ಇಂದು ಜಯಂತಿ
ಮಂಜೇಶ್ವರ ಗೋವಿಂದ್‌ ಪೈ ಅವರು ಹೆಸರಾಂತ ಕನ್ನಡದ ಕವಿ. ಇವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅವಿಸ್ಮರಣೀಯ. ಕನ್ನಡ ಭಾಷೆ, ಸಾಹಿತ್ಯ ಮತ್ತು ಕರ್ನಾಟಕದ ಸಂಸ್ಕೃತಿಯ ಕುರಿತು ಅಪಾರ ಆಸಕ್ತಿ ಹೊಂದಿದ್ದ ಇವರು ತಮ್ಮ ಇಡೀ ಜೀವನವನ್ನೇ ಇದಕ್ಕಾಗಿ ಮುಡಿಪಾಗಿಟ್ಟವರು. ಇವರು ನಾನಾ ಭಾಷೆಗಳಲ್ಲಿ ಪ್ರಾವೀಣ್ಯ ಹೊಂದಿದ್ದರು. ಇಂದು ಅವರ ಜಯಂತಿ.

ಪರಿಚಯ
ಗೋವಿಂದ ಪೈ ಅವರು ಮಾರ್ಚ್ 23, 1883 ರಂದು ಕೇರಳದ ಕಾಸರಗೋಡಿನ ಮಂಜೇಶ್ವರ ಎಂಬ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ತಿಮ್ಮಪ್ಪ ಪೈ, ತಾಯಿ ದೇವಕಿಯಮ್ಮ. ಪೈ ಅವರು ಪ್ರಾಥಮಿಕ ಶಿಕ್ಷಣವನ್ನು ಮಂಗಳೂರಿನಲ್ಲಿ ಮುಗಿಸಿದರು. ಪಂಜೆ ಮಂಗೇಶರಾಯರು ಇವರ ಶಿಕ್ಷಕರಾಗಿದ್ದರು. ಉನ್ನತ ವಿದ್ಯಾಭ್ಯಾಸಕ್ಕಾಗಿ ಮದರಾಸಿಗೆ ತೆರಳಿದರು. ಅಲ್ಲಿ ಇವರಿಗೆ ಡಾ. ಎಸ್‌ ರಾಧಾಕೃಷ್ಣನ್‌ ಸಹಪಾಠಿಯಾಗಿದ್ದರು. ತಂದೆಯ ಅನಾರೋಗ್ಯದಿಂದ ಬಿಎ ಅಂತಿಮ ವರ್ಷವನ್ನು ಮೊಟಕುಗಳಿಸಿ ಊರಿಗೆ ವಾಪಸ್‌ ಮರಳಿದರು.

ಸಾಹಿತ್ಯ ಕ್ಷೇತ್ರದ ಕೊಡುಗೆ
ಗೋವಿಂದ್‌ ಪೈ ಅವರು ಚಿಕ್ಕ ವಯಸ್ಸಿನಲ್ಲಿ ಸಾಹಿತ್ಯದ ಕಡೆ ಆಸಕ್ತಿ ಹೊಂದಿದ್ದರು. ಇವರು ಲ್ಯಾಟಿನ್‌ , ಫ್ರೆಂಚ್‌ , ಸಂಸ್ಕೃತ, ಪಾಲಿ, ಬಂಗಾಲಿ ಸೇರಿದಂತೆ 25 ಭಾಷೆಗಳನ್ನು ಕಲಿಯುತ್ತಿದ್ದರು. ಇವರ ಗ್ರಂಥಾಲಯಗಳಲ್ಲಿ 43 ಭಾಷೆಗಳ ಸಾವಿರಾರು ಗ್ರಂಥಗಳ ಸಂಗ್ರಹವಿತ್ತು. ಗಿಳಿವಿಂಡು , ನಂದಾದೀಪ, ಕಾವ್ಯಸಂಕಲನ, ವೈಶಾಖೀ , ಗೊಲ್ಗೊಥಾ, ಖಂಡಕಾವ್ಯ, ಹೆಬ್ಬರಳು ಪದ್ಯಗಳನ್ನು ಒಳಗೊಂಡ ಏಕಾಂತ ನಾಟಕ , ಚಿತ್ರಭಾನು , ಗದ್ಯನಾಟಕ , ತಾಯಿ ಕಾಯಾಯ್‌ ಕೊಮಾಜಿ ಇವುಗಳು ಪ್ರಸಿದ್ಧ ಸಾಮಾಜಿಕ ನಾಟಕಗಳಾಗಿವೆ. ಆಧುನಿಕ ಕನ್ನಡ ಕವಿತೆಗಳು ಬಳಕೆಗೆ ಬಂದಂತೆಲ್ಲಾ ಪೈ ಅವರ ಕಾವ್ಯ ಸಾಮ್ರಾಜ್ಯ ವಿಸ್ತರಿಸಲಾರಂಭಿಸಿತು. ಅವರ ಮೊದಲ ಕವನ ಸಂಕಲನವಾದ ‘ಗಿಳಿವಿಂಡು’ವನ್ನು ಅವರ ಗುರುಗಳಾದ ಪಂಜೆ ಮಂಗೇಶರಾಯರು ‘ಬಾಲ ಸಾಹಿತ್ಯ ಮಂಡಲ’ದ ಮೂಲಕ ಬೆಳಕಿಗೆ ತಂದರು. 1995 ರಂದು ಗೋವಿಂದ ಪೈ ಅವರು ಸಂಶೋಧನ ಸಂಪುಟ ಪ್ರಕಟವಾಗಿದೆ. ಗೋವಿಂದ ಪೈ ಅವರು ರಚಿಸಿದಂತಹ ನಾಟಕಗಳು ಇಂದಿಗೂ ಪ್ರಚಲಿತಗೊಂಡಿದೆ. ‘ಕನ್ನಡದ ಮೊರೆ’ ಎಂಬ ಸಂಕಲನದಲ್ಲಿ ಅವರು ಬರೆದ ಹಲವು ವ್ಯಕ್ತಿ ಚಿತ್ರಗಳು, ಆತ್ಮ ಕಥನಗಳು ಮತ್ತು ಭಾಷಣಗಳು ಅಡಕವಾಗಿವೆ. ಪ್ರಬಂಧಗಳಲ್ಲಿ ‘ಆತ್ಮಕಥನ’ ಅವರ ಸಾಹಿತ್ಯ ಕೃಷಿಯ ಮಥನದ ನವನೀತವೆನಿಸಿದೆ. 1950 ರಲ್ಲಿ ಮುಂಬೈನಲ್ಲಿ ನಡೆದ 34ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೋವಿಂದ ಪೈ ಅಧ್ಯಕ್ಷತೆ ವಹಿಸಿದ್ದರು.

ಪ್ರಶಸ್ತಿ
1949 ರಲ್ಲಿ ಗೋವಿಂದ್‌ ಪೈ ಅವರಿಗೆ ಅಗಾಧ ಪಾಂಡಿತ್ಯವನ್ನು ಪರಿಗಣಿಸಿ ಅಂದಿನ ಮದರಾಸ್ ಸರ್ಕಾರ ಅವರಿಗೆ ‘ರಾಷ್ಟ್ರಕವಿ’ ಪ್ರಶಸ್ತಿ ನೀಡಿ ಗೌರವಿಸಿತು. 1950ರಲ್ಲಿ ಮುಂಬೈನಲ್ಲಿ ನಡೆದ 34ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಗೋವಿಂದ ಪೈ ಅವರು ಸೆಪ್ಟಂಬರ್ 6, 1963ರಲ್ಲಿ ತಮ್ಮ 80ನೇ ವಯಸ್ಸಿನಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.