾಗಿರುವ ಪಡೆ, ಒಂದಿಲ್ಲೊಂದು ಕಾರಣಕ್ಕೆ ಕಣಿವೆಯ ಯುವಕರನ್ನು ಎತ್ತಿಕಟ್ಟುತ್ತಿದೆ.

೧೯೮೯ರಲ್ಲಿ ಬಂಡುಕೋರ ಹಾವಳಿ ಶುರುವಾದಾಗ ಇನ್ನು ಹುಟ್ಟಿಯೇ ಇರದ ಅಥವ ಹಸುಗೂಸುಗಳಾಗಿದ್ದವರು ಇಂದು ಮುಂಚೂಣಿಯಲ್ಲಿದ್ದಾರೆ. ೧೯೮೯ರ ಯುವ ಸಮೂಹ ಭಯೋತ್ಪಾದನೆಯನ್ನು ಬಳಸಿಕೊಂಡು ಧಾಳಿ ನಡೆಸುತ್ತ, ನಾಗರಿಕರನ್ನು ಕೊಂದು, ಹಿಂದುಗಳನ್ನು ಹೊರದಬ್ಬುವ ತತ್ತ್ವದಲ್ಲಿ ನಂಬಿಕೆ ಇರಿಸಿಕೊಂಡಿದ್ದರು. ಇವತ್ತಿನ ಯುವಕರು ಬೀದಿ ಹಿಂಸಾಚಾರ ನಡೆಸುತ್ತ ಭದ್ರತಾ ಪಡೆ ವಿರುದ್ಧ ಹಿಂಸೆಗಿಳಿಯುವ ಮಾರ್ಗ ಆರಿಸಿಕೊಂಡಿದ್ದಾರೆ. ಗಾಜಾದಲ್ಲಿ ನಡೆಯುತ್ತಿರುವ ಬಂಡುಕೋರತನದಂತೆ ಜಮ್ಮು- ಕಾಶ್ಮೀರದ ಪರಿಸ್ಥಿತಿಯನ್ನೂ ನಾವು ಸಮೀಕರಿಸುತ್ತಿದ್ದೇವೆ.

೧೯೮೯ರಲ್ಲಿ ಮೊದಲ ಬಾರಿಗೆ ಶಸ್ತ್ರ ಹಿಂಸೆ ಪ್ರಾರಂಭವಾದಾಗ ಈಗಿನಂತೆ ಖಾಸಗಿ ಟಿವಿ ವಾಹಿನಿಗಳಿರಲಿಲ್ಲ. ಈಗಿನ ವಾಹಿನಿಗಳು ಯುವಕರ ಆಕ್ರೋಶವನ್ನೇ ಪ್ರಧಾನವಾಗಿ ಬಿಂಬಿಸುತ್ತಿವೆ. ಇದೊಂದು ವಿಷವೃತ್ತ. ಬೀದಿ ಹಿಂಸಾಚಾರವನ್ನು ಭದ್ರತಾ ಪಡೆ ಕೈಕಟ್ಟಿ ನೋಡಿಕೊಂಡಿರುವುದಕ್ಕೆ ಸಾಧ್ಯವಿಲ್ಲ. ಜೀವ ಹಾಗೂ ಆಸ್ತಿ ರಕ್ಷಣೆಗೆ ಅವು ಕಾನೂನುಬದ್ಧವಾಗಿಯೇ ತಮ್ಮ ಪ್ರತಿರೋಧ ತೋರಿಸುತ್ತಿವೆ. ಇವು ಸಾವು ನೋವು ಸಂಭವಿಸಲು ಕಾರಣವಾಗುತ್ತಿದೆಯಾದರೂ ಅದು ಅನಿವಾರ‍್ಯವಾಗಿದೆ.

ಹೊರನೋಟಕ್ಕೆ ಇದು ತಾನೇ ತಾನಾಗಿ ಹುಟ್ಟಿಕೊಂಡ ಚಳವಳಿಯಾಗಿ ಕಾಣುತ್ತಿದೆಯಾದರೂ ಬೇರೆ ಬೇರೆ ಹಂತದಲ್ಲಿ ಬೇರೆ ಬೇರೆ ಆಟಗಾರರು ಇದಕ್ಕೆ ಕಿಡಿ ಸೋಕಿಸಿದ್ದಾರೆ. ಕಾಶ್ಮೀರವನ್ನು ಇಸ್ಲಾಮಿಕ್ ರಾಜ್ಯವನ್ನಾಗಿ ಮಾಡಲು ನಿರತರಾಗಿರುವ ಪಡೆ ಇದು. ಈ ಆಂದೋಲನಕ್ಕೆ ಒದಗಿರುವ ನಾಯಕತ್ವ ಹೊಸದು. ಇದರ ಹಿರಿತಲೆ ಸಯ್ಯದ್ ಶಾ ಗಿಲಾನಿ, ಹಿಜ್ಬುಲ್ ಮುಜಾಹಿದೀನ್‌ನ ಮುಖ್ಯಸ್ಥ ಸಯ್ಯದ್ ಅಲಿ ಶಾ ಗಿಲಾನಿಯ ಹಳೆಸ್ನೇಹಿತ ಅಶ್ರಫ್ ಶೆರಾಯಿಗೂ ಇದರಲ್ಲಿ ಪಾತ್ರವಿದೆ. ಹೊಸ ಪೀಳಿಗೆಯ ನಾಯಕರಲ್ಲಿ ಮಶ್ರತ್ ಅಲಮ್, ಮೊಹಮದ್ ಕಾಸಿಮ್ ಹಾಗೂ ಅಸಿಯಾ ಅಂದ್ರಾಬಿ ಪ್ರಮುಖರು.

ಸೈಯದ್ ಅಲಿ ಶಾ ಗಿಲಾನಿ: ಪಾಕಿಸ್ತಾನದ ಅಸೀಮ ಬೆಂಬಲಿಗ. ಯಾವುದೇ ಬೆಲೆ ತೆತ್ತಾದರೂ ಭಾರತದಿಂದ ಸ್ವಾತಂತ್ರ್ಯ ಪಡೆಯಬೇಕು ಎಂದು ನಿಂತವನು. ಕಾಶ್ಮೀರದಲ್ಲಿ ಇಸ್ಲಾಮಿಕ್ ಆಡಳಿತ ಬರಬೇಕು ಎಂಬ ಪ್ರತಿಪಾದನೆಯವ. ಈತನ ರಾಜಕೀಯ ಆರಂಭವಾಗಿದ್ದು ಭಾರತ ಪರ ನೀತಿಯಿಂದ. ನಂತರ ತನ್ನ ಜೀವನವನ್ನು ಇಸ್ಲಾಮಿಕ್ ಸಂಘಟನೆಯಾದ ಜಮಾತ್- ಎ- ಇಸ್ಲಾಮಿಗೆ ಮುಡುಪಾಗಿಟ್ಟ. ೧೯೮೯ರಲ್ಲಿ ಉಗ್ರವಾದ ಮಿತಿಮೀರಿದಾಗ, ಜಮಾತ್‌ನ ಸಶಸ್ತ್ರ ಪಡೆ ಹಿಜ್ಬುಲ್ ಮುಜಾಹಿದೀನ್‌ನ ತಾತ್ವಿಕ ನಾಯಕ ಎಂಬ ಮಟ್ಟಕ್ಕೇರಿದ. ಇವತ್ತಿಗೆ ೮೧ ವರ್ಷದ ಗಿಲಾನಿ ಕಾಶ್ಮೀರಿ ಪ್ರತ್ಯೇಕತಾವಾದಿಗಳ ಕಟ್ಟರ್ ನಾಯಕ. ಜನಮತಗಣನೆ ನಡೆದಿದ್ದೇ ಆದರೆ ಪಾಕಿಸ್ತಾನದ ಪರ ಮತ ಚಲಾಯಿಸುವುದಾಗಿ ಸಾರ್ವಜನಿಕವಾಗಿ ಹೇಳುತ್ತಿರುವ ವ್ಯಕ್ತಿ. ಗಿಲಾನಿ ವಿರುದ್ಧ ಚುನಾವಣೆಗೆ ನಿಂತಿದ್ದ ಕಾಂಗ್ರೆಸ್ ಅಬ್ಯರ್ಥಿ ಗುಲಾಮ್ ರಸೂಲ್ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಂತೆ, “ಸೆಕ್ಯುಲರಿಸಂ ಎನ್ನುವುದು ಇಸ್ಲಾಂ ವಿರೋಧಿ’ ಎಂದು ಗಿಲಾನಿ ಹೇಳಿದ್ದರು.

ಮುಶ್ರತ್ ಅಲಮ್: ೩೯ ವರ್ಷದ ಅಲಮ್ ಮೊದಲು ಉಗ್ರರ ಕಮಾಂಡರ್ ಆಗಿದ್ದವನು ಈಗ ಪ್ರತ್ಯೇಕತಾವಾದಿ ರಾಜಕಾರಣಿ. ಪ್ರತಿಭಟನೆಗಳ ಮುಂಚೂಣಿ ನಾಯಕ. ಕಲ್ಲು ತೂರಾಟಕ್ಕೆ ಕ್ಯಾಲೆಂಡರ್ ಹಾಕಿಕೊಡುವ, ಜನರನ್ನು ಸೇರಿಸುವ ಕೆಲಸ ಇವನದ್ದು. ಈ ಬಾರಿಯ ಪ್ರತಿಭಟನೆಗಳು ಆರಂಭವಾದಾಗ ಗಿಲಾನಿ ಜೈಲಿನಲ್ಲಿದ್ದ. ಆಗಷ್ಟೇ ಜೈಲಿನಿಂದ ಹೊರಬಿದ್ದಿದ್ದ ಮಶ್ರತ್ ಪ್ರತಿಭಟನೆಯ ಚುಕ್ಕಾಣಿ ಹಿಡಿದ. ಹುರಿಯತ್ ಕಾನ್ಫರೆನ್ಸ್ ಅನ್ನು ಇಬ್ಭಾಗ ಮಾಡುವುದಕ್ಕೆ ಈತ ಕಾರಣಕರ್ತ ಎಂಬುದೊಂದು ಆರೋಪ ಇವನ ಮೇಲಿದೆ. ಗಿಲಾನಿಯ ಅನುಪಸ್ಥಿತಿಯಲ್ಲಿ ಕಟ್ಟರವಾದಿ ಹುರಿಯತ್‌ನ ಪ್ರಧಾನ ಕಾರ‍್ಯದರ್ಶಿಯಾಗಿ ಈತ ಮುಂಚೂಣಿಯಲ್ಲಿದ್ದಾನಾದರೂ ಇವನಿಗೆ ಜಮಾತ್‌ನ ಹಿನ್ನೆಲೆ ಇಲ್ಲ ಎಂಬುದಷ್ಟೇ ವ್ಯತ್ಯಾಸ.

ಮೊಹಮದ್ ಕಾಸಿಮ್ ಆಲಿಯಾಸ್ ಅಶಿಕ್ ಹುಸೇನ್ ಫಕ್ತು: ಪ್ರತಿಭಟನೆಗಳ ಹಿಂದಿನ ಸೈದ್ಧಾಂತಿಕ ಸ್ಫೂರ್ತಿ ಈತ. ಉಗ್ರರ ಮಾಜಿ ಕಮಾಂಡರ್ ಆಗಿರುವ ಈತ ೧೯೯೩ರಿಂದಲೂ ಜೀವಾವಧಿ ಶಿಕ್ಷೆಗೊಳಗಾಗಿ ಕಾರಾಗೃಹದಲ್ಲಿದ್ದಾನೆ. ಟ್ರೇಡ್ ಯೂನಿಯನ್ ಮುಖ್ಯಸ್ಥ ಎಚ್. ಎನ್. ವಾಂಚೂ. ಕಾಶ್ಮೀರದಲ್ಲಿ ಧೊಂಬಿ ಆರಂಭವಾಗುತ್ತಲೇ ಆತನನ್ನು ಬೇರೆಡೆ ಸ್ಥಳಾಂತರಿಸಲಾಯಿತು. ಏಕೆಂದರೆ ಕೇಂದ್ರ ಕಾರಾಗೃಹದಲ್ಲಿ ಫಕ್ತುಗೆ ಇಂಟರ್‌ನೆಟ್ ಹಾಗೂ ಸೆಲ್‌ಫೋನ್‌ಗಳು ಬಳಕೆಗೆ ಲಭ್ಯವಿದ್ದವು. ಉಗ್ರ ನಾಯಕಿ ಅಸಿಯಾ ಅಂದ್ರಾಬಿ ಈತನ ಮಡದಿ. ಮಾರ್ಚ್ ೧೯೯ರಲ್ಲಿ ಫಕ್ತು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಪಾಕಿಸ್ತಾನದ ಹಂಗಿಲ್ಲದೇ ದೇಶಿ ಪ್ರತ್ಯೇಕತಾವಾದದ ಪರಿಕಲ್ಪನೆಯೊಂದನ್ನು ಬಿತ್ತಿದವ ಉಗ್ರ ನಾಯಕರಲ್ಲಿ ಈತನೇ ಮೊದಲಿಗ. ಜುಲೈ ೧೪, ೨೦೦೧ರಂದು ಜಮ್ಮುವಿನ ಟಾಡಾ ನ್ಯಾಯಾಲಯ ಈತನನ್ನು ದೋಷಮುಕ್ತಗೊಳಿಸಿತ್ತು. ಅದರ ಬೆನ್ನಲ್ಲೇ ಫಕ್ತು ಸೌದಿ ಅರೇಬಿಯಾ ಹಾಗೂ ಲಂಡನ್‌ಗಳಿಗೆ ಹೋಗಿ ಸಮ್ಮೇಳನಗಳಲ್ಲಿ ಭಾಗವಹಿಸಿ ಬಂದ. ಲಂಡನ್‌ನಿಂದ ವಾಪಾಸಾದಾಗ ೨೦೦೨ರಲ್ಲಿ ದಿಲ್ಲಿಯಲ್ಲಿ ಆತನನ್ನು ಮತ್ತೆ ಬಂದಿಸಲಾಯಿತು. ನಂತರ ಸುಪ್ರೀಂಕೋರ್ಟ್ ಆತನಿಗೆ ಸಜೆ ವಿಧಿಸಿತು. ಜೈಲಿನಲ್ಲೇ ಕುಳಿತು ಇಸ್ಲಾಮಿಕ್ ಸ್ಟಡಿಯಲ್ಲಿ ಪಿಎಚ್‌ಡಿ ಮಾಡಿರುವ ಈತ ಹಲವಾರು ಪುಸ್ತಕಗಳನ್ನೂ ಬರೆದಿದ್ದಾನೆ. ದಿನಿ ಮಹಜ್ ಎಂಬ ಮುಸ್ಲಿಂ ರಾಜಕೀಯ ಪಕ್ಷದ ನೇತಾರ.

ಕಾಶ್ಮೀರವೆಂಬ ಉರಿಯುತ್ತಿರುವ ಸ್ವರ್ಗ

೨೦೦೦ ಇಸವಿಯಲ್ಲಿ ಫರೂಕ್ ಅಬ್ದುಲ್ಲಾ ಅವರ ನಾಯಕತ್ವದಲ್ಲಿ ಜಮ್ಮು-ಕಾಶ್ಮೀರ ವಿಧಾನ ಸಭೆಯು ಸ್ವಾಯತ್ತೆಗೆ ಸಂಬಂಧಿಸಿದ ಗೊತ್ತುವಳಿಯನ್ನು ಅಂಗೀಕರಿಸಿತು. ಅದರಂತೆ ಕಾಶ್ಮೀರಕ್ಕೆ ೧೯೫೩ಕ್ಕಿಂತ ಹಿಂದಿನ ಸ್ಥಾನಮಾನವನ್ನು ನೀಡಬೇಕಾಗುತ್ತದೆ. ಆ ಸಂಬಂಧವಾಗಿ ಪ್ರಧಾನಿ ನೆಹರು ಮತ್ತು ಫಾರೂಕ್ ಅಬ್ದುಲ್ಲಾ ಒಪ್ಪಂದವೊಂದಕ್ಕೆ ಸಹಿ ಮಾಡಿದ್ದು, ಆರೆಸ್ಸೆಸ್, ಬಿಜೆಪಿಯಂತಹ ಪಕ್ಷ-ಸಂಘಟನೆಗಳು ಅದನ್ನು ಕಟುವಾಗಿ ಟೀಕಿಸುತ್ತಾ ಬಂದಿವೆ. ೧೯೭೪ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರೊಂದಿಗೆ ಮಾತುಕತೆ ನಡೆಸುವಾಗ ಕೂಡ ಫಾರೂಕ್ ಅಬ್ದುಲ್ಲಾ ಅದೇ ರಾಜಕೀಯ ಆಟವನ್ನು ಆಡಲು ಯತ್ನಿಸಿದರು. ಆಗ ಅವರು ಹೇಳಿದ್ದು: ೧೯೫೩ರಲ್ಲಿ ನಾನು ಬಿಟ್ಟಲ್ಲಿಂದ ಈಗ ಆರಂಭಿಸೋಣ.” ಅದಕ್ಕೆ ಇಂದಿರಾ ಗಾಂಧಿಯವವು ನೀಡಿದ ಉತ್ತರ ಒಂದು ಇತಿಹಾಸದ ದಾಖಲೆಯಾಗಿ ಕಾದಿರಿಸಲು ಅರ್ಹವಾಗಿದೆ. ಆಕೆ ಹೀಗೆಂದರು: “ಫಾರೂಕ್ ಸಾಹೇಬರೆ, ನಾನು ನಿಮ್ಮ ಭಾವನೆಗಳನ್ನು ಗೌರವಿಸುತ್ತೇನೆ. ಆದರೆ ಗಡಿಯಾರದ ಮುಳ್ಳುಗಳನ್ನು ಹಿಂದಕ್ಕೆ ತಿರುಗಿಸುವುದು ಅಸಾಧ್ಯ ಎಂಬುದನ್ನು ನಾನು ಹೇಳಲೇಬೇಕಾಗಿದೆ.” ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಹಾಗೂ ಕೇಂದ್ರದ ಮಾಜಿ ನಗರಾಭಿವೃದ್ಧಿ ಸಚಿವ ಜಗಮೋಹನ್ ಈ ವಿಷಯವನ್ನು ಹೀಗೆ ಹೀಗೆ ವಿಶ್ಲೇಷಿಸಿದ್ದರು: “ಇಲ್ಲಿ ನಾವು ಗಮನಿಸಬೇಕಾದ ಮೂಲಭೂತವಾದ ಅಂಶವೊಂದಿದೆ. ಅದೆಂದರೆ ಆಡಳಿತದಲ್ಲಿ ದಕ್ಷತೆ, ಅಭಿವೃದ್ಧಿಯಲ್ಲಿ ವೇಗ ಮತ್ತು ಸಮುದಾಯದ ಸೃಜನಶೀಲ ಸಾಮರ್ಥ್ಯದ ಪೂರ್ಣವಿಕಾಸಕ್ಕೆ ಕಾರಣವಾಗುವ ಸ್ವಾಯತ್ತೆ ಹಾಗೂ ಪ್ರತ್ಯೇಕತಾವಾದ, ಬುಡಮೇಲುಕೃತ್ಯ ಹಾಗೂ ಛಿದ್ರೀಕರಣಕ್ಕೆ ದಾರಿಯಾಗುವ ಸ್ವಾಯತ್ತೆಗಳ ನಡುವಣ ವ್ಯತ್ಯಾಸವನ್ನು ನಾವು ಮರೆಯಬಾರದು.”

ಎಎಫ್‌ಎಸ್‌ಪಿಎ

ಜಮ್ಮು-ಕಾಶ್ಮೀರದಲ್ಲಿ ಈಗ ಜಾರಿಯಲ್ಲಿರುವ, ೧೯೭೨ರಲ್ಲಿ ತಿದ್ದುಪಡಿಗೊಳಗಾದ ಸಶಸ್ತ್ರ ಪಡೆ (ವಿಶೇಷಾಧಿಕಾರ) ಕಾಯ್ದೆ (ಎಎಫ್‌ಎಸ್ಪಿಎ) ೧೯೫೮ನ್ನು ವಜಾಗೊಳಿಸಬೇಕೆನ್ನುವ

ಬೇಡಿಕೆ ಪ್ರತ್ಯೇಕತಾವಾದಿಗಳಿಂದ ಬಂದಿದೆ. ಒಮರ್ ಅಬ್ದುಲ್ಲಾ ನೇತೃತ್ವದ ರಾಜ್ಯ ಸರಕಾರ ಕೂಡ ಆ ಕಾಯ್ದೆಯನ್ನು ರಾಜ್ಯದ ಕೆಲವು ಭಾಗಗಳಲ್ಲಿ ಸಡಿಲುಗೊಳಿಸಬೇಕೆನ್ನುವ ಅಪೇಕೆಯನ್ನು ವ್ಯಕ್ತಪಡಿಸಿದೆ. ಅಫ್‌ಸ್ಫಾ (ಎಎಫ್‌ಎಸ್‌ಪಿಎ) ವನ್ನು ವಜಾಗೊಳಿಸಬೇಕೆನ್ನುವ ಬೇಡಿಕೆಗೂ

ಉಗ್ರರ ವಿರುದ್ಧ ಹೋರಾಡುತ್ತಿರುವ ಭದ್ರತಾ ಪಡೆಗಳಿಗೆ ಕಾನೂನಿನ ಷರತ್ತುಗಳನ್ನು ಅನ್ವಯಿಸುವುದಕ್ಕೂ ನಿಕಟ ಸಂಬಂಧವಿದೆ. ಕಾಶ್ಮೀರ ಕಣಿವೆ ಮತ್ತು ದೋಡಾ ಸೇರಿದಂತೆ ಜಮ್ಮು-ಕಾಶ್ಮೀರದ ಮೂರು ಜಿಲ್ಲೆಗಳನ್ನು ಗಲಭೆಪೀಡಿತ ಪ್ರದೇಶವೆಂದು ಘೋಷಿಸಿದ ಈ

ಕಾಯ್ದೆಯನ್ನು ೧೯೮೯ರಲ್ಲಿ ಅಧಿಸೂಚನೆಯೊಂದರ ಮೂಲಕ ತರಲಾಯಿತು. ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆಯಿದ್ದಾಗ ೧೯೯೦ರಲ್ಲಿ ಈ ಕಾಯ್ದೆ ಅನುಷ್ಠಾನಕ್ಕೆ ಬಂತು. ಅಂದಿನ ರಾಜ್ಯಪಾಲ ಜಗಮೋಹನ್ ಅವರು ಅಧಿಸೂಚನೆಯೊಂದರ ಮೂಲಕ ಅದನ್ನು ಜಾರಿಗೊಳಿಸಿದರು. ರಾಜ್ಯದಲ್ಲಿ ಚುನಾವಣೆ ನಡೆದು, ೧೯೯೬ರಲ್ಲಿ ಪ್ರಜಾಸತ್ತಾತ್ಮಕ ಸಂಸ್ಥೆಗಳು

ಅಸ್ತಿತ್ವಕ್ಕೆ ಬಂದು, ಡಾ|| ಫರೂಕ್ ಅಬ್ದುಲ್ಲಾ ಅವರ ನಾಯಕತ್ವದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಅಧಿಕಾರಕ್ಕೆ ಬಂದಾಗ ವಿಧಾನಸಭೆಯ ಒಳಗಾಗಲಿ ಹೊರಗಾಗಲಿ ಯಾರೂ ಈ ಕಾಯ್ದೆಯ ಕುರಿತು ಚರ್ಚಿಸಿದ್ದಿಲ್ಲ. ಕ್ಷೀಣವಾದ ಕೆಲವು ಅಪಸ್ವರಗಳು ಮೇಲೆದ್ದವಾದರೂ

ರಾಷ್ಟ್ರವಿರೋಧಿ ಹಾಗೂ ಉಗ್ರರ ಬೆಂಬಲಿಗರೆನ್ನುವ ಹಣೆಪಟ್ಟಿಗೆ ಗುರಿಯಾಗಬೇಕಾದೀತೆಂದು ಬೆದರಿಸಿ ಅವರನ್ನು ಬಾಯಿಮುಚ್ಚಿಸಲಾಯಿತೆಂದು ನ್ಯಾಷನಲ್ ಕಾನ್ಫರೆನ್ಸ್‌ನ ಹಿರಿಯ ನಾಯಕರೊಬ್ಬರು ನೆನಪಿಸಿಕೊಳ್ಳುತ್ತಾರೆ.

ಮುಫ್ತಿ ಮೊಹಮ್ಮದ್ ಸಯೀದ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ಈ ವಿಷಯ ಚರ್ಚೆಗೆ ಬಂತು. ರಾಜಕಾರಣಿಯಾಗಿ ಪರಿವರ್ತಿತರಾದ ನ್ಯಾಯವಾದಿ ಮುಜಾಫರ್ ಹುಸೇನ್ ಬೇಗ್ ಅವರು ಈ ಕುರಿತ ಚರ್ಚೆಗೆ ನಾಂದಿ ಹಾಡಿದರು. ಪಿಡಿಪಿ ಅಧಿಕಾರಕ್ಕೆ ಬರುವಾಗ ಪಕದ ಹಿರಿಯ ನಾಯಕ ನಿಜಾಮುದ್ದೀನ್ ಭಟ್ ಅವರು “ಆಡಳಿತ ನಡೆಸುವುದು ಒಂದು ಗಂಭೀರ ಸಮಸ್ಯೆಯಾಗಿತ್ತು. ಕಳೆದ ಮೂರು ವರ್ಷಗಳಿಂದ

ನಾವು ನ್ಯಾಯವ್ಯವಸ್ಥೆಯ ಚರಿತ್ರೆಯ ಮೇಲೆ ಜನತೆಯ ವಿಶ್ವಾಸವನ್ನು ಕುದುರಿಸುವ ಬಗ್ಗೆ ಬಹಳಷ್ಟು ಪ್ರಯತ್ನ ಮಾಡಿದೆವು. ನಮಗೆ ಸೂಕ್ತವೆನಿಸಿದಾಗ ಈ ಕಾಯ್ದೆಯ ಬಗ್ಗೆ ಪುನರ್ವಿಮರ್ಶೆ ಮಾಡುವಂತೆ ಕೇಂದ್ರ ಸರಕಾರವನ್ನು ವಿನಂತಿಸಿದ್ದು, ಅದಕ್ಕೆ ಅವರು ಒಪ್ಪಿದ್ದಾರೆ”

ಎಂದು ಹೇಳಿದರು. ಅದೇ ವೇಳೆ ಅವರು ಅಫ್‌ಸ್ಪಾದ ವಿಷಯದಲ್ಲಿ ರಾಜಕೀಯ ಮಾಡುವುದರಲ್ಲಿ ಪಿಡಿಪಿಗೆ ವಿಶ್ವಾಸವಿಲ್ಲ ಎಂದು ಒತ್ತಿ ಹೇಳಿದರು. ಅಧಿಕಾರವನ್ನು ಪಿಡಿಪಿಗೆ ಬಿಟ್ಟುಕೊಟ್ಟ ಬಳಿಕ ಎನ್‌ಸಿ (ನ್ಯಾಷನಲ್ ಕಾನ್ಫರೆನ್ಸ್)ಯು ನಾಯಕರು, “ಅದೊಂದು ಅತ್ಯಂತ

ಕ್ರೂರ ಶಾಸನವಾಗಿದ್ದು, ಅದನ್ನು ವಾಪಸು ಪಡೆಯುವುದು ಅಗತ್ಯ” ಎಂದು ಹೇಳಲಾರಂಭಿಸಿದರು. “ನಾವೊಂದು ನಿರ್ಣಯವನ್ನು ಅಂಗೀಕರಿಸಬೇಕಿತ್ತು. ಆದರೆ ಆಗಿನ ಸನ್ನಿವೇಶದಿಂದಾಗಿ ನಮಗದು ಸಾಧ್ಯವಾಗಲಿಲ್ಲ. ಮುಫ್ತಿ ಅವರ ಕಾಲದಲ್ಲಿ ಪರಿಸ್ಥಿತಿ ಅನುಕೂಲಕರವಾಗಿತ್ತು.  ಆದರೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ (ಸಿಎಂಪಿ) ಭರವಸೆ ನೀಡಿದ್ದನ್ನು ಈಡೇರಿಸುವಲ್ಲಿ ಅವರು

ಕೂಡ ವಿಫಲರಾದರು” ಎಂದು ಆಗಿನ ಹಿರಿಯ ಎನ್‌ಐ ನಾಯಕರೊಬ್ಬರು ಹೇಳಿದ್ದಾರೆ. ಒಟ್ಟಿನಲ್ಲಿ ಈಗ ಅಫ್‌ಸ್ಪಾ ಜನಪ್ರಿಯವಾದ ಒಂದು ಪದಪುಂಜವಾಗಿದ್ದು, ಎನ್‌ಸಿ, ಪಿಡಿಪಿ ಹಾಗೂ ಕೆಲವು ಪ್ರತ್ಯೇಕತಾವಾದಿ ಪಕ್ಷಗಳು ಕಾಶ್ಮೀರದ ಜನತೆಯನ್ನು ಮೂರ್ಖರನ್ನಾಗಿ

ಮಾಡಲು ಅದನ್ನು ಬಳಸುತ್ತಿವೆ. ರಾಜ್ಯದ ಜನ ಹಾಗೂ ಅವರ ಹಿತಾಸಕ್ತಿಗಳ ಹಿನ್ನೆಲೆಯಲ್ಲೇ ಈ ಚರ್ಚೆ ನಡೆಯುತ್ತಿದೆ ಎಂಬಂತೆ ಬಿಂಬಿಸಲಾಗುತ್ತಿದೆ. ಇಂತಹ ವಿದ್ಯಮಾನದ ಹಿನ್ನೆಲೆಯಲ್ಲಿ ರಾಜಕಾರಣಿಗಳು (ದೌರ್ಜನ್ಯ ಮತ್ತು ನಕಲಿ ಎನ್‌ಕೌಂಟರ್ ಬಗೆಗಿನ) ಆರೋಪಗಳನ್ನು ಮಾಡುತ್ತಿದ್ದಾರೆ; ಹಾಗೂ ಅಫ್‌ಸ್ಪಾವನ್ನು ರದ್ದುಗೊಳಿಸಬೇಕು ಅಥವಾ ಸಡಿಲುಗೊಳಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಒಂದು ಕೈಯನ್ನು ಹಿಂದಕ್ಕೆ ಕಟ್ಟಿದ ಸ್ಥಿತಿಯಲ್ಲಿ ತಾನು ಪಾಕಿಸ್ಥಾನ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧ ಸೆಣಸಾಡಬೇಕಾಗಿದೆ ಎಂದು ಸೇನೆ ಭಾವಿಸುವಂತಾಗಿದೆ. ಅಫ್‌ಸ್ಪಾವನ್ನು ವಜಾಗೊಳಿಸಬೇಕು ಅಥವಾ ಸಡಿಲುಗೊಳಿಸಬೇಕೆನ್ನುವ ಬೇಡಿಕೆ ರಾಜ್ಯದಲ್ಲೊಂದು ರಾಜಕೀಯ ವಿಷಯವಾಗಿಬಿಟ್ಟಿದೆ; ಪಿಡಿಪಿ ಮತ್ತು ಆಳುವ ಮೈತ್ರಿಕೂಟದ ನ್ಯಾಷನಲ್ ಕಾನ್ಫರೆನ್ಸ್‌ಗಳ ವಿಷಯದಲ್ಲಿ ಇದು ಮತ್ತಷ್ಟು ನಿಜ. ಕಳೆದ ಕೆಲವು ತಿಂಗಳುಗಳಲ್ಲಿ ಸೇನೆ ಹಲವಾರು ಮಂದಿ ಅಧಿಕಾರಿಗಳನ್ನು ಕಳೆದುಕೊಂಡಿತು. ಆದರೆ ದುರದೃಷ್ಟವೆಂದರೆ ಕಾಶ್ಮೀರ ಕಣಿವೆ ಮೂಲದ ರಾಜಕೀಯ ಸಂಘಟನೆಗಳಿಂದ ಮೃತರ ಬಗ್ಗೆ

ಮೆಚ್ಚುಗೆಯ ಒಂದು ಮಾತು ಕೂಡ ಬರಲಿಲ್ಲ. ಸಶಸ್ತ್ರ ಪಡೆಗಳಿಗೆ ವಿಶೇಷ  ಅಧಿಕಾರ ನೀಡುವ ಈ ಕಾಯ್ದೆಯನ್ನು ರದ್ದುಪಡಿಸಬೇಕು ಅಥವಾ ದುರ್ಬಲಗೊಳಿಸಬೇಕು ಎಂದು ಆಗ್ರಹಿಸುವವರು, ಈಗ ಭಾರತ ಪಾಕ್‌ನ ಸಹಾಯ ಹಾಗೂ ಒತ್ತಾಸೆಯಿಂದ ನಡೆಯುತ್ತಿರುವ

ಒಂದು ಛಾಯಾ ಸಮರವನ್ನು ಎದುರಿಸುತ್ತಿದೆ ಎಂಬುದನ್ನು ಮರೆಯಬಾರದು. ನಮ್ಮ ಸೇನೆ ಇಷ್ಟಪಟ್ಟು ಈ ಕಾರ್ಯಾಚರಣೆಯಲ್ಲಿ ತೊಡಗಿರುವುದಲ್ಲ. ಪಾಕಿಸ್ಥಾನವು ಕಾಶ್ಮೀರದಲ್ಲಿ ಭಯೋತ್ಪಾದನೆಯ ಬೆಂಕಿಗೆ ತುಪ್ಪ ಸುರಿಯುತ್ತಿರುವ ಕಾರಣ ಅವರ ದುಷ್ಟ ಸಂಚುಗಳನ್ನು ವಿಫಲಗೊಳಿಸುವ ಸಲುವಾಗಿ ಮಾತ್ರ ಸೇನೆ ಅಲ್ಲಿದೆ.

ಜಮ್ಮು ಲಡಾಖ್ ಮತ್ತು ಕಾಶ್ಮೀರ

ಜಮ್ಮು-ಕಾಶ್ಮೀರ ರಾಜ್ಯವು ಮೂರು ಪ್ರಾದೇಶಿಕ ವಿಭಾಗಗಳನ್ನು ಹೊಂದದೆ. ಕಾಶ್ಮೀರ, ಜಮ್ಮು ಮತ್ತು ಲಡಾಖ್. ಈ ಪ್ರದೇಶಗಳು ಅವುಗಳದ್ದಾದ ಪ್ರಮುಖ ಮತ ಹಾಗೂ ಅನನ್ಯತೆ (ಅಸ್ಮಿತೆ)ಗಳನ್ನು ಹೊಂದಿವೆ. ಶ್ರೀನಗರ ಬೇಸಿಗೆಯ ರಾಜಧಾನಿಯಾದರೆ ಜಮ್ಮು ಚಳಿಗಾಲದ ರಾಜಧಾನಿ. ಆದರೆ ಅಧಿಕಾರವು ರಾಜಕೀಯ ಮತ್ತು ಆರ್ಥಿಕ ಚಟುವಟಿಕೆಗಳ ಕೇಂದ್ರವಾದ ಶ್ರೀನಗರದಲ್ಲೇ ಕೇಂದ್ರಿತವಾಗಿದೆ.

ಈ ವಿಭಾಗಗಳ ಸ್ಥಿತಿಗತಿ (೨೦೦೧ರ ಜನಗಣತಿಯಂತೆ) ಹೀಗಿದೆ:

ಕಾಶ್ಮೀರದ ಮುಸ್ಲಿಮರು ಒಂದು ಶ್ರೀಮಂತ ಸಮುದಾಯವಾಗಿದ್ದು, ರಾಜ್ಯದ ಆರ್ಥಿಕ ಚಟುವಟಿಕೆಗಳು ಅವರ ಹಿಡಿತದಲ್ಲೇ ಇವೆ. ಆ ಕುರಿತು ಕೆಳಗಿನ ಅಂಶಗಳನ್ನು ಗಮನಿಸಬಹುದು.

– ಕಾಶ್ಮೀರದ ಕೃಷಿಭೂಮಿಯಲ್ಲಿ ಶೇ. ೯೭.೪ರಷ್ಟು ಮುಸ್ಲಿಮರಿಗೆ ಸೇರಿದ್ದು, ಹಿಂದುಗಳು ಹಾಗೂ ಇತರರು ಶೇ. ೨.೬ಕ್ಕೆ ಸೀಮಿತವಾಗಿದೆ. ಆದರೆ ಜನಸಂಖ್ಯೆಯಲ್ಲಿ ಹಿಂದುಗಳು

ಹಾಗೂ ಇತರರು ?ಶೇ. ೧೧ರಷ್ಟಿದ್ದಾರೆ.

– ಕಾಶ್ಮೀರ ಕಣಿವೆಯ ಹಣ್ಣಿನ ತೋಟಗಳಲ್ಲಿ ಶೇ. ೯೬ರಷ್ಟು ಮುಸ್ಲಿಮರಿಗೆ ಸೇರಿದ್ದರೆ ಹಿಂದುಗಳ ಮಾಲಕತ್ವದಲ್ಲಿರುವುದು

ಶೇ. ೨.೮ರಷ್ಟು ಮಾತ್ರ.

– ಬಾದಾಮಿ, ಆಕ್ರೋಟ್‌ತಿ (ತಿಚಿಟಟಿuಣ)ನಂತಹ ರಾಜ್ಯದ ಒಣಹಣ್ಣುಗಳ ರಫ್ತು ಮುಸ್ಲಿಮರ ಏಕಸ್ವಾಮ್ಯವಾಗಿದೆ. ಹಿಂದುಗಳದ್ದು ಅದರಲ್ಲಿ ಪಾಲೇ ಇಲ್ಲ ಎಂಬಂತಹ ಸ್ಥಿತಿ.

– ಬೆಲೆಬಾಳುವ ಆಕ್ರೋಟ್ ಮತ್ತು ನೀರು ಹಬ್ಬೆ (ವಿಲ್ಲೋ) ಮರಗಳ ರಫ್ತು ಕೂಡ ಮುಸ್ಲಿಮರ ಏಕಸ್ವಾಮ್ಯವಾಗಿದೆ; ಅದರಲ್ಲಿ ಹಿಂದುಗಳ ಪಾಲು ಏನೂ ಇಲ್ಲ.

– ತೋಟಗಾರಿಕೆ ಉದ್ಯಮದಲ್ಲಿ ಸುಮಾರು ೮ ಲಕ್ಷ ಮುಸ್ಲಿಮರು ದುಡಿಯುತ್ತಿದ್ದಾರೆ. ಸುಮಾರು ೪.೮೧ ಲಕ್ಷ ತೋಟಗಳಲ್ಲಿ ಅವರು ದುಡಿಯುತ್ತಿದ್ದು, ತೋಟಗಾರಿಕೆ ಉದ್ಯಮದಲ್ಲಿರುವ ಹಿಂದುಗಳು ಶೇ. ಅರ್ಧಕ್ಕಿಂತಲೂ ಕಡಿಮೆ.

– ಕಾಶ್ಮೀರ ವಿಭಾಗದ ವಿದ್ಯುತ್ ಬಳಸುವ ಕೈಗಾರಿಕೆಗಳಲ್ಲಿ ಶೇ. ೯೮.೯ರಷ್ಟು ಮುಸ್ಲಿಮರ ಮಾರಕತ್ವದಲ್ಲಿದೆ. ಶೇ. ೦.೦೨ರಷ್ಟು ಮಾತ್ರ ಹಿಂದುಗಳಿಗೆ ಸೇರಿವೆ.

– ಕಾಶ್ಮೀರ ವಿಭಾಗದ ಕರಕುಶಲ ಕಲೆ ಮತ್ತು ಕೈಮಗ್ಗದ ಉದ್ಯಮವು ಬಹುತೇಕ ಪೂರ್ತಿಯಾಗಿ ಮುಸ್ಲಿಮರ ಸ್ವಾಮ್ಯದಲ್ಲಿದ್ದು, ೯೧,೯೪೧ ಮಂದಿಗೆ ಅದು ಉದ್ಯೋಗ ನೀಡಿದೆ; ಅವರಲ್ಲಿ ಶೇ. ೦.೪ರಷ್ಟು ಜನ ಮಾತ್ರ ಹಿಂದುಗಳು.

– ಕಾಶ್ಮೀರದಲ್ಲಿ ರೈಲ್ವೆ ಇಲ್ಲವಾದ ಕಾರಣ ರಸ್ತೆಸಾರಿಗೆ ಮಹತ್ವ ಪಡೆದುಕೊಂಡಿದೆ. ಅದರ ಮಾಲಕತ್ವ ಮುಸ್ಲಿಂ ಉದ್ಯಮಿಗಳು ಹಾಗೂ ಮುಸ್ಲಿಂ ಸಾರಿಗೆ ಸಂಸ್ಥೆಗಳಿಗೆ ಸೇರಿದೆ. ಸಿಕ್ಖರು ಶೇ. ೪.೨ರಷ್ಟು ಪಾಲನ್ನು ಹೊಂದಿದ್ದು, ಹಿಂದುಗಳ ಪಾಲು ನಗಣ್ಯ.

– ತೋಟಗಾರಿಕೆ, ಕೃಷಿ, ಕೃಷಿ ಉಪಕರಣಗಳು, ರಸಗೊಬ್ಬರ, ಕೀಟನಾಶಕ ಮುಂತಾದವುಗಳ ಬಗ್ಗೆ ರಾಜ್ಯದಲ್ಲಿ ನೀಡಲಾದ ಸಹಾಯಧನ (ಸಬ್ಸಿಡಿ) ದಲ್ಲಿ ಶೇ. ೯೪ರಷ್ಟನ್ನು ಮುಸ್ಲಿಮರೇ

ಪಡೆದುಕೊಂಡಿದ್ದಾರೆ; ಹಿಂದುಗಳಿಗೆ ದಕ್ಕಿದ್ದು ಶೇ. .೨.೪ರಷ್ಟು ಮಾತ್ರ.

– ಕೈಗಾರಿಕಾ ಸಾಲ, ರಫ್ತು, ಸ್ವಉದ್ಯೋಗ ಯೋಜನೆ ಮುಂತಾದವುಗಳಿಗೆ ಸರಕಾರ ನೀಡಿದ ಸಹಾಯಧನವನ್ನು ಬಹುತೇಕ ಪೂರ್ತಿಯಾಗಿ ಮುಸ್ಲಿಮರು ಬಾಚಿಕೊಂಡಿದ್ದಾರೆ. ಹಿಂದುಗಳಿಗೆ ದೊರೆತದ್ದು ಶೇ. ೦.೧ಕ್ಕಿಂತಲೂ ಕಡಿಮೆ.

ಉಪಸಂಹಾರ

ಗೆಲುವಿನ ಅಂಕ ಯಾರಿಗೆ ಸಿಗಬೇಕು ಎನ್ನುವುದೇ ಇದೆಲ್ಲದರ ಸಾರವಾಗಿದೆ. ಪರಿಸ್ಥಿತಿ ಹೀಗಿರುವಾಗ ಉದ್ದೇಶಿತ ಸ್ಥಳ ಮತ್ತು ಕಾಲ ಯಾವುದೆಂಬುದನ್ನು ಗಮನಿಸದಿರಲು ಅಸಾಧ್ಯ. ಕಾಶ್ಮೀರದ ವಿಷಯ ಮಾತನಾಡುವಾಗ ಪ್ರತ್ಯೇಕತಾವಾದಿ ಶಕ್ತಿಗಳು ಭಾರತ ಮತ್ತು ಪಾಕಿಸ್ಥಾನವೆನ್ನುವ ಎರಡು ದೇಶಗಳು ಅಸ್ತಿತ್ವಕ್ಕೆ ಬಂದ ೧೯೪೭ನ್ನು ಉಲ್ಲೇಖಿಸುತ್ತವೆ. ಅಯೋಧ್ಯೆಯ ರಾಮಮಂದಿರವಿರಲಿ ಅಥವಾ ಕಾಶ್ಮೀರ ಸಮಸ್ಯೆಯೇ ಇರಲಿ, ಒಂದು ಪೂರ್ಣ (hoಟisಣiಛಿ) ಹಾಗೂ ಸಾಂದರ್ಭಿಕ ಚಿತ್ರವನ್ನೇಕೆ ನಾವು  ನೋಡಬಾರದು? ಮುಸ್ಲಿಮರು

ಬಹುಸಂಖ್ಯಾತರಾಗಿದ್ದಾರೆನ್ನುವ ಕಾರಣಕ್ಕಾಗಿ ಕಾಶ್ಮೀರಕ್ಕೆ ಆಜಾದಿ (ಸ್ವಾತಂತ್ರ್ಯ) ಕೇಳುವವರು ಮೊದಲನೆಯದಾಗಿ ಕಾಶ್ಮೀರದ ಮುಸ್ಲಿಮರು ಹೇಗೆ ಮತ್ತು ಏಕೆ ಮುಸ್ಲಿಮರಾದರು. ಎನ್ನುವುದನ್ನೇಕೆ ಪರಿಶೀಲಿಸಬಾರದು? ಕಾಶ್ಮೀರದ ಭೂತಕಾಲವೇನು? ಕಳೆದ ಒಂದು ಸಾವಿರ ವರ್ಷಗಳಲ್ಲಿ ಇತಿಹಾಸ ಹೇಗೆ ಸಾಗಿಬಂದಿದೆ ಎಂಬುದನ್ನು ಗಮನಿಸದಿರಲು ಸಾಧ್ಯವಿಲ್ಲ. ಚರ್ಚೆಯ ಅಂಶಗಳನ್ನು ನಾವು ನಮ್ಮ ಮೂಗಿನ ನೇರಕ್ಕೆ ಆರಿಸಿಕೊಳ್ಳುವುದಾದರೆ ನಮಗೊಂದು ಪೂರ್ಣಚಿತ್ರ ಸಿಗುವುದಿಲ್ಲ; ಹೀಗಿರುವಾಗ ಯಾವುದೇ ಸಮಸ್ಯೆಯನ್ನು ಪರಿಹರಿಸುವುದು ದೂರವೇ ಉಳಿಯಿತು.

ಕಾಶ್ಮೀರವು ಹಿಂದುಗಳ ಒಂದು ನಾಡಾಗಿದ್ದು, ಅದರ ಮೇಲೆ ನಿರಂತರವಾಗಿ ಆಕ್ರಮಣಗಳು ನಡೆದವು; ಮೊದಲಿಗೆ ಟರ್ಕಿಯರು ನಂತರ ಮುಸ್ಲಿಮರು. ೧೯೪೭ರಲ್ಲಿ ಜಮ್ಮು-ಕಾಶ್ಮೀರದ ರಾಜ ತನ್ನ ಸಂಸ್ಥಾನವನ್ನು ಭಾರತದೊಂದಿಗೆ ಸೇರಿಸುವ ಬಗೆಗಿನ ಒಪ್ಪಂದಕ್ಕೆ

ಭಾರತ ಸರಕಾರದ ಜತೆ ಸಹಿ ಮಾಡಿದರು; ಅಲ್ಲಿಗೆ ಆ ಭೂಭಾಗದ ರಾಜಕೀಯ ಸ್ಥಾನಮಾನ ನಿರ್ಧಾರವಾದಂತಾಯಿತು. ಅದಾದ ಬಳಿಕ ಸ್ವಾಯತ್ತೆ ಅಥವಾ ಆಜಾದಿ ಬಗೆಗಿನ ಯಾವುದೇ ಬೇಡಿಕೆ ಬಂದರೆ ಅದನ್ನು ತಮ್ಮ ಕುದ್ರ ರಾಜಕೀಯ ಹಿತಾಸಕ್ತಿಗಾಗಿ ರಾಷ್ಟ್ರವಿರೋಧಿ ಶಕ್ತಿಗಳು ನಡೆಸುವ ಸಂಚು ಎಂದು ತಿಳಿಯಲಡ್ಡಿಯಿಲ್ಲ. ಆಜಾದಿ ಬಗೆಗಿನ ಯಾವುದೇ ಬೇಡಿಕೆ ಮುಂದೆ ಬಂದರೆ ಹಾಗೂ ಸ್ವಯಂ ನಿರ್ಧಾರದ ಹಕ್ಕಿಗಾಗಿ ಚಳವಳಿ ಎನ್ನುವ ಹೆಸರಿನಲ್ಲಿ ಎಲ್ಲಿಯಾದರೂ ಹಿಂಸಾಚಾರ ನಡೆದರೆ ಅದನ್ನು ಅತ್ಯಂತ ಬಿಗಿಯಾದ ಕ್ರಮಗಳಿಂದ ಮಟ್ಟಹಾಕುವುದು

ಅನಿವಾರ್ಯ. ವಿಶ್ವಸಂಸ್ಥೆಯ ಸನ್ನದಿನ ಪ್ರಕಾರ ಸ್ವಯಂನಿರ್ಧಾರದ ತತ್ವವು ವಸಾಹತು ಪ್ರದೇಶಗಳಿಗೆ ಅನ್ವಯವಾಗುತ್ತದೆಯೇ ಹೊರತು ಯಾವುದೇ ದೇಶದ ಅವಿಭಾಜ್ಯ ಅಂಗಗಳಿಗಲ್ಲ. ಅಂತಹ ಎಲ್ಲ ರಾಷ್ಟ್ರವಿರೋಧಿ ಚಟುವಟಿಕೆಗಳನ್ನು ಮಟ್ಟಹಾಕುವುದಕ್ಕೆ ಬೇಕಾದ ಬಲಪ್ರಯೋಗ ನಡೆಸಲು ಅಗತ್ಯವಾದ ಎಲ್ಲ ಅಧಿಕಾರಗಳನ್ನು ಸೇನೆ ಹಾಗೂ ಇತರ ಅರೆಸೇನಾ ಪಡೆಗಳಿಗೆ ನೀಡುವುದು ಅಗತ್ಯ.

ತುಷ್ಟೀಕರಣ ಮತ್ತು ರಿಯಾಯಿತಿಗಳಿಂದ ಕೆಲಸ ಆಗುವುದಿಲ್ಲ. ಕಾಶ್ಮೀರದ ವಿಷಯದಲ್ಲಿ ನಾವಿದನ್ನು ಕಳೆದ ೬೩ ವರ್ಷಗಳಲ್ಲಿ ಕಂಡಿದ್ದೇವೆ. ದಶಕದಿಂದ ದಸಕಕ್ಕೆ ಈ ಪರಿಸ್ಥಿತಿ ಬಿಗಡಾಯಿಸುತ್ತಾ ಬಂದಿದೆ. ಕೈಯಲ್ಲಿ ಕಲ್ಲುಗಳನ್ನು ಹಿಡಿದ ಒಂದು ಗುಂಪಿಗೆ ನಾವು ಶರಣಾಗುತ್ತೇವಾದರೆ ಬಲಿಷ್ಠರಾಷ್ಟ್ರವಾಗುವತ್ತ ನಾವು ಮುಖ ಮಾಡಿದ್ದೇವೆ ಎಂದುಕೊಳ್ಳುವುದಕ್ಕೆ ನಮಗೆ ಯಾವ ಹಕ್ಕೂ ಇರುವುದಿಲ್ಲ.

ಆಜಾದ್ ಕಾಶ್ಮೀರ ಎಂದರೆ ಕಾಶ್ಮೀರಿಗಳಿಗೆ ಸ್ವಾತಂತ್ರ್ಯ ಎಂದರ್ಥವಲ್ಲ ಎಂಬುದನ್ನು ನಾವು ಅರ್ಥವಿಸಿಕೊಳ್ಳಬೇಕು. ಅದು ಕಾಶ್ಮೀರವನ್ನೊಂದು ಮುಸ್ಲಿಂ ಮತೀಯ ರಾಷ್ಟ್ರ ಮಾಡುವುದಕ್ಕೆ ನೀಡುವ ಸ್ವಾತಂತ್ರ್ಯವಾಗಲಿದ್ದು, ಅದರಿಂದ ಕಾಶ್ಮೀರವು ಪಾಕಿಸ್ತಾನ್ ಇಸ್ಲಾಮಿಕ್ ಗಣರಾಜ್ಯದ ಒಂದು ಉಪಗ್ರಹವಾಗಲಿದೆ. ಜಮ್ಮು-ಕಾಶ್ಮೀರಕ್ಕೆ ಯಾವುದೇ ಬಗೆಯ ಸ್ವಾಯತ್ತೆಯನ್ನು ನೀಡುವುದೆಂದರೆ ಭಾರತ ಪಾಕಿಸ್ಥಾನದ ಜೆಹಾದಿ ಯಂತ್ರದ ಮುಂದೆ ಮಂಡಿಯೂರಿದಂತೆ. ಕೇಂದ್ರ ಸರಕಾರವು ಮಧ್ಯ ಪ್ರವೇಶಿಸಿ ಎಲ್ಲ ಬಣ್ಣದ ಪ್ರತ್ಯೇಕತಾವಾದಿಗಳನ್ನು ದಿಟ್ಟವಾಗಿ ಮಟ್ಟಹಾಕುವುದು ಪ್ರಾಯಶಃ ಇದಕ್ಕಿರುವ ಏಕೈಕ ಪರಿಹಾರವಾಗಿದೆ. ದೇಶದಲ್ಲಿ ಶಕ್ತಿಶಾಲಿಯಾದ ರಾಷ್ಟ್ರೀಯತಾ ಭಾವನೆಯನ್ನು ತುಂಬುವುದು ಇದಕ್ಕಿರುವ ದೀರ್ಘಾವಧಿ ಪರಿಹಾರೋಪಾಯವಾಗಿದೆ. ಅಂಥದೇ ಭಾವನೆಯ ಮೂಲಕ ನಾವು ಬ್ರಿಟಿಷರಿಂದ ರಾಜಕೀಯ ಸ್ವಾತಂತ್ರ್ಯವನ್ನು ಗಳಿಸಿದೆವು. ಜಮ್ಮು-ಕಾಶ್ಮೀರವನ್ನು ಬಿಟ್ಟುಕೊಡುವುದೆಂದರೆ ಆ ಸ್ವಾತಂತ್ರ್ಯವನ್ನೇ ಬಿಟ್ಟುಕೊಟ್ಟಂತೆ.

ಮುಸ್ಲಿಮರು ಬಹುಸಂಖ್ಯಾತರಾಗಿರುವ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರು ಹಿಂದುಗಳು ಮತ್ತು ಸಿಕ್ಖರ ನರಮೇಧ ನಡೆಸಿ ಹಾಗೆಯೇ ಪಾರಾಗುತ್ತಿದ್ದಾರೆ. ಕೇಂದ್ರ ಸರಕಾರ

ಇದಕ್ಕೆ ಮೂಕಪ್ರೇಕ್ಷಕವಾಗಿದೆ. ಪ್ರತ್ಯೇಕತಾವಾದಿಗಳು ಮತ್ತು ಕೋಮುವಾದಿಗಳೆಂಬ ರೀತಿಯಲ್ಲಿ ಅಡಗಿಕೊಂಡಿರುವ ಭಯೋತ್ಪಾದಕರು ಸೇರಿದಂತೆ ಕಾಶ್ಮೀರದ ಯಾರಿಗಾದರೂ

ಇವತ್ತು ಭಾರತದ ಭಾಗವಾಗಿರಲು ಮನಸ್ಸಿಲ್ಲ ಎಂದಾದರೆ ಅವರು ಸದ್ದಿಲ್ಲದೆ ಪಾಕಿಸ್ಥಾನ ಅಥವಾ ಬೇರೆ ಯಾವುದಾದರೂ ದೇಶಕ್ಕೆ ವಲಸೆ ಹೋಗುವುದು ಒಳಿತು.

ಈಗ ಪಾಕಿಸ್ಥಾನ ಅಥವಾ ಹುರಿಯತ್‌ನೊಂದಿಗೆ ಮಾತುಕತೆ ನಡೆಸುವ ಮೂಲಕ ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲವೆಂದು ಸುಬ್ರಹ್ಮಣ್ಯಮ್ ಸ್ವಾಮಿ ಅವರು ಸ್ಪಷ್ಟವಾಗಿಯೇ ಹೇಳಿದ್ದಾರೆ. ಏಕೆಂದರೆ ಈಗ ಪಾಕ್‌ಸೇನೆಯ ಹೆಚ್ಚಿನ ಕ್ಯಾಪ್ಟನ್‌ಗಳು ಮತ್ತು ಕರ್ನಲ್‌ಗಳು ನಿಷ್ಠೆ ಹೊಂದಿರುವುದು ತಾಲಿಬಾನಿಗೆ. ಮುಂದಿನ ಐದು ವರ್ಷಗಳಲ್ಲಿ ಅವರು

ಪದೋನ್ನತಿ ಹೊಂದಿ ಸೇನೆಯ ದಳಗಳ ಕಮಾಂಡರ್ ಹಂತಕ್ಕೆ ತಲಪುತ್ತಾರೆ. ಪಾಕಿಸ್ಥಾನ್ ಸರಕಾರ ಸೇನೆಯ ಏಳು ದಳ ಕಮಾಂಡರ್‌ಗಳ ಹಿಡಿತದಲ್ಲಿದೆ. ಆದ್ದರಿಂದ ಪಾಕಿಸ್ಥಾನದಲ್ಲಿ

ತಾಲಿಬಾನ್ ಸರಕಾರ ಅಸ್ತಿತ್ವಕ್ಕೆ ಬರುವುದು ಅನಿವಾರ್ಯವೆನಿಸಿದೆ ಮತ್ತು ಅದೇ ವೇಳೆ ಭಾರತದ ವಿರುದ್ಧ ಜಿಹಾದ್ ನಡೆಯುವುದು ಅದರ ತರ್ಕಬದ್ಧ ಪರಿಣಾಮವಾಗಿದೆ. ಇನ್ನೊಂದೆಡೆ ಹುರಿಯತ್ ಪಾಕಿಸ್ಥಾನದ ವಿರುದ್ಧ ಹೋಗಲಾರದು. ಒಟ್ಟಿನಲ್ಲಿ ಜಿಹಾದಿಗಳು ಕಾಶ್ಮೀರಕ್ಕಾಗಿ ನಡೆಸುವ ಹೋರಾಟವನ್ನು ಕೇವಲ ಸ್ವಾತಂತ್ರ್ಯಕ್ಕಾಗಿ ನಡೆಯುವ ಹೋರಾಟ ಎನ್ನುವಂತಿಲ್ಲ.

ಅದಲ್ಲದೆ ಪ್ರತ್ಯೇಕತಾವಾದಿಗಳು ಇಲ್ಲೊಂದು ದಾರುಲ್-ಇಸ್ಲಾಂ ಅಸ್ತಿತ್ವಕ್ಕೆ ಬರುವುದನ್ನು ಬಯಸುತ್ತಿದ್ದಾರೆ. ಹಿಂದುಗಳು ಈ ದಾಳಿಯ ವಿಶೇಷ ಗುರಿಯಾಗಿದ್ದಾರೆ. ಏಕೆಂದರೆ ಇರಾನ್, ಇರಾಕ್, ಈಜಿಪ್ಟ್ ಮತ್ತಿತರ ದೇಶಗಳು ಮುಸ್ಲಿಂ ಬಹುಸಂಖ್ಯಾತವಾದರೂ ಭಾರತ

ಸಾವಿರ ವರ್ಷಗಳ ಹತ್ಯಾಕಾಂಡ, ಹಿಂಸೆ ಹಾಗೂ ಸ್ತ್ರೀಯರ ವಿರುದ್ಧ ಅಸಂಖ್ಯಾತ ಅಮಾನುಷ ದೌರ್ಜನ್ಯಗಳು ನಡೆದ ಬಳಿಕವೂ ಹಿಂದೂ ಬಹುಸಂಖ್ಯಾತವಾಗಿಯೇ ಉಳಿದುಕೊಂಡಿದೆ. ಮುಸ್ಲಿಂ ಭಯೋತ್ಪಾದಕರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಹಾಗೂ ರಾಜಿ ಏರ್ಪಡಿಸುವುದೆಂದರೆ ಆತ್ಮಘಾತುಕ ಮತ್ತು ಸೋಲನ್ನು ಆಹ್ವಾನಿಸಿದಂತೆ. ಪ್ರತಿ ಸಮರವೇ ಇದಕ್ಕಿರುವ ದಾರಿಯಾಗಿದ್ದು, ಕಾಶ್ಮೀರದಿಂದಲೇ ಅದು ಆರಂಭವಾಗಬೇಕು. ಕಾಶ್ಮೀರದ

ಆಕ್ರಮಿತ ಪ್ರದೇಶಗಳನ್ನು ಮರಳಿ ವಶಪಡಿಸಿಕೊಳ್ಳುವುದು ಮತ್ತು ಭಾರತವು ಮುಸ್ಲಿಮರ ಪಾಲಿಗೆ ದಾರುಲ್ ಅಹದ್ ಮಾತ್ರ ಆಗಲು ಸಾಧ್ಯ ಎನ್ನುವುದು ಜಿಹಾದಿಗಳಿಗೆ ಮನವರಿಕೆ ಆದಾಗ ಬಹುಕಾಲದಿಂದ ಆಗಬೇಕಿದ್ದ ಹಿಂದೂ ಪುನರುತ್ಥಾನಕ್ಕೆ ಘೋಷಣೆ ದೊರೆಯುತ್ತದೆ.

ಜಮ್ಮು-ಕಾಶ್ಮೀರದಲ್ಲಿ ಸ್ವಲ್ಪ ಸಮಯ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಬೇಕು. ಕಾಶ್ಮೀರವು ಭಾರತದ ಅವಿಭಾಜ್ಯ ಮತ್ತು ಸ್ವಂತ ಅಂಗ ಎಂದು ಎದುರಿನವರು ಒಪ್ಪಿಕೊಳ್ಳುವ ತನಕವೂ ಕಾಶ್ಮೀರವನ್ನು ಕುರಿತ ಯಾವುದೇ ಮಾತುಕತೆಯಲ್ಲಿ ಭಾರತ ಪಾಲ್ಗೊಳ್ಳಬಾರದು. ರಾಜ್ಯದ

ಭವಿಷ್ಯಕ್ಕೆ ಸಂಬಂಧಿಸಿ ಅದು ನಮ್ಮೊಂದಿಗೇನೇ ಇರುತ್ತದೆ ಎಂಬ ಬಗ್ಗೆ ಭಾರತದ ಜನತೆ ಸದಾ ಬೆಂಬಲಕ್ಕಿದ್ದಾರೆ ಎನ್ನುವ ವಿಷಯದಲ್ಲಿ ಕಾಶ್ಮೀರಿಗಳ ಮನಸ್ಸಿನಲ್ಲಿ ಯಾವುದೇ ಸಂದೇಹಕ್ಕೆ ಎಡೆ ಇರಬಾರದು. ಪ್ರತಿಯೊಬ್ಬ ಭಾರತೀಯನಿಗೂ ಕಾಶ್ಮೀರದಲ್ಲಿ ಹಕ್ಕಿದೆ.

ಹತ್ತು ಲಕ್ಷದಷ್ಟು ಮಾಜಿ ಸೈನಿಕರು ಮತ್ತಿತರ ಕುಟುಂಬಗಳನ್ನು ಕಾಶ್ಮೀರ ಕಣಿವೆಗೆ ಕಳುಹಿಸಿ ಅಲ್ಲಿ ಪುನರ್ವಸತಿಗೆ ಅವಕಾಶ ಕಲ್ಪಿಸುವ ಮೂಲಕ ಕಾಶ್ಮೀರಿ ಪಂಡಿತರನ್ನು ಆ ರಾಜ್ಯದಿಂದ ಉಚ್ಚಾಟನೆಗೊಳಿಸಿದ’ ಪಾಪದ ಪರಿಮಾರ್ಜನೆ ಆಗಬೇಕು. ಆ ಉದ್ದೇಶಕ್ಕಾಗಿ ಸಂವಿಧಾನದ

೩೭೦ನೇ ವಿಧಿಯನ್ನು ವಜಾಗೊಳಿಸಬೇಕು. ಸಂವಿಧಾನದ ಪ್ರಕಾರವೇ ಅದೊಂದು ‘ತಾತ್ಕಾಲಿಕ ವ್ಯವಸ್ಥೆ’ಯಾಗಿದ್ದು, ಅದರ ತಿದ್ದುಪಡಿಗೆ ಲೋಕಸಭೆಯ ಮೂರನೇ ಎರಡು ಬಹುಮತದಅಗತ್ಯವಿಲ್ಲ. ಕೇಂದ್ರ ಸಚಿವ ಸಂಪುಟದ ಶಿಫಾರಸ್ಸಿನ ಮೇರೆಗೆ ಕೇವಲ ರಾಷ್ಟ್ರಪತಿಯ

ಅಧಿಸೂಚನೆಯಿಂದ ಅದನ್ನು ಅಳಿಸಿಹಾಕಬಹುದು.

ಸ್ವಾಯತ್ತೆ ಹಾಗೂ ಆಜಾದಿಯ ನೆಪದಲ್ಲಿ ಜಮ್ಮು-ಕಾಶ್ಮೀರದ ರಾಜಕೀಯ ನಾಯಕರ ಒಂದು ಗುಂಪು ಕಾಶ್ಮೀರವನ್ನೊಂದು ಮುಸಲ್ಮಾನ ರಾಜ್ಯ ಮಾಡಲು ಹೊರಟಿದೆ. ಅಂತಹ ರಾಜ್ಯ ಯಾವಾಗಲೂ ಭಾರತದ ವಿರೋಧಿ ಮತ್ತು ಪಾಕಿಸ್ಥಾನದ ಬೆಂಬಲಿಗ ಆಗದೆ ಇರಲಾರದು. ಆದ್ದರಿಂದ ಜಮ್ಮು-ಕಾಶ್ಮೀರಕ್ಕೆ ‘ಸ್ವಾಯತ್ತೆ’ ಎನ್ನುವಾಗ ನಾವು ಇನ್ನಷ್ಟು ವಿಕೇಂದ್ರಿಕರಣದ ಕುರಿತು ಹೇಳುತ್ತಿರುವುದಲ್ಲ. ಜಮ್ಮು-ಕಾಶ್ಮೀರದ ಜನತೆಗೆ ಯಾವುದೋ

ಒಂದು ಹಕ್ಕನ್ನು ವಂಚಿಸಲಾಗಿದೆ ಎನ್ನುವ ವಿಷಯ ಕೂಡ ಇದಲ್ಲ. ಹಾಗೆಯೇ ಯಾವುದೇ ವಂಚಿಸಲಾಗಿದೆ ಎನ್ನುವ ವಿಷಯ ಕೂಡ ಇದಲ್ಲ. ಹಾಗೆಯೇ ಯಾವುದೇ ನಾಗರಿಕ ಸಮಾಜ

ಅಥವಾ ಜನತೆ ಹೊಂದಿರಬೇಕಾದ ಯಾವುದಾದರೊಂದು ಸ್ವಾತಂತ್ರ್ಯ ಕೂಡ ಅಲ್ಲಿ ಚರ್ಚಿತವಾಗುವುದಲ್ಲ. ದೇಶದ ಒಂದು ರಾಜ್ಯವಾದ ಜಮ್ಮು-ಕಾಶ್ಮೀರವನ್ನು ಒಕ್ಕೂಟ ಸ್ವರೂಪ ಸೇರಿದಂತೆ ಭಾರತದ ಸಂವಿಧಾನದ ಇಡೀ ವ್ಯವಸ್ಥೆಯಿಂದ ಹೊರಗಿಡುವ ಬಗ್ಗೆ ನಾವು

ಮಾತನಾಡುತ್ತಿದ್ದೇವೆ ಎಂದರ್ಥ.

ತಮ್ಮ ಸ್ವಾಯತ್ತೆಗೆ ಕೊರತೆ ಬಂದ ಕಾರಣ ಆಳವಾದ ಪರಕೀಯತೆ ತಮ್ಮನ್ನು ಕಾಡುತ್ತಿದೆ ಎಂದು ಪ್ರತ್ಯೇಕತಾವಾದಿ ನಾಯಕರು ಅಥವಾ ಮುಖ್ಯವಾಹಿನಿಯ ನಾಯಕರು ಹೇಳುತ್ತಿದ್ದಾರೆಂದರೆ ಅವರು ಮುಖ್ಯವಾಗಿ ಭಾರತದ ಹೊರಗೆ ಅಥವಾ ಒಳಗೆ ಮುಸ್ಲಿಂ

ರಾಷ್ಟ್ರವೊಂದನ್ನು ರಚಿಸುವ ತಮ್ಮ ಹಕ್ಕಿಗೆ ಚ್ಯುತಿ ಬಂದಿದೆ ಎನ್ನುತ್ತಿದ್ದಾರೆಂದು ನಾವು ಅರ್ಥವಿಸಿಕೊಳ್ಳಬೇಕು. ಇವತ್ತು ಕಾಶ್ಮೀರ ಅದೇ ರೋಗದಿಂದ ಬಳಲುತ್ತಿದೆ. ಈ ಕೋಮುವಾದಿ ಸಿದ್ಧಾಂತವು ಉಚ್ಚಾಟನೆಯ ರಾಜಕೀಯವನ್ನು ಪೋಷಿಸಿದೆ. ಅದರ

ಹಿನ್ನೆಲೆಯಲ್ಲಿ ಬಂದೂಕಿನ ಬೆದರಿಕೆಯೊಡ್ಡಿ ಕಾಶ್ಮೀರಿ ಹಿಂದುಗಳನ್ನು ರಾಜ್ಯದಿಂದ ಹೊರಹಾಕಲಾಗಿದೆ. ಈ ಕೋಮುವಾದಿ ಸಿದ್ಧಾಂತಕ್ಕೆ ಮೂಲಭೂತವಾದಿಗಳೆಂದರೆ ಇಷ್ಟ, ಜಿಹಾದ್‌ನಲ್ಲಿ ಅದು ಹೆಮ್ಮೆಪಡುತ್ತದೆ.

ಕೋಮುವಾದಿಗಳ ಕಪಿಮುಷ್ಟಿಯಲ್ಲಿ ಇರುವ ತನಕವೂ ಕಾಶ್ಮೀರ ಭಾರತದಿಂದ ದೂರವಿರುತ್ತದೆ. ಸ್ವಾಯತ್ತೆಯ ಪರಿಕಲ್ಪನೆಯಲ್ಲಿ ಜಾತ್ಯಾತೀತತೆಗೆ ಅವಕಾಶವಿಲ್ಲ. ಒಂದು ಕೋಮುವಾದಿ ಸಿದ್ಧಾಂತಕ್ಕೆ ಜಾತ್ಯತೀತತೆಯ ಕ್ರಮಬದ್ಧತೆಯನ್ನು ದಯಪಾಲಿಸಿರುವುದು

ದೇಶದ ರಾಜಕೀಯ ವ್ಯವಸ್ಥೆಯ ವೈಫಲ್ಯವಾಗಿದೆ. ಯಾವಾಗ ಕೂಡ ಅದನ್ನು ಪ್ರಶ್ನಿಸಲು ಯತ್ನಿಸದಿರುವುದು ದೇಶದ ವೈಫಲ್ಯದ ಕುರುಹಾಗಿದೆ.

ಕಾಶ್ಮೀರ ಹೋರಾಟವು ಒಂದು ಮತೀಯ ಜನಾಂಗೀಯ ಉಚ್ಚಾಟನೆ ಪ್ರಕ್ರಿಯೆಯಾಗಿದ್ದು, ಇಸ್ಲಾಮಿಕ್ ರಾಷ್ಟ್ರಸ್ಥಾಪನೆ ಅದರ ಉದ್ದೇಶವಾಗಿದೆ. ಇಸ್ಲಾಮಿಕ್ ಗಣರಾಜ್ಯವನ್ನು ಕುರಿತ ಗೀಲಾನಿ ಅವರ ಎಲ್ಲ ಹೇಳಿಕೆಗಳು ಪಾಕಿಸ್ಥಾನಕ್ಕೆ ಬೆಂಬಲ ಮತ್ತು ಭಾರತದ ಆಳ್ವಿಕೆಯಿಂದ ಸ್ವತಂತ್ರವಾಗುವುದಕ್ಕೆ ಒತ್ತು ನೀಡುತ್ತಾ ಬಂದಿವೆ. ಪ್ರತ್ಯೇಕತಾವಾದಿಗಳ

ಆಂದೋಲನವು ಸ್ವಾತಂತ್ರ್ಯ (ಆಜಾದಿ)ಕ್ಕಾಗಿ ನಡೆಸುತ್ತಿರುವ ಜಾತ್ಯಾತೀತ ಆಂದೋಲನವಲ್ಲ. ಹಳೆತಲೆಮಾರಿನ ಗೀಲಾನಿಯಿಂದ ಆರಂಭಿಸಿ ಹೊಸ ತಲೆಮಾರಿನ ನಾಯಕ ಮಸರತ್ ಆಲಂನವರೆಗಿನ ಎಲ್ಲ ಪ್ರತ್ಯೇಕತಾವಾದಿಗಳ ಆಂದೋಲನವು ಸ್ವಾತಂತ್ರ್ಯ (ಆಜಾದಿ)ಕ್ಕಾಗಿ ನಡೆಸುತ್ತಿರುವ ಜಾತ್ಯತೀತ ಆಂದೋಲನವಲ್ಲ. ಹಳೆತಲೆಮಾರಿನ ಗೀಲಾನಿಯಿಂದ ಆರಂಭಿಸಿ ಹೊಸ ತಲೆಮಾರಿನ ನಾಯಕ ಮಸರತ್ ಆಲಂನವರೆಗಿನ ಎಲ್ಲ ಪ್ರತ್ಯೇಕತಾವಾದಿಗಳು ದ್ವೇಷ ಮತ್ತು

ಭಯದ ಸಂದೇಶದ ಪ್ರಸಾರಕ್ಕೆ ಮಸೀದಿಗಳನ್ನೇ ಬಳಸುತ್ತಿದ್ದಾರೆ. ಫಖ್ತು, ಮಸರತ್ ಆಲಂ ಹಾಗೂ ಅಂದ್ರಬಿಯಂತಹ ಹೊಸ ನಾಯಕರು ಇಸ್ಲಾಂನಲ್ಲಿ ಗಾಢ ವಿಶ್ವಾಶ ಉಳ್ಳವರಾಗಿದ್ದಾರೆ.

ಪ್ರತ್ಯೇಕತಾವಾದಿ ನಾಯಕರು ಕಾಶ್ಮೀರದಲ್ಲೊಂದು ದಾರುಲ್-ಇಸ್ಲಾಮ್ ಸ್ಥಾಪನೆಯಾಗಬೇಕೆಂದು ಬಯಸುತ್ತಾರೆ. ಹಿಂದಿನ ಸುಮಾರು ಒಂದು ಸಾವಿರ ವರ್ಷಗಳಲ್ಲಿ ಮತ್ತು ವಿಶೇಷವಾಗಿ ಕಳೆದ ಇಪ್ಪತ್ತು ವರ್ಷಗಳಲ್ಲಿ ಇಸ್ಲಾಂವಾದಿ ಶಕ್ತಿಗಳು ಪೂರ್ಣ ಮತೀಯ ಜನಾಂಗೀಯ ವಿನಾಶದ ಮೂಲಕ ತಮ್ಮ ಉದ್ದೇಶಕ್ಕೆ ಒಪ್ಪಿಗೆ ಪಡೆದುಕೊಳ್ಳುವ

ಹವಣಿಕೆಯಲ್ಲಿವೆ. ಕಾಶ್ಮೀರದಲ್ಲಿ ಜನಾಭಿಪ್ರಾಯವನ್ನು ಸಂಗ್ರಹಿಸಬೇಕೆಂದು ಅವರು ಒತ್ತಾಯಿಸುತ್ತಾರೆ. ಏಕೆಂದರೆ ಅಲ್ಲೀಗ ಉಳಿದಿರುವ ಹಿಂದುಗಳ ಸಂಖ್ಯೆ ಅತ್ಯಂತ ಕಡಿಮೆ ಇದೆ. ಜಮ್ಮು-ಕಾಶ್ಮೀರದಲ್ಲಿ ಒಟ್ಟು ಸುಮಾರು ೬೦ ಸಾವಿರ ಸಿಕ್ಖರಿದ್ದಾರೆ. ತಾವು ಕೂಡ ಕಾಶ್ಮೀರವನ್ನು ತೊರೆಯುವುದಾಗಿ ಅವರು ಹೇಳುತ್ತಿದ್ದಾರೆ; ಇಲ್ಲವಾದರೆ ಅವರ ಸಾಮೂಹಿಕ ಹತ್ಯೆಯಾಗುವ ಭೀತಿಯಿದೆ.

ಕಲ್ಲು ತೂರಾಟ, ಜಿಹಾದ್ ಮತ್ತು ಜನಾಂಗೀಯ ಹತ್ಯೆಗಳು ಅವುಗಳಷ್ಟಕ್ಕೇ ನಡೆಯುವಂಥವಲ್ಲ; ನಿಜವೆಂದರೆ ಅವುಗಳನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ. ಮಸರತ್ ಆಲಂನಂತಹ ಪ್ರತ್ಯೇಕತಾವಾದಿ ನಾಯಕರು ಪ್ರತಿಭಟನಾ ಚಳವಳಿಗಳ ಬಗ್ಗೆ

ಪ್ರತಿವಾರ ಕ್ಯಾಲೆಂಡರ್ ಬಿಡುಗಡೆ ಮಾಡುತ್ತಿದ್ದಾರೆ. ಗೀಲಾನಿಯ ಗೂಂಡಾಗಳು ಮೋಟಾರುಸೈಕಲ್‌ಗಳಲ್ಲಿ ಸಂಚರಿಸುತ್ತಾ ಬಂದ್‌ಗಳನ್ನು ಜಾರಿಗೊಳಿಸುತ್ತಿದ್ದಾರೆ. ಈ ರಾಷ್ಟ್ರವಿರೋಧಿ ಚಟುವಟಿಕೆಗಳಿಗೆ ಪೂರ್ಣಬೆಂಬಲ ನೀಡುವ ಸಲುವಾಗಿ ಯೂರೋಪ್ ಮತ್ತು ಪಾಕಿಸ್ತಾನಗಳಿಂದ ಹಣದ ಹೊಳೆ ಹರಿದು ಬರುತ್ತಿದೆ ಎನ್ನುವುದಕ್ಕೆ ಗೃಹಖಾತೆಯ ಬಳಿ ಸಾಕಷ್ಟು ಪುರಾವೆಗಳಿವೆ.

ಪೊಲೀಸರು ಮತ್ತು ಕೇಂದ್ರೀಯ ಪಡೆಗಳು ಅಗತ್ಯಕ್ಕಿಂತ ಹೆಚ್ಚಿನ ಸಂಯಮವನ್ನೇ ತೋರಿಸಿವೆ. ಉಗ್ರರು ಪೊಲೀಸರ ಮನೆಗಳನ್ನು ಸುಟ್ಟಿದ್ದಾರೆ ಮತ್ತು ಸುಮಾರು ೧,೨೦೦ ಮಂದಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರು ಪೆಟ್ರೋಲ್ ಬಾಂಬ್‌ಗಳನ್ನು

ಬಳಸಿದ್ದನ್ನು ಎಪಿ ಸಂಸ್ಥೆಯ ಛಾಯಾಚಿತ್ರಗಳು ಬಯಲುಗೊಳಿಸಿವೆ. ಪ್ರಮುಖ ದುಷ್ಕರ್ಮಿಗಳು ರಾಜಕೀಯ ಆದೇಶಗಳ ಬಲದಿಂದ ಪಾರಾಗಿ ಹೋಗಿದ್ದಾರೆ. ತಮ್ಮ ಕೈಗಳನ್ನು ಕಟ್ಟಿ ಹಾಕಿದಂತಾಗಿದೆ ಎಂದು ಸ್ಥಳೀಯ ಮುಸ್ಲಿಂ ಪೊಲೀಸರು ದೂರಿಕೊಂಡಿದ್ದಾರೆ. ಪ್ರತಿಭಟನಕಾರರು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಆರ್‌ಪಿಎಫ್)ಯಯೋಧರಿಗೆ  ಧಳಿಸಿದ ಬಗ್ಗೆ ತನಗೆ ಮಾಹಿತಿಗಳು ಬಂದಿವೆ ಎಂದು ಸ್ವತಃ ಮುಖ್ಯಮಂತ್ರಿಯವರೇ ಒಪ್ಪಿಕೊಂಡಿದ್ದಾರೆ.

ಅರೆಸ್ವತಂತ್ರ ಮುಸ್ಲಿಂ ರಾಜ್ಯವೊಂದು ಅಸ್ತಿತ್ವಕ್ಕೆ ಬಂದರೆ ಈ ಕೆಳಗಿನ ಪರಿಣಾಮಗಳು ತಲೆದೋರಬಹುದು. ಭಾರತದೊಳಗೆ ವಜಿರಿಸ್ತಾನದಂತಹ ಒಂದು ಭೂಪ್ರದೇಶ ಅಸ್ತಿತ್ವಕ್ಕೆ

ಬರಬಹುದು; ಅಲ್ಲಿನ ಜನರಿಗೆ ಭಯೋತ್ಪಾದನೆಯ ಹಾದಿ ಹಿಡಿಯುವುದು ತುಂಬ ಸುಲಭವಾಗಬಹುದು. ಅದರಿಂದ ಭಾರತ ಮಾತ್ರವಲ್ಲ, ಜಗತ್ತಿನ ಇತರ ಭಾಗಗಳ ಭದ್ರತೆಯ ಮೇಲೆ ಕೂಡ ಭೀಕರ ಪರಿಣಾಮಗಳಾಗಬಹುದು. ಭಾರತದ ನದಿನೂರುಗಳಿಗೆ ಅಪಾಯ

ಎದುರಾಗಬಹುದು; ಅದಾದಲ್ಲಿ ಸುಮಾರು ೫೦ ಕೋಟಿ ಭಾರತೀಯರ ಜೀವಕ್ಕೇನೇ ಅಪಾಯ ಬಂದೀತು; ಏಕೆಂದರೆ ನಾವು ಈಗಾಗಲೆ ನೀರಿನ ಅಭಾವವನ್ನು ಎದುರಿಸುತ್ತಿದ್ದೇವೆ. ೧೯೪೭ರ ಅಕ್ಟೋಬರ್‌ನಲ್ಲಿ ಸಂಭವಿಸಿದಂತೆ ಪಾಕಿಸ್ಥಾನದಿಂದ ಯುದ್ಧಘೋಷಣೆಯಾಗಬಹುದು. ಈ

ಬಾರಿ ಪರಮಾಣು ಯುದ್ಧ ಸಂಭವಿಸಿದರೆ ಆಶ್ಚರ್ಯವಿಲ್ಲ. ಭಾರತ ಮತ್ತು ಪಾಕಿಸ್ಥಾನಗಳ ನಡುವಣ ಭಾರತದ ಉತ್ತರ ಗಡಿ ಪೂರ್ತಿಗಾಗಿ ನಮ್ಮ ಕೈಯಿಂದ ತಪ್ಪಿಹೋಗಬಹುದು. ಆದ್ದರಿಂದ ಯಾವುದೇ ವಿಷಾಧಿಕಾರ ನೀಡದೆ, ಕಾಶ್ಮೀರ, ಲಡಾಖ್ ಮತ್ತು

ಜಮ್ಮುಗಳನ್ನು ಭಾರತದೊಂದಿಗೆ ಬೆಸೆಯುವ ಕೆಲಸ ತಡವಿಲ್ಲದೆ ಆಗಬೇಕು. ಕಣಿವೆಯಲ್ಲಿ ಜಿಹಾದಿ ಪ್ರವೃತ್ತಿಗೆ ತಡೆಯೊಡ್ಡುವ ಸಲುವಾಗಿ ದೇಶದ ಇತರ ರಾಜ್ಯಗಳ ಜನರಿಗೆ ಅಲ್ಲಿ ಪುನರ್ವಸತಿಯನ್ನು ಏರ್ಪಡಿಸಬೇಕು. ಭಾರತ-ಪಾಕಿಸ್ಥಾನ್ ನಡುವಣ ಗಡಿತಂಟೆಗಳನ್ನು ಕೆಲವು ಹೊಂದಾಣಿಕೆಗಳೊಂದಿಗೆ ಇತ್ಯರ್ಥಪಡಿಸಿಕೊಳ್ಳಬೇಕು.

ಇತಿಹಾಸದ ಕಾಲಘಟ್ಟದಲ್ಲಿ ಜಮ್ಮು ಮತ್ತು ಕಾಶ್ಮೀರ

ಸುಮಾರು ಕ್ರಿ.ಪೂ. ೩೦೦೦: ಮಹಾಭಾರತದಲ್ಲಿ ಕಾಶ್ಮೀರ ವಂಶದ                                 ಉಲ್ಲೇಖ.

ಕ್ರಿ.ಪೂ. ೨೬೨೯-೨೫೬೪: ರಾಜಾ ಸಂಧಿಮಾನ್ ಆಳ್ವಿಕೆ

ಕ್ರಿ.ಪೂ. ೨೦೮೨-೨೦೪೧: ರಾಜಾ ಸುಂದರ ಸೇನ್‌ನ ಆಳ್ವಿಕೆ

ಕ್ರಿ.ಪೂ. ೧೦೪೮-೧೦೦೮: ರಾಜಾನರನ ಆಳ್ವಿಕೆ

ಕ್ರಿ.ಪೂ. ೨೫೦: ಚಕ್ರವರ್ತಿ ಅಶೋಕನಿಂದ ಪ್ರಾಚೀನ ರಾಜಧಾನಿ     ಪಂಧ್ರೇನಾಥನ ಬಳಿ ಶ್ರೀನಗರಿಯ (ಇವತ್ತಿನ ಶ್ರೀನಗರ ಆ ಶ್ರೀನಗರಿಯಿಂದ ಸುಮಾರು ೫ ಕಿ.ಮೀ. ದೂರದಲ್ಲಿದೆ.) ಸ್ಥಾಪನೆ.

ಕ್ರಿ.ಶ. ೭ನೇ ಶತಮಾನ ರಾಜಾ ಲಲಿತಾಧಿತ್ಯನು ಪ್ರಸಿದ್ಧ ಸೂರ್ಯದೇವಾಲಯವನ್ನು ಕಟ್ಟಿಸಿದನು ಮತ್ತು ಪರಿಹಾಸಪುರ ನಗರವನ್ನು ನಿರ್ಮಿಸಿದನು.

೮೧೩-೮೫೦: ರಾಜಾ ಅಜಾತಮೀಡನ ಆಳ್ವಿಕೆಯ ಕಾಲದಲ್ಲಿ ಪದ್ಮ ಎಂಬಾತನು ಪಾಂಪುರವನ್ನು ಸ್ಥಾಪಿಸಿದನು.

೮೫೫-೮೮೩: ರಾಜಾ ಅವಂತಿವರ್ಮನಿಂದ ಅವಂತೀಪುರ ಪಟ್ಟಣ ಹಾಗೂ ಪ್ರಸಿದ್ಧ ಸೂರ್ಯದೇವಾಲಯಗಳ ನಿರ್ಮಾಣ

೮೮೩-೯೦೨: ರಾಜಾ ಶಂಕರವರ್ಮನಿಂದ ಶಂಕರಪುರ ಪಟ್ಟಣದ (ಈಗ ಅದನ್ನು ಪಟ್ಟಣ ಎಂದು ಕರೆಯುತ್ತಾರೆ.) ನಿರ್ಮಾಣ.

೧೧೨೮-೧೧೪೯: ರಾಜಾ ಜಯಸಿಂಹನ ಆಳ್ವಿಕೆ

೧೩೨೨: ಕ್ರೂರಿಯಾದ ಜುಲ್ಕದೂರ್‌ಖಾನ್‌ನ ನೇತೃತ್ವದಲ್ಲಿ ಟರ್ಕೀಯರಿಂದ ಕಾಶ್ಮೀರದ ಮೇಲೆ ಮೊದಲ ದಾಳಿ.

೧೩೯೪-೧೪೧೬: ಮಧ್ಯ ಏಷ್ಯಾದ ರಾಜ ಸಿಕಂದರ್ ಕಾಶ್ಮೀರದ ಮೇಲೆ ಆಕ್ರಮಣ ನಡೆಸಿ ಇಸ್ಲಾಂಗೆ ಸಾಮೂಹಿಕ ಮತಾಂತರ ನಡೆಸಿದ್ದು.

೧೫೪೦: ಮೊಘಲ್ ವಂಶದ ಹುಮಾಯೂನನ ಸಂಬಂಧಿ ಹೈದರ್ ಕಾಶ್ಮೀರವನ್ನು ಜಯಿಸಿದ್ದು. ಕಾಶ್ಮೀರ ಕ್ರಮೇಣ ಮೊಘಲ್ ಸಾಮ್ರಾಜ್ಯಕ್ಕೆ ಸೇರಿಸಲ್ಪಟ್ಟಿತು.

೧೮೧೦-೧೮೨೦: ಭಾರತದ ಮಹಾನ್ ದೊರೆಗಳಲ್ಲಿ ಒಬ್ಬನಾದ ಮಹಾರಾಜಾ ರಣಜಿತ್ ಸಿಂಗ್ ಜಮ್ಮುವನ್ನು ಮರಳಿ ವಶಪಡಿಸಿಕೊಂಡು, ಸಂಸ್ಥಾನದ ಆಳ್ವಿಕೆಗಾಗಿ ತನ್ನ ಡೋಗ್ರಾ ಸಾಮಂತ ಗುಲಾಬ್ ಸಿಂಗ್‌ನನ್ನು ನೇಮಿಸಿದ್ದು.

ಮಾರ್ಚ್ ೧೬, ೧೮೪೬: ಅಮೃತಸರದಲ್ಲಿ ಬ್ರಿಟಿಷ್ ಸರಕಾರದ ಪರವಾಗಿ ಭಾಗವಹಿಸಿದ ಈಸ್ಟ್ ಇಂಡಿಯಾ ಕಂಪೆನಿ ಮತ್ತು ಮಹಾರಾಜಾ ಗುಲಾಬ್ ಸಿಂಗ್ ನಡುವೆ ಏರ್ಪಟ್ಟ ಒಪ್ಪಂದದನ್ವಯ ಇವತ್ತಿನ ಕಾಶ್ಮೀರರಾಜ್ಯ ರಚನೆ

೧೯೩೧: ಶೇಕ್ ಅಬ್ದುಲ್ಲಾ ಮತ್ತವರ ಮುಸ್ಲಿಂ ಕಾನ್ಫರೆನ್ಸ್‌ನ ನೇತೃತ್ವದಲ್ಲಿ ಅತ್ಯಂತ ಭೀಕರ ಕೋಮುಗಲಭೆಗಳಲ್ಲೊಂದು ಸಂಭವಿಸಿದ್ದು.

೧೯೩೯: ಮುಸ್ಲಿಂ ಕಾನ್ಫರೆನ್ಸ್ ನ್ಯಾಷನಲ್ ಕಾನ್ಫರೆನ್ಸ್ ಆಗಿ ಬದಲಾದದ್ದು ಆಗಸ್ಟ್ ೧೫, ೧೯೪೭: ಭಾರತ ಸ್ವತಂತ್ರವಾದದ್ದು. ಕಾಶ್ಮೀರದ ಅರಸ ಮಹಾರಾಜಾ ಹರಿಸಿಂಗ್ ಅವರು ದೇಶದೊಂದಿಗೆ ವಿಲೀನಗೊಳ್ಳುವ ಬಗ್ಗೆ ಆ ಹೊತ್ತಿಗೆ ನಿರ್ಧರಿಸಲಿಲ್ಲ.

ಅಕ್ಟೋಬರ್ ೨೨, ೧೯೪೭: ರಾಜ್ಯಕ್ಕೆ ಆವಶ್ಯಕ ವಸ್ತುಗಳ ಪೂರೈಕೆಯನ್ನು ತಡೆಯುವ ಮೂಲಕ ಪಾಕಿಸ್ಥಾನದಿಂದ ಯಥಾಸ್ಥಿತಿ ಒಪ್ಪಂದ (sಣಚಿಟಿಜsಣiಟಟ ಚಿgಡಿeemeಟಿಣ) ದ ಉಲ್ಲಘಂನೆ; ಜತೆಗೆ

ಭಾರೀ ಸಂಖ್ಯೆಯ ಸಶಸ್ತ್ರ ಪಾಕಿಸ್ಥಾನಿ ಬುಡಕಟ್ಟು ಜನರಿಂದ ಕಾಶ್ಮೀರಕ್ಕೆ ಪ್ರವೇಶ.

ಅಕ್ಟೋಬರ್ ೨೬, ೧೯೪೭: ದೇಶದ ೫೦೦ಕ್ಕೂ ಮಿಕ್ಕಿ ಸಂಸ್ಥಾನಗಳ ರಾಜರು ಸಹಿ ಮಾಡಿದ ವಿಲೀನಿಕರಣ ಒಪ್ಪಂದಕ್ಕೆ ಹರಿಸಿಂಗ್ ಕೂಡ ಸಹಿ ಮಾಡಿದ್ದು. ದೇಶದ ಅಂದಿನ ಗವರ್ನರ್ ಜನರಲ್ ಲಾರ್ಡ್ ಮೌಂಟ್‌ಬ್ಯಾಟನ್ ಅವರಿಂದ ಕಾಶ್ಮೀರ ವಿಲೀನಕ್ಕೆ ಅಂಗೀಕಾರ.

ಅಕ್ಟೋಬರ್ ೨೭, ೧೯೪೭: ಪಾಕಿಸ್ಥಾನಿ ಸೇನೆಯಿಂದ ಕಾಶ್ಮೀರವನ್ನು ರಕ್ಷಿಸುವ ಸಲುವಾಗಿ ಭಾರತೀಯ ಸೇನೆಯ ಮೊದಲ ವಿಭಾಗದ ಆಗಮನ.

ಡಿಸೆಂಬರ್ ೩೧, ೧೯೪೭: ಕಾಶ್ಮೀರದಲ್ಲಿ ಜನಾಭಿಪ್ರಾಯವನ್ನು ಸಂಗ್ರಹಿಸಲಾಗುವುದೆನ್ನುವ ಅತ್ಯಂತ ಅಸಾಂವಿಧಾನಿಕವಾದ ಕೊಡುಗೆಯನ್ನು ಪ್ರಧಾನಿ ನೆಹರು ವಿಶ್ವಸಂಸ್ಥೆಯಲ್ಲಿ ಪ್ರಕಟಸಿದ್ದು.

ಜನವರಿ ೧, ೧೯೪೮: ನೆಹರು ನಾಯಕತ್ವದ ಭಾರತದಿಂದ ಏಕಪಕೀಯವಾಗಿ ಕದನವಿರಾಮ ಘೋಷಣೆ ಹಾಗೂ ವಿಶ್ವಸಂಸ್ಥೆ ಸನ್ನದಿನ ೩೫ನೇ ವಿಧಿಯ ಪ್ರಕಾರ ಭಾರತದಿಂದ ವಿಶ್ವಸಂಸ್ಥೆ

ಭಧ್ರತಾ ಮಂಡಳಿಗೆ ದೂರು ಸಲ್ಲಿಕೆ; ಆಗಲೂ ರಾಜ್ಯದ ಐದನೇ ಎರಡು ಭಾಗ ಪಾಕಿಸ್ಥಾನದ ವಶದಲ್ಲಿತ್ತು.

ಜನವರಿ ೨೦, ೧೯೪೮: ಆ?ಒಸಂಸ್ಥೆ ಭದ್ರತಾ ಮಂಡಳಿಯಿಂದ ತನ್ನ ನಿರ್ಣಯದನ್ವಯ ಭಾರತ ಮತ್ತು ಪಾಕಿಸ್ಥಾನದ ಬಗೆಗಿನ ವಿಶ್ವಸಂಸ್ಥೆ ಆಯೋಗದ (ಯುಎನ್ಸಿಐಸಿ) ಸ್ಥಾಪನೆ

ಜುಲೈ, ೧೯೪೮: ಪಾಕಿಸ್ಥಾನದ ಅಂದಿನ ವಿದೇಶಾಂಗ ಸಚಿವ ಹಾಗೂ ವಿಶ್ವಸಂಸ್ಥೆಗೆ ತೆರಳಿದ ಪಾಕಿಸ್ಥಾನ್ ನಿಯೋಗದ ಪ್ರಮುಖರಾದ ಮೊಹಮ್ಮದ್ ಜಾಫರುಲ್ಲಾ ಖಾನ್ ಅವರು ಕಾಶ್ಮೀರದಲ್ಲಿ ಪಾಕಿಸ್ಥಾನಿ ಸೇನೆ ಇದೆ ಎಂದು ಯುಎನ್ಸಿಐಪಿಯ ಮುಂದೆ ಒಪ್ಪಿಕೊಂಡದ್ದು.

ಆಗಸ್ಟ್ ೧೩, ೧೯೪೮: ಕಾಶ್ಮೀರದ ಕುರಿತು ಯುಎನ್‌ಪಿಐಪಿ ಅಂಗೀಕರಿಸಿದ ನಿರ್ಣಯವನ್ನು ಭಾರತ ಹಾಗೂ ಪಾಕಿಸ್ಥಾನಗಳು ಸ್ವೀಕರಿಸಿದ್ದು. ಅದರಂತೆ ಕಾಶ್ಮೀರದ ಮೇಲಿನ ಆಕ್ರಮಣಕ್ಕಾಗಿ

ಪಾಕಿಸ್ಥಾನವನ್ನು ಟೀಕಿಸಲಾಯಿತು ಮತ್ತು ಅದರ ಸೇನೆಯನ್ನು ಕಾಶ್ಮೀರದಿಂದ ಹಿಂತೆಗೆದುಕೊಳ್ಳಬೇಕೆಂದು ತಾಕೀತು ಮಾಡಲಾಯಿತು.

ಜನವರಿ ೧, ೧೯೪೯: ಅತ್ಯಂತ ಆತಂಕಭರಿತ ಸನ್ನಿವೇಶದಲ್ಲಿ ಮಧ್ಯರಾತ್ರಿಗಿಂತ ಒಂದು ನಿಮಿಷ ಮೊದಲು ಭಾರತ-ಪಾಕಿಸ್ಥಾನಗಳಿಂದ ಒಂದು ಔಪಚಾರಿಕ ಕದನವಿರಾಮ ಒಪ್ಪಂದದ ಅಂಗೀಕಾರ.

ಜನವರಿ ೫, ೧೯೪೯: ಜನಾಭಿಪ್ರಾಯ ಸಂಗ್ರಹಕ್ಕೆ ಸಂಬಂಧಿಸಿ ನೆಹರು ಅವರು ಕೊಡುಗೆಯೊಂದನ್ನು ಪ್ರಕಟಿಸಿ ಬಹುತೇಕ ಒಂದು ವರ್ಷದ ಬಳಿಕ ಯುಎನ್‌ಸಿಐಪಿ ಈ ಕೆಳಗಿನ ನಿರ್ಣಯವನ್ನು ಅಂಗೀಕರಿಸಿತು: “ಜಮ್ಮು-ಕಾಶ್ಮೀರ ರಾಜ್ಯವನ್ನು ಭಾರತಕ್ಕೆ ಸೇರಿಸಬೇಕೋ ಅಥವಾ ಪಾಕಿಸ್ಥಾನಕ್ಕೆ ಸೇರಿಸಬೇಕೋ ಎಂಬ ವಿಷಯವನ್ನು ಮುಕ್ತ ಹಾಗೂ

ನಿಷ್ಪಕ್ಷಪಾತವಾದ ಜನಾಭಿಪ್ರಾಯ ಸಂಗ್ರಹದ ಪ್ರಜಾಸತ್ತಾತ್ಮಕ ವಿಧಾನದ ಮೂಲಕ ನಿರ್ಧರಿಸಲಾಗುವುದು.” ಆದರೆ ಪಾಕಿಸ್ಥಾನ ಹಿಂದಿನ ನಿರ್ಣಯವನ್ನು ಅನುಷ್ಠಾನಗೊಳಿಸಿ, ಕಾಶ್ಮೀರದಿಂದ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳುವ ಕೆಲಸವನ್ನೇ ಮಾಡಿರಲಿಲ್ಲ.

೧೯೪೯: ಭಾರತೀಯ ಸಂವಿಧಾನದ ಪ್ರಧಾನ ಶಿಲ್ಪಿ ಡಾ|| ಬಿ.ಆರ್. ಅಂಬೇಡ್ಕರ್ ಸೇರಿದಂತೆ ಸಂವಿಧಾನದ ಹಲವು ಜನ ನಿರ್ಮಾತೃಗಳ ವಿರೋಧವಿದ್ದಾಗಲೂ ಅದನ್ನು ಕಡೆಗಣಿಸಿ, ೩೭೦ನೇ

ವಿಧಿಯನ್ನು ಸಂವಿಧಾನಕ್ಕೆ ಅಳವಡಿಸಿದ್ದು. ಅದೊಂದು ತಾತ್ಕಾಲಿಕ ಕ್ರಮವಾಗಿದ್ದು, ಕಾಶ್ಮೀರಕ್ಕೆ ಔಪಚಾರಿಕ ಸಂವಿಧಾನವನ್ನು ರೂಪಿಸುವ ತನಕ ಅದು ಜಾರಿಯಲ್ಲಿರುವುದು ಎಂದು ತಿಳಿಸಲಾಗಿತ್ತು.

ಜೂನ್ ೧೯೪೮: ಶೇಕ್ ಅಬ್ದುಲ್ಲಾ ಆಗ ಹೀಗೆ ಹೇಳಿದ್ದರು: “ಜಮ್ಮು-ಕಾಶ್ಮೀರದ ಪ್ರಜೆಗಳಾದ ನಾವು ಭಾರತದ ಜನತೆಯೊಂದಿಗೆ ಸೇರಿಕೊಳ್ಳುತ್ತಿದ್ದೇವೆ; ಇದಕ್ಕೆ ಯಾವುದೇ ಭಾವೋದ್ರೇಕ ಅಥವಾ ಹತಾಶೆಯ ಕ್ಷಣ ಕಾರಣವಲ್ಲ; ಬದಲಾಗಿ ಪ್ರಜ್ಞಾಪೂರ್ವಕವಾದ ಆಯ್ಕೆಯಿಂದ ನಾವಿದನ್ನು ಮಾಡುತ್ತಿದ್ದೇವೆ. ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟದ ವೇಳೆ ನಾವು ಇಟ್ಟುಕೊಂಡ ಆದರ್ಶಗಳು ಹಾಗೂ ನಾವು ಅನುಭವಿಸಿದ ಸಮಾನ ದುಃಖಗಳು ನಮ್ಮ ಜನರ ಒಗ್ಗಟ್ಟನ್ನು ಬೆಸೆದಿವೆ.”

೧೯೪೯: ಶೇಕ್ ಅಬ್ದುಲ್ಲಾ ಸರಕಾರವು ಕೈಗೊಂಡ ತೀರ್ಮಾನದನ್ವಯ ರಾಜಾ ಹರಿಸಿಂಗ್ ಅವರಿಂದ ಪದತ್ಯಾಗ. ಪುತ್ರ ಕರಣ್ ಸಿಂಗ್ ಅವರನ್ನು ಹರಿಸಿಂಗ್ ಅವರ ಉತ್ತರಾಧಿಕಾರಿಯೆಂದು ಹೆಸರಿಸಲಾಯಿತು.

ಏಪ್ರಿಲ್ ೧೯೫೦: ಯುಎನ್ಸಿಐಪಿಗೆ ಬದಲಾಗಿ ಸರ್ ಓ ವೆನ್ ಐಕ್ಸನ್ ಅವರನ್ನು ವಿಶ್ವಸಂಸ್ಥೆಯ ಪ್ರತಿನಿಧಿಯಾಗಿ ಭದ್ರತಾ ಮಂಡಳಿ ನೇಮಿಸಿದ್ದು. ಕಾಶ್ಮೀರಕ್ಕೆ ಸಂಬಂಧಿಸಿ ಭಾರತ-ಪಾಕಿಸ್ಥಾನಗಳ ನಡುವೆ ಇರುವ ವಿವಾದಕ್ಕೆ ಶೀಘ್ರವಾದ ಮತ್ತು ದೀರ್ಘಕಾಲ ಬಾಳುವ ಪರಿಹಾರವನ್ನು ಹುಡುಕಬೇಕೆನ್ನುವ ಹೊಣೆಯನ್ನು ಅವರಿಗೆ ವಹಿಸಲಾಯಿತು.

ಅಕ್ಟೋಬರ್ ೧೯೫೦: ರಾಜ್ಯ ವ್ಯವಸ್ಥಾ ಸಭೆ (ಛಿoಟಿsಣiಣueಟಿಣ ಚಿssembಟಥಿ) ಯೊಂದನ್ನು ರೂಪಿಸುವ ಬಗ್ಗೆ ಚುನಾವಣೆ ನಡೆಸಬೇಕೆಂದು ನ್ಯಾಷನಲ್ ಕಾನ್ಫರೆನ್ಸ್‌ನ ಮಹಾಮಂಡಳಿಯ ಆಗ್ರಹ.

ಸೆಪ್ಟೆಂಬರ್ ೧೯೫೧: ರಾಜ್ಯವ್ಯವಸ್ಥಾ ಸಭೆಗೆ ಚುನಾವಣೆ ನಡೆದು, ಎಲ್ಲ ೪೫ ಸ್ಥಾನಗಳಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಅವಿರೋಧವಾಗಿ ಜಯಗಳಿಸಿತು.

ಅಕ್ಟೋಬರ್ ೧೯೫೧: ಜಮ್ಮು-ಕಾಶ್ಮೀರದ ರಾಜ್ಯ ವ್ಯವಸ್ಥಾ ಸಭೆಯ ಉದ್ಘಾಟನೆ.

ಕಾಶ್ಮೀರದ ಸಮಸ್ಯೆ ಉಲ್ಬಣ – ಇದಕ್ಕೇನು ಪರಿಹಾರ?

ಸುದ್ದಿ: ಕಾಶ್ಮೀರದಲ್ಲಿ ಹಲವು ತಿಂಗಳುಗಳಿಂದ ನಡೆಯುತ್ತಿರುವ ಪ್ರತಿಭಟನೆಗಳನ್ನು ಹತ್ತಿಕ್ಕುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಂಪೂರ್ಣ ವಿಫಲಗೊಂಡಿವೆ. ಪಾಕಿಸ್ತಾನವು ಕಾಶ್ಮೀರದ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ಒಯ್ದಿದೆ. ಇನ್ನೇನು ಕಾಶ್ಮೀರ ಭಾರತದಿಂದ ಪ್ರತ್ಯೇಕವಾಗಿ

ಬಿಡುತ್ತದೆ ಎನ್ನುವ ಸ್ಥಿತಿ ಬಂದುಬಿಟ್ಟಿದೆಯೇನೋ ಎನ್ನುವ ಅನುಮಾನಗಳು ವ್ಯಕ್ತವಾಗುತ್ತಿದೆ. ಈ ಸಮಸ್ಯೆಯ ಪರಿಹಾರಕ್ಕಾಗಿ ಕೇಂದ್ರ ಸರಕಾರವು ಮೂವರು ಸಂವಾದಕರ್ತರ (Iಟಿಣeಡಿಟoಛಿuಣoಡಿs) ತಂಡವನ್ನು ರಚಿಸಿ ಕಳುಹಿಸಿದೆ. ಅದರಲ್ಲಿರುವವರೂ ಸಮಸ್ಯೆಯನ್ನು ಜಟಿಲಗೊಳಿಸುವಂತೆಯೇ ಕಾಣುತ್ತಿದೆ. ಅರುಂಧತಿ ರಾಯ್ ಅವರಂತ ತಥಾಕಥಿತ ಜಾತ್ಯತೀತವಾದಿಗಳು, ಕಾಶ್ಮೀರ ಭಾರತದ ಭಾಗವೇ ಅಲ್ಲ ಎನ್ನುವಂತಹ ಹೇಳಿಕೆಗಳನ್ನು ನೀಡಿ ಜನರಲ್ಲಿ ಗೊಂದಲವನ್ನು ಹೆಚ್ಚಿಸಲು

ಪ್ರಯತ್ನಿಸುತ್ತಿದ್ದಾರೆ. ಈ ಸಮಸ್ಯೆಗೆ ಅಲ್ಲಿನ ರಾಜ್ಯ ಸರಕಾರ ಹಾಗೂ ಕೇಂದ್ರದ ಯುಪಿಎ ಸರಕಾರಗಳ ಬಳಿ ಯಾವುದೇ ಪರಿಹಾರವಿಲ್ಲ ಎನ್ನುವುದು ದಿನಗಳೆದಂತೆ ಮನದಟ್ಟಾಗುತ್ತಿದೆ.

ಹಿನ್ನೆಲೆ: ಕಾಶ್ಮೀರವು ಅನಾದಿ ಕಾಲದಿಂದಲೂ ಭಾರತದ ಅವಿಭಾಜ್ಯ ಅಂಗವಾಗಿದೆ. ಮಹಾಭಾರತದಲ್ಲಿ, ಕಾಂಭೋಜನು ಕಾಶ್ಮೀರದ ರಾಜನಾಗಿದ್ದುದರ ಉಲ್ಲೇಖ ಇದೆ. ೮ನೇ ಶತಮಾನದಲ್ಲಿ ಆದಿ ಶಂಕರರು ಕಾಶ್ಮೀರದಲ್ಲಿ ಸರ್ವಜ್ಞ ಪೀಠವನ್ನು ಸ್ಥಾಪಿಸಿದರು. ಭಾರತದ ಅತಿದೊಡ್ಡ ತತ್ವಶಾಸ್ತ್ರಜ್ಞ ಎಂದು ಹೆಸರುಗಳಿಸಿರುವ ಅಭಿನವ ಗುಪ್ತ ಕಾಶ್ಮೀರದಲ್ಲೇ ಜನ್ಮ ತಳೆದವರು. ಇದು ಬೌದ್ಧರಿಗೂ ಪ್ರಮುಖ ಕೇತ್ರವಾಗಿತ್ತು.

೧೪ನೇ ಶತಮಾನದಲ್ಲಿ ಮಂಗೋಲೀ ದಾಳೀಕೋರ ದೂಲೂಚ ಎಂಬವನು ೬೦ ಸಹಸ್ರ ಸೈನಿಕರೊಂದಿಗೆ ಕಾಶ್ಮೀರವನ್ನು ಆಕ್ರಮಿಸಿದನು. ಈ ರೀತಿಯಲ್ಲಿ ಅಲ್ಲಿಗೆ ಮುಸಲ್ಮಾನರ ಪ್ರವೇಶವಾಯಿತು. ೧೫ನೇ ಶತಮಾನದ ಪ್ರಾರಂಭದಲ್ಲಿ ರಾಜ್ಯವಾಳಿದ ಸಿಕಂದರ್ ಎಂಬ ಮುಸ್ಲಿಂ ದೊರೆ ಅನೇಕ ದೇವಸ್ಥಾನಗಳನ್ನು ಒಡೆದು ‘ಮೂರ್ತಿಭಂಜಕ’ ಎಂದು

ಬಿರುದಾಂಕಿತನಾದನು. ಇವರುಗಳ ಕಾಲದಲ್ಲಿ ಅಸಂಖ್ಯಾತ ಜನರ ಕೊಲೆ, ಮತಾಂತರಗಳು ನಡೆದುವು. ಇವುಗಳನ್ನು ಸಹಿಸಲಾರದ ಅನೇಕ ಹಿಂದು ಪಂಡಿತರು ಆತ್ಮಹತ್ಯೆ ಮಾಡಿಕೊಂಡರು ಇಲ್ಲವೇ ದೇಶತ್ಯಾಗ ಮಾಡಿದರು.

೧೮೨೦ರಲ್ಲಿ ರಾಜಾ ರಣಜಿತ್ ಸಿಂಗನು ಕಾಶ್ಮೀರವನ್ನು ಗೆಲ್ಲುವುದರೊಂದಿಗೆ ಅದು ಮತ್ತೊಮ್ಮೆ ಹಿಂದುಗಳ ವಶಕ್ಕೆ ಬಂದಿತು. ೧೯೪೭ರಲ್ಲಿ ಭಾರತಕ್ಕೆ ಸ್ವಾತಂತ್ರ  ಬಂದಾಗ ರಾಜಾ ಹರಿಸಿಂಗ್ ಕಾಶ್ಮೀರದ ರಾಜರಾಗಿದ್ದರು.

ಸ್ವಾತಂತ್ರ  ಬಂದ ಹೊಸ್ತಿಲಲ್ಲೇ, ಕಾಶ್ಮೀರವನ್ನಾಕ್ರಮಿಸಿಕೊಳ್ಳುವಂತೆ ಶಸ್ತ್ರಧಾರೀ ಜಿಹಾದಿಗಳಿಗೆ ಪಾಕಿಸ್ತಾನ ಕುಮ್ಮಕು ನೀಡಿತು. ಕಾಶ್ಮೀರದ ರಾಜ ಹರಿಸಿಂಗ್ ಇನ್ನೂ ನಿರ್ಧಾರ ತೆಗೆದುಕೊಳ್ಳುತ್ತಿರುವಾಗಲೇ, ಈ ದಾಳಿ ನಡೆದಿತ್ತು.

ವಾಸ್ತವತೆಯನ್ನು ಅರ್ಥಮಾಡಿಕೊಂಡ ರಾಜ ಹರಿಸಿಂಗ್ ಅವರು ಕೂಡಲೇ ಭಾರತದೊಂದಿಗೆ ವಿಲೀನಕ್ಕೆ ಸಹಿ ಹಾಕಿದರು.

ನಂತರ ನಡೆದ ಭಾರತ-ಪಾಕ್ ಯುದ್ಧದಲ್ಲಿ ಭಾರತವೇ    ವಿಜಯಿಯಾದರೂ, ಜಾಗತಿಕ ರಾಜಕೀಯದಲ್ಲಿ ಪ್ರಭಾವಿಗಳಾಗಿದ್ದ ಅಮೇರಿಕಾ, gಂ?ಂಚಿUಂಳ ಒತ್ತಡಕ್ಕೆ ಭಾರತ ಮಣಿದು ಕಾಶ್ಮೀರದ ಅನೇಕ ಸ್ಥಳಗಳನ್ನು (ಈಗಿನ ಪಾಕ್ ಆಕ್ರಮಿತ ಕಾಶ್ಮೀರ) ಕಳೆದುಕೊಳ್ಳುವಂತಾಯಿತು.

ಈ ಮಧ್ಯೆ, ಸುಮಾರು ೧೯೫೦ರಲ್ಲಿ ಚೀನಾದೇಶವು ಲದ್ದಾಖ್ ಪ್ರದೇಶದ ಈಶಾನ್ಯ ಪ್ರದೇಶವನ್ನು ಪ್ರವೇಶಿಸಿ, ಕಾಶ್ಮೀರದ ಅಕ್ಸಯ್ ಚಿನ್ ಪ್ರದೇಶವನ್ನು ಆಕ್ರಮಿಸಿಕೊಂಡಿತ್ತು. ೧೯೬೫ರಲ್ಲಿ ಪಾಕಿಸ್ತಾನವು ತನ್ನ ಕೈಯಲ್ಲಿದ್ದ ಕಾಶ್ಮೀರದ ಭಾಗವಾದ ಕಾರಕೊರಮ್ ಕಣಿವೆಯ ಪ್ರದೇಶವನ್ನು ಚೀನಾಕೆ ಬಿಟ್ಟುಕೊಟ್ಟಿದೆ.

ನೇರ ಯುದ್ಧಗಳಲ್ಲಿ ಸೋತ ಪಾಕಿಸ್ತಾನ, ಆ ನಂತರ ಮುಸುಕಿನ ಯುದ್ಧವನ್ನು ನಡೆಸುತ್ತಿದೆ. ೧೯೮೯ ರಲ್ಲಿ ವ್ಯವಸ್ಥಿತ ರೀತಿಯಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ, ಮಾನಭಂಗ, ಸ್ತ್ರೀಯರ ಅಪಹರಣ, ಲೂಟಿ ಮತ್ತಿತರ ದೌರ್ಜನ್ಯಗಳನ್ನು ನಡೆಸಿ ಹೆಚ್ಚಿನೆಲ್ಲಾ ಹಿಂದೂಗಳನ್ನು ಕಣಿವೆಯಿಂದ

ಹೊರದಬ್ಬಲಾಗಿದೆ. ಕಾಶ್ಮೀರದಲ್ಲಿ ಅಳಿದುಳಿದ ಹಿಂದೂಗಳ ಜೀವಗಳಿಗೆ ಸತತ ಬೆದರಿಕೆ ಇದೆ. ಇತ್ತಿಚೆಗೆ ಲಡಖ್ ಮತ್ತು ಜಮ್ಮು ಪ್ರದೇಶಗಳಿಗೂ ಸಹ ಮುಸ್ಲಿಂ ಮತಾಂಧರ ತೊಂದರೆ ಹಬ್ಬುತ್ತಿದೆ.

ಕಳೆದ ಕೆಲವು ತಿಂಗಳುಗಳಿಂದ ಪ್ರತ್ಯೇಕತಾವಾದಿಗಳು ಜನರನ್ನು ಪ್ರಚೋದಿಸಿ ರಕಣಾ ಸಿಬ್ಬಂದಿಗಳ ಮೇಲೆ ಎತ್ತಿ ಕಟ್ಟುತ್ತಿದ್ದಾರೆ. ಸಾವಿರಾರು ಜನರು ಕರ್ಫ್ಯೂ ಉಲ್ಲಂಘಿಸಿ ಬೀದಿಗೆ ಬಂದು ಸೈನಿಕರ ಮೇಲೆ ಕಲ್ಲೆಸೆಯುವಂತೆ ಪ್ರಚೋದಿಸಲಾಗುತ್ತಿದೆ. ಕಲ್ಲು ಎಸೆಯುವ ಜನರಿಗೆ

ದಿನಕೂಲಿ ಕೊಡಲಾಗುತ್ತಿದೆ. ಈ ಎಲ್ಲಾ ಪಿತೂರಿಗಳೂ ಪಾಕಿಸ್ತಾನದ ಮೇಲ್ವಿಚಾರಣೆಯಲ್ಲಿ ನಡೆಯುತ್ತಿರುವ ವಿಚಾರ ಬೇಹುಗಾರಿಕಾ ಸಂಸ್ಥೆಗಳಿಗೆ ತಿಳಿದುಬಂದಿವೆ.

೧. ಭಾರತದ ವಿಭಜನೆ ಬ್ರಿಟಿಶ್ ಕುತಂತ್ರ ಮತ್ತು ಮುಸ್ಲಿಂ    ಮತಾಂಧತೆಯಿಂದ ನಡೆದ ದುರ್ಘಟನೆ. ವಿಭಜನೆ ವಿಧಿ ವಿಧಾನಗಳು ಅತೀವ ಅವೈಜ್ಞಾನಿಕವಾಗಿ ಕೂಡಿದ್ದವು. ಮತ್ತು ವಿಭಜನೆಯ ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಅವ್ಯವಸ್ಥೆ ಮನೆಮಾಡಿತ್ತು.

ಹೀಗಿದ್ದಾಗ್ಯೂ ಸರ್ದಾರ್ ಪಟೇಲರ ಸಮಯ ಪ್ರಜ್ಞೆಯಿಂದಾಗಿ ೬೦೦ಕ್ಕೂ ಹೆಚ್ಚು ಸಂಸ್ಥಾನಗಳು ಭಾರತದೊಂದಿಗೆ ವಿಲೀನಗೊಂಡವು. ಅದೇ ಸಮಯದಲ್ಲಿಯೇ ಕಾಶ್ಮೀರವೂ ಕಾನೂನುಬದ್ಧವಾಗಿಯೇ ಭಾರತದೊಡನೆ ವಿಲೀನಗೊಂಡಿದೆ.

೨. ವಿಲೀನ ಜಾರಿಗೊಂಡ ನಂತರದಲ್ಲಿ ಜಾರಿಗೆ ತಂದ ೩೭೦ನೇ ವಿಧಿಯು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಮಂತ್ರಿಗಳನ್ನು ನೀಡಿತು.  ಈ ರೀತಿ ಒಂದೇ ದೇಶದಲ್ಲಿ ಎರಡು, ಪ್ರಧಾನಿಗಳು ಇರಕೂಡದೆಂದು ಡಾ|| ಶ್ಯಾಮಪ್ರಸಾದ ಮುಖರ್ಜಿಯವರು ಆಂದೋಲನ ನಡೆಸಿದರು. ಅದರ ಪರಿಣಾಮವಾಗಿ ೩೭೦ನೇ ವಿಧಿಗೆ ತಿದ್ದುಪಡಿ ತಂದು ಈ ಮೂರನ್ನೂ ತೆಗೆದು ಹಾಕಲಾಯಿತು. ಆದರೆ, ೩೭೦ನೇ ವಿಧಿಯ ಇನ್ನೂ ಅನೇಕ ಭಾಗಗಳು ಇಂದಿಗೂ ಜಾರಿಯಲ್ಲಿವೆ. ಸಮಸ್ಯೆಯ ಪರಿಹಾರಕ್ಕೆ ೩೭೦ನೇ ವಿಧಿಯನ್ನು ಸಂಪೂರ್ಣ ತೆಗೆದುಹಾಕಬೇಕಾದುದು ಅನಿವಾರ್ಯವಾಗಿದೆ.

೩. ಕಾಶ್ಮೀರದ ಸಮಸ್ಯೆಯನ್ನು ಜೀವಂತವಾಗಿರಿಸಲು ಪಾಕಿಸ್ತಾನ ಸದಾ ಪ್ರಯತ್ನಿಸುತ್ತಿದೆ. ಕಾಶ್ಮೀರವನ್ನು ಕಬಳಿಸಲು ಹೊಂಚು ಹಾಕುತ್ತಾ, ಅಸಂಬದ್ಧವಾದ ವಾದಗಳನ್ನು ಹೂಡುತ್ತಲೇ ಇದೆ.ಹೀಗಾಗಿ ಭಾರತವು ಕಾಶ್ಮೀರದ ಸಮಸ್ಯೆಯ ಪರಿಹಾರಕ್ಕೆ ಪಾಕಿಸ್ತಾನವನ್ನವಲಂಬಿಸುವುದು ಮೂರ್ಖತನವಲ್ಲವೇ?

೪. ಪಾಕಿಸ್ತಾನದ ಈ ಎಲ್ಲಾ ಕೃತ್ಯಗಳ ಅರಿವಿದ್ದರೂ, ಅಮೇರಿಕ ಮುಂತಾದ ದೇಶಗಳು ಪಾಕಿಸ್ತಾನವನ್ನು ಬೆಂಬಲಿಸುತ್ತಲೇ ಇವೆ. ಭಾರತವು ಜಾಗತಿಕ ಶಕ್ತಿಯಾಗದಂತೆ ತಡೆಯಲೆಂದೇ ಅವು ಈ ರೀತಿ ವರ್ತಿಸುತ್ತಿವೆ. ಚೀನಾ ದೇಶವು ಸಹ ಭಾರತ ವಿರೋಧಿ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲು ಪಾಕಿಸ್ತಾನವನ್ನು ಪ್ರೋತ್ಸಾಹಿಸುತ್ತಿದೆ. ಹೀಗಾಗಿ ಕಾಶ್ಮೀರದ ಸಮಸ್ಯೆಯ ಪರಿಹಾರಕ್ಕೆ, ಭಾರತವು ಹೊರಗಿನ ಶಕ್ತಿಗಳ ಕಡೆ ನೋಡುವುದನ್ನು ಕೂಡಲೇ ನಿಲ್ಲಿಸಬೇಕು.

೫. ಈಗ ಕಾಶ್ಮೀರದಲ್ಲಿ ನಡೆಯುತ್ತಿರುವ ಹರತಾಳಗಳಲ್ಲಿ ಭಾಗವಹಿಸುತ್ತಿರುವ ಜನರು ಭಯೋತ್ವಾದಕರ ಬಲವಂತಕೊ ಳಗಾಗಿ ಈ ಕೃತ್ಯಗಳನ್ನು ನಡೆಸುತ್ತಿದ್ದಾರೆ. ಜೊತೆಗೆ ಭಾರತದ ಬಗೆಗಿನ ಸತತ ಅಪಪ್ರಚಾರದಿಂದ ಜನ ತಪ್ಪು ಅಭಿಪ್ರಾಯಗಳನ್ನು

ಬೆಳೆಸಿಕೊಂಡಿದ್ದಾರೆ. ನಿಜ ಹೇಳಬೇಕೆಂದರೆ ಕಾಶ್ಮೀರದ ಜನಸಾಮಾನ್ಯರು ಈ ಪ್ರತಿಭಟನೆಯಿಂದ ತೀವ್ರ ತೊಂದರೆಗೊಳಗಾಗಿದ್ದಾರೆ. ಇದರಿಂದ ಪಾರಾಗುವ ದಾರಿ ಅರಸುತ್ತಿದ್ದಾರೆ. ಮತ್ತು ಅಲ್ಲಿ ಸಮಸ್ಯೆ ಸೃಷ್ಟಿಯ ನೇತಾರರು ಬೆರಳೆಣಿಕೆಯ ಮಂದಿ ಮಾತ್ರ. ಅವರನ್ನು ಹೊರಗಿಟ್ಟರೆ ಸಮಸ್ಯೆ ಬೇಗನೆ ಪರಿಹಾರ ಆಗುವುದು.

೬. ಕಾಶ್ಮೀರದ ಪ್ರತ್ಯೇಕ ಅಸ್ತಿತ್ವವೆಂದರೆ, ಕುರಿಗೆ ಹುಲಿಯನ್ನು ಕಾವಲಿಟ್ಟಂತಾಗುತ್ತದೆ. ಆ ಪ್ರದೇಶವನ್ನು ಪಾಕಿಸ್ತಾನ ಅಥವಾ ಚೀನಾದೇಶವು ಕೂಡಲೇ ಆಕ್ರಮಿಸಿಕೊಳ್ಳುತ್ತವೆ.

೭. ಕಾಶ್ಮೀರದ ಸಮಸ್ಯೆಯನ್ನು ಪರಿಹರಿಸಲು ಯುಪಿಎ ಸರಕಾರವು ನೇಮಿಸಿರುವ ಸಂವಾದಕರ್ತರಲ್ಲೊಬ್ಬರಾದ ದಿಲೀಪ್ ಪಡಗಾಂವಕರ್, ಕಾಶ್ಮೀರ ಸಮಸ್ಯೆಯನ್ನು ಪಾಕಿಸ್ತಾನದೊಡನೆ ಚರ್ಚಿಸುವುದಾಗಿ ತಿಳಿಸಿದ್ದಾರೆ. ಇಂತಹ ಸಂವಾದಕರ್ತರಿಂದ ಸಮಸ್ಯೆಯ ಪರಿಹಾರವನ್ನು ನಿರೀಕಿಸಲಾಗದು. ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎನ್ನುವುದು ಸಂವಾದಕರ್ತರಿಗೆ ಮೊದಲು ಮನದಟ್ಟಾಗಬೇಕು. ಅದಾಗದೆ ಸಮಸ್ಯೆಗೆ

ಪರಿಹಾರ ಹುಡುಕಲು ಸಾಧ್ಯವಿಲ್ಲ.

೮. ಕಾಶ್ಮೀರದಲ್ಲಿ ಜನಮತಗಣನೆಯ ವಿಚಾರವನ್ನು ಅನೇಕರು ಪ್ರಸ್ತಾಪಿಸುತ್ತಿರುತ್ತಾರೆ. ಹಾಗೇನಾದರೂ ಮಾಡುವುದೇ ಆದರೆ, ಎಲ್ಲ ಭಾರತೀಯರ ಜನಮತಗಣನೆ ನಡೆಸಬೇಕು. ಕಾಶ್ಮೀರ ಇಡೀ ಭಾರತಕ್ಕೆ ಸೇರಿದುದಾಗಿದೆ.

೯. ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಕಾಶ್ಮೀರ ಕಣಿವೆಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ. ಆದರೆ, ಅಲ್ಲಿನ ಜನಸಂಖ್ಯೆ ಉಳಿದ ಭಾಗಗಳಿಗಿಂತ ಅತಿ ಕಡಿಮೆ. ಇದನ್ನು ಸರಿಪಡಿಸಿ, ಜನಸಂಖ್ಯೆಗನುಗುಣವಾಗಿ ಪ್ರಾತಿನಿಧ್ಯ ನೀಡಬೇಕು.

Leave a Reply

Your email address will not be published.

This site uses Akismet to reduce spam. Learn how your comment data is processed.