ಲೋಕ ಮಂಥನ 3ನೇಯ ಆವೃತ್ತಿಯು ರಾಷ್ಟ್ರ ಮೊದಲು ಎಂಬ ಚಿಂತನೆಯುಳ್ಳ ಚಿಂತಕರ, ಕಾರ್ಯಪ್ರವೃತ್ತರ ಸಮಾವೇಶವನ್ನು ಪ್ರಜ್ಞಾ ಪ್ರವಾಹವು ಇನ್ನಿತರ ಸಮಾನ ಮನಸ್ಕ ವೈಚಾರಿಕ ಸಂಘಟನೆಗಳಾದ ಸಂಸ್ಕಾರ ಭಾರತಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ,ವಿಜ್ಞಾನ ಭಾರತಿ, ಇತಿಹಾಸ ಸಂಕಲನ ಸಮಿತಿ, ವನವಾಸಿ ಕಲ್ಯಾಣ ಆಶ್ರಮಗಳ ಸಹಯೋಗದೊಂದಿಗೆ ಗವಾಹಟಿಯಲ್ಲಿ ಸೆಪ್ಟೆಂಬರ್ 22-24, 2022ರಂದು ಆಯೋಜಿಸುತ್ತಿದೆ. ಇಂಟಲೆಕ್ಚುವಲ್ ಫೋರಮ್ ಆಫ್ ನಾರ್ತ್ ಈಸ್ಟ್ (IFNE) ಇದರ ಸ್ಥಳೀಯ ಆಯೋಜಕರಾಗಿದ್ದು ಅಸ್ಸಾಮಿನ ಪ್ರವಾಸೋದ್ಯಮ ಇಲಾಖೆಯು ಇದಕ್ಕೆ ಸಹಕಾರ ನೀಡುತ್ತಿದೆ.

ಈ ವರ್ಷದ. ಒಟ್ಟಾರೆ ಸಮಾವೇಶದ ಹಿನ್ನೆಲೆಯಲ್ಲಿ “ಲೋಕಪರಂಪರೆ” ಯ ಕುರಿತಾಗಿ ಚರ್ಚೆ ನಡೆಯಲಿದ್ದು ಸಮಾವೇಶದಲ್ಲಿ ಹೇಗೆ ಲೋಕಪರಂಪರೆಯು ನಮ್ಮ ಜಾನಪದ ಸಂಸ್ಕೃತಿಯನ್ನು ಮತ್ತು ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಗೊಳಿಸುತ್ತಾ ರಾಷ್ಟ್ರೀಯತೆಯನ್ನು ಮತ್ತು ಸ್ವತ್ವವನ್ನು ಬೆಳೆಸುತ್ತಾ ಬಂದಿದೆ ಎಂಬುದರ ಕುರಿತಾಗಿಯೂ ವಿಸ್ತಾರವಾಗಿ ಚರ್ಚೆ ನಡೆಯಲಿದೆ.

ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನ‌ಕರ್ ಅವರು ಕಾರ್ಯಕ್ರಮದ ಉದ್ಘಾಟನೆಯಲ್ಲಿ ಭಾಗವಹಿಸಲಿದ್ದು ಅಸ್ಸಾಮಿನ ಮುಖ್ಯಮಂತ್ರಿ ಶ್ರೀ ಹಿಮವಂತ್ ಬಿಸ್ವಾಸ್ ಶರ್ಮ ಅವರು ಉಪಸ್ಥಿತರಿರಲಿದ್ದಾರೆ. ಇದರ ಸಮಾರೋಪ ಸಮಾರಂಭದಲ್ಲಿ ಕೇರಳದ ಘನತೆವೆತ್ತ ರಾಜ್ಯಪಾಲರಾದ ಶ್ರೀ ಆರಿಫ್ ಮಹಮದ್ ಖಾನ್ ಹಾಗು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ಶ್ರೀ ದತ್ತಾತ್ತ್ರೇಯ ಹೊಸಬಾಳೆಯವರು ಭಾಗವಹಿಸಿ ಮಾತನಾಡಲಿದ್ದಾರೆ. ವಿಚಾರವಂತರು ,ಪ್ರಮುಖ ಕಲಾವಿದರು,ಅಕಾಡೆಮಿಷಿಯನ್‌ಗಳು ವಿವಿಧ ಸಭೆಗಳಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ.

ಲೋಕಮಂಥನವು ದೇಶದ ವಿವಿಧ ಭಾಗದಿಂದ ಆಗಮಿಸಿದ ಕಲಾವಿದರು, ವಿಚಾರವಂತರು ಮತ್ತು ಅಕಾಡೆಮಿಷಿಯನ್‌ಗಳನ್ನು ಒಟ್ಟುಗೂಡಿಸುವ ಮತ್ತು ಸಮಾಜದಲ್ಲಿರುವ ಸವಾಲುಗಳಿಗೆ ತಕ್ಕದಾದ ಆಖ್ಯಾನಗಳನ್ನು ರೂಪಿಸುವುದು ಮತ್ತು ಅಗತ್ಯವಾದ ಅಂಶಗಳನ್ನು ಬದಲಾಯಿಸುತ್ತಾ ರಾಷ್ಟ್ರವನ್ನು ಮುನ್ನಡೆಸುವ ಸಮರ್ಥ ನಾಗರಿಕ ಸಮಾಜವನ್ನು ರೂಪಿಸುವ ಬಹು ಅಪ್ಯಾಯಮಾನವಾದ ವೇದಿಕೆಯಾಗಿದೆ. ಈ ಮೂರು ದಿನಗಳ ಕಾರ್ಯಕ್ರಮ ಮಾತ್ರವಲ್ಲದೆ ಭಾರತದ ಶ್ರೀಮಂತ ವೈವಿಧ್ಯತೆಯನ್ನು ತೋರುವ ಅನೇಕ ಸಂವಾದ, ಸೆಮಿನಾರ್, ಸಾಂಸ್ಕೃತಿಕ ಕಾರ್ಯಕ್ರಮಗಳು ಜೊತೆಯಾಗಿ ಆಯೋಜನೆಗೊಂಡಿದೆ.

ಸಮಾಜದಲ್ಲಿ ಒಡಕನ್ನು ಹುಟ್ಟುಹಾಕುತ್ತಿರುವ ಮತ್ತು ಭಾರತದ ಐಕ್ಯತೆಯನ್ನು ಛಿದ್ರಗೊಳಿಸುವ ಶಕ್ತಿಗಳು ಕೆಲಸ ಮಾಡುತ್ತಿರುವ ಈ ಸಂದರ್ಭದಲ್ಲಿ ಲೋಕಮಂಥನವು ಆಯೋಜನೆಗೊಳ್ಳುತ್ತಿದ್ದು, ಈ ರೀತಿಯ ಶಕ್ತಿಗಳಿಗೆ, ಭಾರತವನ್ನು ರಾಜ್ಯಗಳ ಒಕ್ಕೂಟ ಮಾತ್ರವೆಂಬಂತೆ ಬಿಂಬಿಸುತ್ತಿರುವವರಿಗೆ ಸಾಂಸ್ಕೃತಿಕ ಮತ್ತು ನಾಗರೀಕವಾದ ಉತ್ತರವೆಂಬಂತೆ ಲೋಕಮಂಥನವು ಆಯೋಜನೆಗೊಳ್ಳುತ್ತಿದೆ.

ಲೋಕಮಂಥನದ ಕುರಿತು ಮಾತನಾಡುತ್ತಾ ಪ್ರಜ್ಞಾ ಪ್ರವಾಹದ ರಾಷ್ಟ್ರೀಯ ಸಂಯೋಜಕರಾದ ಶ್ರೀ ಜೆ. ನಂದಕುಮಾರ್ ಅವರು ಮಾತನಾಡುತ್ತಾ ” ಎಲ್ಲ ವೈವಿಧ್ಯಗಳು, ತದ್ವಿರುದ್ಧ ಪರಂಪರೆ ಆಚರಣೆಗಳ ಆಚೆಗೆ ನಮ್ಮನ್ನೆಲ್ಲ ಸಾಂಸ್ಕೃತಿಕವಾಗಿ ಒಂದು ತಂತು  ಬೆಸೆದುಕೊಂಡಿದ್ದು ಅದು ಭಾರತವನ್ನು ಒಂದು ರಾಷ್ಟ್ರವಾಗಿ, ಒಂದು ನಾಗರೀಕತೆಯಾಗಿ 7,000 ವರ್ಷಗಳಿಂದ ಸತತವಾಗಿ ಬೆಳೆಸಿಕೊಂಡು ಬಂದಿದೆ. ಈ ಏಕತೆ ನಮಗೆ ಹೊರಗಿನಿಂದ ಹೇರಿರುವಂಥದ್ದಲ್ಲ ಅಥವಾ  ಹೊರಗಿನ ಯಾವುದೋ ನಂಬಿಕೆಗೆ,ದಬ್ಬಾಳಿಕೆಗಳಿಗೆ ಅಥವಾ ರಾಜಕೀಯ ಕಾರಣಗಳಿಗೆ ಒಳಗಾಗಿ ಹುಟ್ಟಿದ್ದಲ್ಲ.ನಮ್ಮೊಳಗೆ ನಮ್ಮನ್ನು ಬೆಸೆಯುತ್ತಿರುವ, ವೈವಿಧ್ಯವನ್ನು ಪ್ರೋತ್ಸಾಹಿಸುತ್ತಾ ಮತ್ತು ಒಂದುಗೂಡಿಸುವ, ಪರಂಪರೆಯನ್ನು ಒಪ್ಪಿಕೊಂಡು ಅದನ್ನು ಬೆಳೆಸುತ್ತಿರುವ ಜಾನಪದ ಸಂಸ್ಕೃತಿ ಮತ್ತು ತತ್ತ್ವಜ್ಞಾನದಂತಹ ಶಕ್ತಿಗಳ, ರಾಷ್ಟ್ರವನ್ನು ಸ್ವತ್ವದೆಡೆಗೆ  ಬಲಪಡಿಸುವ ಪ್ರಕ್ರಿಯೆಗೆ ನೀರೆರೆಯುವ ಪ್ರಯತ್ನವೇ ಲೋಕಮಂಥನ” ಎಂದರು.

ಲೋಕಮಂಥನದ ಮೊದಲ ಆವೃತ್ತಿಯು 2016ರಲ್ಲಿ ‘ದೇಶ- ಕಾಲ-ಸ್ಥಿತಿ’ ಎಂಬ ವಿಚಾರದ ಮೇಲೆ ನಡೆದಿದ್ದು ,ನಂತರ 2018ರಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಭಾರತ ಬೋಧ: ಜನ ಗಣ ಮನ’ ಎಂಬ ಆಶಯದೊಂದಿಗೆ ನಡೆದಿತ್ತು.

Leave a Reply

Your email address will not be published.

This site uses Akismet to reduce spam. Learn how your comment data is processed.