“ಈ ಸಿನೇಮಾದ ಟೆಂಪ್ಲೇಟ್ ಯುವಕರಿಗೆ ಸತ್ಯ ತಿಳಿಸುವ ರೀತಿಯದ್ದು.ಅದು ಟಾಶ್ಕೆಂಟ್ ಫೈಲ್ಸ್ ಇರಬಹುದು ಅಥವಾ ಕಾಶ್ಮೀರ ಫೈಲ್ಸ್ ಇರಬಹುದು. ಇದು ಭಾರತದ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ.ಒಂದು ‘right to truth’ ಇನ್ನೊಂದು ‘right to justice’ನ ಮೌಲ್ಯಗಳನ್ನು ಎತ್ತಿ ಹಿಡಿಯುತ್ತದೆ.”ಎಂದು ಚಿಂತಕರು, ಕಲಾವಿದರಾದ ಪ್ರಕಾಶ್ ಬೆಳವಾಡಿ ‘ದಿ ಕಾಶ್ಮೀರ್ ಫೈಲ್ಸ್’ ಸಿನೆಮಾದ ಕುರಿತು ಮಾತನಾಡಿದರು.

ಭಾನುವಾರ ಮಿಥಿಕ್ ಸೊಸೈಟಿಯಲ್ಲಿ ಮಂಥನ,ಬೆಂಗಳೂರಿನ ವತಿಯಿಂದ ನಡೆದ ‘ದಿ ಕಾಶ್ಮೀರ್ ಫೈಲ್ಸ್’ ಸಿನೇಮಾದ ವಿಮರ್ಶೆ-ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರಸ್ತುತ ಸಿನೇಮಾದ ಕುರಿತಾದ ಪ್ರತಿಕ್ರಿಯೆಯ ಕುರಿತು ಮಾತನಾಡುತ್ತಾ “ಇತ್ತೀಚೆಗಿನ ಕೆಲವು ಬೆಳವಣಿಗೆ ನೋವುಂಟಾಗಿದೆ, ಇಂಡಿಯಾ ಅಗೇನ್ಸ್ಟ್ ಕರಪ್ಷನ್ ಸಮಯದಲ್ಲಿ ಕೇಜ್ರಿವಾಲ್‌ರವರಿಗೆ ಬೆಂಬಲ ನೀಡಿದ್ದೆ‌.ಆದರೆ ಟೆಸ್ಟ್ ಆಫ್ ಹ್ಯುಮಾನಿಟಿಯಲ್ಲಿ  ಅವರು ಫೇಲ್ ಆಗಿದ್ದಾರೆ.ಹಾಗಾಗಿ ನನಗೆ ಅವರ ವ್ಯಂಗ್ಯದ ನಗುವಿನ ಬಗೆಗೆ,ಅವರು ಕೊಟ್ಟ ಹೇಳಿಕೆ ಬಗೆಗೆ ನನಗೆ ನಿರಾಸೆಯಾಗಿದೆ. ಸಹಜ ಮಾನವೀಯತೆ ಇಲ್ಲದಿದ್ದರೆ ಬದುಕಿಗೆ ಅರ್ಥವಿಲ್ಲ.ಆ ರೀತಿ ಅವರು ಎಚ್ಚರ ತಪ್ಪಿ ಮಾತಾನಾಡಿದ್ದಲ್ಲ.ಹೀಗೆ ಮಾತನಾಡಿ ಪ್ರಾಪಗಾಂಡ ಅಂದರೆ ಏನು ಎಂದು ತೋರಿಸುವ ಅವಕಾಶ ನೀಡಿದ್ದಾರೆ‌.ಅವರ ಮಾತಿನಲ್ಲಿ ಸಿನೇಮಾವನ್ನು ಯೂಟ್ಯೂಬಿಗೆ ಹಾಕಿ ಎಲ್ಲರೂ ನೋಡ್ತಾರೆ ಎನ್ನುವ ವ್ಯಂಗ್ಯವಿತ್ತು,ಅವರು ಹೇಳಿದ ಹಾಗೆ ಎಲ್ಲಾ ಕಾಶ್ಮೀರದ ಟ್ರಾಜಿಡಿಯನ್ನು ಯೂಟ್ಯೂಬಿನಲ್ಲಿ ಹಾಕುತ್ತಾ,ವೈರಲ್ ಮಾಡಬೇಕಿದೆ.ಪ್ರಾಪಗಾಂಡಾ ಅಂದರೆ ಏನು ಎನ್ನುವುದನ್ನು ಅವರಿಗೆ ನಮ್ಮ ಕಡೆಯಿಂದಲೂ ಅರ್ಥ ಮಾಡಿಸಬೇಕಿದೆ.ಯೂಟ್ಯೂಬ್‌ ಮಾಧ್ಯಮವನ್ನು ಈಗ ನಾವು ಸಮರ್ಥವಾಗಿ ನಿಭಾಯಿಸಬೇಕಾಗಿದೆ” ಎಂದು ಶ್ರೀ ಪ್ರಕಾಶ ಬೆಳವಾಡಿಯವರು ಅಭಿಪ್ರಾಯ ಪಟ್ಟರು.

“ಯಾಕೆ ಇಸ್ಲಾಮಿನ ಆಕ್ರಮಣಕಾರರು ಕಾಶ್ಮೀರ, ಹಿಂದೂಗಳ ಮೇಲೆ ಆಕ್ರಮಣ ನಡೆಸುತ್ತಾರೆ? ಎಂಬ ಪ್ರಶ್ನೆ ಬಂದಾಗ ವೇದಗಳಿಗೆ ಹಿಂತಿರುಗಿ ನೋಡಿದರೆ, ಅಲ್ಲಿ ಉತ್ತರ ಸಿಗುತ್ತದೆ‌.’ಕತ್ತಲೆಯ ವಿರುದ್ಧ ಬೆಳಕಿನ ಯುದ್ಧ’ ನಡೆಯುವ ಪ್ರಕ್ರಿಯೆಯೇ ಅದಕ್ಕೆ ಉತ್ತರ.ಇದು ನಮ್ಮ ವೇದ,ಉಪನಿಷತ್,ಜನಪದದ ಚಿಂತನೆ. ಕಾಶ್ಮೀರ ಆಗಿನ ಕಾಲದ knowledge hub ಆಗಿತ್ತು. ಈ ಹೋರಾಟ, ಭಾರತದ ವಿದ್ಯೆಯನ್ನು ನಾಶ ಮಾಡುವ ಹೋರಾಟ,ಜ್ಞಾನದ ಪರಂಪರೆಯ ವಿರುದ್ಧ ಹೋರಾಟ.Indian knowledge system ಬಗ್ಗೆಯೇ ಇಡೀ ಜಗತ್ತು ಮಾತನಾಡುತ್ತಿದೆ. ಜ್ಞಾನದ ಮೇಲೆ ನಡೆಯುವ ಪಾಶವೀ ಕೃತ್ಯವನ್ನು ನಡೆಸುತ್ತಿರುವವರು, ನೀವು ಸೆಕ್ಯುಲರ್ ಅನ್ನಿ,ಇಸ್ಲಾಮಿನ ಕ್ರೌರ್ಯವೆನ್ನಿ ಅವರ ಗುರಿ ಒಂದೇ,ಜ್ಞಾನ ಪರಂಪರೆಯ ನಾಶ. ಅದರ ಬಗೆಗೆ ನಾವು ಎಚ್ಚರಗೊಳ್ಳಬೇಕಿದೆ. ಕಾಶ್ಮೀರ ಭಾರತಕ್ಕೆ ನೀಡಿರುವುದು ಆಧ್ಯಾತ್ಮಿಕ, ತತ್ವಜ್ಞಾನದ ಕೊಡುಗೆಗಳು” ಎಂದು ಚಿಂತಕ ಜಿ.ಬಿ.ಹರೀಶ್ ಅವರು ಅಭಿಪ್ರಾಯಿಸಿದರು.
“ಕಾಶ್ಮೀರಿಗಳ ಎರಡನೆಯ ಎಕ್ಸೋಡಸ್ ನಡೆದಾಗ ಹೊಯ್ಸಳರು ಹಾಸನದ ಅರಸೀಕೆರೆಯ ಬಳಿ ಆಶ್ರಯ ನೀಡಿದ್ದರು.ನಾವು ಇಂದು ಆ ಜ್ಞಾನ ಪರಂಪರೆಯನ್ನು ಮುಂದುವರೆಸುವ ಮೂಲಕ ನಾವು ಉತ್ತರ ಕೊಡಬೇಕಿದೆ” ಎಂದರು.

ಚಿಂತಕ ರೋಹಿತ್ ಚಕ್ರತೀರ್ಥ ಮಾತನಾಡುತ್ತಾ,”ನಾವು ವೈರಸ್ಸುಗಳ ಜೊತೆ ಒಡನಾಡುತ್ತಿದ್ದೇವೆ.ಆ ವೈರಸ್ಸುಗಳು ನಮ್ಮ ಸಂಸ್ಕಾರ, ಕೆಲಸ, ಜ್ಞಾನ ಯಾವುದನ್ನೂ ಲೆಕ್ಕಿಸುವುದಿಲ್ಲ.ತಾನು ಬೇರೆಯ ಒಂದು ದೇಹವನ್ನು ಪ್ರವೇಶ ಮಾಡಿ ಅಲ್ಲಿನ ಎಲ್ಲವನ್ನೂ ನಾಶ ಮಾಡಿ ಬಿಡುತ್ತದೆ. ಹಾಗೆಯೇ ಆ ವೈರಸ್ಸಿಗೆ ತಾನು ಆ ದೇಹವನ್ನು ನಾಶ ಮಾಡಿದರೆ ನಾಳೆ ತನಗೆ ನೆಲೆಯಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳುವುದಿಲ್ಲ,ಅಂತೇ ನಮ್ಮ ದೇಶದ ಮೇಲೆ ಆಕ್ರಮಣ ಮಾಡಿದವರಿಗೂ ಈ ದೇಶ ಮಣ್ಣಾದರೆ ತಮಗೆ ನೆಲೆಯಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡಿಲ್ಲ.
ಕಾಶ್ಮೀರಿ ಫೈಲ್ಸ್ ಸಿನೆಮಾ ನೋಡುವಾಗ ನಮಗೆ ಕಣ್ಣಲ್ಲಿ ನೀರು ಬರಬಾರದಾಗಿತ್ತು.ನಮಗೆ ಸಣ್ಣ ವಯಸ್ಸಿನಿಂದಲೇ ಇದನ್ನು ಹೇಳಿಕೊಡಬೇಕಿತ್ತು.ಆಗ ನಮಗೆ ಈ ರೀತಿ ಕಣ್ಣೀರು ಸುರಿಸುವ ಪರಿಸ್ಥಿತಿ ಬರುತ್ತಿರಲಿಲ್ಲ. ಯಾಕೆ ಕಣ್ಣೀರು ಬಂತು ಎಂದರೆ ಮೊದಲ ಬಾರಿ ಅದು ನಮ್ಮ ಅರಿವಿಗೆ ಬರುತ್ತಿದೆ.ಆ ನೋವು ನಮ್ಮ ಕಣ್ಣೆದುರಿಗೆ ಮೊದಲ ಬಾರಿ ಬಂದಿದೆ.ಈಗ ಹೃದಯದ ಅರಿವಿಗೆ ಬಂದಿದೆ.ಅಲ್ಲದೆ, ಈ ಸಿನೆಮಾ ಕಾರಣಗಳ ಬಗ್ಗೆ ಮಾತನಾಡುವುದಿಲ್ಲ,ಈ ಸಿನೇಮಾ ಪರಿಣಾಮಗಳ ಬಗ್ಗೆ ಮಾತನಾಡುತ್ತಿದೆ‌. ಯಾಕೆ ಹೇಗೆ ಈ ಜಿಹಾದ್ ನಡೆಯಿತು ಎನ್ನುವ ವಿವರಕ್ಕಿಂತ ಹೆಚ್ಚಾಗಿ ನಂತರದ ಬೆಳವಣಿಗೆಗಳ ಸಾಮಾಜಿಕ ಪರಿಣಾಮಗಳ ಕುರಿತು ಒತ್ತಿ ಹೇಳುವ ಮೂಲಕ ಪ್ರಸ್ತುತ ಪರಿಣಾಮಗಳ ಮೂಲಕ ಭವಿಷ್ಯದ ಕಡೆಗೆ ನೋಡುವ ಕುರಿತಾಗಿ ಯೋಚನೆಗೆ ಹಚ್ಚಿದ್ದಾರೆ”ಎಂದರು.

“ಈ ಸಿನೇಮಾದಲ್ಲಿ ಬರುವ ಒಂದು ದೃಶ್ಯ ಕಾಶ್ಮೀರದ ದೊಡ್ಡ ರಾಜ ಯಾರು ಅಂತ ಕೇಳಿದಾಗ ಅಲ್ಲಿ ಒಂದು ಪಾತ್ರ ಹೇಳುತ್ತದೆ ‘ಶೇಕ್ ಅಬ್ದುಲ್ಲಾ’.ಆಗ ಇನ್ನೊಂದು ಪಾತ್ರ ‘ಅಲ್ಲ, ಅದು ಲಲಿತಾದಿತ್ಯ’ ಎನ್ನುವ ದೃಶ್ಯವಿದೆ‌.ಆ ದೃಶ್ಯ ನನಗೆ ರೋಮಾಂಚನವಾಯಿತು. ಈ ಬಾರಿ ಪಠ್ಯ ಪುಸ್ತಕದಲ್ಲಿ ಲಲಿತಾದಿತ್ಯನ ಬಗೆಗೆ ಬರಲಿದೆ. ನಾವು ನಿಜವಾದ ಇತಿಹಾಸವನ್ನು ಅರಿಯಬೇಕಾಗಿದೆ‌. ಪುರಾವೆ ಇಲ್ಲದೆ ಒಪ್ಪಿಕೊಳ್ಳುವ ಪರಿಸ್ಥಿತಿಗೆ ನಾವು ಬಂದಿದ್ದೇವೆ‌. ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಂಡರೆ,
ಇತ್ತೀಚೆಗೆ ಟಿಪ್ಪುವಿಗೆ ‘also known as tiger of Mysore’ ಎನ್ನಲು ಶುರುಮಾಡಿದ್ದಾರೆ. ಹಾಗಾದರೆ ಆ ಬಿರುದನ್ನು ಕೊಟ್ಟವರು ಯಾರು ? ಯಾಕೆ ಕೊಟ್ಟರು? ಅವನಿಗೆ ಸುಲ್ತಾನ್ ಎನ್ನುವ ಬಿರುದು ಕೊಟ್ಟವರು ಯಾರು? ಇದಕ್ಕೆ ಉತ್ತರ ಹುಡುಕಬೇಕಿದೆ‌.ಸುಮ್ಮನೆ ನಾಲ್ಕು ಸಲ ಹೇಳಿದ ಸುಳ್ಳನ್ನ ಇತಿಹಾಸ ಎನ್ನಲು ಸಾಧ್ಯವಿಲ್ಲ.ಹೀಗೆ ಮಾಡಿ ಮಾಡಿ ಸುಳ್ಳು ಇತಿಹಾಸವನ್ನು ಸೃಷ್ಠಿ ಮಾಡಲಾಗುತ್ತಿದೆ.ರೋಮಿಲಾ ಥಾಪರ್ ತರಹದವರು ಎಮೆನೆಂಟ್ ಹಿಸ್ಟೋರಿಯನ್ ಆಗುತ್ತಾರೆ.ಆದರೆ ಆರ್‌.ಸಿ.ಮಜುಂದಾರ್‌‌ ಅವರ ಬಗೆಗೆ ನಮ್ಮ ಪಠ್ಯಪುಸ್ತಕಗಳಲ್ಲಿ ಇಲ್ಲವೇ ಇಲ್ಲ.ನಾವು ಬರೀ ದಾಳಿ ಮಾಡಿದ,ಕೊಂದ,ಓಡಿಸಿದ ಎನ್ನುವ ಕಥೆಯನ್ನೇ ಹೇಳುತ್ತಾ ನಿರ್ವೀರ್ಯ ಪೀಳಿಗೆಯನ್ನ ಸೃಷ್ಟಿ ಮಾಡುತ್ತಿದ್ದೇವೆ.”

“ಇತ್ತೀಚೆಗೆ ಲ್ಯಾಂಡ್ ಜಿಹಾದ್ ಆರಂಭವಾಗಿದೆ.ಹಿಂದೆಲ್ಲಾ ದೇವಸ್ಥಾನವನ್ನ ಗುರಿಯಾಗಿ ದಾಳಿ ಮಾಡುತ್ತಿದ್ದುದ್ದು ಈ ಲ್ಯಾಂಡ್ ಜಿಹಾದ್‌ನ ಭಾಗವೇ.ದೇವಸ್ಥಾನವನ್ನು ನಾಶ ಮಾಡುವುದರಲ್ಲಿ ಭಯ ಹುಟ್ಟಿಸುವುದು,ಸಂಪತ್ತನ್ನ ಲೂಟಿ ಮಾಡುವುದು,ಅಲ್ಲಿಯ ಮೂರ್ತಿಗಳ ಭಂಜನೆ ಮಾಡುತ್ತಿದ್ದರು ಆಗ ಅಲ್ಲಿನ ಜನ ಊರುಗಳನ್ನು ಬಿಡುತ್ತಿದ್ದರು,ಅದರ ಮೇಲೆಯೇ ಮಸೀದಿಯನ್ನು ಕಟ್ಟುವ ಪ್ರಕ್ರಿಯೆ ಆರಂಭಿಸುತ್ತಾರೆ‌.ಇದು ಲ್ಯಾಂಡ್ ಜಿಹಾದ್. ಕೇವಲ ನೆಲ ಮಾತ್ರವಲ್ಲ ವಿಶ್ವವಿದ್ಯಾಲಯ, ಮಾಧ್ಯಮ,ಪೋಲಿಸ್ ಸ್ಟೇಷನ್ ಮುಂತಾದ ಎಲ್ಲ ಅಧಿಕಾರ ಕೇಂದ್ರಗಳ ಕಬ್ಜಾ ಮಾಡುವ ಹುನ್ನಾರವೇ ಲ್ಯಾಂಡ್ ಜಿಹಾದ್. ಪಾಕಿಸ್ತಾನದ ಸೃಷ್ಟಿಯೂ ಲ್ಯಾಂಡ್ ಜಿಹಾದ್‌ನ ಭಾಗವೇ‌.ನಮ್ಮ ದೇಶದಿಂದ ಬೇರೆಯಾದ ಎಲ್ಲ ದೇಶಗಳ ಡೆಮಾಗ್ರಫಿಯನ್ನು ಗಮನಿಸಿದರೆ ನಮಗೆ ಲ್ಯಾಂಡ್‌ಜಿಹಾದ್‌‌ನ ಬಗೆಗೆ ಅರ್ಥವಾಗಬಹುದು‌.ಅದು ಕಾಶ್ಮೀರ ಇರಬಹುದು ಅಥವಾ ಶಿರಸಿಯ ಮಾರಿಕಾಂಬಾ ಜಾತ್ರೆಯಿರಬಹುದು ಇಂತಹ ವೈರಸ್ಸುಗಳು ಆಕ್ರಮಣ ಮಾಡುತ್ತಿದೆ.ನಾವು ಎಚ್ಚರಿಕೆಯಿಂದ ಇರಬೇಕು ಎಂದರು.”

ಕಾರ್ಯಕ್ರಮದ ನಂತರ ಸಿನೇಮಾದ ಕುರಿತಾಗಿ ವೀಕ್ಷಕರೊಂದಿಗೆ ಸಂವಾದ – ಚರ್ಚೆ ನಡೆಯಿತು.ನಿವೃತ್ತ ವಿಂಗ್ ಕಮಾಂಡರ್ ಸುದರ್ಶನ್,ಡಾ.ಪ್ರೇಮಾ,ರಾಜೇಶ್ ಪದ್ಮಾರ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.