Mangalore Hindu Samjotsav Office Inauguration

Mangalore Hindu Samjotsav Office Inauguration

RSS leader Dr. Kalladka Prabhakar Bhat inaugurated the Hindu Samajotsava office, which is located in front of Vijaya Clinic near Bunts Hostel on Dec 14, Tuesday.Addressing the gathering, he said that religious awareness is possible only by promoting Hindu culture and tradition. He voiced his opinions that Hindu society can be strengthened only by promoting Hindu culture and that we can achieve anything through proper organization of Hindus.

Mangalore Hindu Samjotsav Office Inauguration
Mangalore Hindu Samjotsav Office Inauguration

Shri Rajayogi Ramananda Swamiji of Kolya Mutt delivered the benedictory speech, during which he urged people to work hard to make India a strong and united Hindu nation. Giving the example of a Hindu devotee, he said that this devotee could gain peace only through Hinduism. He said that Hindu Samajotsava should be used as a tool to unite the entire nation and highlight Hindutva.Vishwa Hindu Parishad leader M. B. Puranik, Jagadish Shenava, Manohar Thulajaram, Ravi Shankar Mijar, and others were present on the occasion.The Hindu Samajotsava will be held on Nehru Maidan on Jan 2, 2011 and a grand procession will be organized from Jyothi Circle to Nehru Maidan as part of it.

ಮಂಗಳೂರು:

ಹಿಂದುಗಳ ಸಂಘಟನೆ ಈಶ್ವರೀಯ ಕಾರ್ಯ, ದೇಶದ ಒಳಿತಿಗಾಗಿ ಮಾಡುವ ಕೆಲಸ ಎಂದು ಆರ್.ಎಸ್.ಎಸ್. ದಕ್ಷಿಣ ಪ್ರಾಂತ ಕಾರ್ಯವಾಹ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.

ಅವರು ಮಂಗಳವಾರ ನಗರದಲ್ಲಿ ಜ.೨ ರಂದು ಮಂಗಳೂರು ಕೇಂದ್ರ ಮೈದಾನದಲ್ಲಿ ನಡೆಸಲು ಉದ್ದೇಶಿಸಿರುವ ಬೃಹತ್ ಹಿಂದೂ ಸಮಾಜೋತ್ಸವದ ಕಾರ್ಯಾಲಯ ಉದ್ಘಾಟಿಸಿ ಮಾತನಾಡುತ್ತಿದ್ದರು. ಹಿಂದುಗಳು ಮತ್ತು ಹಿಂದು ಸಂಸ್ಕೃತಿಯ ಮೇಲೆ ಅನ್ಯರಿಂದ ನಿರಂತರ ಅತಿಕ್ರಮಣ ದಾಳಿ ನಡೆಯುತ್ತಿದೆ. ಇವುಗಳನ್ನು ಎದುರಿಸಲು ಪರಿಹಾರ ಬೇಕು. ಹಿಂದುಗಳು ಸಂಘಟಿತರಾಗುವುದೇ ಇದಕ್ಕಿರುವ ಒಂದೇ ಒಂದು ಪರಿಹಾರ. ಹಿಂದೂ ಸಮಾವೇಶ ಹಿಂದುಗಳ ಸಂಘಟಿತರಾಗಲು ಒಂದು ವೇದಿಕೆಯಾಗಿದೆ ಎಂದು ಅವರು ತಿಳಿಸಿದರು.

ಭಯೋತ್ಪಾದನೆ, ಮತಾಂತರ ಮತ್ತು ನಕ್ಸಲ್ ಸಮಸ್ಯೆಯನ್ನು ರಾಷ್ಟ್ರ ಎದುರಿಸುತ್ತಿದೆ. ಈ ಮೂರು ಸಮಸ್ಯೆಗಳು ಕೂಡಾ ವಿದೇಶಿ ಕೈವಾಡದಿಂದ ಕೂಡಿದೆ. ಸಂಪದ್ಭರಿತವಾದ ಭಾರತವನ್ನು ಕೈವಶ ಮಾಡಿಕೊಳ್ಳುವುದೇ ಈ ಮೂವರ ಮೂಲ ಉದ್ದೇಶವಾಗಿದೆ ಎಂದು ಹೇಳಿದ ಡಾ. ಪ್ರಭಾಕರ ಭಟ್, ಆರ್ಥಿಕ ಕ್ಷೇತ್ರದಲ್ಲಿ ಬಲಿಷ್ಠವಾಗಿ ಬೆಳೆಯುತ್ತಿರುವ ವಿಶ್ವದ ಏಕೈಕ ರಾಷ್ಟ್ರ ಭಾರತ ಎಂದರು.

ಅಯೋಧ್ಯೆಯಲ್ಲಿಯೇ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣಗೊಳ್ಳಲಿದೆ. ಅದು ಹಿಂದುಗಳೆಲ್ಲರ ಆತ್ಮ ಮಂದಿರವಾಗಲಿದೆ ಎಂದು ಡಾ. ಭಟ್ ಆಶಿಸಿದರು. ಹಿಂದುಗಳ ಮಾನಸಿಕ ಗುಲಾಮಗಿರಿ ಅಳಿಯಬೇಕು. ವರ್ಗ, ಜಾತಿ, ಸಮುದಾಯದ ಬೇಧ ಮರೆತು ಅವರಲ್ಲಿ ಅಭಿಮಾನ ಮೂಡಬೇಕು. ಅದಕ್ಕೆಂದೇ ಹಿಂದೂ ಸಮಾಜೋತ್ಸವ ಸಂಘಟಿಸಲಾಗುತ್ತಿದೆ. ಜಿ.ಪಂ., ತಾ.ಪಂ. ಚುನಾವಣೆಗೂ ಸಮಾವೇಶಕ್ಕೂ ಏನೇನೂ ಸಂಬಂಧವಿಲ್ಲ. ಹಾಗೆ ಹೇಳುವವರಿಗೆ ಅನುಭವದ ಕೊರತೆ ಇದೆ ಎಂದು ಭಟ್ ನುಡಿದರು.

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಕೊಲ್ಯ ಮಠದ ಶ್ರೀ ರಮಾನಂದ ಸ್ವಾಮೀಜಿಯವರು, ಜ. ೨ರಂದು ನಗರದ ಕೇಂದ್ರ ಮೈದಾನದಲ್ಲಿ ಜರುಗಲಿರುವ ಹಿಂದೂ ಸಮಾಜೋತ್ಸವದ ಯಶಸ್ವಿಗಾಗಿ ಸಕಲ ಹಿಂದೂ ಬಾಂಧವರು ಶ್ರಮಿಸಬೇಕು. ಸಂಘಟಿತರಾಗದೆ ಹಿಂದುಗಳಿಗೆ ಉಳಿಗಾಲವಿಲ್ಲ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ನಮ್ಮೆಲ್ಲರ ಸಂಕಲ್ಪವಾಗಬೇಕೆಂದರು.

ಪ್ರಾಸ್ತಾವಿಕ ಭಾಷಣ ಮಾಡಿದ ವಿಶ್ವಹಿಂದೂ ಪರಿಷತ್ ವಿಭಾಗ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್ ಅವರು ಕಳೆದ ಏಪ್ರಿಲ್ಲ್ಲಿ ಹರಿದ್ವಾರದಲ್ಲಿ ನಡೆದ ಸಂತ ಸಮಾವೇಶದಲ್ಲಿ ಕೈಗೊಂಡ ನಿರ್ಣಯದಂತೆ ತಾಲೂಕು ಕೇಂದ್ರಗಳಲ್ಲಿ, ಜಿಲ್ಲಾ ಕೇಂದ್ರಗಳಲ್ಲಿ ಹಿಂದೂ ಸಮಾಜೋತ್ಸವ ಜರುಗುತ್ತಿದೆ ಎಂದರು.

ಮಂಗಳೂರು ಮಹಾನಗರ ಹನುಮಂತ್ ಶಕ್ತಿ ಜಾಗರಣ ಸಮಿತಿ ಕೋಶಾಧಿಕಾರಿ ಮನೋಹರ ತುಳಜಾರಾಂ ಜಿಲ್ಲಾ ಸಮಿತಿ ಅಧ್ಯಕ್ಷ ರವಿಶಂಕರ್ ಮಿಜಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಸಮಿತಿ ಕಾರ್ಯದರ್ಶಿ ಹಿತೇಂದ್ರ ಕೊಟ್ಟಾರಿ ಸ್ವಾಗತಿಸಿ ದರು. ವಿಶ್ವಹಿಂದು ಪರಿಷತ್ ಜಿಲ್ಲಾ ಉಪಾಧ್ಯಕ್ಷ ಜಗದೀಶ ಶೇಣವ ವಂದಿಸಿದರು. ಶಿವಾನಂದ ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.

Related News