Mangalore: The Vibhag Sanghik Geete for ‘Feb-3-2013 Vibhag Sanghik’

ಮಂಗಳೂರು: ವಿಭಾಗ ಸಾಂಘಿಕ್ ಗೀತೆ

Download:

Sadvichara

Dhareyinda Geete-Download

To LISTEN: [audio: http://samvada.org/files/sadvichara-chorus-final.mp3]

Sadvichara Dhareyinda mp-3 DOWNLOAD

To LISTEN: [audio: http://samvada.org/files/sadvichara-practice.mp3]

VIBHAGA SANGHIK GEETHE.pdf

ಸದ್ವಿಚಾರ ಧಾರೆಯಿಂದ ಚಿಮ್ಮಲಿ ಸ್ಫೂರ್ತಿ
ನವೋತ್ಸಾಹದಿಂದ ಹೊರಗೆ ಹೊಮ್ಮಲಿ ಶಕ್ತಿ ||ಪ||

ಭವ್ಯ ರಾಷ್ಟ್ರಗುಡಿಯ ಶಿಲ್ಪಕಾರರು ನಾವು
ದಿವ್ಯ ಪರಂಪರೆಯ ನವಕುಮಾರರು ನಾವು
ನವ್ಯರು ನಾವು, ನವೋನವ್ಯರು ನಾವು
ನಾವೆ ಇರಲು ತಾಯಿಗಿನ್ನು ಎಲ್ಲಿಯ ನೋವು?
ಇನ್ನು ಎಲ್ಲಿಯ ನೋವು ||೧||

ಪಾದಘಾತದಿಂದ ಅರಿಯ ತೊತ್ತಳದುಳಿದು
ಬಾಹು ಬೆಳೆಸಿ ಭೂಮಿ ಬಾನಿನೆತ್ತರ ಬೆಳೆದು
ಅರಳಿ ನಗುವೆವು, ಸಿರಿಯ ಮರಳಿ ತರುವೆವು
ಅಳಿದ ಪಿತರ ಆತ್ಮತೃಪ್ತಿಗೊಳಿಸಿ ಮೆರೆವೆವು
ತೃಪ್ತಿಗೊಳಿಸಿ ಮೆರೆವೆವು ||೨||

ಕ್ಲೈಬ್ಯ ಕಲ್ಮಶಗಳ ತಡೆಯ ಮೆಟ್ಟಿ ಮುರಿವೆವು
ಕ್ಷುದ್ರ ಹೃದಯ ದುರ್ಬಲತೆಯ ಅಟ್ಟಿಬಿಡುವೆವು
ನಿದ್ದೆ ಬಿಡುವೆವು, ಮುಂದೆ ಹೆಜ್ಜೆ ಇಡುವೆವು
ಸಿದ್ಧ ಹೃದಯದಿಂದ ನಾವು ಗೆದ್ದು ಬರುವೆವು
ನಾವು ಗೆದ್ದು ಬರುವೆವು ||೩||

ಗುಂಡಿಗೆಯಿದು ಗುಂಡಿನೇಟಿಗಂಜಿ ನಡುಗದು
ಎಂದಿಗು ಸೋಲರಿಯಂಥ ಪಂಥವು ನಮದು
ಯೋಧರು ನಾವು, ಸಿಂಹನಾದರು ನಾವು
ನಾಡ ಕಷ್ಟ ಕಳೆವ ಮಹಾಕಾಲರು ನಾವು
ಮಹಾಕಾಲರು ನಾವು ||೪||

sadvicAra dhAreyiMda cimmali sphUrti
navOtsAhadiMda horage hommali Sakti ||pa||

Bavya rAShTraguDiya SilpakAraru nAvu
divya paraMpareya navakumAraru nAvu
navyaru nAvu, navOnavyaru nAvu
nAve iralu tAyiginnu elliya nOvu?
innu elliya nOvu ||1||

pAdaGAtadiMda ariya tottaLaduLidu
bAhu beLesi BUmi bAninettara beLedu
araLi naguvevu, siriya maraLi taruvevu
aLida pitara AtmatRuptigoLisi merevevu
tRuptigoLisi merevevu ||2||

klaibya kalmaSagaLa taDeya meTTi murivevu
kShudra hRudaya durbalateya aTTibiDuvevu
nidde biDuvevu, muMde hejje iDuvevu
siddha hRudayadiMda nAvu geddu baruvevu
nAvu geddu baruvevu ||3||

guMDigeyidu guMDinETigaMji naDugadu
eMdigu sOlariyaMtha paMthavu namadu
yOdharu nAvu, siMhanAdaru nAvu
nADa kaShTa kaLeva mahAkAlaru nAvu
mahAkAlaru nAvu ||4||

 

1 thought on “Mangalore: ಮಂಗಳೂರು ವಿಭಾಗ ಸಾಂಘಿಕ್ ಗೀತೆ DOWNLOAD

Leave a Reply

Your email address will not be published.

This site uses Akismet to reduce spam. Learn how your comment data is processed.