
ಬಳ್ಳಾರಿ : ಲೋಕಹಿತ ಟ್ರಸ್ಟ್ ಮತ್ತು ಸೇವಾಭಾರತಿ ಸಂಯೋಜನದೊಂದಿಗೆ ಜಾಗೃತಿ ಮಹಿಳಾ ಸ್ವಾವಲಂಬನ ಕೇಂದ್ರ 30-03-2023 ರಂದು ಸಾಯಂಕಾಲ 6 ಗಂಟೆಗೆ ಮೀನಾಕ್ಷಿ ಸರ್ಕಲ್ ಕೆಸಿ ರೋಡ್ ಮಾರುತಿ ಕಾಂಪ್ಲೆಕ್ಸ್ ಬಲಿಜ ಭವನ್ ಎದುರುಗಡೆ ಬಳ್ಳಾರಿಯಲ್ಲಿ ಲೋಕಾರ್ಪಣೆಗೊಂಡಿತು ಅದರ ಜೊತೆಗೆ ಸೇವಾಭಾರತಿ ಕಾರ್ಯಾಲಯ ಸಹಿತ ಉದ್ಘಾಟನೆ ಮಾಡಲಾಯಿತು.

ಶ್ರೀ ರಾಮ ನವಮಿ ದಿನದಂದು ಬಳ್ಳಾರಿಯಲ್ಲಿ ಸೇವಾಭಾರತಿ ಜಾಗೃತಿ ಮಹಿಳಾ ಸ್ವಾವಲಂಬನ ಕೇಂದ್ರ ಮತ್ತು ಸೇವಾಭಾರತಿ ಕಾರ್ಯಾಲಯವನ್ನು ಉದ್ಘಾಟನೆ ಮಾಡಲಾಯಿತು . ಈ ಕಾರ್ಯಕ್ರಮವನ್ನು ಭಾರತಮಾತೆಯ ಮತ್ತು ಮರ್ಯಾದ ಪುರುಷ ಶ್ರೀ ರಾಮನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಸೇವಾಭಾರತಿ ಜಾಗೃತಿ ಮಹಿಳಾ ಸ್ವಾವಲಂಬನ ಕೇಂದ್ರದ ಕರ್ನಾಟಕ ಉತರ ಪ್ರಾಂತ ಸಂಯೋಜಕರಾದ ಶ್ರೀಮತಿ ಶಿಲ್ಪಾ ವರ್ಣೇಕರ್ ಅವರು ಜಾಗೃತಿ ಮಹಿಳಾ ಸ್ವಾವಲಂಬಿನ ಕೇಂದ್ರದ ಉದ್ದೇಶ ಮತ್ತು ಗುರಿಯನ್ನು ತಮ್ಮ ಅನುಭವದ ಮೂಲಕ ಹಂಚಿಕೊಂಡರು, ಈಗಾಗಲೇ ಸಾಕಷ್ಟು ಕಡೆ ಮಹಿಳಾ ಸ್ವಾವಲಂಬಿನ ಕೇಂದ್ರಗಳು ಸ್ಥಾಪಿತವಾಗಿದ್ದು ಬಳ್ಳಾರಿಯಲ್ಲಿ ಅತೀ ಕಡಿಮೆ ಸಮಯದಲ್ಲೇ ಜಾಗೃತಿ ಮಹಿಳಾ ಸ್ವಾವಲಂಬಿನ ಕೇಂದ್ರವನ್ನು ಉದ್ಘಾಟಿಸಿದ್ದಕ್ಕೆ ಸೇವಾಭಾರತಿ ಸಮಿತಿಯ ಸದಸ್ಯರಿಗೆ ಅಭಿನಂದಿಸಿದರು. .
ಇನ್ನೋರ್ವ ಅತಿಥಿಗಳಾದ ಶ್ರೀಯುತ ಪ್ರಾಣೇಶ್ ಜೋಷಿ ಅವರು ಸೇವಾಭಾರತಿ ಬಳ್ಳಾರಿ ವಿಭಾಗ ಸಂಯೋಜಕರು ಸೇವಾಬಸ್ತಿಗಳಲ್ಲಿ ನಡೆಯುವ ವಿದ್ಯಾರ್ಥಿಗಳಿಗೆ ಸಂಸ್ಕಾರ ಮತ್ತು ಶಿಕ್ಷಣದ ಮಹತ್ವದ ಬದಲಾವಣೆಯ ಆಗಿರುವುದನ್ನು ಮತ್ತು ತಮ್ಮ ಸೇವಾ ಅನುಭವಗಳನ್ನು ಹಂಚಿಕೊಂಡರು. ಇವತ್ತಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸೇವಾಭಾರತಿ ಬಳ್ಳಾರಿ ಸಮಿತಿಯ ಶ್ರೀಯುತ ಮುರಾರಿ ಅವರು ಮುಂಬರುವ ದಿನಗಳಲ್ಲಿ ಸೇವಾಭಾರತೀಯ ಚಟುವಟಿಕೆಗಳನ್ನು ಇನ್ನು ಹೆಚ್ಚಿನ ರೀತಿಯಲ್ಲಿ ಸೇವಾಬಸ್ತಿಗಳಲ್ಲಿ ಸ್ಥಾಪಿಸಲು ಯೋಜನೆಗಳನ್ನು ತಿಳಿಸಿದರು. ಸೇವಾ ಚಟುವಟಿಕೆಗಳ ವರದಿಯನ್ನು ಶ್ರೀನಿವಾಸಲು ನೀಡಿದರು.

ಈ ಕಾರ್ಯಕ್ರಮಕ್ಕೆ ಅಖಿಲ ಭಾರತೀಯ ಅಹ್ವಾನಿತ ಸದಸ್ಯರಾದ ಮಾನ್ಯ ಸಾಂಕಲಚಂದ್ ಬಾಗ್ರೇಚ ಜಿ ಅವರು, ಕರ್ನಾಟಕ ಉತ್ತರ ಪ್ರಾಂತ ಪ್ರಚಾರ ಪ್ರಮುಖರದ ಶ್ರಿಯುತ ಗೋಪಿ ಜಿ ಅವರು, ಬಳ್ಳಾರಿ ವಿಭಾಗ ಪ್ರಚಾರಕರಾದ ಸೋಮಶೇಖರ್ ಜಿ ಅವರು, ಬಳ್ಳಾರಿ ಜಿಲ್ಲಾ ಕಾರ್ಯವಾಹರಾದ ಕೈಲಾಶ್ ಬಾಗ್ರೇಚ ಜಿ ಅವರು ಮತ್ತು ಸೇವಾ ಭಾರತೀಯ ಪದಾಧಿಕಾರಿಗಳು ,ಸದಸ್ಯರು ಮತ್ತು ಮನೆಪಾಠ ಶಿಕ್ಷಕಿಯರು, ಹಿತೈಷಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.